Relationship: ಮದುವೆಯಾದ ಗಂಡಸರಿಗೆ ತಮ್ಮ ಹೆಂಡತಿಗಿಂತ ಬೇರೆ ಹೆಂಗಸರೇ ಸುಂದರವಾಗಿ ಕಾಣಿಸುತ್ತಾರಂತೆ ಯಾಕೆ ಗೊತ್ತಾ? ಇದರ ಹಿಂದೆ ಕೂಡ ಇದೆ ನೋಡಿ ಒಂದು ಲಾಜಿಕ್!

Relationship: ಗಂಡಿರಲಿ ಅಥವಾ ಹೆಣ್ಣಿರಲಿ ಮದುವೆಯಾದ ನಂತರ ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಮದುವೆಯಾದ ನಂತರ ಸಂಗಾತಿ ಇಬ್ಬರೂ ಒಬ್ಬರನ್ನ ಒಬ್ಬರು ಹೊಂದಿಕೊಂಡು ಅರ್ಥ ಮಾಡಿಕೊಂಡು ಜೀವನ ನಡೆಸಬೇಕು. ಕೆಲವೊಮ್ಮೆ ಗಂಡ ಹೇಳಿದ್ದು ಹೆಂಡತಿಗೆ, ಹೆಂಡತಿ ಹೇಳಿದ್ದು ಗಂಡನಿಗೆ ಅರ್ಥವಾಗದೆ ಇರಬಹುದು ಅಥವಾ ಹೇಳಿರುವ ವಿಷಯ ಇಷ್ಟವಾಗದೆ ಇರಬಹುದು. ಅಂತಹ ಸಂದರ್ಭದಲ್ಲಿ ಸಂಬಂಧದಲ್ಲಿ (Relationship) ಬಿರುಕು ಕೂಡ ಮೂಡುತ್ತದೆ. ಇನ್ನು ಈ ಸಮಯದಲ್ಲಿ ಗಂಡಸರಿಗೆ ತಮ್ಮ ಹೆಂಡತಿಗಿಂತಲೂ ಬೇರೆಯವರ ಹೆಂಡತಿ ಒಳ್ಳೆಯವಳು ನೋಡಲು ಚೆನ್ನಾಗಿದ್ದಾಳೆ ಅರ್ಥಮಾಡಿಕೊಳ್ಳುತ್ತಾಳೆ ಎನ್ನುವಂತಹ ಭಾವನೆ ಬರಲು ಆರಂಭವಾಗುತ್ತದೆ. ಹಾಗಾದ್ರೆ ಯಾವೆಲ್ಲಾ ಸಂದರ್ಭದಲ್ಲಿ ಗಂಡಸರಿಗೆ ತಮ್ಮ ಹೆಂಡತಿಗಿಂತ ಬೇರೆ ಹುಡುಗಿಯರು ಇಷ್ಟವಾಗುತ್ತಾ ಹೋಗುತ್ತಾಳೆ ಗೊತ್ತಾ ಇಲ್ಲಿದೆ ನೋಡಿ ಕಾರಣ!

ಸ್ವಾತಂತ್ರ್ಯ ಇಲ್ಲದೆ ಇರುವುದು

ಮದುವೆಯಾಗುವ ಮೊದಲು ಗಂಡಾಗಲಿ ಹೆಣ್ಣಾಗಲಿ ತಮ್ಮ ತಂದೆ ತಾಯಿಯರ ಜೊತೆಗೆ ಅಥವಾ ಸ್ನೇಹಿತರ ಜೊತೆಗೆ ಬಹಳ ನಿರ್ಭೀತಿಯಿಂದ ನಿರ್ಬಂಧ ವಿಲ್ಲದೆ ಬದುಕುತ್ತಿರುತ್ತಾರೆ ಆದರೆ ಮದುವೆಯಾದ ಮೇಲೆ ಈ ಸ್ವಾತಂತ್ರ ಇಲ್ಲವಾಗಿದೆ ಎಂದು ಸಾಕಷ್ಟು ಬಾರಿ ಅನಿಸಲು ಶುರುವಾಗುತ್ತದೆ. ಇಂತಹ ಸಂದರ್ಭದಲ್ಲಿ ತನ್ನ ಹೆಂಡತಿಗಿಂತಲೂ ಬೇರೆ ಮಹಿಳೆಯರು ಹೆಚ್ಚು ಉತ್ತಮವಾಗಿದ್ದಾರೆ ಎನ್ನಿಸಲು ಶುರುವಾಗುತ್ತದೆ.

ಆಸೆ ಈಡೇರದೆ ಇದ್ದಾಗ:

 ಪ್ರತಿಯೊಬ್ಬ ಗಂಡಸಿನ ಜೀವನದಲ್ಲಿ ಬರುವ ಹೊಸ ಹುಡುಗಿ ಆಗಿರಬೇಕು ಹೀಗಿರಬೇಕು ಎಂದು ಅವರು ಕೂಡ ಹೆಣ್ಣು ಮಕ್ಕಳಂತೆ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಆದರೆ ನಿಜ ಜೀವನದಲ್ಲಿ ಅದೆಷ್ಟು ಬಾರಿ ಅಂದುಕೊಂಡಿದ್ದು ಆಗುವುದೇ ಇಲ್ಲ ತನ್ನ ಸಂಗತಿಯ ಜೊತೆಗೆ ಯಾವಾಗ ತೃಪ್ತಿಯಿಂದ ತಾನು ಇಲ್ಲ ಎಂದು ಗಂಡಸಿಗೆ ಅನ್ನಿಸಲು ಶುರುವಾಗುತ್ತದೆ.

ಹೆಂಡತಿ ಜೊತೆಗಿನ ಜಗಳ:

ಪುರುಷನಿಗೆ ಹೆಚ್ಚು ಕಿರಿಕಿರಿ ಜಗಳ ಇಷ್ಟವಾಗುವುದಿಲ್ಲ ಇಂತಹ ಸಂದರ್ಭದಲ್ಲಿ ಯಾವುದಾದರೂ ಪುರುಷನಿಗೆ ಆತನ ಹೆಂಡತಿ ದಿನವೂ ಬಯ್ಯುವುದು ಜಗಳ ಮಾಡುವುದು ಮಾಡಿದರೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಗಂಡನನ್ನು ಕಳೆದುಕೊಂಡ ವಿಧವೆ ಹೆಂಗಸಿನ ಬಗ್ಗೆ ಹೆಚ್ಚು ಇಷ್ಟವಾಗುತ್ತದೆ.

ಹೆಂಡತಿ ಕಾಳಜಿ ವಹಿಸದೆ ಇದ್ದಾಗ:

ಗಂಡಸಿಗೆ ತನ್ನ ಹೆಂಡತಿ ತನ್ನ ಇಷ್ಟ ಕಷ್ಟಗಳನ್ನು ನೋಡಿಕೊಳ್ಳಬೇಕು ಎಲ್ಲದರಲ್ಲಿಯೂ ಸಮಾನವಾಗಿ ಭಾಗಿಯಾಗಬೇಕು ಎನ್ನುವ ಆಸೆ ಇರುತ್ತದೆ. ಆತನ ಮನಸ್ಸಿನ ಪ್ರತಿಯೊಂದು ಭಾವನೆಯನ್ನು ಅರ್ಥಮಾಡಿಕೊಳ್ಳಬೇಕು ಎನ್ನುವ ಆಸೆಯು ಇರುತ್ತದೆ ಹೆಂಡತಿ ಇಂತಹ ವಿಷಯಗಳನ್ನು ಈಡೇರಿಸುವಲ್ಲಿ ಸೋತಾಗ ಅವನಿಗೆ ಬೇರೆಯವರು ಇಷ್ಟವಾಗಲು ಆರಂಭವಾಗುತ್ತದೆ.

ಸಂಸಾರದಲ್ಲಿ ಗಂಡಿರಲಿ ಅಥವಾ ಹೆಣ್ಣಿರಲಿ ಇಬ್ಬರೂ ಒಬ್ಬರಿಗೆ ಒಬ್ಬರು ಸಹಕರಿಸುತ್ತಾ ಅರ್ಥ ಮಾಡಿಕೊಳ್ಳುತ್ತಾ ಪ್ರೀತಿಯಿಂದ ಇದ್ದಾಗ ಮಾತ್ರ ಆ ಸಂಬಂಧ ಉಳಿಯುತ್ತದೆ ಇಲ್ಲವಾದರೆ ದೃಷ್ಟಿ ಬೇರೆ ಕಡೆಗೆ ಹಾಯುವುದು ಸಹಜ.

Best News in KannadaKannada Trending NewsLive News Kannadalove marriagemarriagemarriage storyNews in KannadaShe cheated on him after marriage