RBI: ಈ ಬ್ಯಾಂಕ್ ಪರವಾನಿಗೆ ರದ್ದು ಗೊಳಿಸಿದ ರಿಸರ್ವ್ ಬ್ಯಾಂಕ್; ಆದ್ರೂ ಗ್ರಾಹಕರಿಗೆ ಸಿಗುತ್ತೆ 5 ಲಕ್ಷ ರೂ.! ಅದು ಹೇಗೆ ಗೊತ್ತಾ?

RBI: ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ಆಗಬೇಕಾದರೂ ಆರ್ಬಿಐ (RBI)ಅನುಮತಿ ಅಗತ್ಯ. ಆರ್ಬಿಐ ಸಹ ಕಾಲಕಾಲಕ್ಕೆ ತನ್ನ ನೀತಿಗಳಲ್ಲಿ ಬದಲಾವಣೆ ಮಾಡುತ್ತ ಇರುತ್ತದೆ. ಬ್ಯಾಂಕ್ನ್ನು ಗ್ರಾಹಕ ಸ್ನೇಹಿಯಾಗಿ ಇಡಲು ಬೇಕಾದ ನಿಯಮಗಳನ್ನು ಜಾರಿಗೆ ತರುತ್ತದೆ. ಇದೀಗ ಆರ್ಬಿಐ ಈ ಒಂದು ಬ್ಯಾಂಕ್ನ ಪರವಾನಿಗೆ ರದ್ದು ಪಡಿಸಿದೆ. ಆದರೂ ಅಲ್ಲಿನ ಗ್ರಾಹಕರಿಗೆ 5 ಲಕ್ಷ ರೂ. ಸಿಗಲಿದೆ. ಇದನ್ನೂ ಓದಿ: Gruhalakshmi Scheme: ಇದೊಂದೇ ಟ್ರಿಕ್ಸ್ ಬಾಕಿ: ನಿಮ್ಮ ಖಾತೆಗೆ ಹಣ ಬರುತ್ತದೆಯೋ ಇಲ್ಲವೋ ನೀವೇ ತಿಳಿದುಕೊಳ್ಳಿ!

ರಿಸರ್ವ ಬ್ಯಾಂಕ್ (Reserve bank of India) ಮುಂಬೈನಲ್ಲಿರುವ ದಿ ಕಪೋಲ್ ಕೋ ಆಪರೇಟಿವ್ ಬ್ಯಾಂಕ್ನ ಪರವಾನಿಗೆ ರದ್ದುಗೊಳಿಸಿದೆ. ಇನ್ನು ಮುಂದೆ ಗ್ರಾಹಕರು ಆ ಬ್ಯಾಂಕ್ನಲ್ಲಿ ಯಾವುದೇ ರೀತಿ ಹಣವನ್ನು ಠೇವಣಿ ಇಡುವುದಾಗಲಿ, ಸಾಲ ಪಡೆಯುವುದಾಗಲಿ ಮಾಡುವಂತಿಲ್ಲ.

ಬಂಡವಾಳ ಕೊರತೆ;

ದಿ ಕಪೋಲ್ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಯಾವುದೇ ಬಂಡವಾಳ ಇಲ್ಲ. ಆದ್ದರಿಂದ ಇದರ ಪರವಾನಿಗೆ ನವೀಕರಿಸಲು ಸಾಧ್ಯವಿಲ್ಲ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಇದರಿಂದಾಗಿ ಈ ಕಪೋಲ್ ಕೋ ಆಪರೇಟಿವ್ ಬ್ಯಾಂಕನ್ನು ಮುಚ್ಚುವ ನಿರ್ಧಾರಕ್ಕೆ ಬಂದಿದೆ. ಇದನ್ನೂ ಓದಿ: Entertainment: ಇಂದಿನ ಟ್ರೆಂಡ್ ನಾನು ನಂದಿನಿ. ಹಾಡಿಗೆ ಮೋಹಕ ತಾರೆ ಲಿಪ್ ಸಿಂಕ್; ನೀವೇ ಬೇಬಿ ಡಾಲ್ ಎಂದ ಅಭಿಮಾನಿಗಳು!

ಠೇವಣಿ ಇಡಬೇಡಿ;

ಇನ್ನು ಮುಂದೆ ಈ ಗ್ರಾಹಕರು ಯಾವುದೇ ರೀತಿ ವ್ಯವಹಾರ ಮಾಡಬಾರದು. ಯಾವುದೇ ಠೇವಣಿ ಇಡುವುದು ಅಥವಾ ಸಾಲ ತೆಗೆದುಕೊಳ್ಳುವದನ್ನು ಮಾಡಬಾರದು. ಒಂದು ವೇಳೆ ಮಾಡಿದಲ್ಲಿ ನಿಮ್ಮ ಹಣ ವಾಪಸ್ ಬರುವುದಿಲ್ಲ.

ಗ್ರಾಹಕರಿಗೆ ಸಿಗುತ್ತೆ 5 ಲಕ್ಷ ರೂ.!

ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರೆಂಟಿ ಕಾರ್ಪೊರೇಶನ್ನಿಂದ ಗ್ರಾಹಕರು ೫ ಲಕ್ಷ ರೂ. ವರೆಗಿನ ಠೇವಣಿ ವಿಮಾ ಕ್ಲೈಮ್ ಮೊತ್ತವನ್ನು ಪಡೆದುಕೊಳ್ಳಬಹುದು. ಈ ರೀತಿಯಾಗಿ ಸುಮಾರು ಶೇ.96  ಗ್ರಾಹಕರು ಈ ವಿಮೆಯನ್ನು ಕ್ಲೈಮ್ ಮಾಡಿಕೊಳ್ಳಲು ಅರ್ಹರಿರುತ್ತಾರೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.

ಕಲರ್ ಮರ್ಚೆಂಟ್ಸ್ ಕೋ ಆಪರೇಟಿವ್ ಬ್ಯಾಂಕ್  ಮೇಲೂ ನಿರ್ಬಂಧದ ತೂಗುಗತ್ತಿ

ಗುಜರಾತಿನ ಅಹಮದಾಬಾದ್ನಲ್ಲಿರುವ ಕಲರ್ ಮರ್ಚೇಂಟ್ಸ್ ಕೋ ಆಪರೇಟಿವ್ ಬ್ಯಾಂಕ್  ಮೇಲೂ ಆರ್ಬಿಐ ನಿರ್ಬಂಧ ಹೇರಿದೆ. ಬ್ಯಾಂಕ್ನ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದ್ದು, ಈ ಬ್ಯಾಂಕ್ನಿಂದ ಗ್ರಾಹಕರಿಗೆ ಸರಿಯಾದ ಸೇವೆ ನೀಡಲು ಸಾಧ್ಯವಿಲ್ಲ ಎಂದು ರಿಸರ್ವ ಬ್ಯಾಂಕ್ ಅಭಿಪ್ರಾಯಪಟ್ಟಿದೆ. ಗ್ರಾಹಕರು ಐವತ್ತು ಸಾವಿರ ರೂ. ವರೆಗೆ ಮಾತ್ರ ವಿತ್ಡ್ರಾ ಮಾಡಲು ಅನುಮತಿ ನೀಡಿದೆ. ಇದಲ್ಲದೆ ಹಲವಾರು ನಿರ್ಬಂಧಗಳನ್ನು ಹೇರಿದೆ.

ಈ ಕಲರ್ ಮರ್ಚೆಂಟ್ಸ್ ಕೋ ಆಪರೇಟಿವ್ ಬ್ಯಾಂಕ್ ರಿಸರ್ವ ಬ್ಯಾಂಕ್ ಅನುಮತಿ ಇಲ್ಲದೆ ಇನ್ನುಮುಂದೆ ಯಾರಿಗೂ ಸಾಲ ನೀಡಲು ಸಾಧ್ಯವಿಲ್ಲ. ಅಲ್ಲದೆ ಯಾವುದೇ ಠೇವಣಿ ಸ್ವೀಕರಿಸುವುದು ಹಾಗೂ ಎಲ್ಲಿಯೂ ಹೂಡಿಕೆ ಮಾಡಬಾರದು ಎಂದು ರಿಸರ್ವ್ ಬ್ಯಾಂಕ್ ಸೂಚಿಸಿದೆ.

Bankbank depositBank LoanFDhome loanRBI New Rulesrbi-cancelled-license-of-this-bank