Pavitra-Naresh Story: ಹಿರಿಯ ನಟ ನರೇಶ್ ಮದುವೆ ಮಾಧ್ಯಮಗಳಲ್ಲಿ ದೊಡ್ದ ಸುದ್ದಿಯಾಗಿದೆ. ಇತ್ತೀಚಿಗೆ ಹೊಸ ವರ್ಷದ ಆರಂಭದಲ್ಲಿಯೇ ಪವಿತ್ರಾ ಲೋಕೇಶ್ ಅವರಿಗೆ ಚುಂಜಿಸುವುದರ ಮೂಲಕ ತಾವಿಬ್ಬರೂ ಮದುವೆ ಆಗುತ್ತಿರುವ ವಿಚಾರವನ್ನು ನರೇಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನರೇಶ್ ಗೆ ಈಗಾಗಲೇ ಮೂರು ಮದುವೆಯಾಗಿದೆ. ಆದರೆ ಇತ್ತೀಚಿಗೆ ಅವರ ಮೂರನೇ ಪತ್ನಿ ರಮ್ಯಾ ನರೇಶ್ ವಿರುದ್ಧ ಹಲವು ಆರೋಪಗಳು ಕೇಳಿ ಬರುತ್ತಿವೆ.
ಟಾಲಿವುಡ್ನ ಹಿರಿಯ ನಟ ನರೇಶ್ ನಾಲ್ಕನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇದೀಗ ಚಿತ್ರರಂಗದಲ್ಲಿ ಹಾಟ್ ಟಾಪಿಕ್. ಕಳೆದ ಕೆಲವು ದಿನಗಳಿಂದ ಇದೇ ವಿಷಯದ ಬಗ್ಗೆ ಎಲ್ಲರೂ ವ್ಯಾಪಕ ಚರ್ಚೆಗಳು ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಆಘಾತಕಾರಿ ಕಮೆಂಟ್ ಒಂದನ್ನು ಮಾಡಿದ್ಡಾರೆ. ಕೃಷ್ಣನೊಂದಿಗೆ ಅಕ್ರಮ ಸಂಬಂಧ ಆರೋಪ ಮಾಡಿ ನರೇಶ್ ದೌರ್ಜನ್ಯ ಎಸಗಿದ್ದಾನೆ ಎಂದು ಆಕೆ ಆರೋಪ ಮಾಡಿದ್ದಾರೆ. ಇದನ್ನೂ ಓದಿ: Kannada Recipe: ಸಮಯವಿಲ್ಲದೆ ಇದ್ದಾಗ ಚಿಟಿಕೆ ಹೊಡೆಯುವಷ್ಟು ಸುಲಭದಲ್ಲಿ ಮಾಡಿ ವಿಶೇಷ ಅಕ್ಕಿ ರೊಟ್ಟಿ; ಮನೆ ಮಂದಿ ಎಲ್ಲ ಮತ್ತೆ ಮತ್ತೆ ಮಾಡು ಅಂತ ಕೇಳ್ತಾರೆ, ಹೇಗೆ ಮಾಡಬೇಕು ಗೊತ್ತೆ?
ಪವಿತ್ರಾ ಲೋಕೇಶ್ ಹಾಗೂ ಹಿರಿಯ ನಟ ನರೇಶ್ ಜೊತೆ ಸಹಜೀವನ ನಡೆಸುತ್ತಾರೆ ಎನ್ನುವ ವಿಷಯ ಎಲ್ಲರಿಗೂ ಗೊತ್ತು. ಯಾಕಂದ್ರೆ ಮದ್ಯಮದ ಮುಂದೆ ತಾವಾಗಿಯೇ ತಮ್ಮ ಗುಟ್ತನ್ನು ಬಿಟ್ಟುಕೊಟ್ಟಿದ್ದಾರೆ. ಈ ಬಗ್ಗೆ ಸಾಕಷ್ಟು ಟ್ರೋಲ್ ಗಳಿಗೂ ಗುರಿಯಾಗಿದೆ ಈ ತಾರಾ ಜೋಡಿ! ಇನ್ನು ರಮ್ಯಾ ರಘುಪತಿ ನರೇಶ್ ಅವರ ಮೂರನೇ ಪತ್ನಿ, ಪವಿತ್ರಾ ಲೋಕೇಶ್ ಹಾಗೂ ನರೇಶ್ ಅವರ ವಿಚಾರವನ್ನು ಮಾಧ್ಯಮದ ಎದುರು ತಂದಿದ್ದೇ ಇವರು. ಈಗಾಗಲೇ ಪವಿತ್ರಾ ಹಾಗೂ ನರೇಶ್ ಬಗ್ಗೆ ಸಾಕಷ್ಟು ಆರೋಪ ಮಾಡಿದ್ದು, ಮೈಸೂರಿನ ಹೋಟೆಲ್ ಒಂದರಲ್ಲಿ ನರೇಶ್ ಹಗೂ ಪವಿತ್ರಾ ಅವರನ್ನು ರಮ್ಯಾ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು.
ರಮ್ಯಾಗೆ ನರೇಶ್ ಆಫರ್;
ಯೆಸ್, ಈಗಾಗಲೇ ನರೇಶ್, ರಮ್ಯಾಳಿಗೆ ಡೈವೋರ್ಸ್ ನೋಟೀಸ್ ಕೊಟ್ಟಿದ್ದಾರೆ. ಆದರೆ ಅದನ್ನ ರಮ್ಯಾ ತಿರಸ್ಕರಿಸಿದ್ದರು. ಇದೀಗ ರಮ್ಯಾ ವಿಚ್ಚೇದನ ನೀಡದೇ ಪವಿತ್ರಾ ಅವರನ್ನು ನರೇಶ್ ಮದುವೆ ಆಗುವ ಹಾಗಿಲ್ಲ. ಹಾಗಾಗಿ ರಮ್ಯಾ ಬಳಿ ವಿಚ್ಛೇಧನಕ್ಕಾಗಿ ನರೇಶ್ ಮೂರರಿಂದ 20 ಕೋಟಿ ರೂಪಾಯಿ ವರೆಗೆ ಆಫರ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:Real Story: ಎಲ್ಲವೂ ಚೆನ್ನಾಗಿತ್ತು, ಆದರೆ ಅತ್ತಿಗೆ ಮನೆಯಲ್ಲಿ ಒಬ್ಬರೇ ಇದ್ದಾಗ ಮೈದುನ ಬಂದು ಮಾಡಿದ್ದೇನು ಗೊತ್ತೇ? ಬೆಚ್ಚಿ ಬೀಳುವಂತಹ ಘಟನೆ ನಡೆದೇ ಹೋಯ್ತು!
ಇನ್ನು ಈ ಬಗ್ಗೆ ಕಮೆಂಟ್ ಮಾಡಿದ ನೆಟ್ಟಿಗರು ಇದು ಎರಡೂ ಕುಟುಂಬದ ಮರ್ಯಾದಿ ಪ್ರಶ್ನೆ. ಮೊದಲು ರಮ್ಯಾ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಕಮೆಂಟ್ ಮಾಡಿದ್ದಾರೆ. ಈಗಾಗಲೇ ಮೂರು ಮದುವೆಯಾಗಿರುವ ನರೇಶ್ ಗೆ ಇನ್ನೊಂದು ಮದುವೆಯಗುವ ಹಂಬಲ ಯಾಕೋ ಗೊತ್ತಿಲ್ಲ. ಒಟ್ಟಿನಲ್ಲಿ ಸ್ನೇಹಿತರು ಎಂದು ಓಡಾಡಿಕೊಂಡಿದ್ದ ಪವಿತ್ರಾ ಹಾಗೂ ನರೇಶ್ ಲಿಪ್ ಕಿಸ್ ಮಾಡುವುದರ ಮೂಲಕ ತಾವು ಮದುವೆಯಾಗುತ್ತಿರುವುದಾಗಿ ಘೋಷಿಸಿದ್ದಾರೆ. ಒಟ್ಟಿನಲ್ಲಿ ರಮ್ಯಾ ಎದುರು ಬಂಪರ್ ಆಫರ್ ಅಂತೂ ಇದೆ. ರಮ್ಯಾ ಅದನ್ನು ಒಪ್ಪಿಕೊಂಡು ಪ್ರೇಮ ಪಕ್ಷಿಗಳನ್ನು ಹಾರಲು ಬಿಡುತ್ತಾರಾ ಕಾದು ನೋಡಬೇಕು!