Real Story: ಈಗಿನ ಸೋಷಿಯಲ್ ಮೀಡಿಯಾ ಯುಗದಲ್ಲಿ ಯಾವುದು ಹೇಗೆ ಎಂದು ನಂಬುವುದು ಬಹಳ ಕಷ್ಟ, ಎಲ್ಲವೂ ವೇಗವಾಗಿ ಸಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾಗುತ್ತಾರೆ, ಸೋಷಿಯಲ್ ಮೀಡಿಯಾದಲ್ಲೇ ಪ್ರೀತಿ ಶುರುವಾಗುತ್ತದೆ, ಸೋಷಿಯಲ್ ಮೀಡಿಯಾದಲ್ಲೇ ಮದುವೆವರೆಗು ಮಾತುಕತೆ ಮಾಡಿಕೊಳ್ಳುತ್ತಾರೆ. ಇಂಥ ಅನೇಕ ಘಟನೆಗಳು ನಡೆಯುತ್ತಿದೆ, ಈ ರೀತಿ ಶುರುವಾಗುವ ಪ್ರೀತಿಯಲ್ಲಿ ನಿಜಾಂಶ ಇರುವುದು ಕಡಿಮೆ. ಇದನ್ನೂ ಓದಿ: Temple: ಬೆಟ್ಟದ ಮೇಲಿರುವ ಈ ದುರ್ಗಾದೇವಿಗೆ ಹಿಂದೂ ಸಂಪ್ರದಾಯದಂತೆಯೇ ಪೂಜೆ ಮಾಡುವ ಮುಸ್ಲಿಂ ಅರ್ಚಕ; ತಲ ತಲಾಂತರದಿಂದ ಮುಸ್ಲಿಮರೇ ಈ ದುರ್ಗಾದೇವಿಯನ್ನು ಯಾಕೆ ಪೂಜೆ ಮಾಡುತ್ತಿದ್ದಾರೆ ಗೊತ್ತಾ?
ಸೋಷಿಯಲ್ ಮೀಡಿಯಾ ಮೂಲಕ ಮೋಸ ಮಾಡುವವರ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಮೆಸೇಜ್ ಗಳಲ್ಲಿ ಅವರು ಹೇಳುವ ಎಲ್ಲಾ ಸತ್ಯಗಳು ನಿಜ ಎಂದು ನಂಬುವುದಕ್ಕೆ ಆಗೋದಿಲ್ಲ. ಹೀಗೆ, ಒಬ್ಬ ಹುಡುಗಿ, ಆಕೆ ಹುಡುಗಿ ಎಂದುಕೊಂಡು ಆಕೆಯ ಮಾತನ್ನು ನಂಬಿದ, ಆದರೆ ಆಕೆ ಆಂಟಿ ಆಗಿದ್ದಳು. ಅಷ್ಟಕ್ಕೂ ಇವರಿಬ್ಬರ ನಡುವೆ ಆಗಿದ್ದೇನು ಗೊತ್ತಾ? ಈ ಘಟನೆ ನಡೆದಿರುವುದು ಉತ್ತರ ಪ್ರದೇಶದಲ್ಲಿ.
ಇಲ್ಲಿ ಒಬ್ಬ ಮಹಿಳೆ ತಾನು ಮದುವೆ ಆಗಬೇಕು ಎಂದು ಹುಡುಗನನ್ನು ಹುಡುಕುತ್ತಿದ್ದಳು. ಆಕೆಗೆ ಸೋಷಿಯಲ್ ಮೀಡಿಯಾದಲ್ಲಿ ಒಬ್ಬ ಹುಡುಗನ ಪರಿಚಯವಾಯಿತು, ಇಬ್ಬರು ಪ್ರೀತಿಸುವುದಕ್ಕೆ ಶುರು ಮಾಡಿದರು, ಆಕೆಗೆ ಈ ಹುಡುಗನನ್ನೇ ಮದುವೆಯಾಗಬೇಕು ಎಂದು ಆಸೆಯಾಗಿ, ತನ್ನ ವಯಸ್ಸು 28 ಎಂದು ಹೇಳಿ, ಮದುವೆ ಆಗುವುದಕ್ಕೆ ಪ್ರಸ್ತಾಪ ಮಾಡಿದಳು. ಹುಡುಗನಿಗೂ 28 ವರ್ಷ ಆಗಿದ್ದರಿಂದ ಆತ ಕೂಡ ಮದುವೆಗೆ ಒಪ್ಪಿಕೊಂಡ. ಆದರೆ ಮದುವೆಗೆ ಒಪ್ಪಿಕೊಂಡ ನಂತರ ಅಸಲಿ ವಿಚಾರ ಬೆಳಕಿಗೆ ಬಂದಿದೆ.
ಆಕೆಯ ನಿಜವಾದ ವಯಸ್ಸು 38 ವರ್ಷ ಆಗಿದ್ದು, ಇವನನ್ನು ಮದುವೆ ಆಗಬೇಕು ಎಂದು ಎಲ್ಲಾ ದಾಖಲೆಗಳನ್ನು ಫೋರ್ಜರಿ ಮಾಡಿಸಿದ್ದಳು. ಇದು ಹುಡುಗನಿಗೆ ಗೊತ್ತಾಗಿ, ಮದುವೆ ನಿಲ್ಲಿಸಬೇಕು ಎಂದಾಗ, ಹುಡುಗಿಯ ಮನೆಯವರು ಧಮ್ಕಿ ಹಾಕಿದ್ದಾರೆ. ಬೇರೆ ದಾರಿ ಇಲ್ಲದೆ, ಹುಡುಗನ ಮನೆಯವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪೊಲೀಸರ ಬಳಿ ತಮಗೆ ಆದ ಅನ್ಯಾಯದ ಬಗ್ಗೆ ಹೇಳಿಕೊಂಡಿದ್ದು, ಪೊಲೀಸರು ಈ ಘಟನೆ ಬಗ್ಗೆ ತನಿಖೆ ಶುರು ಮಾಡಿದ್ದಾರೆ. ಇಂಥ ಘಟನೆಗಳನ್ನು ನೋಡಿದರೆ, ದೊಡ್ಡವರು ಹೇಳಿರುವ ಮಾತುಗಳು ಎಷ್ಟು ಸತ್ಯ ಎಂದು ಅರ್ಥವಾಗುತ್ತದೆ. ಇದನ್ನೂ ಓದಿ; Agriculture: ಅಡಿಕೆ ತೋಟದಲ್ಲಿ ಕಳೆನಾಶಕಗಳನ್ನು ಬಳಸಿದ್ರೆ ಕಳೆ ಮಾತ್ರವಲ್ಲ, ಜೀವ, ತೋಟ ಎರಡನ್ನೂ ಕಳೆದುಕೊಳ್ಳಬೇಕಾಗುತ್ತೇ ಎಚ್ಚರ, ಸಂಶೋಧಕರಿಂದ ಹೊರಬಿತ್ತು ಭಯಾನಕ ಸುದ್ದಿ!