Crime News: ಧಿಡೀರ್ ಅಂತ ಶ್ರೀಮಂತರಾಗಲು ಯಾರೂ ಇವರನ್ನು ಅನುಸರಿಸಬೇಡಿ; ಮತ್ತೆ ಜೈಲುವಾಸ ಗ್ಯಾರಂಟಿ! ಎಂಥಾ ಖದೀಮರು ನೋಡಿ!

Crime News: ಮನೆ ಮಾಲೀಕರ (House owner) ಮನೆಗೆ ಹೋಗಿ ಹಣ ದೋಚಿದ ಪ್ರಕರಣ ಬೆಂಗಳೂರು ಸಮೀಪದ ಯಾರಂಡ ಹಳ್ಳಿಯ ಕನ್ನಿಕಾನಗರದಲ್ಲಿ ವರದಿಯಾಗಿದೆ. ಈ ಘಟನೆ ಬಗ್ಗೆ ತಿಳಿದರೆ ನಿಜಕ್ಕೂ ಆಶ್ಚರ್ಯ ಅನ್ನಿಸುತ್ತದೆ ಯಾರ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು ಯಾರನ್ನು ನಂಬಬಾರದು ಎನ್ನುವ ಗೊಂದಲಕ್ಕೆ ಒಳಗಾಗಬಹುದು ಇದಕ್ಕೆ ಕಾರಣ ಕಳ್ಳತನ ಮಾಡಿದ ಆ ಇಬ್ಬರು ಆರೋಪಿಗಳಾದ ಮಹೇಂದ್ರ ಸಿಂಗ್ (Mahendra Singh) ಹಾಗೂ ಜಗಮಲ್ ಸಿಂಗ್ (Jagmal singh). ಇದನ್ನೂ ಓದಿ: Film News: ಡಾಕ್ಟರ್ ರಾಜಕುಮಾರ್ ಅವರು ತಮ್ಮ ಮೇಕಪ್ ಮ್ಯಾನ್ ಒಂದು ದಿನ ಸಿಗರೇಟ್ ಸೇದಿಕೊಂಡು ಬಂದಾಗ ಮಾಡಿದ್ದೇನು ಗೊತ್ತೇ ಅವರಿಗೆ ಸಿಗುತ್ತಿದ್ದ ಸಂಭಾವನೆ ಎಷ್ಟು ಗೊತ್ತೇ

ಹೌದು, ಈ ಪ್ರಕರಣ ಬಹಳ ಇಂಟರೆಸ್ಟಿಂಗ್ (Intresting) ಆಗಿದೆ. ಗೆಳೆಯ ಜಗಮಲ್ ಸಿಂಗ್ ಜೊತೆ ಸೇರಿ ಬೆಂಗಳೂರಿನಲ್ಲಿರುವ ಮಹೇಂದ್ರ ಸಿಂಗ್ ಎಂಥ ಸ್ಕೆಚ್ ಹಾಕಿದ್ರು ನೋಡಿ. ರಾಜಸ್ಥಾನ ಮೂಲದವರಾದ ಮಹೇಂದ್ರ ಸಿಂಗ್ ಹಾಗೂ ಜಗಮನ ಸಿಂಗ್ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಗುಟ್ಕಾ ವ್ಯಾಪಾರಿಯಾಗಿದ್ದ ಸರ್ವಣ್ ಭಾರತಿ ಎನ್ನುವವರ ಮನೆಗೆ ಕನ್ನ ಹಾಕಿ 25 ಲಕ್ಷ ಹಣವನ್ನು ಕದ್ದು ಎಸ್ಕೇಪ್ ಆಗಿದ್ದರು. ಕನ್ನಡ ಮನೆಯಲ್ಲಿ ಕಳ್ಳತನ ಆಗಿದ್ದು ಗೊತ್ತಾಗುತ್ತಿದ್ದ ಹಾಗೆ ಮಾಲೀಕ ಅನುಮಾನದಿಂದ ಪೊಲೀಸರಿಗೆ ದೂರು ನೀಡಿದ್ದಾರೆ. ಕೊನೆಗೂ ಹೆಬ್ಬಗೋಡಿ ಪೊಲೀಸರು ಈ ಪ್ರಕರಣವನ್ನು ದಾಖಲಿಸಿ ಕೊಂಡು ಕಳ್ಳರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಮಾಲಿಕನ ಮನೆಯಲ್ಲಿಯೇ ಕಳ್ಳತನ ಮಾಡಿದ ಮಹೇಂದ್ರ ಸಿಂಗ್

ಈ ಘಟನೆಯ ಕುರಿತು ಮಾಹಿತಿ ನೀಡುವ ಎಸ್ ಪಿ ಮಲ್ಲಿಕಾರ್ಜುನ್ ಬಾಲದಂಡಿ, ಹೆಬ್ಬುಗೋಡಿ ಯಾರಂಡಹಳ್ಳಿಯಲ್ಲಿ ಗುಡುಗ ದಾಸ್ತಾನಿನ ಮಾಲೀಕರಾಗಿದ್ದ ಸರ್ವಣ್ ಅವರ ಬಳಿ ರಾಜಸ್ಥಾನ ಮೂಲದ ಮಹಿಂದ್ರ ಕೆಲಸ ಮಾಡುತ್ತಿದ್ದ. ಅದೇ ಮನೆಯಲ್ಲಿ ಕಳ್ಳತನ ಕೂಡ ಮಾಡಿದ್ದ ಬರೋಬರಿ 25 ಲಕ್ಷ ಹಣವನ್ನು ಲಪಟಾಯಿಸಿದ್ದ. ಇದನ್ನೂ ಓದಿ: Story of Soujanya; ಸಿನಿಮಾದಲ್ಲಾದ್ರೂ ಸಿಗಲಿದ್ಯಾ ಸೌಜನ್ಯ ಕೇಸ್ ಗೆ ನ್ಯಾಯ? ಸ್ಟೋರಿ ಆಫ್ ಸೌಜನ್ಯ ಸಿನಿಮಾ ನಿರ್ಮಾಣಕ್ಕೆ ಮುಂದಾದ ನಿರ್ದೇಶಕರು ಯಾರು?

ಈತನಿಗೆ ಚೆನ್ನೈನಲ್ಲಿ ವಾಸವಾಗಿದ್ದ ಇವನ ಸ್ನೇಹಿತ ಜಗಮಲ್ ಸಿಂಗ್ ಸಾತ್ ನೀಡಿದ್ದು, ಜಗಮಲ್ ಸಿಂಗ್ ಚೆನ್ನೈಗೆ ಪರಾರಿಯಾಗಿದ್ದ. ಮಾಲೀಕನಿಗೆ ಅನುಮಾನ ಬಂದು ವ್ಯವಹಾರದ ದೊಡ್ಡ ಕಲೆಕ್ಷನ್ ಕಳ್ಳತನವಾಗಿದ್ದು ಗೊತ್ತಾಗಿದೆ ಬಳಿಕ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಜಗ್ಮಲ್ ಸಿಂಗ್ ಹಾಗೂ ಮಹೇಂದ್ರ ಸಿಂಗ್ ಇಬ್ಬರನ್ನು ಪೊಲೀಸರು ಬಂಧಿಸಿದ್ದು 19 ಲಕ್ಷಗಳ ಹಣವನ್ನು ಹಿಂಪಡೆದುಕೊಳ್ಳಲಾಗಿದೆ. ತಾವು ಮಾಡಿರುವ ಸಾಲವನ್ನು ತೀರಿಸಬೇಕು ಹಾಗೂ ದಿಡೀರ್ ಎಂದು ಶ್ರೀಮಂತರಾಗಬೇಕು ಎನ್ನುವ ಆಸೆಯಿಂದ ಇಬ್ಬರು ಉಂಡ ಮನೆಗೆ ಕನ್ನ ಹಾಕುವ ಕೆಲಸ ಮಾಡಿದ್ದಾರೆ ಎನ್ನುವುದು ಪೋಲಿಸ್ ತನಿಖೆಯಲ್ಲಿ ಬಯಲಾಗಿದೆ.

Bengaluru robbing caseBest News in Kannadacrime newscrime storyKannada Trending NewsLive News Kannada