Mrunal Thakur: ಹೊಸ ಕಾರು ಖರೀದಿ ಮಾಡಿದ ಸೀತಾ ರಾಮಂ ಸೀತಾ ಮೃಣಾಲ್ ಠಾಕೂರ್: ಬೆಲೆ ಕೇಳಿದರೆ, ಊಟ ಮಾಡೋದೇ ಬಿಡ್ತೀರಾ. ಎಷ್ಟು ಗೊತ್ತೇ??

Mrunal Thakur: ನಟಿ ಮೃಣಾಲ್ ಠಾಕೂರ್ ಅವರಿಗೆ ಈಗ ಸೌತ್ ಇಂಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಸೀತಾ ರಾಮಮ್ ಸಿನಿಮಾ ಮೂಲಕ ಇವರು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.. ಈ ಸಿನಿಮಾ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ನಾಲ್ಕು ಭಾಷೆಗಳಲ್ಲಿ ತೆರೆಕಂಡು, 2022ರ ದೊಡ್ಡ ಬ್ಲಾಕ್ ಬಸ್ಟರ್ ಗಳಲ್ಲಿ ಒಂದಾಗಿದೆ. ಈ ಸಿನಿಮಾ ಮೂಲಕ ಮೃಣಾಲ್ ಠಾಕೂರ್ ಅವರು ಸೀತಾ ಮಹಾಲಕ್ಷ್ಮಿಯಾಗಿ ಸಿನಿಪ್ರಿಯರ ಎದುರು ಬಂದರು. ಈ ಪಾತ್ರ ಎಲ್ಲರ ಫೇವರೆಟ್ ಆಗಿದೆ ಎಂದರೆ ತಪ್ಪಲ್ಲ..

ಮೃಣಾಲ್ ಠಾಕೂರ್ ಅವರು ಮೊದಲಿಗೆ ಹಿಂದಿ ಸೀರಿಯಲ್ ನಲ್ಲಿ ನಟಿಸುವ ಮೂಲಕ ಕಿರುತೆರೆಯಿಂದ ವೀಕ್ಷಕರಿಗೆ ಇಷ್ಟವಾದರು. ನಂತರ ಹಿಂದಿಯಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಕಳೆದ ವರ್ಷ ಸೀತಾರಾಮಂ ಸಿನಿಮಾ ಮೂಲಕ ದಕ್ಷಿಣ ಭಾರತಕ್ಕೆ ಎಂಟ್ರಿ ಕೊಟ್ಟರು. ಒಂದೇ ಸಿನಿಮಾದಲ್ಲಿ ನಟಿಸಿದ್ದರು, ಆ ಸಿನಿಮಾ ಎಷ್ಟು ದೊಡ್ಡ ಮಟ್ಟಕ್ಕೆ ರೀಚ್ ಆಗಿದೆ ಎಂದರೆ, ಮೃಣಾಲ್ ಅವರಿಗೆ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಸಾಕಷ್ಟು ಆಫರ್ ಗಳು ಬರುತ್ತಿದೆ..

ಆದರೆ ಮೃಣಾಲ್ ಅವರು ತಮ್ಮ ಕೆರಿಯರ್ ನಲ್ಲಿ ಬಹಳ ಹುಷಾರಾಗಿ ಸಿನಿಮಾಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಮೃಣಾಲ್ ಅವರು ಈಗ ನಟ ನಾನಿ ಅವರ 30ನೇ ಸಿನಿಮಾದಲ್ಲಿ ನಾನಿ30 ಸಿನಿಮಾಗೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದು, ಈ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇನ್ನು ಹಲವು ಸಿನಿಮಾಗಳ ಅವಕಾಶ ಸಿಗುತ್ತಿದ್ದು, ಮೃಣಾಲ್ ಅವರು ಇನ್ನು ಸೈನ್ ಮಾಡಿಲ್ಲ. ಇನ್ನು ಇದೀಗ ಮೃಣಾಲ್ ಅವರು ಹೊಸದೊಂದು ವಿಚಾರದಿಂದ ಸುದ್ದಿಯಾಗಿದ್ದಾರೆ..

ಈಗ ಮೃಣಾಲ್ ಅವರು ಸುದ್ದಿಯಾಗಿರುವುದು ಹೊಸ ಕಾರ್ ಖರೀದಿ ಮಾಡಿರುವ ವಿಷಯದಿಂದ. ಇತ್ತೀಚೆಗೆ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡ ಮೃಣಾಲ್ ಅವರು ಹೊಸ ಮರ್ಸಿಡಿಸ್ ಬೆಂಜ್ ಕಾರ್ ನಲ್ಲಿ ಬಂದಿದ್ದು, ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗೆಯೇ ಮೃಣಾಲ್ ಅವರ ಈ ಕಾರ್ ನ ಬೆಲೆ ಬಗ್ಗೆ ಕೂಡ ಚರ್ಚೆಯಾಗುತ್ತಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಮೃಣಾಲ್ ಅವರ ಈ ಕಾರ್ ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ಸೆಡಾನ್ ಲಕ್ಷುರಿ ಕಾರ್ ಆಗಿದ್ದು, ಈ ಕಾರ್ ನ ಬೆಲೆ ₹1.17 ಕೋಟಿ ರೂಪಾಯಿಯಿಂದ ₹2.17ಕೋಟಿ ರೂಪಾಯಿವರೆಗು ಇರುತ್ತದೆ.

Best News in Kannadakannada liveKannada NewsKannada Trending Newslive newsLive News Kannadalive trending newsmrunal thakur mercedes benz carNews in Kannadatop news kannada