Bhutan: ಇಲ್ಲಿನ ಹೆಣ್ಣು ಮಕ್ಕಳನ್ನು ಮುಟ್ಟೋದು ಹಾಗಿರಲಿ ನೋಡುವುದಕ್ಕೂ ಪರ್ಮಿಷನ್ ಬೇಕು; ಒಂದು ವೇಳೆ ಇಲ್ಲಿನ ಹುಡುಗಿಯರನ್ನ ಪ್ರೀತಿಸಿದರೆ ಮುಂದೆ ಏನಾಗುತ್ತೆ ಗೊತ್ತಾ?

Bhutan: ಇದೊಂದು ವೈಶಿಷ್ಟ್ಯತೆಗಳಿಂದ ಕೂಡಿದ ರಾಷ್ಟ್ರ. ಬಹಳ ವರ್ಷಗಳಿಂದ ಒಂಟಿಯಾಗಿಯೇ ಇರುವ ಈ ರಾಷ್ಟ್ರದ ಜನಸಂಖ್ಯೆ ಕೇವಲ 8 ಲಕ್ಷ. ಭಾರತದಲ್ಲಿ 140 ಕೋಟಿ ಜನಸಂಖ್ಯೆ ಇದ್ದರೆ ಈ ರಾಷ್ಟ್ರದಲ್ಲಿ 8 ಲಕ್ಷಕ್ಕಿಂತಲೂ ಕಡಿಮೆ ಎನ್ನಬಹುದು ಅದುವೇ ಭೂತಾನ್.

ಭೂತಾನ್ ನಲ್ಲಿ ಬೀದಿ ಬೀದಿಯಲ್ಲಿ ಯಾವ ಭಿಕ್ಷುಕರನ್ನು ಕಾಣಲು ಸಾಧ್ಯವಿಲ್ಲ. ಮನೆಯಲ್ಲದ ನಿರಾಶ್ರಿತರು ಇಲ್ಲ. ಯಾರಿಗಾದರೂ ಮನೆ ಇಲ್ಲ ಎಂದರೆ ಇಲ್ಲಿನ ರಾಜ ಅಥವಾ ಸರ್ಕಾರ ಅವರಿಗೆ ಸ್ವಂತ ಮನೆ ನಿರ್ಮಿಸಿ ಕೊಡುತ್ತದೆ ಜೊತೆಗೆ ದುಡಿದು ತಿನ್ನಲು ಒಂದಿಷ್ಟು ಜಮೀನು ಕೂಡ ನೀಡಲಾಗುತ್ತದೆ. ಭೂತಾನ್ ಹಾಗೂ ಭಾರತಕ್ಕೆ ಅವಿನಾಭಾವ ಸಂಬಂಧ. ಭೂತಾನ್ ರಕ್ಷಣೆಗೆ ಭಾರತ ಸದಾ ಸಿದ್ಧ.

ಭೂತಾನ್ ನಲ್ಲಿ ಬೌದ್ದರೆ ಹೆಚ್ಚಾಗಿ ವಾಸಿಸುತ್ತಾರೆ ಹಾಗಾಗಿ ಇಲ್ಲಿ ಸಸ್ಯಹಾರವೇ ಹೆಚ್ಚು ಪ್ರಚಲಿತದಲ್ಲಿದೆ ಇನ್ನು ಈ ದೇಶದಲ್ಲಿ ಇರುವ ಜನರ ವೈದ್ಯಕೀಯ ವೆಚ್ಚಗಳನ್ನು ಸರ್ಕಾರವೇ ಭರಿಸುತ್ತದೆ. ಬಹಳ ವರ್ಷಗಳ ಹಿಂದೆ ಭೂತಾನ್ ನಲ್ಲಿ ಟಿವಿ, ಇಂಟರ್ನೆಟ್ ಎಲ್ಲವನ್ನು ಬ್ಯಾನ್ ಮಾಡಲಾಗಿತ್ತು ವಿದೇಶಿ ಸಂಸ್ಕೃತಿ ತಮ್ಮ ದೇಶದ ಜನರ ಮೇಲೆ ಪರಿಣಾಮ ಬೀರಬಾರದು ಎನ್ನುವುದು ಇದರ ಉದ್ದೇಶವಾಗಿತ್ತು. ಆದ್ರೆ 1999 ರಲ್ಲಿ ಭೂತಾನ್ ಈ ನಿಷೇಧವನ್ನು ತೆಗೆದು ಹಾಕುತ್ತದೆ. ಇದರಿಂದಾಗಿ ಮತ್ತೆ ಟೆಲಿವಿಷನ್ ಇಂಟರ್ನೆಟ್ ಗಳನ್ನು ಜನ ಬಳಸಲು ಆರಂಭಿಸುತ್ತಾರೆ.

ಈ ದೇಶದ ವಿಶೇಷತೆ ಅಂದ್ರೆ ಜನರ ಸಂತೋಷ. ಸರ್ಕಾರ ಇಲ್ಲಿನ ಜನರ ಸಂತೋಷಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ ಆರ್ಥಿಕ, ಮಾನಸಿಕ ಮೊದಲಾದ ದೃಷ್ಟಿಯಿಂದ ಜನರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತದೆ. ಭೂತಾನ್ ಪ್ರವಾಸಿಗರನ್ನು ಆಕರ್ಷಿಸುತ್ತದೆ, ಇಲ್ಲಿ ವನ್ಯ ಸಂಪತ್ತು ಅಧಿಕವಾಗಿದೆ. ಇಲ್ಲಿಯ ಜನರು ಸಾಂಪ್ರದಾಯಿಕ ಉಡುಗೆ ಧರಿಸುತ್ತಾರೆ. ಕೃಷಿಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಭೂತಾನ್ ನಲ್ಲಿ ಜಲ ವಿದ್ಯುತ್ ಉತ್ಪಾದಿಸಿ ಭಾರತಕ್ಕೂ ನೀಡಲಾಗುತ್ತದೆ.

Bhutan: ಇಲ್ಲಿನ ಹೆಣ್ಣು ಮಕ್ಕಳನ್ನು ಮುಟ್ಟೋದು ಹಾಗಿರಲಿ ನೋಡುವುದಕ್ಕೂ ಪರ್ಮಿಷನ್ ಬೇಕು; ಒಂದು ವೇಳೆ ಇಲ್ಲಿನ ಹುಡುಗಿಯರನ್ನ ಪ್ರೀತಿಸಿದರೆ ಮುಂದೆ ಏನಾಗುತ್ತೆ ಗೊತ್ತಾ? https://sihikahinews.com/amp/2023/04/01/bhutan/

ಇನ್ನು ಭೂತಾನ್ ಹೆಣ್ಣು ಮಕ್ಕಳು ವಿದೇಶಿಗರನ್ನ ಮದುವೆ ಆಗುವ ಹಾಗಿಲ್ಲ ಹಾಗೂ ಮದುವೆ ಆದರೆ ಅವರು ಭೂತಾನ್ ನಲ್ಲಿ ನೆಲೆಸುವಂತೆ ಇಲ್ಲ. ಭಾರತೀಯರು ಭೂತಾನ್ ಹುಡುಗಿಯರನ್ನು ಮದುವೆ ಆಗಿರುವ ಸಾಕಷ್ಟು ಉದಾಹರಣೆಗಳು ಇವೆ. ಆದರೆ ಮದುವೆಯಾಗಿ ಭಾರತಕ್ಕೆ ಕರೆದುಕೊಂಡು ಬರಬೇಕೆ ಹೊರತು ಭೂತಾನ್ ನಲ್ಲಿ ಇರುವ ಹಾಗಿಲ್ಲ. ಆದರೆ ಇದು ಅಲ್ಲಿನ ರಾಜನಿಗೆ ಮಾತ್ರ ಅನ್ವಯವಾಗುವುದಿಲ್ಲ. ಭೂತಾನ್ ರಾಷ್ಟ್ರದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚು ಗೌರವ ಮೌಲ್ಯ ನೀಡಲಾಗುತ್ತದೆ. ಇಲ್ಲಿನ ಸಂಪ್ರದಾಯದಂತೆ ತಂದೆಯಾದವನು ತನ್ನ ಆಸ್ತಿಯನ್ನು ತನ್ನ ದೊಡ್ಡ ಮಕ್ಕಳಿಗೆ ನೀಡಬೇಕು. ಮಗನಿಗೆ ಯಾವುದೇ ಆಸ್ತಿ ಕೊಡುವಂತಿಲ್ಲ. ಇಷ್ಟೊಂದು ವೈಶಿಷ್ಟ್ಯ ಪೂರ್ಣವಾದ ಭೂತಾನ್ ರಾಷ್ಟ್ರಕ್ಕೆ ಸಾಧ್ಯವಾದರೆ ಒಮ್ಮೆಯಾದರೂ ಭೇಟಿ ನೀಡಲೇಬೇಕು.

BhutanGirlsindiansmarriage