Crime News: ಗಂಡ ರೈಲ್ವೆ ಅಧಿಕಾರಿ; ಹೆಂಡತಿ ಬ್ಯಾಂಕ್ ಉದ್ಯೋಗಿ: ಹಣ ಬೇಕಾದಷ್ಟು ಇದ್ದರೂ, ಗಂಡ ಹಣದ ಆಸೆಗೆ ಬಿದ್ದು ಏನು ಮಾಡಿದ್ದಾನೆ ಗೊತ್ತೇ? ಇವೆಲ್ಲ ಬೇಕಿತ್ತಾ??

Crime News: ಈಗಿನ ಕಾಲದಲ್ಲೂ ವರದಕ್ಷಿಣೆ ಎನ್ನುವ ಪೆಡಂಭೂತ ಹೆಣ್ಣುಮಕ್ಕಳನ್ನು ಬಲಿ ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿಲ್ಲ. ಹೆಣ್ಣು ಎಂದರೆ ಸಂಸಾರದ ಕಣ್ಣು ಎನ್ನುತ್ತಾರೆ, ಆ ಹೆಣ್ಣನ್ನು ತಂದೆ ತಾಯಿಯರು ಮದುವೆ ಮಾಡಿಕೊಡುವಾಗ, ಗಂಡನ ಮನೆಯವರಿಗೆ ಒಡವೆ, ಹಣ, ಮನೆಗೆ ಬಳಸುವ ವಸ್ತುಗಳು ಹೀಗೆ ವರದಕ್ಷಿಣೆ ಎಂದು ಸಾಕಷ್ಟು ವಸ್ತುಗಳನ್ನು ಕೊಟ್ಟಿರುತ್ತಾರೆ. ಆದರೆ ಅದು ಸಾಲದೆ ಬಂದು, ಹೆಚ್ಚು ವರದಕ್ಷಿಣೆ ತರಬೇಕು ಎಂದು ಗಂಡನ ಮನೆಯವರು ತೊಂದರೆ ಕೊಡುವ ಅನೇಕ ಘಟನೆಗಳನ್ನು ನೋಡಿದ್ದೇವೆ, ಇಂಥದ್ದೇ ಒಂದು ಘಟನೆ ಇತ್ತೀಚೆಗೆ ನಡೆದು, ಆ ಹುಡುಗಿಯ ಪರಿಸ್ಥಿತಿ ಏನಾಗಿದೆ ಗೊತ್ತಾ? ಇದನ್ನೂ ಓದಿ: Kannada Film: ರಶ್ಮಿಕಾಗೆ ಬಿಗ್ ಶಾಕ್: ಕನ್ನಡ ಮರೆತಿದ್ದ ರಶ್ಮಿಕಾಗೆ ಬ್ರೇಕ್ ಹಾಕಿದ ಮತ್ತೊಬ್ಬಳು ಕನ್ನಡತಿ: ಎಲ್ಲರೂ ಈಕೆಯೇ ಬೇಕು ಬೇಕು ಎನ್ನುತ್ತಿರುವುದು ಯಾಕೆ ಗೊತ್ತೇ?

ಈ ಘಟನೆ ನಡೆದಿರುವುದು ವಾರಂಗಲ್ ಜಿಲ್ಲೆಯಲ್ಲಿ, ಈ ಹುಡುಗಿಯ ಹೆಸರು ಜ್ಯೋತಿ, ಇವರಿಗೆ 31 ವರ್ಷ ವಯಸ್ದು, ಬ್ಯಾಂಕ್ ನಲ್ಲಿ ಅಸಿಸ್ಟಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. 2017ರಲ್ಲಿ ಇವರು ವಾರಂಗಲ್ ಜಿಲ್ಲೆಯ ಗೀಸುಕೊಂಡ ಮಂಡಲದ ಸೂರ್ಯತಾಂಡದ ವಾಂಕುಡೋತು ಸ್ವಾಮಿ ಅವರೊಡನೆ ಮದುವೆಯಾದರು. ಮದುವೆ ಸಮಯದಲ್ಲಿ ಜ್ಯೋತಿ ಅವರ ತಂದೆ ತಾಯಿ 15 ಲಕ್ಷ ರೂಪಾಯಿ ವರದಕ್ಷಿಣೆಯನ್ನು ನೀಡಿ, ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಟ್ಟಿದ್ದರು. ಇವರಿಗೆ ಇಬ್ಬರು ಗಂಡುಮಕ್ಕಳು ಕೂಡ ಹುಟ್ಟಿದರು. ಇದನ್ನೂ ಓದಿ: Kannada Film: ಒಂದು ಕಡೆ ಅಪ್ಪು ನೋಡಿಕೊಳ್ಳುತ್ತಿದ್ದ ಮಕ್ಕಳನ್ನು ನೋಡಿಕೊಳ್ಳುತ್ತೇನೆ ಎಂದು ಬಿಲ್ಡ್ ಅಪ್ ಕೊಡುವ ನಟರ ನಡುವೆ ಲಾರೆನ್ಸ್ ಮಾಡಿದ್ದೇನು ಗೊತ್ತೇ??

ಸ್ವಾಮಿ ಅವರು ರೈಲ್ವೆ ಇಲಾಖೆಯ ಅಕೌಂಟ್ಸ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದರು, ಜ್ಯೋತಿ ಅವರು ವಾರಂಗಲ್ ನ ಕಾಶಿಬುಗ್ಗ ಇಂಡಿಯನ್ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಈ ಜೋಡಿ ಶಂಭುನಿಪೇಟೆ ಎನ್ನುವ ಏರಿಯಾದಲ್ಲಿ ಸ್ವಂತ ಮನೆ ಮಾಡಿಕೊಂಡು ಸುಖವಾಗಿಯೇ ಜೀವನ ನಡೆಸುತ್ತಿದ್ದರು. ಹಬ್ಬಗಳು ಬಂದಾಗ ಜ್ಯೋತಿ ಗಂಡ ಮಕ್ಕಳ ಜೊತೆಗೆ ಗಂಡನ ತಾಯಿ ಮನೆಗೆ ಬರುತ್ತಿದ್ದರು. ಅಲ್ಲಿ ಆಕೆಯ ಅತ್ತೆ ಅಂಬಲಿ ಹಾಗೂ ರಾಮು ಅವರ ಮಕ್ಕಳು ಶಾರದ, ಜ್ಯೋತಿ, ವಿಜಿ ಹಾಗೂ ಸುನೀತಾ ಇವರೆಲ್ಲರೂ ಇನ್ನು ಹೆಚ್ಚು ವರದಕ್ಷಿಣೆ ಹಣ ತರಬೇಕು ಎಂದು ಪೀಡಿಸುತ್ತಿದ್ದರು.

ಈ ತೊಂದರೆಯನ್ನು ತಾಳಲಾರದೆ ಏಪ್ರಿಲ್ 2ರಂದು ಜ್ಯೋತಿ ಕ್ರಿಮಿನಾಶಕ ಸೇವಿಸಿ, ಉಸಿರನ್ನೇ ನಿಲ್ಲಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ತಕ್ಷಣವೇ ಆಕೆಯನ್ನು ವಾರಂಗಲ್ ನ ಪ್ರೈವೇಟ್ ಹಾಸ್ಪಿಟಲ್ ಒಂದಕ್ಕೆ ಸೇರಿಸಿದ್ದಾರೆ, ಆಕೆಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ಹೈದರಾಬಾದ್ ನಲ್ಲಿ ಪ್ರೈವೇಟ್ ಹಾಸ್ಪಿಟಲ್ ಗೆ ಸೇರಿಸಲಾಯಿತು. ಆದರೆ ವೈದ್ಯರು ನೀಡಿದ ಚಿಕಿತ್ಸೆ ಫಲ ಕೊಡದೆ, ಉಸಿರು ನಿಲ್ಲಿಸಿದ್ದಾರೆ. ಚೆನ್ನಾಗಿದ್ದ ಮಗಳಿಗೆ ಹೀಗಾಗಿದ್ದಕ್ಕೆ, ಜ್ಯೋತಿ ಅವರ ತಾಯಿ ಮಗಳ ಅತ್ತೆ ಹಾಗೂ ಅವರ ಮಕ್ಕಳ ವಿರುದ್ಧ ಪೊಲೀಸರ ಬಳಿ ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: TCS Job: ಟಿಸಿಎಸ್ ಗೆ 40 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಬೇಕಂತೆ; ಉತ್ತಮ ಸಂಬಳ, ಫ್ರೆಶರ್ಸ್ ಗೆ ಆದ್ಯತೆ; ಕೂಡಲೇ ಅರ್ಜಿ ಸಲ್ಲಿಸಿದ್ರೆ ಇಲ್ಲಿ ಕೆಲಸ ಪಕ್ಕಾ ಫಿಕ್ಸ್!

bank employeebest storiesbest stories in kannadacrime newscrime news kannadacrime stories in kannadakannada storystory in kannadastory kannada