Business Idea: 9 to 5 ಜಾಬ್ ಇಷ್ಟವಿಲ್ವಾ ಬಿಟ್ಟುಬಿಡಿ; ಈ ಬ್ಯುಸನೆಸ್ ಶುರುಹಚ್ಕೊಳ್ಳಿ, ತಿಂಗಳಿಗೆ ಗಳಿಸಿ 5೦,೦೦೦ರೂ.ಗೂ ಅಧಿಕ ಹಣ!

Business Idea: ಪ್ರಪಂಚದಲ್ಲಿ ಕರೋನಾ (Covid-19) ನಂತರ ಜನರು ಆಲೋಚನೆ ಮಾಡುವ ವಿಧಾನವೇ ಬದಲಾಗಿದೆ. ಕರೋನಾ ಕಾಲದಲ್ಲಿ ಅದೇಷ್ಟೋ ಕಂಪನಿಗಳು (Company)  ಉದ್ಯೋಗ (Job) ಕಡಿತಗೊಳಿಸಿದವು. ಇದರಿಂದ ಹಲವರು ಕಷ್ಟ ಪಡಬೇಕಾಯಿತು. ಹಲವರು ತಮ್ಮ ಊರಿಗೆ ತೆರಳಿ ಕೃಷಿ ಮಾಡಲು ಆರಂಭಿಸಿದರು. ಇನ್ನು ಕೆಲವರು ಸ್ವಂತ ಉದ್ಯಮ (Own Business)  ಆರಂಭಿಸಿದರು. ನೀವೇನಾದರೂ ಸ್ವಂತ ಉದ್ಯಮ ಶುರು ಮಾಡಬೇಕು. ಆದರೆ ಕೈಯಲ್ಲಿ ಲಕ್ಷಾಂತರ ರೂ.ಗಳು ಇಲ್ಲ ಎನ್ನುವ ಯೋಚನೆ ಕಾಡುತ್ತಿದ್ದರೆ ನೀವು ಚಿಂತೆ ಬಿಡಿ. ಈಗ ನಾವು ಹೇಳುವ ಉದ್ಯಮ ಶುರು ಮಾಡಿ. ಇದು ನೋಡಲು ಸಣ್ಣ ಉದ್ಯಮದಂತೆ ಭಾವಿಸಬಹುದು. ಆದರೆ ನಿಮಗೆ ಲಾಭ ಗ್ಯಾರಂಟಿ. ಇದನ್ನೂ ಓದಿ: Cricket News: ಲಿಟಲ್ ಮಾಸ್ಟರ್ ದಾಖಲೆಯನ್ನೇ ಮುರಿದ ಈ ಆಟಗಾರ; ಯಾರು ಈ ಸ್ಪೋಟಕ ಬ್ಯಾಟ್ಸಮನ್?

ಕಮ್ಮಿ ಹೂಡಿಕೆಯಲ್ಲಿ (Low investment)  ಆರಂಭಿಸುವ ಉದ್ಯಮಗಳಲ್ಲಿ ಕಾರು ತೊಳೆಯುವ (Car Washing) ಉದ್ಯೋಗವು ಒಂದಾಗಿದೆ. ಇದು ನಿಮಗೆ ರಸ್ತೆ ಬದಿಯ ಉದ್ಯೋಗ ಎಂದು ಅನಿಸಬಹುದು. ಆದರೆ ಈ ಉದ್ಯೋಗ ಮಾಡುವುದರಿಂದ ನೀವು ತಿಂಗಳಿಗೆ ಸುಮಾರು 5೦,೦೦೦ ರೂ.ವರೆಗೂ ಗಳಿಸಬಹುದು.

ಉದ್ಯಮ ಪ್ರಾರಂಭ ಮಾಡುವುದು ಹೇಗೆ ಅಂತಿರಾ? (How to start Business)

ಇದಕ್ಕೆ ನೀವು ಕಾರನ್ನು ಸರಿಯಾಗಿ ಕ್ಲೀನ್ ಮಾಡುವ ಯಂತ್ರವನ್ನು ಖರೀದಿಸಬೇಕಾಗುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಸುಮಾರು 1೦,೦೦೦ರೂ.ನಿಂದ 1 ಲಕ್ಷ ರೂ.ವರೆಗಿನ ಯಂತ್ರಗಳು ಇವೆ. ನೀವು ಸಣ್ಣ ಉದ್ಯಮ ಪ್ರಾರಂಭಿಸುವ ಇಚ್ಚೆ ಇದ್ದಲ್ಲಿ ಕಡಿಮೆ ಬೆಲೆಯ ಯಂತ್ರ ಖರೀದಿಸಿ. ಇದಕ್ಕೆ ನೀವು 14  ಸಾವಿರ ರೂ. ಯಂತ್ರ ಖರೀದಿಸಿದರೆ ಸಾಕು. ಅವರು ನಿಮಗೆ ಈ ಬೆಲೆಯಲ್ಲಿ ಎರಡು ಯಂತ್ರಗಳನ್ನು ಕೊಡುತ್ತಾರೆ. ಹೆಚ್ಚುವರಿಗೆ 3೦ ಲೀಟರ್ ವ್ಯಾಕ್ಯೂಮ್ ಕ್ಲೀನರ್ ಖರೀದಿಸಿ. ಇದಕ್ಕೆ ಸುಮಾರು 8-1೦ ಸಾವಿರ ರೂ. ತಗಲುತ್ತದೆ. ಇನ್ನು ಶಾಂಪೂ, ಗ್ಲೌಸ್, ಟೈರ್ ಪಾಲಿಶ್ ಇನ್ನತರೆ ವಸ್ತುಗಳು ಸೇರಿ 2೦೦೦ ರೂ. ಆಗಬಹುದು. ಅಂದರೆ ಸುಮಾರು 25 ಸಾವಿರ ರೂ.ನಲ್ಲಿ ನಿಮಗೆ ಬೇಕಾದ ಎಲ್ಲ ವಸ್ತುಗಳನ್ನು ಖರೀದಿಸಬಹುದು. ಇದನ್ನೂ ಓದಿ: PM Kisan samman Nidhi Yojana: ಸೆ. 3೦ರೊಳಗೆ ಈ ಕೆಲಸ ಮಾಡದೇ ಇದ್ದಲ್ಲಿ ರೈತರ ಖಾತೆಗೆ ಉಚಿತವಾಗಿ ಬರುವ 2,000ರೂ. ಬರುವುದಿಲ್ಲ; ಈಗಲೇ ಈ ಕೆಲಸ ಮಾಡಿ!

ನೀವು ಈ ಉದ್ಯಮ ಶುರು ಮಾಡಲು ಮಾರುಕಟ್ಟೆ ಹತ್ತಿರ ಇರುವ ಪ್ರದೇಶ ಇದ್ದರೆ ಒಳ್ಳೆಯದು. ಯಾಕೆಂದರೆ ಅಲ್ಲಿಗೆ ಹೆಚ್ಚಿನ ಜನರು ಬರುತ್ತಾರೆ. ಅವರು ಅವರ ಕೆಲಸ ಮುಗಿಸಿಕೊಂಡು ಬರುವುದರ ಒಳಗೆ ನೀವು ಕಾರನ್ನು ತೊಳೆದು ವಾಪಸ್ ನೀಡಬಹುದು. ಇದರಿಂದ ಅವರಿಗೆ ಸಮಯದ ಉಳಿತಾಯವಾಗಲಿದೆ. ಹಾಗಾಗಿ ಮಾರುಕಟ್ಟೆಯ ಹತ್ತಿರ ಇರುವ ಪ್ರದೇಶದಲ್ಲಿ ಆರಂಭಿಸುವುದು ಉತ್ತಮ. ಇದರ ಜೊತೆ ಮ್ಯಾಕಾನಿಕ್ ಗೊತ್ತಿರುವ ಸ್ನೇಹಿತರು ನಿಮ್ಮ ಜೊತೆ ಕೈ ಜೋಡಿಸಿದರೆ ಇನ್ನು ಒಳ್ಳೆಯದಾಗುತ್ತದೆ. ಇಲ್ಲವೇ ನೀವೆ ಒಬ್ಬ ಮ್ಯಾಕಾನಿಕ್ ಇಟ್ಟುಕೊಳ್ಳಬೇಕಾಗುತ್ತದೆ.

ಕಾರು ತೊಳೆಯಲು ಸಣ್ಣ ಸಣ್ಣ ಪಟ್ಟಣದಲ್ಲಿ 5೦೦ ರೂ. ಚಾರ್ಜ್ ಮಾಡುತ್ತಾರೆ. ದೊಡ್ಡ ನಗರಗಳಲ್ಲಿ 1 ಸಾವಿರ ರೂ.ನಿಂದ 2 ಸಾವಿರ ರೂ. ನೀಡಬೇಕಾಗುತ್ತದೆ. ಅಲ್ಲದೆ ದೊಡ್ಡ ದೊಡ್ಡ ಕಾರುಗಳಾದರೆ ಹೆಚ್ಚಿನ ದರ ವಿಧಿಸಬಹುದು. ನೀವು ಪ್ರತಿದಿನ 6-8ಕಾರುಗಳನ್ನು ವಾಶ್ ಮಾಡಿದರೆ ನೀವು 2-3ಸಾವಿರ ರೂ. ಗಳಿಸುತ್ತೀರಿ. ಅಂದರೆ ತಿಂಗಳಿಗೆ 5೦ ಸಾವಿರ ರೂ. ಕನಿಷ್ಟ ನೀವು ದುಡಿಯಬಹುದು. ಇದನ್ನೂ ಓದಿ: Kannada entertainment: ಬಿಗ್ ಬಾಸ್ TRP ಮುಂದೆ ಧಾರಾವಾಹಿಗಳು ತಂದುಕೊಡುವ TRP ಲೆಕ್ಕಕ್ಕೆ ಇಲ್ವಾ: ಅರ್ಧದಲ್ಲಿಯೇ ಜನರ ನೆಚ್ಚಿನ ಧಾರಾವಾಹಿಗಳು ಮುಗಿಯುತ್ತಾ? ಇದು ಸರಿನಾ!

Best News in Kannadabusinessbusiness coursebusiness idea 2023Business Ideascar washing Businessjobjob 2023Kannada Trending NewsLive News Kannadamake money