Real story: ಕುಡಿದು ಜೈಲು ಸೇರಿದ್ದ ಯುವಕರನ್ನು ಹುಡುಕಿಕೊಂಡು ಬಂದ ಮ್ಯೂಸಿಕ್ ಕಂಪನಿಗಳು; ಅಷ್ಟಕ್ಕೂ ಆತ ಜೈಲಿನಲ್ಲಿ ಇದ್ದುಕೊಂಡೇ ಮಾಡಿದ್ದೇನು ಗೊತ್ತಾ?

Real story: ನಮ್ಮ ದೇಶದಲ್ಲಿ ಪ್ರತಿಭೆಗಳಿಗೇನು ಕೊರತೆ ಇಲ್ಲ. ಎಷ್ಟೋ ಜನ ಪ್ರತಿಭೆಗಳಿಗೆ ಸರಿಯಾದ ವೇದಿಕೆ ಸಿಗದೆ ಬೆಳಕಿಗೆ ಬರುತ್ತಿಲ್ಲ. ಎಲೆ ಮರೆಯ ಕಾಯಿಯಂತೆ ಇದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳು ಇದೀಗ ಇಂತಹ ಪ್ರತಿಭೆಗಳಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿವೆ. ಇದೀಗ ಓರ್ವ ವ್ಯಕ್ತಿ ತನ್ನ ಗಾಯನದಿಂದ ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದಾನೆ.

೨೪ ವರ್ಷದ ಯುವಕ ಜೈಲಿನಲ್ಲಿದ್ದುಕೊಂಡೆ ಹಾಡಿರುವ ಭೋಜಪುರಿ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ.ಮೂಲಗಳ ಪ್ರಕಾರ ಇತನನ್ನು ಕನ್ನಯ್ಯ ಕುಮಾರ್ ಎಂದು ಗುರುತಿಸಲಾಗಿದೆ. ಈತ ಬಿಹಾರದ ಯುವಕ. ಬಿಹಾರದಲ್ಲಿ ಮದ್ಯ ನಿಷೇಧ ಮಾಡಲಾಗಿದೆ. ಈತ ಮದ್ಯ ಸೇವಿಸಿದದ್ದಕ್ಕಾಗಿ ಜೈಲು ಸೇರಿದ್ದ. ಆದರೆ ಈ ಯುವಕ ಜೈಲಿನಲ್ಲಿದ್ದುಕೊಂಡೆ ಭೋಜಪುರಿ ಹಾಡನ್ನು ಸುಂದರವಾಗಿ ಹಾಡುವ ಮೂಲಕ ಗಮನ ಸೆಳೆದಿದ್ದಾನೆ.
ಈ ಯುವಕ ಹಾಡಿರುವ ವಿಡಿಯೋವನ್ನು ಡಾ. ಶಲಬ್ ಮಣಿ ತ್ರಿಪಾಠಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಕುಮಾರ್ ಅವರ ಜನಪ್ರಿಯ ಹಾಡನ್ನು ಕೇಳಬಹುದು ದರಾಗಾಜಿ ಹೋ… ಸೋಚಿ ಸೋಚಿ ಜಿಯಾ ಹಮ್ರೋ ಕಹೆ ಗಬ್ರತಾ ಎಂಬ ಭೋಜಪುರಿ ಹಾಡನ್ನು ಹಾಡಿದ್ದಾನೆ.

ಇದೀಗ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಕನ್ನಯ್ಯ ಕುಮಾರ್ ಧ್ವನಿಗೆ ಜನರು ಫೀದಾ ಆಗಿದ್ದಾರೆ. ಈ ಹಾಡು ಅನೇಕ ಸಂಗೀತ ಪ್ರೇಮಿಗಳ ಗಮನ ಸೆಳೆದಿದೆ. ಈ ಹಾಡನ್ನು ೮ ಲಕ್ಷಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ. ೮ ಸಾವಿರಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ. ಸಾವಿರಕ್ಕೂ ಅಧಿಕ ಜನರು ರೀಟ್ವೀಟ್ ಮಾಡಿದ್ದಾರೆ. ಬಾಲಿವುಡ್ ಗಾಯಕ ಅಂಕಿತ್ ತಿವಾರಿ ಕೂಡ ಕನ್ನಯ್ಯ ಕುಮಾರ್ ಹಾಡಿರುವ ಹಾಡಿಗೆ ಫಿದಾ ಆಗಿದ್ದು ತಮ್ಮ ಮ್ಯೂಸಿಕ್ ಕಂಪನಿಗೆ ಹಾಡಲು ಆಫರ್ ನೀಡಿದ್ದಾರೆ. ಅಲ್ಲದೆ ಜೈಲಿನಿಂದ ಬಿಡುಗಡೆ ಮಾಡಿಸಲು ಕಾನೂನು ನೆರವು ನೀಡುವುದಾಗಿಯೂ ಘೋಷಿಸಿದ್ದಾರೆ.

jailman sang wellmusicsingingTalentedಪ್ರತ್ಭೆಹಾಡು