Post office Scheme: ಇದಪ್ಪ ಅದೃಷ್ಟ ಅಂದ್ರೆ – 10 ಸಾವಿರದಿಂದ 7 ಲಕ್ಷ ಹಣ ಪಡೆಯುವ ಪೋಸ್ಟ್ ಆಫೀಸ್ ನ ಯೋಜನೆ. ಹೇಗೆ ಗೊತ್ತೇ?

Post office Scheme: ಸ್ನೇಹಿತರೆ ಹೂಡಿಕೆ ವಿಚಾರಕ್ಕೆ ಬಂದ್ರೆ ಪ್ರತಿಯೊಬ್ಬರು ಕೂಡ ಖಂಡಿತವಾಗಿ ಯಾವುದೇ ಅನುಮಾನವಿಲ್ಲದೆ ಪೋಸ್ಟ್ ಆಫೀಸ್ನಲ್ಲಿ ಇರುವಂತಹ ಯೋಜನೆಗಳ ಮೇಲೆ ಹೂಡಿಕೆ ಮಾಡುವುದನ್ನು ಕಣ್ಣು ಮುಚ್ಚಿಕೊಂಡು ನಂಬಬಹುದಾಗಿದೆ. ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡುವಂತಹ ಜನರಿಗೆ ನೂರಕ್ಕೆ ನೂರರಷ್ಟು ಲಾಭ ನಿಶ್ಚಿತ ಎನ್ನುವುದು ತಿಳಿದಿದೆ. ಸಣ್ಣ ಉಳಿತಾಯ ಯೋಜನೆಯ ಬಗ್ಗೆ ಮಾತನಾಡುವುದಾದರೆ ಪೋಸ್ಟ್ ಆಫೀಸ್ನಲ್ಲಿ RD ಉತ್ತಮ ಆಯ್ಕೆ ಎನ್ನಬಹುದಾಗಿದೆ‌. ಪೋಸ್ಟ್ ಆಫೀಸ್ (Post office Scheme)ನಲ್ಲಿ ಹೂಡಿಕೆ ಮಾಡುವ ಸಂದರ್ಭದಲ್ಲಿ ನೀವು ಬುದ್ಧಿವಂತಿಕೆಯನ್ನು ಉಪಯೋಗಿಸಿ ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಇಲ್ಲದ ಜೀವನ ಮಾಡಬಹುದಾಗಿರುತ್ತದೆ.

 ಪೋಸ್ಟ್ ಆಫೀಸ್ ಸೇವಿಂಗ್ ಸ್ಕೀಮ್ (Post office Scheme)  

ಇವತ್ತಿನ ಈ ಲೇಖನಿಯಲ್ಲಿ ಪೋಸ್ಟ್ ಆಫೀಸ್ನ ಉಳಿತಾಯ ಯೋಜನೆ (Post office Savings Scheme)   ಅಡಿಯಲ್ಲಿ ನೀವು ಪ್ರತಿ ತಿಂಗಳು ಹತ್ತು ಸಾವಿರ ರೂಪಾಯಿಗಳಷ್ಟು ಹಣವನ್ನು ನಿರ್ದಿಷ್ಟವಾಗಿ ನಿಯಮಿತವಾಗಿ ಹೂಡಿಕೆ ಮಾಡಿಕೊಂಡು ಬಂದರೆ ಐದು ವರ್ಷಗಳ ನಂತರ 7 ಲಕ್ಷ ರೂಪಾಯಿಗಳ ರಿಟರ್ನ್ ಅನ್ನು ಪಡೆದುಕೊಳ್ಳಬಹುದಾಗಿದೆ. ಹೌದು ನಾವು ಮಾತನಾಡುತ್ತಿರುವುದು ರಿಕರಿಂಗ್ ಡೆಪಾಸಿಟ್(RD) ಬಗ್ಗೆ. ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ವಾರ್ಷಿಕ 6.5% ಬಡ್ಡಿದರದ ಲಾಭವನ್ನು ಪಡೆದುಕೊಳ್ಳಬಹುದು. ಈ ಬಡ್ಡಿದರವನ್ನು ಸರ್ಕಾರ ಮಾರ್ಚ್ 31ರವರೆಗೆ ಕೂಡ ಮುಂದುವರಿಸಲಿದೆ ಅನ್ನೋದನ್ನ ನೀವು ತಿಳಿದುಕೊಳ್ಳಬೇಕಾಗಿರುತ್ತದೆ. ಈ ಯೋಜನೆ ಅಡಿಯಲ್ಲಿ ನೀವು 5 ವರ್ಷಗಳ ಕಾಲ ಹೂಡಿಕೆ ಮಾಡಬಹುದಾಗಿದೆ ಹಾಗೂ ಐದು ವರ್ಷದ ನಂತರ ನೀವು ಮುಂದಿನ ಐದು ವರ್ಷಗಳಿಗೆ ಕೂಡ ವಿಸ್ತರಿಸಿಕೊಳ್ಳಬಹುದಾಗಿದೆ. ಅದೇ ಬಡ್ಡಿದರವನ್ನು ಕೂಡ ನೀವು ಮುಂದಿನ ಐದು ವರ್ಷಗಳಿಗೆ ಪಡೆದುಕೊಳ್ಳಬಹುದು.

ಈ ಐದು ವರ್ಷದ ಯೋಜನೆ ಅಡಿಯಲ್ಲಿ ನೀವು ವರ್ಷಕ್ಕೆ 1.20 ಲಕ್ಷ ರೂಪಾಯಿಗಳ ರೀತಿಯಲ್ಲಿ 6 ಲಕ್ಷ ರೂಪಾಯಿಗಳ ಹೂಡಿಕೆ ಮಾಡಬೇಕಾಗಿದೆ. ರಿಟರ್ನ್ ರೂಪದಲ್ಲಿ ನಿಮಗೆ 7,09,902 ರೂಪಾಯಿಗಳನ್ನು ಪಡೆದುಕೊಳ್ಳಬಹುದಾಗಿದೆ. ಐದು ವರ್ಷಗಳ ಸಮಯಾವಕಾಶ ಮುಗಿದ ನಂತರ ಕೂಡ ನೀವು ಯಾವುದೇ ತೊಂದರೆ ಇಲ್ಲದೆ ಸುಲಭ ರೂಪದಲ್ಲಿ ಹಣವನ್ನು ಮರುಕಳಿಸಿ ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ನೀವು ಕೂಡ ಈ ಉಳಿತಾಯ ಯೋಜನೆ ಅಡಿಯಲ್ಲಿ ಹಣವನ್ನು ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದರೆ ಲಾಭ ಕಟ್ಟಿಟ್ಟ ಬುತ್ತಿಯಾಗಿದೆ.

ಪೋಸ್ಟ್ ಆಫೀಸ್  (Post office Scheme)  ನ RD ವಾರ್ಷಿಕವಾಗಿ 6.5% ಬಡ್ಡಿಯನ್ನು ಪಡೆದುಕೊಳ್ಳುವ ಮೂಲಕ ನೀವು ಪ್ರತಿ ತಿಂಗಳ 10,000ಗಳ ಹೂಡಿಕೆಯ ಜೊತೆಗೆ ಐದು ವರ್ಷಗಳ ನಂತರ 1 ಲಕ್ಷಕ್ಕಿಂತ ಹೆಚ್ಚಿನ ಲಾಭವನ್ನು ಪಡೆದುಕೊಂಡಂತಾಗುತ್ತದೆ. ಪೋಸ್ಟ್ ಆಫೀಸ್ ನಲ್ಲಿ ಇರುವಂತಹ ಸಾಕಷ್ಟು ಯೋಜನೆಗಳಲ್ಲಿ ಇದು ಕೂಡ ಒಂದು ಲಾಭದಾಯಕ ಯೋಜನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.

Kannada NewsPost office Scheme