Mysore: ಮಗಳನ್ನು ಕೊಟ್ಟು ಮದುವೆ ಮಾಡಲಿಲ್ಲ ಎನ್ನುವ ಕಾರಣಕ್ಕೆ ಒಂಟಿ ಸಲಗದಂತೆ ತೋಟಕ್ಕೆ ನುಗ್ಗಿ 850 ಕ್ಕೂ ಹೆಚ್ಚು ಅಡಿಕೆ ಗಿಡ ನಾಶ ಮಾಡಿದ ಭೂಪ: ಆಗಿರುವ ನಷ್ಟ ಎಷ್ಟು ಗೊತ್ತೇ?

Mysore: ಮಗಳನ್ನ ಕೊಟ್ಟು ಮದುವೆ ಮಾಡು ಅಂತ ಕೇಳಿದ್ದಕ್ಕೆ ಅಪ್ಪ ಒಪ್ಪಿಕೊಂಡು ನಿಶ್ಚಿತಾರ್ಥವನ್ನು ಮಾಡಿದ್ದ. ಆದರೆ ಬರ್ತಾ ಬರ್ತಾ ಆ ವ್ಯಕ್ತಿಯ ಕ್ಯಾರೆಕ್ಟರ್ ಸರಿ ಇಲ್ಲ ಎನ್ನುವುದು  ಹುಡುಗಿಗೆ ಗೊತ್ತಾಗುತ್ತದೆ ಹಾಗಾಗಿ ಆಕೆ ಮದುವೆ ನಿರಾಕರಿಸುತ್ತಾಳೆ. ಇದರಿಂದ ಕೋಪಗೊಂಡ ಮದುವೆಯಾಗಬೇಕು ಎಂದಿದ್ದ ವ್ಯಕ್ತಿ ಮಾಡಿದ್ದೇನು ಗೊತ್ತಾ? ನಿಜಕ್ಕೂ ಇಂಥವರು ಇರ್ತಾರಾ ಅಂತ ಒಂದು ಕ್ಷಣ ಅನ್ನಿಸೋದೆ ಇರೋದಿಲ್ಲ.Kisan Credit Card: ಈ ಒಂದು ಕಾರ್ಡ್ ನಿಮ್ಮ ಬಳಿ ಇದ್ದರೆ ಸರ್ಕಾರ ನೀಡುವ ಸಬ್ಸಿಡಿ, ಸಾಲ ಎಲ್ಲವೂ ಸಿಗುತ್ತದೆ, ಇಲ್ಲದಿದ್ದರೆ ನಷ್ಟ ಆಗುತ್ತದೆ: ಕೂಡಲೇ ಬ್ಯಾಂಕ್ನಿಂದ ಈ ಕಾರ್ಡ್ ಪಡೆಯಿರಿ!

ಮೈಸೂರಿನಲ್ಲಿ ನಡೆದ ಘಟನೆ:

ಘಟನೆಯ ಹಿನ್ನೆಲೆಯನ್ನು ನೋಡುವುದಾದರೆ ಮೈಸೂರಿನ ಹುಣಸೂರು ತಾಲೂಕಿನ ಮುನುಗನಹಳ್ಳಿ ಎನ್ನುವ ಗ್ರಾಮ ಒಂದರಲ್ಲಿ ನಡೆದ ಘಟನೆ ಇದು. ವೆಂಕಟೇಶ ಎನ್ನುವ ರೈತ ತನ್ನ ಮಗಳು ಸಿಂಚನಾಳನ್ನು ಅಶೋಕ್ ಎಂಬ ವ್ಯಕ್ತಿಯ ಜೊತೆಗೆ ಮದುವೆ ನಿಶ್ಚಿಯ ಮಾಡಿದ. ಆದ್ರೆ ಸಿಂಚನಳ್ಳಿಗೆ ಅಶೋಕ್ ನ ವ್ಯಕ್ತಿತ್ವ ಸರಿ ಇಲ್ಲ ಎಂಬುದು ಅರಿವಾಗಿ ಮದುವೆಯನ್ನು ನಿರಾಕರಿಸಿದ್ದಾಳೆ. ಇದರಿಂದ ಅಶೋಕ ಆ ಮನೆಯವರ ಮೇಲೆ ದ್ವೇಷ ಬೆಳೆಸಿಕೊಂಡಿದ್ದ. ದ್ವೇಷದಿಂದ ಆತ ಮಾಡಿದ್ದೇನೆ ಗೊತ್ತಾ?

ನಾಲ್ಕು ದಿನಗಳ ಹಿಂದೆ ವೆಂಕಟೇಶ್ ಅವರ ಜಮೀನಿನಲ್ಲಿ ಮಾಡಲಾಗಿದ್ದ ಶುಂಠಿ ಬೆಳೆಯನ್ನು ಕತ್ತರಿಸಿ ನಾಶ ಮಾಡಿದ ಇದೀಗ ವೆಂಕಟೇಶ ಎಂಬುವರಿಗೆ ಸೇರಿದ ಮೂರು ಎಕರೆ ಜಮೀನಿನಲ್ಲಿ ಹಾಕಿದ ಅಡಿಕೆ ಬೆಳೆಯನ್ನು ಕೂಡ ನಾಶ ಮಾಡಿದ್ದಾನೆ ಎಂದು ವೆಂಕಟೇಶ ಅವರು ಗಂಭೀರ ಆರೋಪ ಮಾಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಫಸಲು ಕೈಗೆ ಬರುತ್ತಿತ್ತು ಅಂತಹ ಅಡಿಕೆ ಗಿಡಗಳನ್ನು ಬುಧವಾರ ಮಧ್ಯರಾತ್ರಿ ಅಶೋಕ್ ಹಾಗೂ ಆತನ ಸ್ನೇಹಿತರು ಬಂದು ಅಡಿಕೆ ಗಿಡಗಳನ್ನು ನಾಶ ಮಾಡಿದ್ದಾರೆ ಎರಡು ಎಕರೆ ಅಡಿಕೆ ಗಿಡ ನೆಲಕಚ್ಚಿದೆ ಎಂದು ವೆಂಕಟೇಶ್ ಆರೋಪಿಸಿದ್ದಾರೆ. ಇದನ್ನೂ ಓದಿ: Tirupati Temple: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೆಚ್ಚುತ್ತಿರುವ ಭಕ್ತರು: ಜನರಿಗೆ ಉಳಿದುಕೊಳ್ಳಲು ಅನುಕೂಲ ಮಾಡಿಕೊಡಲು ಮಾಸ್ಟರ್ ಪ್ಲಾನ್ ಮಾಡಿದ ಟಿಟಿಡಿ ಸಂಸ್ಥೆ! ಏನು ಗೊತ್ತಾ?

ಎಲ್ಲವೂ ಸರಿಯಾಗಿ ನಡೆದಿದ್ದರೆ ಕಾರ್ತಿಕ ಮಾಸದಲ್ಲಿ ಸಿಂಚನ ಹಾಗೂ ಅಶೋಕ್ ಮದುವೆ ನಡೆಯಬೇಕಿತ್ತು ಆದರೆ ಅಶೋಕ ವರ್ತನೆಯಲ್ಲಿ ದಿನದಿಂದ ದಿನಕ್ಕೆ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿದ ಸಿಂಚನ ಅಪ್ಪನ ಬಳಿ ತನಗೆ ಅಶೋಕ್ ಜೊತೆಗೆ ಮದುವೆ ಬೇಡ ಎಂದು ನಿರಾಕರಿಸುತ್ತಾಳೆ. ಇದಾದ ಬಳಿಕ ವೆಂಕಟೇಶ್ ಕೂಡ ಗೌಪ್ಯವಾಗಿ ಅಶೋಕ್ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಅಶೋಕ ನಡವಳಿಕೆ ಸರಿ ಇಲ್ಲ ಎಂಬುದು ವೆಂಕಟೇಶ ಅವರಿಗೂ ಗೊತ್ತಾಗಿದೆ. ಇದೇ ಕಾರಣಕ್ಕೆ ಮದುವೆಯನ್ನು ನಿಲ್ಲಿಸಲಾಗಿತ್ತು. ಇದರಿಂದ ಕೋಪಗೊಂಡ ಅಶೋಕ್ ತನ್ನ ಎಲ್ಲಾ ಬೆಳೆಯನ್ನು ಸರ್ವನಾಶ ಮಾಡಿದ್ದಾನೆ ನಮ್ಮ ಕುಟುಂಬಕ್ಕೆ ರಕ್ಷಣೆ ಇಲ್ಲದಂತಾಗಿದೆ ಎಂದು ವೆಂಕಟೇಶ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಅಶೋಕ್ ವಿರುದ್ಧ ತನಿಖೆ ನಡೆಸುತ್ತಿದ್ದಾರೆ.

Best News in KannadaKannada Trending NewsLive News KannadamarriageNews in Kannada