Real Story: ಹೆಂಡತಿಯ ಜೊತೆಗೆ ಟಿವಿ ನೊಡುತ್ತಾ ಕುಳಿತಿದ್ದ ವಿನೋದ್ ಬಾತ್ ರೂಮಿಗೆ ಎಂದು ಎದ್ದು ಹೋದ. ಪತಿ ಬಾತ್ ರೂಮ್ ಗೆ ಹೋಗಿ ಸ್ವಲ್ಪ ಸಮಯ ಕಳೆದರೂ ಬಾರದೇ ಇದ್ದಾಗ ಪತ್ನಿಗೆ ಅನುಮಾನ ಬಂತು. ಆಮೇಲೇನಾಯ್ತು ಗೊತ್ತೇ? ನೀವು ನಂಬೋದಕ್ಕೂ ಅಸಾಧ್ಯ ನೋಡಿ!
ಯಾವ ಕ್ಷಣದಲ್ಲಿ ಏನಾಗುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಮನುಷ್ಯನ ಮೈಂಡ್ ಸೆಟ್ ಯಾವಾಗ ಮತ್ತು ಹೇಗೆ ಬದಲಾಗುತ್ತದೆ ಎಂದು ತಿಳಿಯುವುದು ಕೂಡ ಅಸಾಧ್ಯವೇ ಸರಿ. ಅಲ್ಲಿಯವರೆಗೆ ಖುಷಿಯಾಗಿದ್ದ ವ್ಯಕ್ತಿ ಕ್ಷಣಮಾತ್ರದಲ್ಲಿ ಕೋಪಗೊಳ್ಳುವುದನ್ನು ನೋಡಿದ್ಡೇವೆ. ಕೋಪದಲ್ಲಿ ಅಪರಾಧ ಮಾದುವುದನ್ನೂ ನೋಡಿದ್ಡೇವೆ. ಅಂತೆಯೇ ಗಂಡ ತನ್ನ ಹೆಂಡತಿಯೊಂದಿಗೆ ಸಂತೋಷದಿಂದ ಟಿವಿ ನೋಡುತ್ತಿದ್ದ. ಆ ಬಳಿಕ ಆತ ಮಾಡಿದ್ದಕ್ಕೆ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಈ ಘಟನೆಯ ಹಿನ್ನೆಲೆ ನೊಡೋಣ ಬನ್ನಿ.
35 ವರ್ಷ ವಯಸ್ಸಿನ ವಿನೋದ್ ಶರ್ಮಾ ರಾತ್ರಿ ಪತ್ನಿ ನೇಹಾ ಶರ್ಮಾ ಜೊತೆ ಟಿವಿ ನೋಡುತ್ತಿದ್ದ. ಇಬ್ಬರೂ ಸಂತೋಷದಿಂದ ಟಿವಿ ನೋಡುತ್ತಾ ಹರಟೆ ಹೊಡೆಯುತ್ತಿದ್ದರು. ಆದ್ರೆ, ಆಮೇಲೆ ಏನಾಯ್ತು ಅಂತ ಗೊತ್ತಾದ್ರೆ ಬೇಸರ ಎನ್ನಿಸುತ್ತೆ. ವಿನೋದ್ ಟಿವಿ ನೋಡುತ್ತಿದ್ದವನು ಬಾತ್ ರೂಮ್ ಗೆ ಹೋಗಿದ್ದಾನೆ. ಆದರೆ ಸ್ವಲ್ಪ ಸಮಯ ಕಳೆದರೂ ಪತಿ ಬಾರದೇ ಇದ್ದಾಗ ಪತ್ನಿಗೆ ಅನುಮಾನ ಬಂದಿದೆ. ತಕ್ಷಣ ಅವಳು ಬಾತ್ರೂಮ್ ಬಾಗಿಲಿಗೆ ಹೋಗಿ ತನ್ನ ಗಂಡನನ್ನು ಕರೆಯುತ್ತಾಳೆ.
ಎಷ್ಟು ಕಿರುಚಿದರೂ ಗಂಡನಿಂದ ಉತ್ತರವೇ ಬರಲಿಲ್ಲ. ಆಕೆಗೆ ಇನ್ನಿಲ್ಲದಷ್ಟು ಭಯವಾಗುತ್ತದೆ. ಕೂಡಲೇ ಅಕ್ಕಪಕ್ಕದವರಿಗೆ ಕರೆ ಮಾಡಿ ವಿಷಯ ತಿಳಿಸುತ್ತಾಳೆ. ಅಕ್ಕಪಕ್ಕದವರು ಬಂದು ಬಾತ್ ರೂಂ ಬಾಗಿಲು ಒಡೆದಿದ್ದಾರೆ. ಬಾಗಿಲು ಒಡೆದಾಗ ಅಲ್ಲಿನ ಪರಿಸ್ಥಿತಿ ನೋಡಿ ಎಲ್ಲರೂ ಬೆಚ್ಚಿಬಿಳುತ್ತಾರೆ. ಯಾಕೆ ಗೊತ್ತಾ? ವಿನೋದ್ ಬಾತ್ ರೂಮ್ ಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ!
ಇದರಿಂದ ಪತ್ನಿಗೆ ಆಘಾತವಾಗುತ್ತೆ. ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಸೇರಿಸುತ್ತಾರೆ. ಆದರೆ ಆಗಲೇ ವಿಧಿ ಆತನನ್ನು ತನ್ನ ಬಳಿ ಕರೆಸಿಕೊಂಡು ಬಿಟ್ಟಿತ್ತು. ವಿನೋದ್ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಈ ಘಟನೆ ನಡೆದಿರುವುದು, ಛತ್ತೀಸ್ಗಢದ ದುರ್ಗ್ ಜಿಲ್ಲೆಯಲ್ಲಿ.
ಆದ್ರೆ ಇಷ್ಟೋತ್ತೂ ಖುಷಿಯಾಗಿದ್ದ ಪತಿ, ಯಾಕೆ ಹೀಗೆ ಮಾಡಿದ ಎಂದು ಅರ್ಥವಾಗದೆ ಪತ್ನಿ ನೇಹಾ ಶಾಕ್ ಆಗಿದ್ದಾಳೆ. ವಿನೋದ್ ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.