Student suicide: ಕಲಿಯುಗ ಬಂದೆ ಬಿಡ್ತಾ; ಚೆನ್ನಾಗಿ ಓದುತ್ತಿದ್ದ ವಿದ್ಯಾರ್ಥಿನಿ ಬಾಳಿನಲ್ಲಿ ವಿಧಿ ಆಟ ಆಡಿದ್ದು ಹೇಗೆ ಗೊತ್ತೇ? ಕೊನೆಗೆ ಆಕೆಯ ಬಾಳು ಏನಾಗಿ ಹೋಗಿದೆ ಗೊತ್ತೇ?

Student suicide: ಈಗಿನ ಕಾಲದ ಮಕ್ಕಳು ಬಹಳ ಸೆನ್ಸಿಟಿವ್ ಆಗಿದ್ದಾರೆ. ಸಣ್ಣ ಪುಟ್ಟ ತೊಂದರೆಗಳು, ವಿಷಯಗಳು ನಡೆದರು ಕೂಡ, ಅದಕ್ಕೆ ಪರಿಹಾರವೇ ಇಲ್ಲವೇನೋ ಎನ್ನುವ ಹಾಗೆ, ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಬಾಯ್ ಫ್ರೆಂಡ್ ಕೈಕೊಟ್ಟ, ಅಪ್ಪ ಅಮ್ಮ ಬೈದರು, ಎಕ್ಸಾಂ ನಲ್ಲಿ ಚೆನ್ನಾಗಿ ಮಾರ್ಕ್ಸ್ ಬರಲಿಲ್ಲ, ಇಂಥಹ ಕಾರಣಗಳಿಗೆ ಅತ್ಯಮೂಲ್ಯವಾದ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇದೀಗ ವಿದ್ಯಾರ್ಥಿನಿ ಒಬ್ಬರು, ಇದೇ ರೀತಿ ಮಾಡಿದ್ದಾರೆ. ಅಷ್ಟಕ್ಕೂ ಆಗಿರೋದೇನು ಎಂದು ತಿಳಿಸುತ್ತೇವೆ ನೋಡಿ..

ಆಂಧ್ರಪ್ರದೇಶದ ಅನಕಾಪಲ್ಲಿ ಜಿಲೋಎಯ, ಚೋಡವರಂ ತಾಲೂಕಿನ, ಜನ್ನವಲಸ ಎನ್ನುವ ಗ್ರಾಮದಲ್ಲಿ ಮುಮ್ಮಿನ ವೆಂಕಟ್ ಚಿರಂಜೀವ ಎನ್ನುವ ವ್ಯಕ್ತಿ ಇದ್ದಾರೆ. ಇವರಿಗೆ ಇಬ್ಬರು ಮಕ್ಕಳು, ದೊಡ್ಡ ಮಗಳು 17 ವರ್ಷದ ಸಾಯಿಶ್ರೀ, ಬೋಯಪಾಲೆಂನಲ್ಲಿರುವ ಕಾಲೇಜಿನಲ್ಲಿ ಓದುತ್ತಾ, ಹಾಸ್ಟೆಲ್ ನಲ್ಲಿದ್ದಳು. ಸ್ವಲ್ಪ ದಿನಗಳಿಂದ ಆಕೆಗೆ ಹೊಟ್ಟೆ ನೋವು ಕಾಣಿಸುತ್ತಿದ್ದ ಕಾರಣ, ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯಲು ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕೆ ಬೇಸರ ಮಾಡಿಕೊಂಡಿದ್ದಲಿ. ಕೊನೆಗೆ ರಿಸಲ್ಟ್ ಕೂಡ ಬಂತು.

ರಿಸಲ್ಟ್ ನಲ್ಲಿ ಒಳ್ಳೆಯ ಮಾರ್ಕ್ಸ್ ಬಂದಿರಲಿಲ್ಲ ಎಂದು ಇದರಿಂದ ಮನನೊಂದ ಸಾಯಿಶ್ರೀ, ಇಷ್ಟು ಕಡಿಮೆ ಮಾರ್ಕ್ಸ್ ಪಡೆದು ತಂದೆ ತಾಯಿಗೆ ಮಾರ್ಕ್ಸ್ ತೋರಿಸೋಕೆ ಆಗೋದಿಲ್ಲ ಎಂದು, ತಂಗಿಯಾದರು ಚೆನ್ನಾಗಿ ಓದಿ, ಒಳ್ಳೆಯ ಮಾರ್ಕ್ಸ್ ಪಡೆದು ತಂದೆ ತಾಯಿಯ ಹೆಸರು ಉಳಿಸಲಿ ಎಂದು ಡೆತ್ ನೋಟ್ ಪಡೆದು, ತನ್ನ ರೂಮ್ ನ ಫ್ಯಾನ್ ಗೆ ನೇಣು ಹಾಕಿಕೊಂಡು ಉಸಿರು ನಿಲ್ಲಿಸಿಕೊಂಡಿದ್ದಾಳೆ. ಕಾಲೇಜಿನವರಿಗೆ ವಿಚಾರ ಗೊತ್ತಾದ ತಕ್ಷಣವೇ ಆಸ್ಪತ್ರೆಗೆ ಸೇರಿಸಿದ್ದರು ಕೂಡ, ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಆಕೆಯ ತಂದೆ ತಾಯಿ ಈಗ ಮಗಳಿಗೆ ಹೀಗಾಯಿತು ಎಂದು ಕಣ್ಣೀರು ಹಾಕುತ್ತಿದ್ದಾರೆ.

marksreal storyStudent suicide