Kisan Credit Card: ಈ ಒಂದು ಕಾರ್ಡ್ ನಿಮ್ಮ ಬಳಿ ಇದ್ದರೆ ಸರ್ಕಾರ ನೀಡುವ ಸಬ್ಸಿಡಿ, ಸಾಲ ಎಲ್ಲವೂ ಸಿಗುತ್ತದೆ, ಇಲ್ಲದಿದ್ದರೆ ನಷ್ಟ ಆಗುತ್ತದೆ: ಕೂಡಲೇ ಬ್ಯಾಂಕ್ನಿಂದ ಈ ಕಾರ್ಡ್ ಪಡೆಯಿರಿ!

Kisan Credit Card: ಕೇಂದ್ರ ಸರ್ಕಾರ (Central Govt.) ಭಾರತೀಯ ರೈತ ವರ್ಗಕ್ಕೆ ಅನುಕೂಲ ವಾಗುವಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಸಬ್ಸಿಡಿ (Subsidy) ರಬಹುದು ಅಥವಾ ಕೃಷಿ ಬೆಳಗ್ಗೆ ಸಂಬಂಧಪಟ್ಟ ಸಾಲ ನೀಡುವದಿರಬಹುದು ಎಲ್ಲದರಲ್ಲೂ ಸಾಕಷ್ಟು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಇನ್ನು ರಾಜ್ಯ ಸರ್ಕಾರ (State Govt.) ನೀಡುವ ಯೋಜನೆಗಳಾಗಲಿ ಅಥವಾ ಕೇಂದ್ರ ಸರ್ಕಾರದಿಂದ ಮಂಜೂರಾಗುವ ಹಣವನ್ನು ಆಗಲಿ ರೈತರು (Farmers)ಪಡೆದುಕೊಳ್ಳಬೇಕು ಹಾಗೂ ಸರ್ಕಾರದ ಯೋಜನೆಗಳ ಸರಿಯಾದ ಪ್ರಯೋಜನ ಪಡೆಯಬೇಕು ಎಂದರೆ ಈ ಒಂದು ಕಾರ್ಡ್ ನಿಮ್ಮ ಬಳಿ ಇಟ್ಟುಕೊಂಡಿರಲೇಬೇಕು. ಅದುವೇ ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit card)

ಕಿಸಾನ್ ಕ್ರೆಡಿಟ್ ಕಾರ್ಡ್ ಎಂದರೇನು

1998ರಲ್ಲಿ ಕ್ರೆಡಿಟ್ ಕಾರ್ಡ್ (KCC) ಜಾರಿಗೆ ತರಲಾಯಿತು 2020 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಿಸಾನ್ ಕ್ರೆಡಿಟ್ ಕಾರ್ಡ್ ನ ಪರಿಷ್ಕರಣೆಗೊಳಿಸಿ ಹೊಸ ವಿಷಯಗಳನ್ನು ಕೂಡ ಸೇರಿಸಿದ್ದಾರೆ. ಕಿಸಾನ್ ಗಾರ್ಡನ್ನು ನೀವು ಬ್ಯಾಂಕ್ ಮೂಲಕ ಪಡೆದುಕೊಳ್ಳಬಹುದು ಸಾಕಷ್ಟು ಪ್ರಯೋಜನಗಳು ಇವೆ ನೋಡಿ.

ಕಿಸಾನ್ ಕಾರ್ಡ್ ನ ಪ್ರಯೋಜನಗಳು

ಕಿಸಾನ್ ಕ್ರೆಡಿಟ್ ಕಾರ್ಡ್ ರೈತರ ಬಳಿ ಇದ್ದರೆ ಹೂಡಿಕೆ ಸಾಲವನ್ನು ಪಡೆದುಕೊಳ್ಳಬಹುದು. ರೈತ ಕುಟುಂಬಗಳ ಬಳಕೆಯ ಅಗತ್ಯತೆಗಳಿಂದ ಹಿಡಿದು ಕೃಷಿ ಆಸ್ತಿ ನಿರ್ವಹಣೆ ಕೃಷಿ ಚಟುವಟಿಕೆಗಳಿಗೆ ಮಾರುಕಟ್ಟೆ ಸಾಲ ಕೊಯಲು ವೆಚ್ಚ ಹೇಗೆ ಪ್ರತಿಯೊಂದಕ್ಕೂ ಅಗತ್ಯವಿರುವ ಸಾಲ ಪಡೆದುಕೊಳ್ಳಬಹುದು. ಇದರ ಜೊತೆಗೆ ರೈತರು ಉತ್ತಮ ತಳಿಯ ಬೀಜಗಳನ್ನು ರಸಗೊಬ್ಬರಗಳನ್ನು ಹಾಗೂ ಕೀಟನಾಶಕ ಮೊದಲಾದವುಗಳನ್ನು ಖರೀದಿಸಲು ಕೂಡ ಈ ಕಾರ್ಡ್ ಹೊಂದಿರುವುದು ಸಹಾಯಕವಾಗುತ್ತದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯುವುದು ಹೇಗೆ

ಕಿಸಾನ್ ಕ್ರೆಡಿಟ್ ಕಾರ್ಡ್ ನಿಮ್ಮ ಬಳಿ ಇದ್ದರೆ ಸಾಕಷ್ಟು ಸಬ್ಸಿಡಿ ದರದಲ್ಲಿ ಸಹಾಯಧನವನ್ನು ಕೂಡ ಪಡೆಯಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ, ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಅಲ್ಲಿ ಅರ್ಚೀನ ನಮೂನೆಯನ್ನು ಭರ್ತಿ ಮಾಡಿ ನಂತರ ಠೇವಣಿ ಇಡಬೇಕಾಗುತ್ತದೆ. ಕೆ ವೈ ಸಿ ಮಾಡಿಸಿಕೊಳ್ಳಲು ಎಲ್ಲಾ ದಾಖಲೆಗಳನ್ನು ನೀಡಬೇಕು. ನೀವು ಬ್ಯಾಂಕ್ ನಲ್ಲಿ ಮಾತ್ರವಲ್ಲದೆ ನಿಮ್ಮ ಹತ್ತಿರದ ಸಿ ಎಸ್ ಸಿ ಕೇಂದ್ರಗಳಲ್ಲಿಯೂ ಕೂಡ ಕೆ ಸಿ ಸಿ ಫಾರಂ ಭರ್ತಿ ಮಾಡಬಹುದು. ನೀವು ಅರ್ಜಿ ಸಲ್ಲಿಸಿದ ನಂತರ ಎಲ್ಲಾ ದಾಖಲೆಗಳು ಸರಿಯಾಗಿದ್ದರೆ ಕೇವಲ 15 ದಿನಗಳಲ್ಲಿ ಕಿಸಾನ್ ಕಾರ್ಡ್ ಪಡೆಯಬಹುದು.

ರೂಪೇ (Rupee Card) ಕಾರ್ಡ್ ವ್ಯವಸ್ಥೆ

ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮದಿಂದ ಆರಂಭವಾಗಿರುವ ಭಾರತೀಯ ದೇಶಿಯ ಕಾರ್ಡ್ rupee ಪ್ರಯೋಜನ ಪಡೆದು ಕೊಳ್ಳಬಹುದು. ಎಟಿಎಂ ಸಕ್ರಿಯಗೊಳಿಸಿದ ರೂಪೇ ಕಾರ್ಡ್ ಹಾಗೂ ಒಂದು ಟೈಮ್ ಡಾಕ್ಯೂಮೆಂಟೇಶನ್ ಸೌಲಭ್ಯ ನಿಮಗೆ ಸಿಗುತ್ತದೆ. ಹಾಗಾಗಿ ಸರ್ಕಾರದಿಂದ ಬರುವ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ತಪ್ಪದೆ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಮಾಡಿಸಿ.

Best News in KannadafarmersGovernmentIndian farmerKannada Trending Newskisan credit cardPost office Scheme