Job Offer: ದಿನಕ್ಕೆ 36ಸಾವಿರ ಸಂಬಳ ಇದ್ರೂ ಇಲ್ಲಿ ಕೆಲಸಕ್ಕೆ ಸೇರೋಕ್ಕೆ ಜನ ಹಿಂದೇಟು ಹಾಕೋದ್ಯಾಕೇ? ನೀವಾದ್ರೂ ಟ್ರೈ ಮಾಡ್ತೀರಾ ನೋಡಿ!

Job Offer: ಪ್ರತಿಯೊಬ್ಬರು ವಿದ್ಯಾಭ್ಯಾಸ ಮುಗಿದ ಬಳಿಕ ಉದ್ಯೋಗಕ್ಕೆ ಸೇರಬೇಕು. ತನ್ನ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅವರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಆ ರೀತಿ ನೋಡಿಕೊಳ್ಳಬೇಕು ಎಂದು ಬಯಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೆಲಸ ಮಾಡುವವರಿಗೆ ಒಂದೆಲ್ಲ ಒಂದು ಕಡೆ ಉದ್ಯೋಗ ಸಿಕ್ಕೆ ಸಿಗುತ್ತದೆ. ಅದರಲ್ಲೂ ಕೈತುಂಬ ಸಂಬಾವನೆ, ಒಂದು ಒಳ್ಳೆಯ ಇನ್ಸೂರೆನ್ಸ್, ವಾರದಲ್ಲಿ ಒಂದು ದಿನ ರಜೆ ಸಿಕ್ಕಿದರೆ ಯಾರಾದರೂ ಬಿಡುತ್ತಾರೆಯೇ? ಸಾಧ್ಯವೇ ಇಲ್ಲ. ಆದರೆ ಇಲ್ಲಿ ಒಂದು ಕೆಲಸಕ್ಕೆ ಮಾತ್ರ ಜನರೇ ದೊರೆಯುತ್ತಿಲ್ಲ. ಇವರು ದಿನವೊಂದಕ್ಕೆ ಭಾರತದ ರೂಪಾಯಿಯಲ್ಲಿ 36 ಸಾವಿರ ರೂ. ನೀಡುತ್ತೇನೆ ಎಂದರೂ ಉದ್ಯೋಗಕ್ಕೆ ಯಾರೂ ಕೂಡ ಬರುತ್ತಿಲ್ಲವಂತೆ. ಇದನ್ನು ಕೇಳಿ ನಿಮಗೆ ಆಶ್ಚರ್ಯ ಆಗಿರಬಹುದು. ಆದರೆ ಇದು ಸತ್ಯ.

ದಿ ಸನ್ ಎನ್ನುವ ಪತ್ರಿಕೆಯೊಂದು ವರದಿ  ಮಾಡಿರುವ ಪ್ರಕಾರ ಸ್ಕಾಟ್ಲೆಂಡಿನ ಅಬರ್ಡೀನ್ ಕರಾವಳಿಯ ಉತ್ತರ ಸಮುದ್ರದಲ್ಲಿ ನೆಲೆಗೊಂಡಿರುವ ಕಡಲಾಚೆಯ ರಿಗ್ಗರ್ನಲ್ಲಿ ಕೆಲಸ ಮಾಡಲು ಜನರು ಬೇಕಾಗಿದ್ದಾರೆ. ಕಡಲಾಚೆಯ ರಿಗ್ ಎಂದರೆ ನೀರಿನಲ್ಲಿ ಬಾವಿಗಳನ್ನು ಕೊರೆದು ತೈಲಗಳನ್ನು ಹೊರತೆಗೆದು ಅದನ್ನು ಭೂಮಿಗೆ ತಂದು ಸಂಗ್ರಹಿಸುವ ಕೆಲಸವಾಗಿದೆ. ಇದನ್ನೂ ಓದಿ: Tirupati Tirumala: ನೀವು ತಿರುಪತಿ ತಿಮ್ಮಪ್ಪನ ಭಕ್ತರ ಹಾಗಾದ್ರೆ ಈ ಗುಡ್ ನ್ಯೂಸ್ ನಿಮಗಾಗಿ ಮಾತ್ರ! ಭಕ್ತರಿಗಾಗಿ ಎಂತಹ ಬದಲಾವಣೆ ತಂದಿದೆ ನೋಡಿ ಟಿಟಿಡಿ!

ಈ ಕೆಲಸಕ್ಕೆ ನೇಮಕಗೊಂಡ ತಕ್ಷಣ ಅವರನ್ನು ಆರು ತಿಂಗಳ ಕಾಲ ಆಫ್ಶೋರ್ ರಿಗ್ಗೆ ಕಳುಹಿಸಲಾಗುತ್ತದೆ. ದಿನಕ್ಕೆ 12 ಗಂಟೆ ಕೆಲಸ ಮಾಡಬೇಕಾಗುತ್ತದೆ. ಅದಕ್ಕೆ ಕಂಪನಿಯು 36 ಸಾವಿರ ರೂ.ಗಳನ್ನು ನೀಡುತ್ತದೆ. ಈ ಕೆಲಸ ಮಾಡುವ ವ್ಯಕ್ತಿಯು ಎರಡು ವರ್ಷಗಳ ಕಾಲ ಅಲ್ಲಿಯೇ ಇದ್ದು, ಆರು ತಿಂಗಳ ಆಫ್ ಶೋರ್ ರಿಗ್ ಹಾಗೂ ರಿಗ್ ಪಾಳಿಯನ್ನು ಮುಗಿಸಿದರೆ ಸುಮಾರು 1 ಕೋಟಿ ರೂ. ಸಿಗುತ್ತದೆ.  ರಜೆ ಇದ್ದರೂ ಇಲ್ಲಿ ಸಂಬಳ ನೀಡಲಾಗುತ್ತದೆ. ರಜೆ ದಿನ 3,877 ರೂ. ನೀಡಲಾಗುತ್ತದೆ. ಒಂದು ವಾರದ ವರೆಗೆ ಅನಾರೋಗ್ಯದ ರಜೆ ಕೂಡ ನೀಡಲಾಗುತ್ತದೆ.

jobjob-offer-36k-salary