Cricket News: ಸೂರ್ಯ ಕುಮಾರ್ ಗೆ ಮಣೆ ಹಾಕಿ ಈ ಆಟಗಾರನ ಕ್ರಿಕೆಟ್ ವೃತ್ತಿ ಜೀವನಕ್ಕೆ ಕೊಳ್ಳಿ ಇಟ್ರಾ ಮಿಸ್ಟರ್ ರೋಹಿತ್ ಶರ್ಮಾ!

Cricket News: ವೆಸ್ಟ್ ಇಂಡೀಸ್ ಟೆಸ್ಟ್ ಕ್ರಿಕೆಟ್ (West indies match) ನಲ್ಲಿ ಟೀಮ್ ಇಂಡಿಯಾ (Team India)  ತನ್ನ ಅದ್ಭುತ ಭಾರತಕ್ಕೆ ಭರವಸೆ ಮೂಡಿಸಿದೆ. ವೆಸ್ಟ್ ಇಂಡೀಸ್ ವಿರುದ್ಧ ಭಾರತ ಮೊದಲ ದಿನದ ಪಂದ್ಯದಲ್ಲಿ ಐದು ವಿಕೆಟ್ ಗೆ ಜಯ ಸಾಧಿಸಿ 3 ಪಂದ್ಯಗಳಲ್ಲಿ 1-0 ದಿಂದ ಮುನ್ನಡೆಯಲ್ಲಿ ಇದೆ ರವೀಂದ್ರ ಜಡೇಜಾ (Ravindra Jadeja) ಹಾಗೂ ಕುಲದೀಪ್ ಯಾದವ (Kuldeep Yadav) ಅವರ ಭೌಲಿಂಗ ಪ್ರದರ್ಶನಕ್ಕೆ ವೆಸ್ಟ್ ಇಂಡೀಸ್ ತತ್ತರಿಸಿದ್ದು ಸುಳ್ಳಲ್ಲ. ಟಾಸ್ಕ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ ವೆಸ್ಟ್ ಇಂಡೀಸ್ ಅನ್ನು 23 ಓವರ್ ಗಳಲ್ಲಿ 114 ರನ್ ಗೆ ಆಲ್ ಔಟ್ (All out) ಮಾಡಿತ್ತು.

ಈ ಸಣ್ಣ ಟಾಗ್ರೆಟ್ ಚೇಸ್ ಮಾಡುವುದು ಭಾರತಕ್ಕೆ ದೊಡ್ಡ ವಿಷಯವೇನು ಆಗಿರಲಿಲ್ಲ ಕೇವಲ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪುವಲ್ಲಿ ಭಾರತ ಯಶಸ್ವಿ ಆಯ್ತು. ಶುಭಮನ್ ಗಿಲ್ (Shubhman Gil)  ದೊಡ್ಡ ಪ್ರದರ್ಶನವನ್ನೇನೂ ತೋರಿಸಲಿಲ್ಲ. ಸೂರ್ಯ ಕುಮಾರ್ (Surya kumar) ಕೂಡ ಏಕದಿನ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. 25 ಬೌಲ್ಗೆ 19ರನ್ನು ಗಳಿಸಿ ಔಟ್ ಆದರು. ನಿಶಾಂತ್ ಕಿಶನ್ ಒಂದು ಸಿಕ್ಸರ್ ಏಳು ಬೌಂಡರಿ ಬಾರಿಸುವುದರ ಜೊತೆಗೆ 52 ರನ್ ಸಿಡಿಸಿದ್ದಾರೆ.

ಸಂಜು ಸ್ಯಾಮ್ಸಂಗ್ ನಿಂದ ರೋಹಿತ್ ಶರ್ಮ ಅವಕಾಶ ಕಿತ್ಕೊಂಡ್ರ?

ಇದು ಸಂಜು ಸ್ಯಾಮ್ಸಂಗ್ (Sanju samson)  ಅವರ ಅಭಿಮಾನಿಗಳ ಪ್ರಶ್ನೆ ಅವರಿಗೆ 11 ಬಳಗದಲ್ಲಿ ಆಡಲು ಸ್ಥಾನ ಸಿಗಬಹುದು ಎಂದು ಊಹಿಸಲಾಗಿತ್ತು ಆದರೆ ರೋಹಿತ್ ಶರ್ಮ (Rohit Sharma)  ಈ ಅವಕಾಶವನ್ನು ಸಂಜು ಅವರಿಂದ ಕಿತ್ತುಕೊಂಡಂತೆ ಅಭಿಮಾನಿಗಳು ಮಾತನಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಟೀಮ್ ಇಂಡಿಯಾದ ಮ್ಯಾನೇಜ್ಮೆಂಟ್ ಹಾಗೂ ನಾಯಕ ರೋಹಿತ್ ಶರ್ಮ ಅವರ ಮೇಲೆ ಸಂಜು ಸ್ಯಾಮ್ಸನ್ ಅಭಿಮಾನಿಗಳು ಕಿಡಿ ಕಾರಿದ್ದಾರೆ.

ಸೂರ್ಯಕುಮಾರ ಅವರಿಗೆ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸ್ಥಾನ ನೀಡಲಾಗಿದೆ. ಆದರೆ ಅವರು ನಿರೀಕ್ಷಿತ ಪ್ರದರ್ಶನವನ್ನು ತೋರಿಸಿಲ್ಲ. ಇನ್ನು ಮುಂಬರುವ ವಿಶ್ವಕಪ್ ಪಂದ್ಯದಲ್ಲಿ ಸ್ಥಾನ ಪಡೆದುಕೊಳ್ಳುವುದಕ್ಕೆ ಸಂಜು ಸ್ಯಾಮ್ಸನ್ ಅವರಿಗೆ ಬಹುಶಃ ಕಷ್ಟವಾಗಬಹುದು. ಸಂಜು ಕೂಡ ಟೀಮ್ ಇಂಡಿಯಾದಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳಲು ಪರದಾಡುತ್ತಿದ್ದಾರೆ ಆದರೂ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ.

ಸೂರ್ಯ ಕುಮಾರ್ ಗೆ ಯಾಕೆ ಮಣೆ ಹಾಕುತ್ತಿದ್ದಾರೆ!

ನಾಲ್ಕನೇ ಕ್ರಮಾಂಕದಲ್ಲಿ 22 ಪಂದ್ಯಗಳನ್ನು ಆಡಿದರೂ ಕೂಡ ಸೂರ್ಯಕುಮಾರ್ ಯಾದವ್ ವಿಫಲತೆಯನ್ನು ಕಾಣುತ್ತಿದ್ದಾರೆ ಆದರೂ ಅವರಿಗೆ ಯಾಕೆ ಸ್ಥಾನ ನೀಡಲಾಗುತ್ತಿದೆ? ಸಂಜು ಸ್ಯಾಮ್ಸನ್ ಅವರಿಗೆ ಯಾಕೆ ಸ್ಥಾನ ನೀಡಲಾಗುತ್ತಿಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಸಂಜು ಮುಂಬೈನವರು ಅಲ್ಲ ಎಂಬುವ ಕಾರಣಕ್ಕೆ ಅವರನ್ನು ಸೈಡ್ ಲೈನ್ ಮಾಡಿ ಸೂರ್ಯ ಕುಮಾರ್ ಗೆ ಸ್ಥಾನ ನೀಡಲಾಗುತ್ತಿದೆ ಎಂದು ನೆಟ್ಟಿದರು ವ್ಯಂಗ್ಯ ಮಾಡುತ್ತಿದ್ದಾರೆ. ಜೊತೆಗೆ ಇನ್ನೊಬ್ಬರು ಸಂಜು ಸಾಮ್ಸನ್ ಅವರ ಪ್ರತಿಭೆ ವೇಸ್ಟ್ ಆಗುತ್ತಿದೆ ರೋಹಿತ್ ಗಿಂತ ಉತ್ತಮ ನಾಯಕನ ಟೀಮ್ ನಲ್ಲಿ ಆಡಲು ಅವರು ಅರ್ಹರು ಎಂದು ಕಮೆಂಟ್ ಮಾಡಿದ್ದಾರೆ.

Best News in KannadaCricket newsKannada Trending NewsLive News KannadaRohit Sharmasanju samsonshubman gilTeam India