Gruhalakshmi scheme: ಗೃಹಲಕ್ಷ್ಮಿ ಹಣ ಪಡೆಯುತ್ತಿರುವ ಮಹಿಳೆಯರಿಗೆ ಶಾಕ್ ಕೊಟ್ಟ ಸರ್ಕಾರ – ಈ ಕೆಲಸ ಮಾಡಿಲ್ಲ ಅಂದ್ರೆ ಹಣ ಬರಲ್ಲ.

Gruhalakshmi scheme: ಇತ್ತೀಚಿಗಷ್ಟೇ ಸಿದ್ದರಾಮಯ್ಯ ಅವರು ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರವನ್ನು ವಹಿಸಿಕೊಂಡ ಮೇಲೆ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದ ಗೃಹಲಕ್ಷ್ಮಿ ಯೋಜನೆ (Gruhalakshmi scheme) ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು ಹಣವನ್ನು ನೀಡುವಂತಹ ಕೆಲಸವನ್ನು ಮಾಡಲಾಗುತ್ತಿದೆ. ಸರ್ಕಾರ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು ಎನ್ನುವ ಕಾರಣಕ್ಕಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂಬುದಾಗಿ ಹೇಳಿಕೊಂಡಿತ್ತು‌.

ಇನ್ನು ಇತ್ತೀಚಿನ ದಿನಗಳಲ್ಲಿ ಸರ್ಕಾರ ಬಿಡುಗಡೆ ಮಾಡುತ್ತಿರುವಂತಹ ಹಣದಲ್ಲಿ ಗೃಹಲಕ್ಷ್ಮಿ ಯೋಜನೆ (Gruhalakshmi scheme) ಅಡಿಯಲ್ಲಿ ರಿಜಿಸ್ಟರ್ ಮಾಡಿಕೊಂಡಿರುವಂತಹ ಮಹಿಳೆಯರಿಗೆ ಸರಿಯಾದ ರೀತಿಯಲ್ಲಿ ಹಣ ವರ್ಗಾವಣೆ ಆಗುತ್ತಿಲ್ಲ ಎನ್ನುವಂತಹ ಆರೋಪಗಳು ಕೂಡ ಕೇಳಿ ಬರುತ್ತಿವೆ. ಸಾಕಷ್ಟು ಕಾರಣಗಳಿಂದಾಗಿ ಸರಿಯಾದ ರೀತಿಯಲ್ಲಿ ಹಣ ಮಹಿಳೆಯರ ಖಾತೆಗೆ ವರ್ಗಾವಣೆ ಆಗ್ತಾಯಿಲ್ಲ ಅನ್ನೋ ಸುದ್ದಿ ಸರ್ಕಾರಕ್ಕೆ ಕಳವಳ ತಂದಿದೆ ಎಂದು ಹೇಳಬಹುದು‌. ಗೃಹಲಕ್ಷ್ಮಿ ಯೋಜನೆ (Gruhalakshmi scheme) ಯ ಮೂಲಕ ರಾಜ್ಯದ ಪ್ರತಿಯೊಬ್ಬ ಮಹಿಳೆಯ ಖಾತೆಗೆ ಹಣವನ್ನು ವರ್ಗಾವಣೆ ಮಾಡುವ ಮೂಲಕ ಆರ್ಥಿಕವಾಗಿ ಅವರನ್ನು ಬಲಿಷ್ಠರನ್ನಾಗಿ ಮಾಡುವ ಯೋಜನೆಯನ್ನು ಹಾಕಿಕೊಂಡಿತ್ತು.

ಈ ಸಂದರ್ಭದಲ್ಲಿ ಆಧಾರ್ ಕಾರ್ಡ್ ಸೀಡಿಂಗ್ ಹಾಗೂ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡಿಗೆ ಲಿಂಕ್ ಮಾಡುವುದು ಅತ್ಯಂತ ಪ್ರಮುಖ ಎಂಬುದನ್ನು ಕೂಡ ಸ್ಪಷ್ಟಪಡಿಸಲಾಗಿತ್ತು. ಮಾತ್ರವಲ್ಲದೆ, ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ಖಂಡಿತವಾಗಿ ಹಣವನ್ನು ನೇರವಾಗಿ ನಿಮ್ಮ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂಬುದಾಗಿ ತಿಳಿಸಲಾಗಿತ್ತು. ಇದರ ಜೊತೆಗೆ ಆಶಾ ಕಾರ್ಯಕರ್ತೆಯರಿಗೆ ನೇರವಾಗಿ ಮನೆ ಮನೆಗೆ ಹೋಗಿ ಇರುವಂತಹ ಸಮಸ್ಯೆಗಳನ್ನು ಪಟ್ಟಿ ಮಾಡಿ ಪರಿಹಾರ ನೀಡುವ ಕೆಲಸವನ್ನು ಕೂಡ ಮಾಡಲಾಗಿತ್ತು ಹಾಗಿದ್ದರೂ ಕೂಡ ಈಗ ಮತ್ತೆ ಸಾಕಷ್ಟು ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗದಿರುವಂತಹ ಸಮಸ್ಯೆ ಎದ್ದು ಕಾಣುತ್ತಿದೆ.

 ಸಮಸ್ಯೆಗೆ ಪರಿಹಾರ

ಮೊದಲಿಗೆ ಹಣ ಬರೋದಿಲ್ಲ ಯಾಕೆ ಅನ್ನೋದನ್ನ ತಿಳಿದುಕೊಳ್ಳಬೇಕಾಗಿರುವುದು ಪ್ರಮುಖವಾಗಿರುತ್ತದೆ. ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸದೇ ಹೋದಲ್ಲಿ, ಅಥವಾ ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸದೆ ಹೋದಲ್ಲಿ ಈ ರೀತಿಯ ಸಮಸ್ಯೆಗಳು ಕಂಡುಬರುವುದು ಹೆಚ್ಚಾಗಿರುತ್ತದೆ. NPCI ದೋಷದ ಕಾರಣದಿಂದಾಗಿ ಕೂಡ ಹೀಗೆ ಆಗಬಹುದು. NPCI ಅನ್ನು ನೀವು ಲಿಂಕ್ ಮಾಡಿಸಿಕೊಳ್ಳುವ ಮೂಲಕ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ಒಂದು ವೇಳೆ ನೀವು ತಿರುಗಿ ಪಾವತಿ ಮಾಡುವಂತಹ ಕುಟುಂಬದಿಂದ ಬಂದಿದ್ದರೆ ನಿಮ್ಮ ಲಿಂಕ್ ಆಗಿರುವ ಖಾತೆಯನ್ನು ಶಶಿ ಕೇಂದ್ರಕ್ಕೆ ಹೋಗಿ ತೆಗೆದುಹಾಕಲು ಅರ್ಜಿಯನ್ನು ಸಲ್ಲಿಸಬಹುದು.

ನಿಮ್ಮ ಹತ್ತಿರದಲ್ಲಿರುವಂತಹ ಶಿಶು ಕಲ್ಯಾಣ ಕೇಂದ್ರಕ್ಕೆ ಹೋಗಿ ರೇಷನ್ ಕಾರ್ಡ್ ಅನ್ನು ತೆಗೆದುಕೊಂಡು ಹೋಗಿ ತೋರಿಸಿ ಹಾಗೂ ಇರುವಂತಹ ಸಮಸ್ಯೆಗೆ ಅವರಿಂದಲೇ ಖುದ್ದಾಗಿ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ನೀವು ನಿಮ್ಮ ಖಾತೆಗೆ ಸೇರಬೇಕಾಗಿರುವ ಗೃಹಲಕ್ಷ್ಮಿ ಯೋಜನೆ (Gruhalakshmi scheme)ಯ ಹಣವನ್ನು ಪ್ರತಿ ಬಾರಿ ಸಮಯಕ್ಕೆ ಸರಿಯಾಗಿ ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ಒಂದು ವೇಳೆ ನೀವು ನಿಮ್ಮ ಖಾತೆಗೆ ಸರಿಯಾದ ಸಮಯದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳುತ್ತಿಲ್ಲ ಎಂದಾದಲ್ಲಿ ಈ ಮೇಲಿನ ಪರಿಹಾರ ಕ್ರಮಗಳನ್ನು ಪಾಲಿಸಬಹುದಾಗಿದೆ.

Gruhalakshmi Schemekarnataka budget