Astrology: ನೀವು ಈ ರಾಶಿಯವರಾಗಿದ್ದರೆ ತಪ್ಪಿಯೂ ಬೇರೆಯವರಿಗೆ ಸಾಲ ಕೊಡಬೇಡಿ; ಕೊಟ್ಟರೆ ಏನಾಗುತ್ತೆ ಗೊತ್ತೇ?

Astrology: ಹಿರಿಯರು ಯಾವಾಗಲೂ ಹೇಳುತ್ತಾರೆ ಸಾಲ ತೆಗೆದುಕೊಳ್ಳಬೇಡಿ, ಯಾರಿಗೂ ಸಾಲ ಕೊಡ್ಬೇಡಿ ಅಂತ ಅದೆಷ್ಟೋ ಸಂಬಂಧಗಳು ಹಾಳಾಗುವುದು ಕೂಡ ಹಣದ ವಿಚಾರ ಬಂದಾಗ, ಸ್ನೇಹ ಸಂಬಂಧಗಳಲ್ಲಿ ಹಣದ ವಿಚಾರ ಬರಲೇಬಾರದು ಸಂಬಂಧಗಳಲ್ಲಿ ವ್ಯವಹಾರ ಆರಂಭವಾದರೆ ಸಂಬಂಧಗಳು ಹಾಳಾಗುತ್ತವೆ, ಇನ್ನು ಜ್ಯೋತಿಷ್ಯಾಸ್ತ್ರ (astrology)ದ ಪ್ರಕಾರ ನೋಡುವುದಾದರೆ ನಾವು ಈ ಕೆಳಗೆ ಹೇಳುವ ರಾಶಿ (zodiac signs)ಯವರು ಯಾವುದೇ ಕಾರಣಕ್ಕೂ ಯಾರಿಗೂ ಸಾಲ ಕೊಡಲೇಬಾರದು ಹಾಗೆ ಕೊಟ್ಟರೆ ಏನಾಗುತ್ತೆ ಯಾಕೆ ಜಾಗೃತಿ ವಹಿಸಬೇಕು ಎಂಬುದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಮಿಥುನ ರಾಶಿ (Gimini); ಭಾವುಕ ಸ್ವಭಾವದವರು ಈ ರಾಶಿಯ ಜನ ಹಾಗಾಗಿ ಅವರಿಗೆ ಸಂಕೋಚ ಹೆಚ್ಚು ಯಾರಿಗಾದರೂ ಸಾಲ ಕೊಟ್ರೆ ಹಿಂತಿರುಗಿಸಿ ಕೇಳುವುದೇ ಇಲ್ಲ ಹಿಂತೆಗೆದುಕೊಳ್ಳುವಲ್ಲಿ ಸಾಕಷ್ಟು ಯೋಚನೆ ಮಾಡುತ್ತಾರೆ ಸಂಬಂಧ ಉಳಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಹಣ ಕೇಳಿದ್ರೆ ಎಲ್ಲಿ ತಪ್ಪು ತಿಳಿದುಕೊಳ್ಳುತ್ತಾರೋ ಎಂದು ಹಿಂದೇಟು ಹಾಕುತ್ತಾರೆ ಹಾಗಾಗಿ ಸಾಲ ಕೊಟ್ಟು ಕೊನೆಗೆ ತಲೆ ಮೇಲೆ ಕೈ ಹೊತ್ತು ಕೂರುತ್ತಾರೆ. ಇದರಿಂದ ಅವರ ಆರ್ಥಿಕ ಪರಿಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಕರ್ಕಾಟಕ ರಾಶಿ (Cancer); ಕಟಕ ರಾಶಿಯ ಜನ ಹೆಚ್ಚು ಉದಾರಿಗಳು ಯಾರಾದರೂ ಸಾಲ ಕೇಳಿದ್ರೆ ಇಲ್ಲ ಎಂದು ನಿರಾಕರಿಸದೆ ಅವರಿಗೆ ಹಣವನ್ನು ಕೊಡುತ್ತಾರೆ ಸಾಲ ಕೊಟ್ಟ ನಂತರ ಮತ್ತೆ ವಾಪಸ್ ಪಡೆಯೋದಕ್ಕೆ ಸಿಕ್ಕಾಪಟ್ಟೆ ಆಲೋಚನೆ ಮಾಡುತ್ತಾರೆ ತಮ್ಮಿಂದ ಇತರರು ಪಡೆದುಕೊಂಡ ಹಣವನ್ನು ಹಿಂತುರುಗಿಸದೆ ಇದ್ದಾಗ ತಾವೇ ಸ್ವತಃ ಹೋಗಿ ಕೇಳುವುದೇ ಇಲ್ಲ. ಹಣ ಕೇಳಿದರೆ ಎಡವಟ್ಟು ಆಗಬಹುದು ಎಂದು ಭಾವಿಸುತ್ತಾರೆ. ಅಪ್ಪಿ ತಪ್ಪಿ ಕೊಟ್ಟೋ ಸಾಲವನ್ನು ಹಿಂತುರುಗಿಸಿ ಕೊಡುವಂತೆ ಕೇಳಿದರು ಒಂದು ಎರಡು ಬಾರಿ ಮಾತ್ರ ಸಾಲ ತೆಗೆದುಕೊಂಡವರು ಹಿಂತಿರುಗಿಸುವವರೆಗೂ ಮತ್ತೆ ಕೇಳುವುದೇ ಇಲ್ಲ. ಹೀಗೆ ಭಾವನೆಗಳನ್ನು ನಿಯಂತ್ರಿಸಿಕೊಳ್ಳದೆ ಸಾಲವನ್ನು ನೀಡಿ ಹಿಂತಿರುಗಿಸಿ ಪಡೆಯದೆ ಇದ್ದರೆ ಕಟಕ ರಾಶಿಯವರ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಡುತ್ತದೆ.

ಇದನ್ನೂ ಓದಿ: Astrology Tips: ಈ 12ರಾಶಿಗಳಲ್ಲಿ ಯಾವ ರಾಶಿಯವರು ಯಾವ ಕೆಲಸ ಮಾಡಿದರೆ ಆ ಕೆಲಸ ಅವರ ಕೈಹಿಡಿಯುತ್ತದೆ ಗೊತ್ತೇ?

ತುಲಾ ರಾಶಿ (Libra): ತುಲಾ ರಾಶಿಯ ಜನ ತಕ್ಕಡಿಯಂತೆ, ಸಮತೋಲನದಲ್ಲಿ ಇರುತ್ತಾರೆ ಆದರೂ ಈ ರಾಶಿಯವರು ಸಂಬಂಧದ ವಿಷಯಕ್ಕೆ ಬಂದಾಗ ಬಹಳ ಭಾವುಕರಾಗುತ್ತಾರೆ ಹಾಗಾಗಿ ಅವರು ಸಾಲದ ಹಣವನ್ನು ಹಿಂತುರುಗಿಸಿ ಪಡೆಯುವಲ್ಲಿ ಸಮಸ್ಯೆಯನ್ನು ಎದುರಿಸುತ್ತಾರೆ ಇಂತಹ ಮನಸ್ಥಿತಿ ಇರುವವರು ಯಾವುದೇ ಕಾರಣಕ್ಕೂ ಸ್ನೇಹ ಹಾಗೂ ಸಂಬಂಧಗಳಲ್ಲಿ ಹಣದ ವಹಿವಾಟು ನಡೆಸಬಾರದು.

ಧನು ರಾಶಿ (Sagittarius); ಈ ರಾಶಿಯವರು ಹಣ ಕೊಟ್ಟೆ ಮುಳುಗಡೆಯಾಗುವ ಸಾಧ್ಯತೆ ಇದೆ ಒಂದೆರಡು ಬಾರಿ ಹಣವನ್ನು ಕೇಳಿ ಹಿಂದಿರುಗಿಸದೆ ಇದ್ದರೆ ಸಾಲ ಕೊಟ್ಟವರ ಹಾಗೂ ಪಡೆದುಕೊಂಡವರ ನಡುವೆ ವಾಗುದ ಶುರುವಾಗಬಹುದು ಇಬ್ಬರ ನಡುವೆ ಸಂಬಂಧ ಹದಗೆಡಬಹುದು ಅದರಲ್ಲೂ ಈ ರಾಶಿಯ ಜನ ಗುರುವಾರದ ದಿನ ಯಾರಿಗೂ ಹಣ ಸಾಲ ಕೊಡಬಾರದು. ಈ ದಿನ ನೀವು ಹಣ ಸಾಲ ನೀಡಿದರೆ ಮತ್ತೆ ಮರಳಿ ಪಡೆಯುವ ಸಾಧ್ಯತೆ ಅತೀ ವಿರಳ.

ಕುಂಭ ರಾಶಿ (Aquarius); ಗಂಭೀರ ಸ್ವಭಾವವನ್ನು ಹೊಂದಿರುವ ಕುಂಭ ರಾಶಿಯವರು ಅಷ್ಟಾಗಿ ಇತರರಿಗೆ ಸಾಲ ನೀಡುವ ವಿಷಯದಲ್ಲಿ ಹಿಂದೆಟು ಹಾಕುತ್ತಾರೆ ಆದರೂ ಸಾಲ ನೀಡಿದರೆ ಮತ್ತೆ ಹಿಂತುರುಗಿ ಪಡೆಯುವಲ್ಲಿ ಮಾತ್ರ ಹಿಂಜರಿಯುತ್ತಾರೆ. ಅವರಾಗಿ ವಾಪಸ್ ಕೊಟ್ಟರೆ ತೆಗೆದುಕೊಳ್ಳುತ್ತೇನೆ ಇಲ್ಲದಿದ್ದರೆ ಕೇಳುವುದಕ್ಕೆ ಹೋಗಲ್ಲ ಎನ್ನುವಂತಹ ಮನಸ್ಥಿತಿಯ ಜನ ಇವರು ಹಾಗಾಗಿ ಈ ರಾಶಿಯವರು ಸಾಲ ನೀಡುವುದಕ್ಕೂ ಮೊದಲು ಕಾಗದಪತ್ರ ಮಾಡಿಸಿಕೊಳ್ಳುವುದು ಒಳ್ಳೆಯದು.

ಇದನ್ನೂ ಓದಿ: Garuda Purana:ಗರುಡ ಪುರಾಣದ ಪ್ರಕಾರ ಈ ವಸ್ತುಗಳನ್ನು ನೋಡೋದ್ರಿಂದ ಪುಣ್ಯ ಹಾಗೂ ಸಂಪತ್ತು ಪ್ರಾಪ್ತಿಯಾಗತ್ತೆ; ಯಾವ ವಸ್ತುಗಳು ಗೊತ್ತೇ?

ಮೀನ ರಾಶಿ (Pisces); ಮೀನ ರಾಶಿಯವರು ಕೂಡ ಸಾಲ ಕೊಡುವುದನ್ನು ತಪ್ಪಿಸಿದರೆ ಒಳ್ಳೆಯದು ಇವರು ಅಷ್ಟೆ ಸಾಲ ಕೊಟ್ಟು ಹಿಂತಿರುಗಿ ಪಡೆಯಲು ಹಿಂಜರಿಯುತ್ತಾರೆ. ಹಾಗಾಗಿ ಕೆಲವೊಮ್ಮೆ ಆರ್ಥಿಕವಾಗಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ಇವರ ಕಷ್ಟಕಾಲದಲ್ಲಿ ಕೊಟ್ಟಿರುವ ಹಣ ಹಿಂತಿರುಗಿ ಬರುವುದಿಲ್ಲ ಇದರಿಂದ ಮಾನಸಿಕವಾಗಿಯೂ ಕೂಡ ತೊಂದರೆಗೆ ಒಳಗಾಗುತ್ತಾರೆ ಅಲ್ಲದೆ ತಿಂಗಳ ಬಜೆಟ್ ಮೇಲು ಕೂಡ ಪರಿಣಾಮ ಬೀರಬಹುದು ಅದಕ್ಕಾಗಿ ನೀವು ಯಾರಿಗಾದರೂ ಸಾಲ ನೀಡುವ ಅನಿವಾರ್ಯತೆ ಇದ್ದರೆ 10 ಬಾರಿ ಯೋಚಿಸಿ.

AstrologyMoneyzodiac signದ್ವಾದಶ ರಾಶಿಗಳು