SBI Mudra Loan: ಲೋನ್ ಗಾಗಿ ಅಲೆದಾಡುವುದು ಬೇಡ, ಜಸ್ಟ್ ಈ ಡಾಕ್ಯುಮೆಂಟ್ಸ್ ಸಿದ್ದ ಪಡಿಸಿಕೊಂಡು, SBI ಬ್ಯಾಂಕ್ ಗೆ ಹೋಗಿ. ಲೋನ್ ಕೊಡುವುದು ಫಿಕ್ಸ್. ಜನರ ಕಷ್ಟ ಕೊನೆಗೂ ಅರ್ಥಮಾಡಿಕೊಂಡ ಬ್ಯಾಂಕ್!

SBI Mudra Loan: ದೇಶದ ಅತಿದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ವಿವಿಧ ರೀತಿಯ ಸಾಲಗಳನ್ನು ನೀಡುತ್ತದೆ. ವೈಯಕ್ತಿಕ ಸಾಲದಿಂದ ಗೃಹ ಸಾಲದವರೆಗೆ ವಿವಿಧ ರೀತಿಯ ಸಾಲಗಳನ್ನು ಗ್ರಾಹಕರು ಪಡೆದುಕೊಳ್ಳಬಹುದು. ಇವುಗಳಲ್ಲಿ ವ್ಯಾಪಾರ ಸಾಲಗಳು (Business loan) ಸೇರಿವೆ. ಎಸ್‌ಬಿಐ ಉದ್ಯಮಿಗಳಿಗೆ ವಿವಿಧ ರೀತಿಯ ಸಾಲಗಳನ್ನು ನೀಡುತ್ತದೆ. ಎಸ್‌ಬಿಐ ಇ- ಮುದ್ರಾ ಸಾಲವು ಇವುಗಳಲ್ಲಿ ಒಂದಾಗಿದೆ. ಇ-ಮುದ್ರಾ ಯೋಜನೆ (E-mudra plan) ಯಡಿ ಅರ್ಹ ವ್ಯಕ್ತಿಗಳಿಗೆ ಸ್ಟೇಟ್ ಬ್ಯಾಂಕ್ (State Bank of India) ರೂ.1 ಲಕ್ಷದವರೆಗೆ ಸಾಲ ಮಂಜೂರು ಮಾಡುತ್ತಿದೆ. ಆನ್‌ಲೈನ್‌ (online)ನಲ್ಲಿ ಅರ್ಜಿ (Online application) ಸಲ್ಲಿಸುವ ಮೂಲಕವೂ ನೀವು ಸಾಲ ಪಡೆದುಕೊಳ್ಳಬಹುದು.

ಸಾಲ ಪಡೆಯಲು ಅರ್ಹತೆಗಳು:

ಎಸ್‌ಬಿಐ ಇ ಮುದ್ರಾ ಯೋಜನೆಯಡಿ ಸಾಲ ಪಡೆಯುವ ಉದ್ದೇಶ ಹೊಂದಿರುವವರು ಮೈಕ್ರೋ ಎಂತರ್ಪ್ರೈನರ್ (ಸಣ್ಣ ಉದ್ಯಮಿ)ಗಳಾಗಿರಬೇಕು. ಅಂದರೆ ಏನಾದರೂ ಸ್ಪ ವ್ಯಾಪಾರ ಮಾಡುವವರಾಗಿರಬೇಕು. ಇದಲ್ಲದೆ, ನೀವು ಎಸ್‌ಬಿಐನಲ್ಲಿ ಪ್ರಸ್ತುತ ಖಾತೆ ಅಥವಾ ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಈ ಯೋಜನೆಯಡಿಯಲ್ಲಿ ಗರಿಷ್ಠ ರೂ. ಒಂದು ಲಕ್ಷದವರೆಗೆ ಸಾಲ. ಪಡೆಯಬಹುದು. ಅದನ್ನು ಐದು ವರ್ಷದೊಳಗೆ ಮರುಪಾವತಿ ಮಾಡಬೇಕು. ಬ್ಯಾಂಕಿನ ಅರ್ಹತಾ ಮಾನದಂಡದ ಪ್ರಕಾರ. ಅರ್ಹ ಅಭ್ಯರ್ಥಿಗಳಿಗೆ ತಕ್ಷಣವೇ ರೂ.50 ಸಾವಿರ ಸಾಲ ಸಿಗುತ್ತದೆ. ನೀವು ಈ ಮೊತ್ತವನ್ನು ಆನ್‌ಲೈನ್‌ನಲ್ಲಿಯೂ ಪಡೆಯಬಹುದು.

ಸಾಲಕ್ಕೆ ಯಾವ ದಾಖಲೆ ಬೇಕು?

ಆದರೆ ರೂ. 50 ಸಾವಿರಕ್ಕಿಂತ ಹೆಚ್ಚು ಸಾಲ ಪಡೆಯಯಲು ನೀವು ಬಯಸಿದರೆ ಬ್ಯಾಂಕ್ ಶಾಖೆಗೆ ಹೋಗಬೇಕು. ಅಲ್ಲದೆ ಸಾಲ ಪಡೆಯುವ ಉದ್ದೇಶ ಹೊಂದಿರುವವರು ವ್ಯವಹಾರ ಪುರಾವೆಯನ್ನು ಒದಗಿಸಬೇಕು. ಹೆಸರು, ಪ್ರಾರಂಭಿಸಿದ ದಿನಾಂಕ, ವಿಳಾಸದಂತಹ ಎಲ್ಳಾ ವಿವರಗಳ ಅಗತ್ಯವಿರುತ್ತದೆ. ಆಧಾರ್ ಕಾರ್ಡ್ ಕೂಡ ಬೇಕೇ ಬೇಕು. ವ್ಯಾಪಾರ ವೆಚ್ಚ ಪ್ರಮಾಣಪತ್ರವನ್ನು ಸಹ ಸಲ್ಲಿಸಬೇಕಾಗುತ್ತದೆ. ಜಿಎಸ್‌ಟಿಎನ್ ಮತ್ತು ಉದ್ಯೋಗ್ ಆಧಾರ್‌ನಂತಹ ವಿವರಗಳು ಸಹ ಅಗತ್ಯವಿರುತ್ತದೆ. ವ್ಯಾಪಾರ ನೋಂದಣಿ ಪ್ರಮಾಣಪತ್ರವನ್ನು ಕೂಡ ಸಲ್ಲಿಸಬೇಕು.

ಸಾಲಕ್ಕಾಗಿ ಆನ್ ಲೈನ್ ಅರ್ಜಿ:

ಎಸ್‌ಬಿಐ ಇ ಮುದ್ರಾ ವೆಬ್‌ಸೈಟ್‌ಗೆ ಹೋಗಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನಿಮ್ಮ ಮೊಬೈಲ್ ಗೆ ಒಟಿಪಿ ಬರುತ್ತದೆ. ಬ್ಯಾಂಕ್ ಖಾತೆ ಸಂಖ್ಯೆಯನ್ನೂ ನಮೂದಿಸಿ.  ಪೇಜ್ ನಲ್ಲಿ ಸಾಲಕ್ಕಾಗಿ ಅಗತ್ಯವಿರುವ ಮೊತ್ತವನ್ನು ನಮೂದಿಸಬೇಕಾಗುತ್ತದೆ. ನಂತರ ಮುಂದುವರೆಯಲು ಒಕೆ ಬಟನ್ ಕ್ಲಿಕ್ ಮಾಡಿ. ನಂತರ ಅಗತ್ಯವಿರುವ ವಿವರಗಳನ್ನು ನಮೂದಿಸಿ. ದಾಖಲೆಗಳನ್ನು ಸಹ ಅಪ್ಲೋಡ್ ಮಾಡಬೇಕಾಗುತ್ತದೆ. ಈ ಮೂಲಕ ವ್ಯಾಪಾರಿಗಳು ಸುಲಭವಾಗಿ ಒಂದು ಲಕ್ಷ ರೂ.ವರೆಗೆ ಸಾಲ ಪಡೆಯಬಹುದು. ತುರ್ತು ಹಣದ ಅವಶ್ಯಕತೆ ಇರುವವರು ಈ ಸಾಲ ಯೋಜನೆಯಡಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.

ನಿಮ್ಮಲ್ಲಿ ಸರಿಯಾದ ದಾಖಲೆ ಇದ್ರೆ, ವ್ಯಾಪಾರಕ್ಕಾಗಿ ಹಣದ ಅಗತ್ಯ ಇದ್ರೆ ಅತ್ಯಂತ ಶೀಘ್ರವಾಗಿ ಸಾಲ ಬೇಕಿದ್ರೆ ಎಸ್ ಬಿ ಐ ನ ಇ -ಮುದ್ರಾ ಸಾಲ ಯೋಜನೆಯೇ ಬೆಸ್ಟ್ ಆಯ್ಕೆ!

BankGet easy SBI Mudra LoanLOanSBIಎಸ್ ಬಿ ಐಬ್ಯಾಂಕ್ಸಾಲ