Gruhalakshmi Scheme: ಗೃಹ ಲಕ್ಷ್ಮಿ 7ನೇ ಕಂತು ಬಿಡುಗಡೆಗೆ ಮುನ್ನವೇ ಮಹಿಳೆಯರಿಗೆ ಮತ್ತೆ ಸಿಹಿ ಸುದ್ದಿ ನೀಡಿದ ಸರ್ಕಾರ; ಮಹಿಳೆಯರ ಖಾತೆಗೆ ಜಮಾ ಆಗಲಿದೆ 14,000ರೂ!

Gruhalakshmi Scheme: ಗೃಹ ಲಕ್ಷ್ಮಿ ಯೋಜನೆಯು ರಾಜ್ಯ ಕಾಂಗ್ರೆಸ್ ಸರ್ಕಾರದದ ಪ್ರತಿಷ್ಠಿತ ಹಾಗೂ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಗೆ ಎಐಸಿಸಿ ನೇತಾರ ರಾಹುಲ್ ಗಾಂಧಿ ಅವರು ಮೈಸೂರಿನಲ್ಲಿ ಚಾಲನೆ ನೀಡಿದರು. ಗೃಹ ಲಕ್ಷ್ಮಿ ಯೋಜನೆ (Gruhalakshmi Scheme) ಆರಂಭ ಆದಾಗಿನಿಂದಲೂ ತಾಂತ್ರಿಕ ಸಮಸ್ಯೆಯಿಂದ ಕೂಡಿದೆ. ಇದರಿಂದಾಗಿಯೇ ಇಲ್ಲಿಯವರೆಗೂ ಅರ್ಜಿ ಸಲ್ಲಿಸಿದ ಎಲ್ಲರಿಗೂ ಹಣ ಜಮಾ ಮಾಡಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಇದನ್ನು ಅರಿತ ಸರ್ಕಾರವು ಎಲ್ಲರ ಖಾತೆಗೂ ಜಮಾ ಮಾಡಲಾಗುತ್ತದೆ ಎಂದು ಭರವಸೆ ನೀಡಿದೆ. ಇದರ ಜೊತೆ ಇನ್ನೂ ಒಂದು ಗುಡ್ ನ್ಯೂಸ್ ನೀಡಿದೆ.

6ನೇ ಕಂತಿನ ಹಣವು ಫೆಬ್ರವರಿ ಮೊದಲ ವಾರದಲ್ಲಿ ಬರುವ ನಿರೀಕ್ಷೆ ಇತ್ತು. ಆದರೆ 2ನೇ ವಾರ ಕಳೆದರೂ ಹಲವು ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ. ಹಣ ಜಮಾ ಆಗದ ಫಲಾನುಭವಿಗಳು ಒಮ್ಮೆ ತಮ್ಮ ಬ್ಯಾಂಕ್ ಖಾತೆ ಸರಿಯಾಗಿ ಇದೆಯೇ ಎಂದು ಪರಿಶೀಲನೆ ಮಾಡಿಕೊಳ್ಳಬೇಕು. ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಹಾಗೂ ಇ ಕೆವೈಸಿ ಮಾಡಿಸಬೇಕು. ಇಲ್ಲವೇ ಹತ್ತಿರದ ಅಂಚೆ ಕಚೇರಿಗೆ ತೆರಳಿ ಬೇರೆ ಖಾತೆ ತೆರೆದು ಆ ಖಾತೆ ಸಂಖ್ಯೆಯನ್ನು ಗೃಹ ಲಕ್ಷ್ಮಿ ಯೋಜನೆ (Gruhalakshmi Scheme) ಗೆ ಸೇರಿಸಬೇಕು. ಹೀಗೆ ಮಾಡುವುದರಿಂದ ನಿಮಗೆ ಗೃಹ ಲಕ್ಷ್ಮಿ ಹಣವು ಪ್ರತಿ ತಿಂಗಳು ಜಮಾ ಆಗುತ್ತದೆ.

ಮಹಿಳೆಯರಿಗೆ ಸಿಹಿ ಸುದ್ದಿ;

ಫೆ.೮ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ನಡೆಸಿದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಲವು ಅರ್ಜಿಗಳು ಬಂದಿದ್ದವು. ಗೃಹ ಲಕ್ಷ್ಮಿ ಯೋಜನೆ (Gruhalakshmi Scheme) ಗೆ ಅರ್ಜಿ ಸಲ್ಲಿಸಿದರೂ ಹಣ ಜಮಾ ಆಗದಿರುವುದು, ಅರ್ಹ ಫಲಾನುಭವಿ ಆಗಿದ್ದರೂ ಅರ್ಜಿ ತಿರಸ್ಕಾರ ಆಗಿರುವುದು ಎಲ್ಲ ಸಮಸ್ಯೆಗಳನ್ನು ಅರ್ಜಿದಾರರು ಮುಖ್ಯಮಂತ್ರಿಗಳ ಬಳಿ ಹೇಳಿಕೊಂಡಿದ್ದಾರೆ. ಈ ವೇಳೆ ಮುಖ್ಯಮಂತ್ರಿಗಳು ಮಾತನಾಡಿ, ಕೂಡಲೇ ಮತ್ತೊಮ್ಮೆ ಅರ್ಜಿ ಸಲ್ಲಿಸಿ ಏಳು ಕಂತಿನ ಹಣವನ್ನು ಒಮ್ಮೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇನ್ನೂ ಆದಾಯ ತೆರಿಗೆ ಪಾವತಿ ಮಾಡದ ಮಹಿಳೆಯರ ಅರ್ಜಿಗಳೂ ತಿರಸ್ಕಾರಗೊಂಡಿದ್ದವು. ಈ ಕುರಿತು ಜನತಾ ದರ್ಶನದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯಲಾಯಿತು. ಅಂತಹವರು ಸರ್ಕಾರದ ಅಧಿಕೃತ ವೆಬ್ ಸೈಟ್ಗೆ ಹೋಗಿ ಪರಿಶೀಲನೆ ನಡೆಸಬೇಕು. ಅಲ್ಲಿ ಯಾವ ಕಾರಣಕ್ಕಾಗಿ ತಿರಸ್ಕರಿಸಲಾಗಿದೆ ಎಂದು ತಿಳಿಸಲಾಗುತ್ತದೆ. ಅದನ್ನು ನೋಡಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದರೆ ಏಳನೇ ಕಂತಿನಿಂದ ಹಣ ಜಮಾ ಆಗಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.

ಇನ್ನು ಹೊಸದಾಗಿ ಪಡಿತರ ಚೀಟಿ ಪಡೆದವರು ಸಹ ಅರ್ಜಿ ಸಲ್ಲಿಸಬಹುದು. ಅವರಿಗೂ ಸಹ ಬರುವ ತಿಂಗಳಿನಿಂದ ಗೃಹ ಲಕ್ಷ್ಮಿ ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಒಟ್ಟಿನಲ್ಲಿ ಎಲ್ಲ ಅರ್ಹ ಫಲಾನುಭವಿಗಳಿಗೆ ಗೃಹ ಲಕ್ಷ್ಮಿ ಯೋಜನೆ (Gruhalakshmi Scheme) ಮುಟ್ಟಿಸುವುದು ಸರ್ಕಾರದ ಗುರಿಯಾಗಿದೆ ಎಂದು ಸರ್ಕಾರ ತಿಳಿಸಿದೆ.

Gruhalakshmi Scheme