Business Idea: ಒಮ್ಮೆ 850 ರೂಪಾಯಿ ಹಾಕಿದರೆ ಸಾಕು, ತಿಂಗಳಿಗೆ 30 ಸಾವಿರ ಖಚಿತ ಆದಾಯ ಕೊಡುವ ಬಿಸಿನೆಸ್ ಯಾವುದು ಗೊತ್ತೇ??

Business Idea: ತಮ್ಮದೇ ಆದ ಸ್ವಂತ ಉದ್ಯೋಗ ಆರಂಭಿಸಬೇಕು. ಬೇರೆಯವರ ಕೈ ಕೆಳಗೆ ಕೆಲಸ (Job) ಮಾಡಬಾರದು ಎನ್ನುವುದು ಸಾಕಷ್ಟು ಜನರ ಆಸೆ. ಅದರಲ್ಲೂ ಈಗಿನ ಯುವಕರು ಐಟಿ (IT)ಯಲ್ಲಿ ಎಷ್ಟೇ ಸಂಬಳ ಕೊಟ್ಟು ಕೆಲಸಕ್ಕೆ ಕರೆದರೂ ಅದನ್ನು ಬಿಟ್ಟು ವ್ಯವಸಾಯದ ಕಡೆಗೆ ಅಥವಾ ತಮ್ಮದೇ ಆದ ಸ್ವಂತ ಉದ್ಯೋಗ (Own Business) ಆರಂಭಿಸುವುದರ ಕಡೆಗೆ ಗಮನ ಹರಿಸುತ್ತಿದ್ದಾರೆ. ಸ್ವಂತ ಉದ್ಯೋಗ ಆರಂಭಿಸಿ ಬೇರೆಯವರಿಗೂ ಕೂಡ ಉದ್ಯೋಗ ನೀಡಬೇಕು ಎನ್ನುವ ಅಭಿಲಾಷೆ ಹಲವರಲ್ಲಿ ಇದೆ. ಹಾಗೆ ನಿಮಗೂ ಏನಾದರೂ ಸ್ವ ಉದ್ಯೋಗ ಮಾಡಬೇಕು ಆದರೆ ಬಂಡವಾಳ ಜಾಸ್ತಿ ಇಲ್ಲ ಎನ್ನುವ ಯೋಚನೆ ಇದ್ದರೆ ಅತಿ ಕಡಿಮೆ ಬಂಡವಾಳ (Investment) ಹಾಕಿ ಹೆಚ್ಚಿನ ಹಣ ಸಂಪಾದನೆ ಮಾಡುವುದು ಹೇಗೆ ಎನ್ನುವ ಒಂದು ಹೊಸ ಉದ್ಯಮದ ಬಗ್ಗೆ ಇಲ್ಲಿ ನಾವು ಮಾಹಿತಿ ಕೊಡುತ್ತಿದ್ದೇವೆ.

ಹಾಗಲ ಕಾಯಿ ಚಿಪ್ಸ್ ಗೆ ಹೆಚ್ಚಿದ ಬೇಡಿಕೆ;

ಇದು ಸಾಕಷ್ಟು ಜನರಿಗೆ ಗೊತ್ತಿಲ್ಲ. ಅತ್ಯಂತ ಸುಲಭವಾಗಿ ಹಾಗೂ ಹೆಚ್ಚಿನ ಹಣ ಗಳಿಸಬಹುದಾದಂತಹ ಒಂದು ವ್ಯಾಪಾರ ಇದು. ತಿಂಡಿ ತಿನಿಸುಗಳಿಗೆ ಹೆಚ್ಚಿನ ಬೇಡಿಕೆ ಇರುವುದು ನಿಮಗೂ ಗೊತ್ತಿರಬಹುದು ಇತ್ತೀಚಿಗೆ ಇದೇ ಕಾರಣಕ್ಕೆ ಜನ  ಮನೆಯಲ್ಲಿಯೇ ತಿಂಡಿಗಳನ್ನು ತಯಾರಿಸುತ್ತಾರೆ ಅತಿ ಕಡಿಮೆ ಹೂಡಿಕೆ ಮಾಡಿ ನೀವು ಕೂಡ ಉದ್ಯಮ ಆರಂಭಿಸಬಹುದು. ಇದನ್ನೂ ಓದಿ: Kichcha Sudeep: ಅಭಿಮಾನಿಗಳಿಗೆ ಸುಳ್ಳು ಹೇಳಿದ್ರ ಕಿಚ್ಚ ಸುದೀಪ್? ಕಾರ್ಯಕ್ರಮ ಒಂದಕ್ಕೆ ಕಿಚ್ಚ ಬಾರದೆದ್ದಕ್ಕೆ ಅಭಿಮಾನಿಗಳ ಆಕ್ರೋಶ; ಆಹ್ವಾನ ಇರಲಿಲ್ಲ ಎಂದ ಸುದೀಪ್, ಸುದೀಪ್ ಅವರನ್ನ ಆಹ್ವಾನ ಮಾಡಿದ್ದ ಫೋಟೋಗಳು ವೈರಲ್!

ಉದ್ಯಮ ಆರಂಭಿಸುವುದು ಹೇಗೆ!

ನೀವು ಕೇವಲ 850 ಬಂಡವಾಳ ಹೂಡಿಕೆ ಮಾಡಿ ಈ ಉದ್ಯಮವನ್ನು ಪ್ರಾರಂಭಿಸಬಹುದು. ಲಾಭಗಳು ಪ್ರಾರಂಭವಾದ ತಕ್ಷಣ ನೀವು ಉದ್ಯಮವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಬಹುದು. 850ರೂ.ಗೆ ಚಿಪ್ಸ್ ಮಾಡುವ ಯಂತ್ರವನ್ನು ಖರೀದಿ ಮಾಡಬಹುದು. ತೆಗೆ ಕಚ್ಚಾ ವಸ್ತುಗಳಿಗೆ ಸ್ವಲ್ಪ ಹಣ ಖರ್ಚಾಗುತ್ತದೆ. 100 ರಿಂದ 200 ರೂಪಾಯಿ ಒಳಗಡೆ ನೀವು ಕಚ್ಚಾ ವಸ್ತುಗಳನ್ನು ಖರೀದಿ ಮಾಡಬಹುದು.

ಈ ಯಂತ್ರ ಆನ್ ಲೈನ್ ಲಭ್ಯವಿದೆ. ಚಿಪ್ಸ್ ಮಾಡುವುದಕ್ಕೆ ಮೇಜಿನ ಮೇಲೆ ಯಂತ್ರವನ್ನು ಇರಿಸಿ ಸುಲಭವಾಗಿ ಕತ್ತರಿಸಬಹುದು. ಇನ್ನು ಈ ಮಿಷನ್ಗೆ ಹೆಚ್ಚಿನ ಕರೆಂಟ್ ಕೂಡ ಬೇಡ. ಇತ್ತೀಚಿಗೆ ಫ್ರೆಶ್ ಫ್ರೈಡ್ ಹಾಟ್ ಚಿಪ್ಸ್ ತಿನ್ನುವುದಕ್ಕೆ ಜನ ಹೆಚ್ಚು ಇಷ್ಟಪಡುತ್ತಾರೆ. ಉತ್ತಮ ರುಚಿ ಇರುವಂತಹ ಚಿಪ್ಸ್ ಮಾಡಿ ಮಾರುಕಟ್ಟೆಗೆ ಬಿಟ್ಟರೆ ಜನ ನಿಮ್ಮ ಚಿಪ್ಸ್ ಅನ್ನು ಚಪ್ಪರಿಸಿ ತಿನ್ನುತ್ತಾರೆ ಜೊತೆಗೆ ಬೇಡಿಕೆ ಕೂಡ ಹೆಚ್ಚಾಗುತ್ತೆ.

ಮಾರ್ಕೆಟಿಂಗ್ ಟಿಪ್ಸ್:

ಈ ವ್ಯಾಪಾರ ಮಾಡಲು ನೀವು ನಿಮ್ಮ ಮನೆಯ ಮುಂದೆ ಸ್ಟಾಲ್ ಹಾಕಿಕೊಳ್ಳಬಹುದು ಅಥವಾ ಸಣ್ಣ ಗಾಡಿಯಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡಬಹುದು. ಅಲ್ಲದೆ ಇತರ ಅಂಗಡಿಯವರ ಜೊತೆಗೆ ಒಪ್ಪಂದ ಮಾಡಿಕೊಂಡು ಅಲ್ಲಿಯೂ ನೀವು ಚಿಪ್ಸ್ ಸೇಲ್ ಮಾಡಬಹುದು. ಹಾಗಲಕಾಯಿ ಚಿಪ್ಸ್ ಮಾಡಿ ಮಾರಾಟ ಮಾಡುವುದರಿಂದ ನಿಮ್ಮ ವೆಚ್ಚಕ್ಕಿಂತ ಸುಮಾರು ಏಳು ಪಟ್ಟು ಹೆಚ್ಚಿನ ಆದಾಯವನ್ನು ಗಳಿಸುತ್ತೀರಿ.

ಹೇಗೆ ಅಂತೀರಾ? ಉದಾಹರಣೆಗೆ ದಿನಕ್ಕೆ 10 ಕೆಜಿ ಹಾಗಲಕಾಯಿ ಚಿಪ್ಸ್ ಮಾರಿದರೆ ಸುಲಭವಾಗಿ ಸಾವಿರ ರೂಪಾಯಿಗಳಿಸಬಹುದು. ಸಾಮಾಜಿಕ ಮಾಧ್ಯಮಗಳ ಮೂಲಕ ಉಚಿತವಾಗಿ ಮಾರ್ಕೆಟಿಂಗ್ ಕೂಡ ಮಾಡಬಹುದು. ಜೊತೆಗೆ ವಾಟ್ಸಪ್ ನಲ್ಲಿ ಸ್ಥಳೀಯ ಗ್ರೂಪ್ ಗಳನ್ನ ಕ್ರಿಯೇಟ್ ಮಾಡಿ ಅಲ್ಲಿಯೂ ನಿಮ್ಮ ಉದ್ಯಮದ ಬಗ್ಗೆ ಪ್ರಚಾರ ಮಾಡಿ ಈ ರೀತಿ ಮಾಡುವುದರಿಂದ ಬೇಗ ನಿಮ್ಮ ಬಿಸಿನೆಸ್ ಸಕ್ಸಸ್ ಆಗುತ್ತೆ..

business ideajobworkಸ್ವ ಉದ್ಯೋಗ