Man killed his pregnant wife: ಪ್ರೀತಿಸಿ ಮದುವೆಯಾದ, ಹೆಂಡತಿ ಗರ್ಭಿಣಿ ಕೂಡ ಆದಳು, ಆದರೆ ಅದೊಂದು ಅನುಮಾನದಿಂದ ಗರ್ಭಿಣಿ ಎಂದು ಕೂಡ ನೋಡದೆ ಏನು ಮಾಡಿದ್ದಾನೆ ಗೊತ್ತೇ?

Man killed his pregnant wife: ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲ. ಮನುಷ್ಯತ್ವ ಮಾನವೀಯತೆ ಯಾವುದಕ್ಖೂ ಬೆಲೆ ಇಲ್ಲ. ಕೋಳಿ ಮತ್ತು ಮೇಕೆಗಳನ್ನು ಕೊಲ್ಲುವಷ್ಟು ಸುಲಭವಾಗಿ ಮನುಷ್ಯರನ್ನು ಕೊಲ್ಲುವಷ್ಟರ ಮಟ್ಟಿಗೆ ಜನರಲ್ಲಿ ಕ್ರೌರ್ಯ ತುಂಬಿಕೊಂಡಿದೆ ಅಂದ್ರೆ ನಿಜಕ್ಕೂ ಸಂಕಟವಾಗುತ್ತೆ. ಇಂದು ನಮ್ಮವರು ತಮ್ಮವರು ಯಾರು ಎಂದು ತಿಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದಿನ ಸಮಾಜದಲ್ಲಿ ಮಾನವೀಯತೆ ಬತ್ತಿ ಹೋಗಿದೆ. ಇಂತಹ ಒಂದು ಘಟನೆ ತಮಿಳುನಾಡಿನ ವಿಲ್ಲುಪ್ಪುರಂ ಜಿಲ್ಲೆಯ ವೀರಂಗಿಪುರಂ ಎಂಬ ಗ್ರಾಮದಲ್ಲಿ ನಡೆದಿದೆ.

ಘಟನೆಯ ಹಿನ್ನೆಲೆಯನ್ನು ನೋಡುವುದಾದರೆ, ಭಾರತಿ ಎನ್ನುವ ಮಹಿಳೆ ಮೊದಲು ಈಶ್ವರನ್ ಎಂಬವವನ್ನು ಮದುವೆಯಾಗಿದ್ದಳು. ಅವರು ಹಲವಾರು ವರ್ಷಗಳ ಕಾಲ ಚೆನ್ನಾಗಿಯೇ ಸಂಸಾರ ಮಾಡಿಕೊಂಡು ಇದ್ದರು. ಇದಾದ ಬಳಿಕ ಇಬ್ಬರ ನಡುವೆ ಘರ್ಷಣೆ ಉಂಟಾಗಿ ಬೇರೆಯಾಗುತ್ತಾರೆ. ನಂತರ ಭಾರತಿ ಗುಣವನ್ ಎಂಬ ವ್ಯಕ್ತಿಯನ್ನು ವಿವಾಹವಾದಳು. ಇವರಿಬ್ಬರು ಕೆಲವು ವರ್ಷಗಳಿಂದ ಉತ್ತಮ ಸಂಬಂಧ ಹೊಂದಿದ್ದರು. ಆದರೆ ಇತ್ತೀಚಿಗೆ ಗುಣವನ್ ಗೆ ಭಾರತಿ ಬೇರೆಯವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆಕೆಯ ಮೇಲೆ ಅನುಮಾನ ಶುರುವಾಗಿತ್ತು. ಕೆಲವು ತಿಂಗಳುಗಳ ನಂತರ, ಅವಳು ಗರ್ಭಿಣಿ ಕೂಡ ಆದಳು ಆಗ ಗುಣವನ್ ಅನುಮಾನ ಇನ್ನೂ ಹೆಚ್ಚಾಯಿತು.

ಅನುಮಾನಂ ಪೆದ್ದ ರೋಗಂ ಅಂತಾರೆ, ಇದು ಏನನ್ನು ಬೇಕಾದರೂ ಮಾಡಿಸಿಬಿಡಬಹುದು. ಭಾರತಿ 4 ತಿಂಗಳ ಗರ್ಭಿಣಿಯಾಗಿದ್ದಳು. ಗುಣವನ್ ತನ್ನ ಅತಿಯಾದ ಅನುಮಾನದಿಂದ ಆಕೆ ಗರ್ಭಿಣಿ ಎನ್ನುವುದನ್ನೂ ಕಡೆಗಣಿಸಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಆತ ಹಲ್ಲೆ ನಡೆಸಿದ್ದರಿಂದ ಭಾರತಿಗೆ ತೀವ್ರ ರಕ್ತಸ್ರಾವವಾಗಿತ್ತು. ಕೊನೆಗೆ ಭಾರತಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಸ್ಥಳೀಯರು ಇದನ್ನು ಗಮನಿಸಿ ತಕ್ಷಣಕ್ಕೆ ಆಸ್ಪತ್ರೆಗೆ ಸಾಗಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ.

ಭಾರತಿ ಮೃತಪಟ್ಟಿರುವ ವಿಷಯ ತಿಳಿದ ಭಾರತಿ ಅವರ ಪೋಷಕರು ಕಣ್ಣೀರಿಟ್ಟಿದ್ದಾರೆ. ಈ ಘಟನೆ ಸ್ಥಳದಲ್ಲಿ ಭಾರೀ ಕೋಲಾಹಲವನ್ನೇ ಸೃಷ್ಟಿಸಿದೆ. ಪ್ರೀತಿಸಿ ಮದುವೆಯಾಗಿದ್ದರೂ ಆಕೆ ಗರ್ಭಿಣಿ ಎಂದು ಕೂಡ ನೋಡದೆ ಪತ್ನಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಹತ್ಯೆಗೈದಿದ್ದಕ್ಕೆ ಗುಣವನ್ ನ ಮೇಲೆ ಭಾರತಿ ಕುಟುಂಬಸ್ಥರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಪೋಲಿಸರಿಗೆ ದೂರು ಕೂಡ ನೀಡಲಾಗಿದೆ.

Chennailove marriageMan killed his pregnant wifeಚೆನ್ನೈ