Astrology: ಸಾಡೇಸಾತಿ ಇದ್ದರೂ ಕೂಡ ಶನಿ ದೇವ ಈ ಐದು ರಾಶಿಯವರಿಗೆ ಮಾತ್ರ ಕೃಪೆ ತೋರುತ್ತಾನೆ, ಕೋಪ ಮಾಡಿಕೊಳ್ಳುವುದೇ ಇಲ್ಲ ಆ ಅದೃಷ್ಟವಂತ ರಾಶಿಗಳು ಯಾವವು ಗೊತ್ತೇ?

ಶನಿಯ ವಕ್ರ ದೃಷ್ಟಿಗೆ ಎಲ್ಲರೂ ಹೆದರುತ್ತಾರೆ. ಶನಿದೇವನು ಕರ್ಮವನ್ನ ನೀಡುವವನು. ಆತ ನಮ್ಮ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನ ನೀಡುತ್ತಾನೆ. ಹಾಗಾಗಿ ನಾವು ಮಾಡುವ ಕಾರ್ಯದ ಬಗ್ಗೆ ನಮಗೆ ಗಮನ ಇದ್ದರೆ ಶನಿದೇವನ ಕೃಪೆಗೂ ಕೂಡ ಪಾತ್ರರಾಗಬಹುದು. ಇದೇ ಬರುವ ಜನವರಿ 17ರಂದು ಶನಿ ಗ್ರಹವು ಕುಂಭ ರಾಶಿಗೆ ಸಂಚಾರ ನಡೆಸಲಿದೆ. ಜ್ಯೋತಿಷ್ಯ (Astrology)ದ ಪ್ರಕಾರ ಶನಿದೇವರಿಗೆ ಈ ಕೆಳಗಿನ ರಾಶಿ (Zodiac sign ಗಳು ಹೆಚ್ಚು ಅಚ್ಚು ಮೆಚ್ಚು. ಹಾಗಾಗಿ ಸಾಡೇಸಾತಿ ಸಮಯದಲ್ಲಿಯೂ ಕೂಡ ಶನಿ (saturn) ದೇವರು ಈ ರಾಶಿಯ ಜೊತೆಗೆ ಇರುತ್ತಾರೆ ಆ ರಾಶಿಗಳು ಯಾವವು ನೋಡೋಣ ಬನ್ನಿ.

ಇದನ್ನೂ ಓದಿ: Astrology: ನೀವು ಈ ರಾಶಿಯವರಾಗಿದ್ದರೆ ತಪ್ಪಿಯೂ ಬೇರೆಯವರಿಗೆ ಸಾಲ ಕೊಡಬೇಡಿ; ಕೊಟ್ಟರೆ ಏನಾಗುತ್ತೆ ಗೊತ್ತೇ?

ವೃಷಭ ರಾಶಿ; ಶನಿದೇವನು, ವೃಷಭ ರಾಶಿಯವರಿಗೆ ಒಳ್ಳೆಯದನ್ನೇ ಮಾಡುತ್ತಾನೆ. ಇವರಿಗೆ ಕರುಣಾಮಯಿಯಾಗಿ ಕಾಣಿಸಿಕೊಳ್ಳುತ್ತಾನೆ. ವೃಷಭ ರಾಶಿಯವರ ಜಾತಕದಲ್ಲಿ ಶನಿಯ ಸಂಚಾರವಿದ್ದರೂ ಅದರಿಂದ ಕೆಟ್ಟ ಪರಿಣಾಮಗಳು ಆಗುವುದಿಲ್ಲ. ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಕೂಡ ಶನಿ ದೇವರು ಕೈಜೋಡಿಸುತ್ತಾನೆ.

ತುಲಾ ರಾಶಿ; ಶುಕ್ರನ ರಾಶಿಯಾಗಿರುವ ತುಲಾ ರಾಶಿ ಶನಿ ದೇವರಿಗೂ ಕೂಡ ಪ್ರಿಯವಾದ ರಾಶಿ. ಶನಿಯು ತುಲಾ ರಾಶಿಯಲ್ಲಿ ಉತ್ತುಂಗದಲ್ಲಿರುತ್ತಾನೆ. ತುಲಾ ರಾಶಿಯವರ ಜಾತಕದಲ್ಲಿ ಯಾವುದೇ ಗ್ರಹಗಳು ಪ್ರತಿಕೂಲ ಸ್ಥಾನದಲ್ಲಿದ್ದರೂ ಕೂಡ ಶನಿ ದೇವರು ತುಲಾ ರಾಶಿಯವರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಾನೆ ಜೊತೆಗೆ ತುಲಾ ರಾಶಿಯ ಜನರ ಪ್ರಗತಿಗೆ ಸಹಕರಿಸುತ್ತಾನೆ.

ಕುಂಭ ರಾಶಿ; ಕುಂಭ ರಾಶಿಯ ಮೇಲೆ ಶನಿದೇವನ ವಕ್ರ ದೃಷ್ಟಿ ಬೀಳುವುದು ಬಹಳ ಅಪರೂಪ. ಈ ರಾಶಿಯ ಅಧಿಪತಿಯೇ ಶನಿ ದೇವರು. ಆದ್ದರಿಂದ ಕುಂಭ ರಾಶಿಯವರಿಗೆ ಶನಿದೇವ ಕೃಪೆ ಮಾಡುತ್ತಾನೆ ಹಾಗಾಗಿ ಈ ಜನರಿಗೆ ಹಣದ ಸಮಸ್ಯೆ ಆಗುವುದಿಲ್ಲ ಶನಿ ದೇವರ ಪ್ರಭಾವ ಕುಂಭ ರಾಶಿಯವರ ಮೇಲೆ ಬಹಳ ಕಡಿಮೆ ಇರುತ್ತದೆ.

ಧನು ರಾಶಿ; ಗುರು ಗ್ರಹದ ಧನು ರಾಶಿ ಶನಿದೇವರಿಗೂ ಅತ್ಯಂತ ಪ್ರಿಯವಾದ ರಾಶಿಯಾಗಿದೆ. ಈ ರಾಶಿಯವರಿಗೆ ಶನಿ ಯಾವುದೇ ರೀತಿಯ ತೊಂದರೆಯನ್ನು ಕೊಡುವುದಿಲ್ಲ. ಧನು ರಾಶಿಯವರಿಗೆ ಧೈರ್ಯ, ಸಮಾಜದಲ್ಲಿ ಗೌರವ ಹಾಗೂ ಸಂಪತ್ತು ಸಿಗುವಂತೆ ಮಾಡುತ್ತಾನೆ.

ಇದನ್ನೂ ಓದಿ: Gemstone: ನೀವು ಈ ಮಣಿಗಳನ್ನು ಧರಿಸಿದರೆ ಏನಾಗುತ್ತೆ ಗೊತ್ತೆ? ನಿಮ್ಮ ಊಹೆಗೂ ಮೀರಿದ ಸಂಪತ್ತು ನಿಮ್ಮನ್ನು ಹುಡುಕಿಕೊಂಡು ಬರುತ್ತೆ ನೋಡಿ!

ಮಕರ ರಾಶಿ; ಮಕರ ರಾಶಿಯಲ್ಲಿ ಶನಿದೇವನೇ ಅಧಿಪತಿ್. ಹಾಗಾಗಿ ಶನಿದೇವನ ನೆಚ್ಚಿನ ರಾಶಿ ಚಕ್ರಗಳಲ್ಲಿ ಮಕರ ರಾಶಿಯು ಕೂಡ ಒಂದು ಯಾವುದೇ ಶನಿಯ ದೋಷ ಸಾಡೇಸಾತಿ ಇದ್ದರು ಕೂಡ ಮಕರ ರಾಶಿಯವರಿಗೆ ಶನಿದೇವ ತೊಂದರೆ ಮಾಡುವುದಿಲ್ಲ ಹಾಗಾಗಿ ಮಕರ ರಾಶಿಯವರು ಶನಿದೇವನ ದುಷ್ಪರಿಣಾಮಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಶನಿದೇವ ಈ ರಾಶಿಯವರ ಮೇಲೆ ಸದಾ ಕೃಪೆ ಇಟ್ಟಿರುತ್ತಾನೆ.

12 zodiac signsAstrologyHoroscopeSaturnಐದು ರಾಶಿಗಳುಜ್ಯೋತಿಷ್ಯಾಸ್ತ್ರಶನಿ ಗ್ರಹಶನಿಯ ಕೃಪೆ