Tirupati Temple: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೆಚ್ಚುತ್ತಿರುವ ಭಕ್ತರು: ಜನರಿಗೆ ಉಳಿದುಕೊಳ್ಳಲು ಅನುಕೂಲ ಮಾಡಿಕೊಡಲು ಮಾಸ್ಟರ್ ಪ್ಲಾನ್ ಮಾಡಿದ ಟಿಟಿಡಿ ಸಂಸ್ಥೆ! ಏನು ಗೊತ್ತಾ?

Tirupati Temple: ಬಹಳ ದೂರದ ಊರುಗಳಿಂದ ಆಂಧ್ರಪ್ರದೇಶದಲ್ಲಿರುವ (Andhra Pradesh)  ಜಗತ್ ವಿಖ್ಯಾತ ದಿವಾಲಯಗಳಲ್ಲಿ ಒಂದಾಗಿರುವ ತಿರುಪತಿ ತಿಮ್ಮಪ್ಪನ (Tirupati Timmappa) ದರ್ಶನಕ್ಕೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಪ್ರತಿದಿನ ಲಕ್ಷಾಂತರ ಜನ ಬಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಳ್ಳುತ್ತಾರೆ. ದಹ ಸಂದರ್ಭದಲ್ಲಿ ಬರುವ ಭಕ್ತಾದಿಗಳಿಗೆ (Devotees) ತೊಂದರೆಯಾಗದೆ ಇರುವ ರೀತಿಯಲ್ಲಿ ಅವರಿಗೆ ಅನುಕೂಲ ಮಾಡಿಕೊಡುವುದು ಕೂಡ ಟಿಟಿಡಿ ಆಡಳಿತ ಮಂಡಳಿಗೆ ದೊಡ್ಡ ಸವಾಲೇ ಸರಿ. ಇದನ್ನೂ ಓದಿ: Real Story: ಆತ ಆರು ವರ್ಷಗಳ ಕಾಲ ತಾಯಿಯ ಶವವನ್ನು ಹಾಗೆ ಇಟ್ಟುಕೊಂಡು ಅದರ ಜೊತೆಯೇ ವಾಸಿಸಿದ್ದ; ಅಸಲಿ ಕಾರಣ ತಿಳಿದ ಪೋಲಿಸರು ಬೆಚ್ಚಿಬಿದ್ದರು: ಎಂಥ ಕಠೋರ ಸತ್ಯ ಹೊರಹಾಕಿದ್ದ ಮಗ!

ಹೌದು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೇವಲ ವಿಶೇಷ ಸಂದರ್ಭಗಳಲ್ಲಿ ಮಾತ್ರವಲ್ಲದೇ ಸಾಮಾನ್ಯ ದಿನಗಳಲ್ಲಿಯೂ ಕೂಡ ತಿರುಪತಿ ದೇವಸ್ಥಾನ ಭಕ್ತಾದಿಗಳಿಂದ ತುಂಬಿ ತುಳುಕುತ್ತದೆ. ಇಂಥ ಸಂದರ್ಭದಲ್ಲಿ ಭಕ್ತಾದಿಗಳಿಗೆ ತಂಗಲು ವ್ಯವಸ್ಥೆ ಮಾಡಿಕೊಡುವುದು ಕೂಡ ಬಹಳ ಮುಖ್ಯ. ಅದಕ್ಕಾಗಿ ಈಗ ತಿರುಪತಿ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಉಳಿದುಕೊಳ್ಳಲು ತಾತ್ಕಾಲಿಕ ಮೊಬೈಲ್ ಕಂಟೇನರ್ (Mobile Container) ವ್ಯವಸ್ಥೆ ಮಾಡಲಾಗಿದೆ.

ಏನಿದು ಮೊಬೈಲ್ ಕಂಟೇನರ್?

ತಿರುಪತಿ ದೇವಸ್ಥಾನಕ್ಕೆ ವಿಶಾಖಪಟ್ಟಣದ ಮೂರ್ತಿ ಎನ್ನುವವರು ಈ ಕಂಟೇನರ್ ಧಾನವಾಗಿ ನೀಡಿದ್ದಾರೆ ಇದರಿಂದ ಎಲ್ಲಿಗೆ ಬರುವ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಂಗಲು ಸಹಾಯವಾಗುತ್ತದೆ. ಈ ಮೊಬೈಲ್ ಕಂಟೇನರ್ ಮಹಡಿ ಮಂಚಗಳನ್ನು (Bunker) ಹೊಂದಿರುತ್ತದೆ ಕೆಳಮುಂಚದಲ್ಲಿ ಹಾಗೂ ಮೇಲ್ಭಾಗದಲ್ಲಿ ತಲಾ ಇಬ್ಬರು ಮಲಗಿಕೊಳ್ಳುವ ವ್ಯವಸ್ಥೆ ಇರುತ್ತದೆ. ಹೊರ ಭಾಗದಿಂದ ಚಿಕ್ಕ ಪೆಟ್ಟಿಗೆಯಂತೆ ಈ ಮೊಬೈಲ್ ಕಂಟೇನರ್ ಕಾಣಿಸುತ್ತದೆ. ಇದರಲ್ಲಿ ಭಕ್ತಾದಿಗಳಿಗೆ ಅನುಕೂಲವಾಗಲು ಫ್ಯಾನ್ ಹಾಗೂ ಎಸಿ ಸೌಲಭ್ಯವು ಇರುತ್ತದೆ.

ಇತ್ತೀಚಿಗೆ ಟಿಟಿಡಿ ಅಧ್ಯಕ್ಷರಾಗಿರುವ ವೈವಿ ಸುಬಾ ರೆಡ್ಡಿ ಹಾಗೂ ಇವಿಒ ಧರ್ಮರೆಡ್ಡಿ ಈ ಮೊಬೈಲ್ ಕಂಟೇನರ್ ಗಳನ್ನು ಉದ್ಘಾಟಿಸಿದ್ದಾರೆ. ಸದ್ಯ ತಿರುಪತಿ ದೇವಸ್ಥಾನದಲ್ಲಿ ಎರಡು ಮೊಬೈಲ್ ಕಂಟೇನರ್ ಅಳವಡಿಸಲಾಗಿದೆ. ಇದರಲ್ಲಿ ಒಂದನ್ನು ಟಿಟಿಡಿ ಸಾರಿಗೆ ಸಿಬ್ಬಂದಿಗಳಿಗಾಗಿ ಹಾಗೂ ಇನ್ನೊಂದು ಭಕ್ತಾದಿಗಳಿಗಾಗಿ ಮೀಸಲು ಇಡಲಾಗಿದೆ. ಹೆಚ್ಚು ಭಕ್ತಾದಿಗಳು ಇರುವ ಸ್ಥಳದಲ್ಲಿ ಈ ಕಂಟೇನರ್ ನಿರ್ಮಾಣ ಮಾಡಲಾಗುವುದು ಇದರಿಂದ ಭಕ್ತಾದಿಗಳು ತಾತ್ಕಾಲಿಕವಾಗಿ ವಿಶ್ರಮಿಸಿಕೊಳ್ಳಬಹುದಾಗಿದೆ. ಇದನ್ನೂ ಓದಿ: Best 5 Cars: ದೇಶದ ಆಟೋ ಮಾರುಕಟ್ಟೆಯನ್ನು ಆಳಲು ಬಂದಿರುವ ಬೆಸ್ಟ್ 5 ಕಾರುಗಳು ಇವು; ನೋಡಿದ್ರೆ ಫಿದಾ ಆಗ್ತೀರಾ!

12 zodiac signsAstrologyKannada NewsLive News KannadaTirupati Darshanamtirupati newsTirupati templeTirupati timmappatirupati tirumalatirupati venkateshwaraಜ್ಯೋತಿಷ್ಯಾಸ್ತ್ರ