Tirupati Tirumala: ತಿರುಪತಿ ಭಕ್ತರಿಗೆ ಹೊಸ ಅಪ್ಡೇಟ್; ಈ ಕಾರಣಕ್ಕೆ ಮುಚ್ಚಲಿದೆ ತಿರುಪತಿ ದೇಗುಲದ ಬಾಗಿಲು!

Tirupati Tirumala: ಭಾರತದಲ್ಲಿ ಲಕ್ಷಾಂತರ ದೇವಾಲಯಗಳಿವೆ. ಪ್ರತಿಯೊಂದು ದೇಗುಲಕ್ಕೂ ಅದರದ್ದೇ ಆದ ಇತಿಹಾಸ, ಪೌರಾಣಿಕ ಹಿನ್ನೆಲೆಯಿದೆ. ಭಾರತದಲ್ಲಿ ಇರುವ ಶ್ರೀಮಂತ ದೇವಾಲಯದಲ್ಲಿ ಅಗ್ರಪಂಕ್ತಿಯಲ್ಲಿರುವುದು ಆಂದ್ರಪ್ರದೇಶ ರಾಜ್ಯದ ತಿರುಮಲದಲ್ಲಿರುವ  ಶ್ರೀ ತಿರುಪತಿ ತಿಮ್ಮಪ್ಪನ ದೇವಸ್ಥಾನ.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ದೇಶದ ಮೂಲೆ ಮೂಲೆಗಳಿಂದ ಅಷ್ಟೇ ಅಲ್ಲದೇ ವಿದೇಶದಿಂದಲೂ ಕೂಡ ಭಕ್ತರು ಆಗಮಿಸಿ ತಿಮ್ಮಪ್ಪನ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ಒಮ್ಮೆಯ್ದರೂ ತಿರುಪತಿ ಮೆಂಕಟೇಶ್ವರನ ದರ್ಶನ ಪಡೆಯಬೇಕು ಅಂತ ನೀವು ಇಂದು ಹಾಗೂ ನಾಳೆ ತಿರುಪತಿ ದರ್ಶನಕ್ಕೆ ಹೊರಟಿದ್ರೆ ಈ ಸುದ್ದಿ ತಿಳಿದುಕೊಳ್ಳಲೇಬೇಕು. ಈ ದೇಗುಲದಲ್ಲೂ ಹಲವು ಕಟ್ಟುಪಾಡುಗಳಿದ್ದು, ಅದರ ಅನ್ವಯವೇ ನಡೆದುಕೊಳ್ಳಬೇಕಾಗುತ್ತದೆ. ಶನಿವಾರ ರಾತ್ರಿ ರಾಹುಗ್ರಸ್ತ ಚಂದ್ರ ಗ್ರಹಣ ಸಂಭವಿಸಲಿದೆ. ಇದರಿಂದ ತಿರುಪತಿ ತಿಮ್ಮಪ್ಪನ ದರ್ಶನದ ವೇಳೆಯಲ್ಲಿ ಬದಲಾವಣೆ ಮಾಡಲಾಗಿದೆ.

ಶನಿವಾರ ರಾತ್ರಿ ಬಂದ್ ಆಗಲಿದೆ ದೇಗುಲ:

ಅಕ್ಟೋಬರ್ 28 ರ ರಾತ್ರಿ 1.4ರಿಂದ 2.23ರ ವರೆಗೆ ಅಶ್ವಿನಿ ನಕ್ಷತ್ರ ಮೇಷ ರಾಶಿಯಲ್ಲಿ ರಾಹುಗ್ರಸ್ತ ಚಂದ್ರ ಗ್ರಹಣ ಸಂಭವಿಸಲಿದೆ. ಹಾಗಾಗಿ ತಿರುಪತಿ ತಿಮ್ಮಪ್ಪನ ದೇವಾಲಯವನ್ನು ಅಕ್ಟೋಬರ್ 28ರಂದು ರಾತ್ರಿ 7:5ಕ್ಕೆ ದೇಗುಲವನ್ನು ಮುಚ್ಚಲಾಗುತ್ತದೆ. ಗ್ರಹಣ ಸಂಭವಿಸುವ ೬ ಗಂಟೆಗೂ ಮುನ್ನ ದೇಗುಲ ಮುಚ್ಚುವುದು ಮೊದಲಿನಿಂದಲೂ ನಡೆದುಕೊಂಡು ಬಂದ ವಾಡಿಕೆಯಾಗಿದೆ. ಹಾಗಾಗಿ ತಿರುಪತಿ ದೇವಾಲಯವನ್ನು ಮುಚ್ಚಲಾಗುತ್ತದೆ.

ಬೆಳಗ್ಗಿನ ಜಾವ 3.15ಕ್ಕೆ ದೇವಾಲಯ ಆರಂಭ:

ಚಂದ್ರಗ್ರಹಣವು 2.23ಕ್ಕೆ ಮುಕ್ತಾಯವಾಗಲಿದೆ. ನಂತರ ಅಕ್ಟೋಬರ್ ೨೯ರಂದು ಬೆಳಗ್ಗಿನ ಜಾವ 3.15ಕ್ಕೆ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತದೆ. ಬಾಗಿಲನ್ನು ತೆರೆದ ನಂತರ ದೇವಾಲಯದಲ್ಲಿ ಶುದ್ಧೀಕರಣ ಕೆಲಸ ನಡೆಯುತ್ತದೆ. ನಂತರ ದೇವರಿಗೆ ಖಾಸಗಿಯಾಗಿ ಸುಪ್ರಭಾತ ಸೇವೆ ಸಲ್ಲಿಸಲಾಗುತ್ತದೆ. ಚಂದ್ರಗ್ರಹಣದ ಅಂಗವಾಗಿ ತಿರುಪತಿ ತಿಮ್ಮಪ್ಪನ ದೇವಾಲಯವನ್ನು 8 ಗಂಟೆಗಳ ಕಾಲ ಮುಚ್ಚಲಾಗಿರುತ್ತದೆ.

ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಅಕ್ಟೋಬರ್ 28 ರಂದು ಸಹಸ್ರ ದೀಪಾಲಂಕಾರ ಸೇವೆ, ವಿಶೇಷ ಚೇತರು ಹಾಗೂ ವೃದ್ಧರಿಗೆ ದರ್ಶನ ನಿರಾಕರಿಸಲಾಗಿತ್ತು. ಹಾಗಾಗಿ ಯಾರಾದರೂ ಶನಿವಾರ, ಭಾನುವಾರ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವ ಪ್ಲಾನ್ ಮಾಡಿಕೊಂಡಿದ್ದರೆ ಈ ಮಾಹಿತಿ ತಿಳಿದುಕೊಂಡು ನಂತರ ಯಾವಾಗ ಹೊರಡಬೇಕು ಎನ್ನುವುದನ್ನು ನಿರ್ಧರಿಸಿ.

AstrologyBest News in KannadaKannada Trending Newstirupathitirupathi tirumalaTirupati DarshanamTirupati Tirumala temple will be close for 2 days