Tirupati Darshanam: ತಿರುಪತಿ ದರ್ಶನಕ್ಕೆ ದಿನವಿಡೀ ಕ್ಯೂನಲ್ಲಿ ನಿಲ್ಲಬೇಕಿಲ್ಲ, ಬುಕ್ಕಿಂಗ್ ಮಾಡಿ ಹೆಚ್ಚು ದಿನ ಕಾಯಬೇಕಿಲ್ಲ, ರಾಜ್ಯ ಸರ್ಕಾರವೇ ಮಾಡಿಸುತ್ತೆ ವಿಐಪಿ ದರ್ಶನ, ಎಷ್ಟು ಕಡಿಮೆ ಬೆಲೆಗೆ ಪ್ಯಾಕೇಜ್ ಗೊತ್ತೇ?

Tirupati Darshanam: ನೀವು ತಿರುಪತಿ ತಿಮ್ಮಪ್ಪನ ಭಕ್ತರಾ? ನಿಮಗೆ ತಿಮ್ಮಪ್ಪನ ದರ್ಶನಕ್ಕೆ ಹೋಗ್ಬೇಕಾ? ಹಾಗಾದ್ರೆ ಚಿಂತೆನೇ ಬೇಡ, ರಾಜ್ಯ ಸರ್ಕಾರ ಘೋಷಿಸಿದೆ, ಹೊಸ ಪ್ಯಾಕೇಜ್. ಕಡಿಮೆ ದರದಲ್ಲಿ ಸೇಫ್ ಆಗಿ, ತಿರುಪತಿ ದರ್ಶನ ನೀಡುವ ಜವಾಬ್ದಾರಿ ಇನ್ನು ರಾಜ್ಯ ಸರ್ಕಾರದ್ದು. ರಾಜ್ಯ ಸರ್ಕಾರ ಘೋಷಿಸಿದ ಪ್ಯಾಕೇಜ್ ಏನು ? ನೋಡೋಣ ಬನ್ನಿ.

Tirupati Darshanam: ತಿರುಪತಿ ದರ್ಶನಕ್ಕೆ ದಿನವಿಡೀ ಕ್ಯೂನಲ್ಲಿ ನಿಲ್ಲಬೇಕಿಲ್ಲ, ಬುಕ್ಕಿಂಗ್ ಮಾಡಿ ಹೆಚ್ಚು ದಿನ ಕಾಯಬೇಕಿಲ್ಲ, ರಾಜ್ಯ ಸರ್ಕಾರವೇ ಮಾಡಿಸುತ್ತೆ ವಿಐಪಿ ದರ್ಶನ, ಎಷ್ಟು ಕಡಿಮೆ ಬೆಲೆಗೆ ಪ್ಯಾಕೇಜ್ ಗೊತ್ತೇ? https://sihikahinews.com/amp/2022/12/06/karnataka-government-announced-news-tirupati-darshan-package/

ಮೊದಲನೆಯದಾಗಿ ಕೆ ಎಸ್ ಆರ್ ಟಿ ಸಿ ವೆಬ್ಸೈಟ್ (Website) ನಲ್ಲಿ ನೀವು ತಿರುಪತಿ ದರ್ಶನಕ್ಕಾಗಿ ಆನ್ಲೈನ್ ಬುಕಿಂಗ್ online booking) ಮಾಡಿಕೊಳ್ಳಬಹುದು. ಮಲ್ಟಿ ಎಕ್ಸೆಲ್, ವೋಲ್ವೋ, ಡಿಲಕ್ಸ್ ಬಸ್ (Bus) ಗಳನ್ನು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಿಡಲಾಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಇದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಿದೆ ನೀವು ಯಾವ ಬಸ್ ನಲ್ಲಿ ಪ್ರಯಾಣ ಮಾಡುತ್ತೀರಿ ಎನ್ನುವುದರ ಆಧಾರದ ಮೇಲೆ ಟಿಕೆಟ್ (Ticket)  ದರ ನಿಗದಿಯಾಗುತ್ತದೆ. ಒಂದು ಟಿಕೆಟ್ ದರ ಸುಮಾರು 300 ರೂಪಾಯಿಗಿಂತ ಹೆಚ್ಚು. ಇದನ್ನೂ ಓದಿ:Technology: ಈವಿ ಬೈಕ್ ಖರೀದಿ ಮಾಡ್ಬೇಕಾ? ಇಲ್ಲಿದೆ ಬೆಸ್ಟ್ ಮೈಲೇಜ್ ಕೊಡುವ ಬೈಕ್ ಸರ್ಕಾರದಿಂದಲೂ ಸಿಗತ್ತೆ ಸಿಕ್ಕಾಪಟ್ಟೆ ಸಬ್ಸಿಡಿ ಬೆನಿಫಿಟ್!

ಇನ್ನು ರಾಜ್ಯದ ಯಾವುದೇ ಮೂಲೆಯಿಂದ ತಿರುಪತಿ ತಿಮ್ಮಪ್ಪನ (Tirupati timmappa) ದರ್ಶನ ಪಡೆಯಲು ಇಷ್ಟೆ ಪಟ್ಟ ಭಕ್ತಾದಿಗಳು ಬೆಂಗಳೂರಿಗೆ ಬರಬೇಕು ನಿಮ್ಮ ಬುಕಿಂಗ್ ಕನ್ಫರ್ಮ್ ಆದ ನಂತರ ಹಿಂದಿನ ದಿನ ಬೆಂಗಳೂರಿನಿಂದ ಬಸ್ ಹೊರಡಲಿದೆ ದಾರಿ ಮಧ್ಯೆ ಉತ್ತಮ ಊಟದ ವ್ಯವಸ್ಥೆ ಇರುತ್ತದೆ ನಂತರ ಬೆಳಗ್ಗೆ ತಿರುಪತಿಗೆ ಬಸ್ ರೀಚ್ ಆಗುತ್ತದೆ. ಭಕ್ತಾದಿಗಳು ಫ್ರೆಶ್ ಅಪ್ ಆಗಲು ಉತ್ತಮ ಹೋಟೆಲ್ ವ್ಯವಸ್ತೆ ಮಾಡಲಾಗಿದೆ. ಹೆಚ್ಚು ಅಂದ್ರೆ ಒಂದು ತಾಸುಗಳ ವರೆಗೆ ದರ್ಶನಕ್ಕಾಗಿ ಕಾಯಬೇಕು ನಂತರ ವಿಐಪಿ ದರ್ಶನ ಮಾಡಿಸಲಾಗುತ್ತದೆ. ಬಳಿಕ ನೀವು ಹೋಗಿರುವ ಬಸ್ ನಲ್ಲಿಯೇ ಹಿಂತಿರುಗಿ ಮಧ್ಯರಾತ್ರಿ ಬೆಂಗಳೂರಿಗೆ ವಾಪಸ್ ಬರಬಹುದು ದಾರಿ ಮಧ್ಯೆ ಉಪಹಾರ, ಊಟದ ವ್ಯವಸ್ಥೆ ಮಾಡಲಾಗುತ್ತದೆ.

ಇನ್ನು ಈ ಪ್ಯಾಕೇಜ್ (Package) ದರವನ್ನು ನೋಡುವುದಾದರೆ ಮೊದಲನೇದಾಗಿ ನೀವು ಆನ್ಲೈನ್ ಬುಕಿಂಗ್ ಮಾಡಬೇಕು ಊಟ ವಸತಿ ಎಲ್ಲವನ್ನು ಸೇರಿ 2400 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.  ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಶೀಘ್ರದಲ್ಲಿಯೇ ಪ್ಯಾಕೇಜ್ ನ ನಿಖರವಾದ ದರವನ್ನ ಪ್ರಕಟಿಸಲಿದೆ. ಇದನ್ನೂ ಓದಿ: <a>Elon Musk: </a>ಮಾನವನ ಮೆದುಳಿಗೆ ಚಿಪ್ ಅಳವಡಿಕೆ; ಮನುಷ್ಯನ ಮೆದುಳಿಗೆ ಕೈಹಾಕಲು ಮುಂದಾದ್ರಾ ಎಲಾನ್ ಮಸ್ಕ್

ರಾಜ್ಯ ಮುಖ್ಯಮಂತ್ರಿ (CM) ಬಸವರಾಜ್ ಬೊಮ್ಮಾಯಿ ಅವರು ಅಧ್ಯಕ್ಷ ವೈವಿ ಸುಭ ರೆಡ್ಡಿ ಅವರನ್ನು ಭೇಟಿಯಾದಾಗ ರಾಜ್ಯದ ಜನತೆಗೆ ಹೆಚ್ಚಿನ ಅವಕಾಶ ನೀಡಬೇಕಾಗಿ ಕೇಳಿಕೊಂಡಿದ್ದಾರೆ ಅದಕ್ಕೆ ಶುಭ ರೆಡ್ಡಿ ಅವರು ಹೆಚ್ಚಿನ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ಪ್ಯಾಕೇಜ್ ಘೋಷಣೆ ಮಾಡಿದೆ ಈ ಹಿಂದೆ ರಾಜ್ಯದಿಂದ ದಿನಕ್ಕೆ ಕೇವಲ 200 ಜನ ಮಾತ್ರ ಟಿಟಿಡಿ ಗೆ ಹೋಗಬಹುದಿತ್ತು ಆದರೆ ಇನ್ನು ಮುಂದೆ ಈ ಭಕ್ತರ ಸಂಖ್ಯೆಯನ್ನು ಐದುನೂರಕ್ಕೆ ಏರಿಸಲಾಗಿದೆ. ಮುಂಬರುವ ದಿನಗಳಲ್ಲಿ ಸಾವಿರ ಜನರಿಗೆ ದರ್ಶನ ಕೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ.

Karnataka Govt PackageNew PackageTirupati DarshanamTTDತಿರುಪತಿ ತಿಮ್ಮಪ್ಪ