Tirupati: ಬರಗಾಲದಲ್ಲೂ ತಿರುಪತಿಯಲ್ಲಿ ನಡೆದ ಪವಾಡ;  ತಿರುಪತಿಯಲ್ಲಿ ತಿಮ್ಮಪ್ಪ ಸ್ವತ: ನೆಲೆಸಿದ್ದಾನೆ ಎನ್ನುವುದಕ್ಕೆ  ಇದಕ್ಕಿಂತ ಬೇರೇನು ಬೇಕು?

Tirupati: ಇಂದು ತಿರುಪತಿ ಸಕಲ ವೈಭೋಗದಿಂದ ಕೂಡಿದೆ. ತಿರುಪತಿ ತಿರುಮಲನ ದರ್ಶನಕ್ಕೆ ದಿನಕ್ಕೆ ಲಕ್ಷಾಂತರ ಜನರು ಬರುತ್ತಾರೆ. ಭೂಲೋಕದ ಸ್ವರ್ಗ ಭೂಲೋಕದ ವೈಕುಂಠದಲ್ಲಿ ವೆಂಕಟೇಶ್ವರನ ಜನರಿಗೆ ನೀಡಿದ ಪರೀಕ್ಷೆಯ ಬಗ್ಗೆ ನಿಮಗೆ ಗೊತ್ತಾ? ಅ ಮಧ್ಯರಾತ್ರಿ ದೇವಸ್ಥಾನದ ಬಾಗಿಲು ಮುಚ್ಚಿದ್ದರು ಒಳಗಡೆಯಿಂದ ಕಿವಿಗಡಚುವ ರೀತಿಯಲ್ಲಿ ಗಂಟೆ ಬಾರಿಸಿದ್ದು ಯಾರು?

ಇದು 1979ರಲ್ಲಿ ನಡೆದ ಘಟನೆ. ತಿರುಪತಿ ತಿರುಮಲನ ಬೆಟ್ಟದ ಎಲ್ಲಾ ಜಲಧಾರೆಗಳು ಕೂಡ ಭಕ್ತಿ ಹೋಗಿದ್ದವು. ತಿರುಮಲದಲ್ಲಿ ಹೇಳಿಕೊಳ್ಳಲಾಗದಷ್ಟು ದೊಡ್ಡ ಬರಗಾಲ. ಭಕ್ತಾದಿಗಳು ದರ್ಶನಕ್ಕೆ ಬಂದರೆ ಕುಡಿಯಲು ನೀರಿಲ್ಲ ಎನ್ನುವಷ್ಟರ ಬರಗಾಲ. ಇದೇ ರೀತಿ ಮಳೆ ಬರದೇ ಬರಗಾಲ ಉಂಟಾದರೆ ವೆಂಕಟೇಶ್ವರನ ಅಭಿಷೇಕಕ್ಕೂ ಕೂಡ ನೀರಿಲ್ಲದಂತಾಗುತ್ತದೆ ಹಾಗಾಗಿ ಸ್ವಲ್ಪ ದಿನ ಭಕ್ತಾದಿಗಳನ್ನು ದೇವಸ್ಥಾನಕ್ಕೆ ಬರುವುದೇ ಬೇಡ ಎಂದು ಹೇಳುವುದು ಸೂಕ್ತವೇನೋ ಎಂದು ಟಿಟಿಡಿ ಚರ್ಚೆ ಮಾಡಿತ್ತು. ಆದರೆ ನಮ್ಮ ಕಷ್ಟ ದೇವರಿಗೂ ಗೊತ್ತಲ್ವಾ ಆತನೇ ದರ್ಶನಕ್ಕೆ ಭಕ್ತಾದಿಗಳಿಗೆ ಬರಬೇಡಿ ಎನ್ನುವುದು ಹೇಗೆ? ಸದ್ಯಕ್ಕೆ ಆ ತೀರ್ಮಾನ ಕೈಗೊಳ್ಳುವುದು ಬೇಡ ಎಂದುಕೊಂಡ ಸಮಿತಿ, ವರುಣ ಯಾಗ ಮಾಡಲು ಮುಂದಾಗುತ್ತೆ. ಇದುಕ್ಕೆ ಸಂಬಂಧಪಟ್ಟ ಒಬ್ಬ ವಿದ್ವಾನರನ್ನು ಹುಡುಕಿಕೊಂಡು ಸಮಿತಿಯ ಕೆಲವು ಸದಸ್ಯರು ಹೋಗುತ್ತಾರೆ. ವರುಣ ಯಾಗ ಮಾಡಲು ಒಬ್ಬ ವಿರುದ್ಧ ವಿದ್ವಾನರು ಸೂಚಿಸುತ್ತಾರೆ ಆದರೆ ಆಯಾಗವನ್ನು ಬಂದು ಮಾಡಲು ಅವರ ಬಳಿ ಶಕ್ತಿ ಇರುವುದಿಲ್ಲ ಆಗ ಅವರಿಗೆ 98 ವರ್ಷ ವಯಸ್ಸಾಗಿತ್ತು.

ವಿದ್ವಾನರು ಮತ್ತೊಬ್ಬ ಪಂಡಿತರನ್ನು ಸೂಚಿಸುತ್ತಾರೆ. ಸಮಿತಿಯ ಸದಸ್ಯರು ಆ ಪಂಡಿತರನ್ನು ಅರಸಿ ಹೊರಡುತ್ತಾರೆ. ಕೊನೆಗೂ ಸಿಕ್ಕ ಪಂಡಿತರು ಯಾಗಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಮುಹೂರ್ತವನ್ನು ಕೂಡ ಇಟ್ಟುಕೊಡುತ್ತಾರೆ. ಆದ್ರೆ ದುರದೃಷ್ಟವಶಾತ್ ಆ ಪಂಡಿತರು ಇಟ್ಟ ಒಂದೆರಡು ಮುಹೂರ್ತಗಳು ಕೂಡ ಅಡಚಣೆಯಿಂದ ಮತ್ತೆ ಮತ್ತೆ ಮುಂದಕ್ಕೆ ಹೋಗುತ್ತವೆ ಹೊರತು ವರುಣ ಯಾಗವನ್ನು ಮಾಡಲು ಸಾಧ್ಯವಾಗುವುದೇ ಇಲ್ಲ. ಇದರಿಂದ ನೊಂದ ಪಂಡಿತರು ಸ್ವತಃ ತಾವೇ ವೆಂಕಟೇಶ್ವರನ ಬಳಿಕೆ ಹೋಗಿ. ಇಂಥ ಪರೀಕ್ಷೆಯನ್ನು ಯಾಕೆ ಒಡ್ಡುತ್ತಿದ್ದೀಯ ಸ್ವಾಮಿ, ಭಕ್ತಾದಿಗಳನ್ನು ಯಾಕಿಷ್ಟು ಸಂಕಟಕ್ಕೆ ತಳ್ಳುತ್ತಿದ್ದಿಲ್ಲ ನಾನು ಇಟ್ಟಿರುವ ಮುಹೂರ್ತಗಳಲ್ಲಿ ಅಷ್ಟು ಅಡಚಣೆ ಯಾಕೆ? ನೀನೇ ಕಾಪಾಡಬೇಕು ಎಂದು ಕೈ ಮುಗಿದು ಭಕ್ತಿಯಿಂದ ಬೇಡಿಕೊಳ್ಳುತ್ತಾರೆ.

ಅಂದೇ ನಡೆದಿತ್ತು ಪವಾಡ:

ತಿರುಪತಿ ತಿರುಮಲನ ಪೂಜೆ ಮುಗಿಸಿ ಬಾಗಿಲು ಹಾಕಿ ಬಂದರೆ ಮರುದಿನ ಆತನ ಪೂಜೆ ಮಾಡುವವರೆಗೆ ದೇವಾಲಯದ ಗರ್ಭಗುಡಿಯ ಬಾಗಿಲನ್ನು ತೆರೆಯುವುದಿಲ್ಲ ಇದು ಅಲ್ಲಿನ ಪದ್ಧತಿ. ಆದರೆ ಆ ದಿನ ಮಾತ್ರ ದೇವಸ್ಥಾನದ ಒಳಗಡೆಯ ಘಂಟೆ ಶಬ್ದ ಇಡೀ ತಿರುಮಲವನ್ನ ಆವರಿಸಿತ್ತು. ಒಳಗಡೆಯಿಂದ ಗಂಟೆ ಬಾರಿಸಿದವರು ಯಾರು ಎಂಬುದು ಯಾರಿಗೂ ಗೊತ್ತಿಲ್ಲ ಹಾಗಂತ ಬಾಗಿಲು ತೆರೆದು ನೋಡಲು ಯಾರಿಗೂ ಧೈರ್ಯವಿರಲಿಲ್ಲ. ಬೆಳಕು ಹರಿಯುವವರೆಗೂ ಕಾದು ಬೆಳಿಗ್ಗೆ ಎದ್ದು ದೇವಾಲಯದ ಬಾಗಿಲು ತೆಗೆದು ಒಳಗೆ ನೋಡಿದರೆ ಯಾರು ಇರಲಿಲ್ಲ. ಕೊನೆಗೆ ಸ್ಥಳದಲ್ಲಿ ಇದ್ದ ಪಂಡಿತರು ಇದು ವರುಣ ಯಾಕಕ್ಕೆ ದೇವರೇ ನೀಡಿರುವ ಸೂಚನೆ ಎಂದು ಭಾವಿಸಿದೆ ಯಾಗವನ್ನು ಆರಂಭಿಸುತ್ತಾರೆ. ಯಾವುದೇ ತೊಂದರೆ ಆಗದೆ ಯಾಗ ಸಂಪನ್ನವಾಗುತ್ತದೆ.

ಮಂತ್ರಕ್ಕೆ ಮಾವಿನ ಕಾಯಿ ಉದುರುವುದಿಲ್ಲ ಎಂದ ಜನ:

ಯಾಗ ಸಂಪನ್ವಾಗಿದ್ದು ಆಯ್ತು ಸಾಕಷ್ಟು ಹಣ ವೆಚ್ಚ ಮಾಡಿ ಬಹಳ ದೊಡ್ಡ ಪ್ರಮಾಣದಲ್ಲಿ ತಿರುಪತಿ ತಿರುಮಲನಿಗೆ ಪೂಜೆ ಮಾಡಿದ್ದು ಆಯ್ತು. ಆದರೆ ಮಳೆ ಬರುವ ಸೂಚನೆ ಮಾತ್ರ ಕಾಣಿಸುತ್ತಿರಲಿಲ್ಲ. ಪಂಡಿತರು ವೆಂಕಟೇಶ್ವರನ ಮೊರೆ ಹೋಗುತ್ತಾರೆ. ನಾವು ಮಾಡಿರುವ ಯಾಗದಲ್ಲಿ ಏನಾದರೂ ಲೋಪದೋಷಗಳು ಆಗಿವೆಯೇ ನಿನಗೆ ಇನ್ನೂ ತೃಪ್ತಿ ಆಗಿಲ್ಲವೇ ಈಗಲಾದರೂ ಮಳೆ ಬರುವಂತೆ ಮಾಡು ದೇವ ಎಂದು ಪ್ರಾರ್ಥಿಸುತ್ತಾರೆ. ಆಗಲೇ ಸಾಕಷ್ಟು ಮಂದಿ ಮಂತ್ರಕ್ಕೆಲ್ಲ ಮಾವಿನಕಾಯಿ ಉದುರುವುದಿಲ್ಲ ಸುಮ್ಮನೆ ಹಣ ಖರ್ಚು ಮಾಡಿದ್ದೆ ಬಂತು ಎಂದು ಮಾತನಾಡಿಕೊಳ್ಳುತ್ತಿದ್ದರು.

ಆದರೆ ಆಶ್ಚರ್ಯ ಎನ್ನುವಂತೆ ಸ್ವಚ್ಛಂದವಾಗಿದ್ದ ಆಕಾಶ ಕಪ್ಪು ಮೋಡಗಳಿಂದ ಸುತ್ತುವರೆದು ಧಾರಾಕಾರ ಕುಂಭ ದ್ರೋಣ ಮಳೆ ಸುರಿದೆ ಬಿಟ್ಟಿತ್ತು. ಇನ್ನೆಂದು ತಿರುಪತಿ ತಿರುಮಲದಲ್ಲಿ ಅಂತಹ ಬರಗಾಲ ಎದುರಾಗಲಿ ಇಲ್ಲ. ವೆಂಕಟೇಶ್ವರನ ಮಹಿಮೆ ಅಲ್ಲದೆ ಮತ್ತೇನು? ಅದೇ 44 ವರ್ಷಗಳ ಹಿಂದಿನ ಈ ಪವಾಡ ಇಂದಿಗೂ ಕೂಡ ಭಕ್ತಾದಿಗಳು ತಿರುಪತಿ ತಿರುಮಲನ ದರ್ಶನಕ್ಕೆ ಬರುವಂತೆ ಮಾಡಿದೆ.

12 zodiac signsHoroscopeKannada NewsLive News KannadaNews in Kannadatirupathitirupathi tirumalaTirupati Darshanamtirupati hillsTirupati templetirupati venkateshwaraಜ್ಯೋತಿಷ್ಯಾಸ್ತ್ರ