Ritesh Agarwal: ಹೊಟ್ಟೆಪಾಡಿಗೆ ಬೀದಿಯಲ್ಲಿ ಸಿಮ್ ಕಾರ್ಡ್ ಮಾರುತ್ತಿದ್ದ ವ್ಯಕ್ತಿ, ಇಂದು 6 ಸಾವಿರ ಕೋಟಿಯ ಒಡೆಯ..!! – ಹೇಗೆ ಗೊತ್ತಾ..?

Ritesh Agarwal: ಒಂದು ಯೋಚನೆ, ಅಥವಾ ಒಂದು ಒಳ್ಳೆಯ ಬಿಸಿನೆಸ್ ಐಡಿಯಾ (Business idea)  ನಿಮ್ಮ ಜೀವನವನ್ನೇ ಬದಲಾಯಿಸಬಲ್ಲದು. ದಿನಬೆಳಗಾಗುವುದಲ್ಲಿ ಜೀರೋ ಟು ಹೀರೋ (Hero)  ಮಾಡುವ ಶಕ್ತಿ ಮನುಷ್ಯನ ಬುದ್ದಿಶಕ್ತಿಗಿದೆ. ಇಂದು ನಾವು ಹೇಳ ಹೊರಟಿರುವ ಕತೆ ಸಹ ಅಂತಹದ್ದೇ ಒಬ್ಬ ಯುವಕನ ಕತೆ.

1993 ರಲ್ಲಿ ಜನಿಸಿದ ರಿತೇಶ್ (Ritesh) ಒಬ್ಬ ಬಡ ಕುಟುಂಬದ ಹುಡುಗ. ಜೀವನದಲ್ಲಿ ಏನನ್ನಾಧರೂ ಅಪರಿಮಿತವಾದುದನ್ನು ಸಾಧಿಸಬೇಕೆಂಬ ಛಲ ಇರುತ್ತದೆ. ಈ ಮಧ್ಯೆ ರಿತೇಶ್ ತನ್ನ 15 ನೇ ವಯಸ್ಸಿಗೆ ಎನ್ ಸೈಕ್ಲೋಪಿಡಿಯಾ ಟಾಪ್ 100 ಇಂಜಿನಿಯರಿಂಗ್ ಕಾಲೇಜ್ (Top 100 engineering college) ಎಂಬ ಪುಸ್ತಕ ಬರೆಯುತ್ತಾನೆ. ಅದು ಆನ್ ಲೈನ್ ನಲ್ಲಿ ಹೆಚ್ಚು ಸೇಲಾಗುತ್ತದೆ. ಆ ದುಡ್ಡನ್ನ ಇಟ್ಟುಕೊಂಡು ಇಂಜಿನಿಯರಿಂಗ್  ಓದಲು ದೆಹಲಿಗೆ  ಬಂದವನಿಗೆ ಆ ಹಣ ಸಹ ಖರ್ಚಾಗುತ್ತದೆ. ಅಂದಿನಿಂದ ತನ್ನ ಹೊಟ್ಟೆ ಹಸಿವಿನದ್ದೇ ಚಿಂತೆ. ಹಾಗಾಗಿ ಬಿಡುವಿನ ವೇಳೆಯಲ್ಲಿ ಬೀದಿ ಬದಿ ಸಿಮ್ ಕಾರ್ಡ್ ವ್ಯಾಪಾರ ಶುರು ಮಾಡಿಕೊಳ್ಳುತ್ತಾನೆ.

ಕೊನೆ ಪಕ್ಷ ತನ್ನ ದಿನದ ಖರ್ಚಿಗಾದರೂ ಈ ವ್ಯಾಪಾರ (Business) ಕೈ ಹಿಡಿಯಲಿ ಅನ್ನುವುದು ಅವನ ಕೋರಿಕೆ. ಫುಟ್ ಪಾತ್ ನಲ್ಲಿ ಸಿಮ್ ಕಾರ್ಡ್ ಮಾರುವಾಗ, ಅಲ್ಲಿಯೇ ಒಂದು ಹಳೇ ಕಾಲದ ಹೋಟೆಲ್ ಕಂ ಲಾಡ್ಜ್ ಇರುತ್ತದೆ. ನೀರಸವಾಗಿರುವ ಆ ಲಾಡ್ಜ್ (Lodge) ಗೆ ಜನ ಬರುವುದಿರಲಿ, ಆ ಕಡೆ ಮುಖ ಹಾಕಿ ಸಹ ನೋಡುತ್ತಿರಲಿಲ್ಲ. ಇದು ರಿತೇಶ್ ಕಣ್ಣಿಗೆ ಬೀಳುತ್ತದೆ. ಆ ಹೋಟೆಲ್ ಮಾಲೀಕನ ಬಳಿ ತೆರಳಿದ ರೀತೆಶ್ ಈ ಹೊಟೆಲ್ ಗೆ ಹೊಸ ಟಚ್ ಕೊಟ್ಟು ಜನರನ್ನ ಬರುವಂತೆ ಮಾಡುತ್ತೆನೆ, ಬಂದ ಲಾಭದಲ್ಲಿ ಇಬ್ಬರೂ ಸಮನಾಗಿ ಹಂಚಿಕೊಳ್ಳೋಣ ಎಂಬ ಆಫರ್ ಇಡುತ್ತಾನೆ. ಮೊದಲಿಗೆ ಅಪಹಾಸ್ಯ ಮಾಡುವ ಆ ಮಾಲೀಕ ಕೊನೆಗೆ ಆ ಆಫರ್ ಗೆ ಒಪ್ಪುತ್ತಾನೆ. ಮುಂದೆ ರಿತೇಶ್ ತಾನೇ ನಿಂತು ಆ ಹೋಟೆಲ್ ಗೆ ಹೊಸ ಟಚ್ ಕೊಟ್ಟು, ಜನರನ್ನ ಸೆಳೆಯುವಲ್ಲಿ ಯಶಸ್ವಿಯಾಗುತ್ತನೆ. ಆ ಕ್ರಿಯೆಗೆ ರಿತೇಶ್ ಆನ್-ಯುವರ್-ಓನ್ ಎಂದು ಹೆಸರಿಡುತ್ತಾನೆ. ಮುಂದೆ ನಡೆದಿದ್ದು ಇತಿಹಾಸ. ಹೌದು ನಿಮ್ಮ ಊಹೆ ಸರಿ . ಆನ್-ಯುವರ್-ಒನ್ ಅಂದರೇ OYO ಅಂತ.

Ritesh Agarwal: ಹೊಟ್ಟೆಪಾಡಿಗೆ ಬೀದಿಯಲ್ಲಿ ಸಿಮ್ ಕಾರ್ಡ್ ಮಾರುತ್ತಿದ್ದ ವ್ಯಕ್ತಿ, ಇಂದು 6 ಸಾವಿರ ಕೋಟಿಯ ಒಡೆಯ..!! - ಹೇಗೆ ಗೊತ್ತಾ..? https://sihikahinews.com/amp/2023/01/15/ritesh-agarwal-life-story/

ಅಂದಿನಿಂದಲೇ ರಿತೇಶ್ ಅಗರ್ವಾಲ್ OYO ವೆಬ್ ಸೈಟ್ ಶುರುಮಾಡುತ್ತಾನೆ. ದೇಶಾದ್ಯಂತ ಇರುವ ಎಲ್ಲಾ ಹೋಟೆಲ್ ಕಂ ಲಾಡ್ಜ್ ಗಳಿಗೂ ಸಂಪರ್ಕ ಮಾಡಿ, ಜನರನ್ನ ಹೊಸದಾಗಿ ಸೆಳೆಯುತ್ತಾರೆ. ಈ ಐಡಿಯಾ ಒಳ್ಳೆಯ ಬಿಸಿನೆಸ್ ನ ಖಂಡಿತ ಮಾಡಲಿದೆ ಎಂಬ ಕಾರಣಕ್ಕೆ 2011ರಲ್ಲಿ ಸಾಫ್ಟ್ ಬ್ಯಾಂಕ್ ಮೊದಲ ಸುತ್ತಿನಲ್ಲಿ ನೂರು ಮಿಲಿಯನ್, ಎರಡನೇ ಸುತ್ತಿನಲ್ಲಿ 90 ಮಿಲಿಯನ್, ಮೂರನೇ ಸುತ್ತಿನಲ್ಲಿ 80 ಮಿಲಿಯನ್ ಹೂಡುತ್ತದೆ. ಇದನ್ನೂ ಓದಿ:Team India Cricket: ಸ್ಮಶಾನದಲ್ಲಿ ಮಲಗಿದ್ದ ವ್ಯಕ್ತಿ ಇಂದು ಟೀಂ ಇಂಡಿಯಾದ ಪ್ರಮುಖ ಶಕ್ತಿ!! ಆ ಕನ್ನಡಿಗ ಯಾರು ಗೊತ್ತೇ…?

ನೋಡ ನೋಡುತ್ತಿದ್ದಂತೆ ಓಯೋ ರೂಮುಗಳು ವಿದೇಶದಲ್ಲಿಯೂ ಸಹ ಕಾರ್ಯಾರಂಭ ಮಾಡಲು ಶುರು ಮಾಡುತ್ತವೆ. ಇಂದು ಪ್ರಪಂಚಾದ್ಯಂತ ಓಯೋ 4,58,000 ರೂಮುಗಳನ್ನು ಹೊಂದಿದೆ. ಅಂದು ಸಿಮ್ ಕಾರ್ಡ್ ಮಾರಿದ್ದ ಹುಡುಗ ರಿತೇಶ್ ಅಗರ್ವಾಲ್ ಇಂದು ಒಯೋ ಸಂಸ್ಥೆಯ ಮಾಲೀಕ ಹಾಗೂ ಸಿ.ಇ.ಓ. ಇವರ ಒಟ್ಟು ಆಸ್ತಿಯ ಮೌಲ್ಯ ಬರೋಬ್ಬರಿ 6 ಸಾವಿರ ಕೋಟಿಯಷ್ಟಿದೆ. ದಿನೇ ದಿನೇ ಈ ಮೌಲ್ಯ ಜಾಸ್ತಿಯಾಗುತ್ತದೆ. ಇದನ್ನೂ ಓದಿ:These 3 names girl never cheat you: ಈ ಹೆಸರಿನ ಹುಡುಗಿಯರನ್ನು ಪಡೆದರೆ ನೀವೇ ಅದೃಷ್ಟವಂತರು: ಕನಸಿನಲ್ಲಿಯೂ ನಿಮಗೆ ಮೋಸ ಮಾಡಲ್ಲ, 100 % ಪವಿತ್ರ ಹುಡುಗಿಯರು ಯಾರ್ಯಾರು ಗೊತ್ತೇ?

ಓಡುತ್ತಿರುವ ಈ ಪ್ರಪಂಚದಲ್ಲಿ ಹೊಸ ಯೋಚನೆಗಳೇ ನಿಮ್ಮ ಯಶಸ್ಸಿನ ಗುಟ್ಟು ಎಂಬುದನ್ನ ರಿತೇಶ್ ಅಗರ್ವಾಲ್ ರವರ ಈ ಸಾಹಸಮಯ ಕತೆಯಿಂದ ತಿಳಿದುಕೊಳ್ಳಬಹುದು. ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

real storyRitesh Agarwal life storytop most bussniess manರಿತೇಶ್ ಅಗರ್ವಾಲ್