Gemstone: ನೀವು ಈ ಮಣಿಗಳನ್ನು ಧರಿಸಿದರೆ ಏನಾಗುತ್ತೆ ಗೊತ್ತೆ? ನಿಮ್ಮ ಊಹೆಗೂ ಮೀರಿದ ಸಂಪತ್ತು ನಿಮ್ಮನ್ನು ಹುಡುಕಿಕೊಂಡು ಬರುತ್ತೆ ನೋಡಿ!

Gemstone: ಆಭರಣಗಳನ್ನ ಧರಿಸುವುದು ಎಲ್ಲರಿಗೂ ಇಷ್ಟ. ಅದರಲ್ಲೂ ಮಹಿಳೆಯರು ಅಂತೂ ಆಭರಣಪ್ರಿಯರು. ಯಾವುದೇ ಮದುವೆ ಅಥವಾ ಮತ್ತಿತರ ಸಮಾರಂಭಗಳಲ್ಲಿ ಆಭರಣಗಳನ್ನ ತೊಟ್ಟು ಮಿಂಚುವುದು ಅಂದ್ರೆ ಹುಡುಗಿಯರಿಗೆ ಎಲ್ಲಿಲ್ಲದಷ್ಟು ಇಷ್ಟ. ಆದರೆ ನಾವು ಧರಿಸುವ ಆಭರಣಗಳೆಲ್ಲವೂ ನಮಗೆ ಶ್ರೇಯಸನ್ನು ತಂದು ಕೊಡುತ್ತೆ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ ಜ್ಯೋತಿಷ್ಯಾಸ್ತ್ರ (Astrology)ದ ಪ್ರಕಾರ ಕೆಲವು ಬಂಗಾರದ (Gold Jewellery) ಒಡವೆಗಳು ನಮ್ಮ ಶೋಭೆಗೆ ಮಾತ್ರ ಅದರಿಂದ ಯಾವುದೇ ಲಾಭ ಇಲ್ಲ ಹಾಗಾದರೆ ಬೇರೆ ಯಾವ ವಸ್ತು ಧರಿಸಿದರೆ ನಮಗೆ ಉಳಿತಾಗುತ್ತೆ ನೋಡೋಣ ಬನ್ನಿ.

ಜ್ಯೋತಿಷ್ಯಾಸ್ತ್ರದ ಪ್ರಕಾರ ನಾವು ಧರಿಸುವ ಕೆಲವು ಮನೆಗಳು ನಮಗೆ ಅದೃಷ್ಟ (Good Luck) ವನ್ನು ನೀಡಬಲ್ಲವು. ಅಂತಹ ಹರಳು ಅಥವಾ ಕಲ್ಲು ಧರಿಸಿದರೆ ಜೀವನದಲ್ಲಿ ಹಣದ ಹೊಳೆ ಹರಿಯುತ್ತೆ. ಯಾವ ಮಣಿ (Stone)ಯನ್ನ ಅಥವಾ ಕಲ್ಲನ ಧರಿಸಿದರೆ ನಿಮಗೆ ಸಂಪತ್ತು ಸಿಗುತ್ತೆ ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.

ಸಿಟ್ರೈನ್ ಮಣಿ; ಹೌದು ಈ ಮಣಿಯನ್ನು ಧರಿಸಿದರೆ ಜೀವನದಲ್ಲಿ ಹಣ, ಯಶಸ್ಸು ಎಲ್ಲವೂ ನಿಮ್ಮನ್ನು ಹುಡುಕಿಕೊಂಡು ಬರುತ್ತೆ. ಕಿತ್ತಳೆ ಬಣ್ಣದಲ್ಲಿ ಇರುವ ಈ ಮಣಿಗಳ ನೀವು ನಿತ್ಯವೂ ಧರಿಸಿದರೆ ತುಂಬಾನೇ ಒಳ್ಳೆಯದು.

ನಜರ್ ಹರಳು; ನಜರ್ ಹರಳು ಅಥವಾ ಮಣಿ ನೋಡುವುದಕ್ಕೂ ಬಹಳ ವಿಶೇಷವಾಗಿ ಇರುತ್ತೆ ಮಣಿಗಳ ನಡುವೆ ಮಧ್ಯದಲ್ಲಿ ಗೂಬೆ ಕಣ್ಣಿನ ಚಿಹ್ನೆ ಇರುವುದನ್ನು ನೀವು ಕಾಣಬಹುದು. ಇದು ನಮಗೆ ಅದೃಷ್ಟವನ್ನು ತಂದು ಕೊಡುವಂತಹ ಹರಳು. ನಮ್ಮ ಮೇಲೆ ಯಾವುದೇ ಕೆಟ್ಟ ದೃಷ್ಟಿ ಆಗಿದ್ದರೆ ಅಥವಾ ನಕಾರಾತ್ಮಕತೆ ನಮ್ಮನ್ನ ಸುತ್ತುವರಿದಿದ್ದರೆ ನಜರ್ ಮಣಿ ಬ್ರೈಸ್ಲೇಟ್ ತೊಡುವುದರಿಂದ ಅವೆಲ್ಲವೂ ನಮ್ಮಿಂದ ದೂರವಾಗುತ್ತವೆ ಜೊತೆಗೆ ಮನಸ್ಸಿನಲ್ಲಿ ಶಾಂತಿ ನೆಲೆಸುತ್ತದೆ ನೀವು ತಪ್ಪದೆ ಧರಿಸಿ ಇದರಿಂದ ಆರೋಗ್ಯವೂ ಕೂಡ ಸುಧಾರಿಸುತ್ತದೆ.

ಅಮೇಥಿಸ್ಟ್ ಹರಳು; ಈ ಮಣಿಯ ಸರ ಅಥವಾ ಬ್ರೈಟ್ ಅನ್ನು ನೀವು ಧರಿಸುವುದು ಆರೋಗ್ಯದ ದೃಷ್ಟಿಯಿಂದಲೂ ತುಂಬಾನೇ ಒಳ್ಳೆಯದು. ಸಿಟ್ಟು ಆತಂಕ ಒತ್ತಡ ಮೊದಲಾದವುಗಳನ್ನು ಆಗುತ್ತೆ ಮನಸ್ಸು ಶಾಂತ ರೀತಿಯಲ್ಲಿ ಇರುತ್ತೆ. ನೇರಳೆ ಬಣ್ಣದಲ್ಲಿರುವ ಈ ಕಲ್ಲನ್ನು ನಿತ್ಯವೂ ಧರಿಸಿದರೆ ಒಳ್ಳೆಯದು.

ಜಡೆ ಮಣಿ; ಗಿಳಿ ರಾಮನ ಹಸಿರು ಬಣ್ಣವನ್ನು ಹೊಂದಿರುವ ಈ ಜಡೆ ಮಣಿ ನೋಡೋದಕ್ಕೆ ತುಂಬಾ ಆಕರ್ಷಕವಾಗಿ ಇರುತ್ತೆ. ಈ ಮಣಿಗೆ ದುಡ್ಡನ್ನು ಆಕರ್ಷಿಸುವ ಪ್ರೀತಿ ಸ್ನೇಹವನ್ನು ಬೆಳೆಸುವ ಗುಣವಿದೆ. ಅಲ್ಲದೆ ದೇಹದಲ್ಲಿ ಹಾರ್ಮೋನ್ ಬದಲಾವಣೆಗಳನ್ನು ಇದು ನಿಯಂತ್ರಿಸುತ್ತೆ ಈ ಮಣಿಯನ್ನು ಧರಿಸಿದರೆ ಅದೃಷ್ಟ ನಿಮ್ಮನ್ನು ಅರಸಿ ಬರುತ್ತೆ.

ಗುಲಾಬಿ ಸ್ಪಟಿಕದ ಮಣಿ; ನೋಡುವುದಕ್ಕೆ ಬಹಳ ಆಕರ್ಷಣೀಯವಾಗಿರುವಂತಹ ಈ ಮಣಿ ಗುಲಾಬಿ ಬಣ್ಣದಲ್ಲಿ ಇರುತ್ತೆ ಗುಲಾಬಿ ಪ್ರೀತಿಯ ಸಂಕೇತ ಹಾಗಾಗಿ ಈ ಮಣಿಯು ಕೂಡ ಪ್ರೀತಿಯನ್ನು ಸೂಚಿಸುತ್ತದೆ. ಸ್ಪಟಿಕ ಶೈಲಿಯಲ್ಲಿ ಇರುವ ಈ ಮಣಿಯ ಬ್ರೈಸ್ ಲೈಟ್ ಅನ್ನು ತೊಟ್ಟರೆ ಸದಾ ನಿಮಗೆ ಬೇರೆಯವರು ಆಕರ್ಷಿತರಾಗುತ್ತಾರೆ.

ಓಂ ಮಣಿ: ಬೇರೆ ಬೇರೆ ಕಲರ್ ಹರಳುಗಳ ಮೇಲೆ ಓಂ ಎಂದು ಬರೆಯಲಾಗಿರುವ ಈ ಮಣಿಗಳ ಬ್ರೈಸೈಟ್ ನ್ನು ವಿದ್ಯಾರ್ಥಿಗಳು ಧರಿಸುವುದು ಉತ್ತಮ. ಇದರಿಂದ ಏಕಾಗ್ರತೆ ಬರುತ್ತದೆ. ಓದಿನ ಕಡೆಗೆ ಹೆಚ್ಚು ಗಮನ ಹರಿಸಬಹುದು.

AstrologyGemstonegood luckJewelleryLifestyleಜ್ಯೋತಿಷ್ಯಾಸ್ತ್ರಹರಳುಗಳು