Post Office scheme: ದೇಶದಲ್ಲಿ ನಾಗರಿಕರಿಗೆ ಅನುಕೂಲವಾಗುವಂತಹ ಹಲವು ಯೋಜನೆಗಳನ್ನು ಪೋಸ್ಟ್ ಆಫೀಸ್ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ ನೀಡಿರುವ ಕೆಲವು ಯೋಜನೆಗಳು ಜನರಿಗೆ ಬಹಳ ಸಹಾಯವಾಗುತ್ತಿದೆ ಜೊತೆಗೆ ಮಹಿಳೆಯರು ಕೂಡ ತಮ್ಮ ಬಳಿ ಆಗುವಷ್ಟು ಠೇವಣಿ (Deposit) ಇಟ್ಟು ಭವಿಷ್ಯದ ದೃಷ್ಟಿಯಿಂದ ಹೆಚ್ಚು ಹಣ ಪಡೆದುಕೊಳ್ಳಲು ಈ ಹೂಡಿಕೆ (Investment) ಯೋಜನೆಗಳು ಉಪಯೋಗವಾಗುತ್ತವೆ. ಅದರಲ್ಲೂ ಪೋಸ್ಟ್ ಆಫೀಸ್ (Post Office) ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಸೇಫ್ ಆಗಿರುತ್ತದೆ ಜೊತೆಗೆ ಉತ್ತಮ ಆದಾಯವನ್ನು ಕೂಡ ಪಡೆದುಕೊಳ್ಳಬಹುದು. ಇದನ್ನೂ ಓದಿ: Crime News: ಧಿಡೀರ್ ಅಂತ ಶ್ರೀಮಂತರಾಗಲು ಯಾರೂ ಇವರನ್ನು ಅನುಸರಿಸಬೇಡಿ; ಮತ್ತೆ ಜೈಲುವಾಸ ಗ್ಯಾರಂಟಿ! ಎಂಥಾ ಖದೀಮರು ನೋಡಿ!
ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಯೋಜನೆ
ಭಾರತೀಯ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ. ಅದೇ ರೀತಿ ಮರುಕಳಿಸುವ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು. ನೀವು ಬೇರೆ ಎಫ್ ಡಿ (FD) ಹಾಗೂ ಆರ್ ಡಿ *RD) ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕಿಂತ ಇದರಲ್ಲಿ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು. ಹತ್ತು ವರ್ಷಕ್ಕಿಂತ ಮೇಲ್ಪಟ್ಟವರು ಯಾರು ಬೇಕಾದರೂ ಈ ಖಾತೆಯನ್ನು ಆರಂಭಿಸಬಹುದು.
ಮರುಕಳಿಸುವ ಠೇವಣಿ ಯೋಜನೆಯ ಬಡ್ಡಿದರ ಶೇಕಡಾ 6.2 ಇಂದ 6.5 ಗೆ ಹೆಚ್ಚಿಸಲಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ನೀವು ಹೆಚ್ಚಿನ ಬಡ್ಡಿ ದರವನ್ನು ಪಡೆಯಬಹುದು. ಇನ್ನು ಐದು ವರ್ಷದ ವರೆಗೆ ನೀವು ಹೂಡಿಕೆ ಮಾಡಬಹುದು. ಇದು ಐದು ವರ್ಷಗಳವರೆಗಿನ ಯೋಜನೆಯದು ಪ್ರತಿ ತಿಂಗಳು ನೀವು 10,000 ಹೂಡಿಕೆ ಮಾಡಿದರೆ ಐದು ವರ್ಷಗಳ ಬಳಿಕ 7,10,000 ಗಳನ್ನು ಹಿಂಪಡೆಯಬಹುದು. ಇದನ್ನೂ ಓದಿ: Nisha narasappa Fraud case: ಇನ್ನೊಂದು ಹಂತಕ್ಕೆ ತಲುಪಿದ ನಿಶಾ ನರಸಪ್ಪ ವಂಚನೆ ಕೇಸ್; ಪುಟಾಣಿ ವಂಶಿಕಾ ಹೆಸರು ಬಳಸಿಕೊಂಡು ಇಷ್ಟೇಲ್ಲಾ ಆಡ್ಬಿಟ್ರಾ?
ಅಂದರೆ ಲೆಕ್ಕಾಚಾರದ ಪ್ರಕಾರ 10,000 ತಿಂಗಳ ಹೂಡಿಕೆ ಮಾಡಿದರೆ ಯೋಜನೆಯ ಅವಧಿ ಮುಗಿದ ನಂತರ ನಿಮಗೆ ಆರು ಲಕ್ಷ ರೂಪಾಯಿಗಳು ಹೂಡಿಕೆಯ ಮೊತ್ತ ಹಾಗೂ ಬಡ್ಡಿಯಾಗಿ ಒಂದು ಲಕ್ಷದ 10,000 ಸಿಗುತ್ತವೆ. ಪುಟಗಿ ಹತ್ತು ಸಾವಿರ ಹೂಡಿಕೆ ಮಾಡುತ್ತಾ ಬಂದರೆ ಐದು ವರ್ಷದ ಹೊತ್ತಿಗೆ 7,10,000 ದೊಡ್ಡ ಮೊತ್ತವನ್ನು ನೀವು ಹಿಂಪಡೆಯಬಹುದು.