Cricket News: ಚಾಹಲ್ ರನ್ನು RCB ಇಂದ ಹೊರದಬ್ಬಿದ್ದು ಯಾಕಂತೆ ಗೊತ್ತೇ? ಮೈಕ್ ಹಸನ್ ಹೇಳಿದ್ದೇನು ಗೊತ್ತೇ? ಇವೆಲ್ಲ ಬೇಕಿತ್ತಾ?

Cricket News: ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಸ್ನೇಹಿತರೆ ಮುಂದಿನ ತಿಂಗಳಿನಿಂದ ಅಂದ್ರೆ ಮಾರ್ಚ್ ತಿಂಗಳಿನಿಂದ ಈ ಬಾರಿಯ ಐಪಿಎಲ್ ಪ್ರಾರಂಭವಾಗಲಿದೆ. ಇನ್ನು ಈ ಬಾರಿ ನಾವು ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ನಮ್ಮ ತಂಡ ಕಪ್ ಗೆಲ್ಲಲಿ ಎಂಬುದಾಗಿ ಕಾಯುತ್ತಿರುವ ಸಮಯದಲ್ಲಿ ತಂಡದ ಮಾಜಿ ಆಟಗಾರ ಆಗಿದ್ದ ಚಹಾಲ್ ರವರು ತಂಡದಿಂದ ಯಾಕೆ ಹೊರಹೋದರು ಅನ್ನುವುದರ ಬಗ್ಗೆ ತಂಡದ ಕೋಚ್ ಆಗಿರುವಂತಹ ಮೈಕಲ್ ಹೆಸನ್ ರವರಿಂದಲೇ ಸುದ್ದಿ ಹೊರಬಂದಿದ್ದು ಬನ್ನಿ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

2022 ನೇ ಇಸವಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಿಟೆನ್ಷನ್ ಮಾಡುವುದಕ್ಕೆ ನಾಲ್ಕು ಆಟಗಾರರ ಅವಕಾಶ ನೀಡಲಾಗುತ್ತದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಿಟೆಂಶನ್ ಮಾಡಿದ್ದು ಕೇವಲ ಮೂರು ಆಟಗಾರರು ಅವರು, ಗ್ಲೆನ್ ಮ್ಯಾಕ್ಸ್ ವೆಲ್, ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್. ಕೊನೆ ಪಕ್ಷ ಹರಾಜಿನಲ್ಲಿ ಆದರೂ ಕೂಡ ಚಹಾಲ್ ಅವರನ್ನು ಆರ್‌ಸಿಬಿ ತಂಡ ಖರೀದಿ ಮಾಡುತ್ತದೆ ಎಂಬುದಾಗಿ ಭಾವಿಸಲಾಗಿತ್ತು ಆದರೆ ಅಲ್ಲಿ ಕೂಡ ಆರ್ಸಿಬಿ ಚಹಾಲ್ ಅವರನ್ನು ಖರೀದಿಸುವ ಮನಸ್ಸು ಮಾಡ್ಲಿಲ್ಲ. ಕೊನೆಗೆ ಚಹಾಲ್ ಅವರನ್ನು ರಾಜಸ್ಥಾನ ರಾಯಲ್ಸ್ ತಂಡ ಖರೀದಿ ಮಾಡುತ್ತದೆ.

ಇದರ ಬಗ್ಗೆ ಕೊನೆಗೂ ತಂಡದ ಕೋಚ್ ಆಗಿರುವಂತಹ ಮೈಕಲ್ ಹೆಸನ್ ಇತ್ತೀಚಿಗಷ್ಟೇ ನಡೆದಿರುವಂತಹ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಕೊನೆಗೂ ಮಾತನಾಡಿದ್ದಾರೆ. ಯಜ್ವೇಂದ್ರ ಚಹಾಲ್ ರವರು ಹರಾಜು ಪ್ರಕ್ರಿಯೆಯಲ್ಲಿ 65ನೇ ಸ್ಥಾನದಲ್ಲಿ ಇದ್ದರೂ ಹೀಗಾಗಿ ಅಲ್ಲಿಯವರೆಗೆ ತಲುಪುವ ಅಷ್ಟರಲ್ಲಿ ನಮಗಿಂತ ಹೆಚ್ಚಾಗಿ ಹಣವನ್ನು ಬೇರೆ ತಂಡಗಳು ಕೂಡ ಹೊಂದಿದ್ದರು. ಹೀಗಾಗಿ ನಮಗೆ ಅವರನ್ನು ಖರೀದಿಸುವುದಕ್ಕೆ ತುಂಬಾನೇ ಕಷ್ಟ ಆಗಿತ್ತು. ಒಂದು ವೇಳೆ ನಾವು ಯುಜಿಯನ್ನು ಖರೀದಿಸುವುದಕ್ಕೆ ಸಾಧ್ಯವಾಗದಿದ್ದರೆ ಲೈಗ್ ಸ್ಪಿನ್ನರ್ ಇಲ್ಲದೆ ಆಡಬೇಕಾಗಿತ್ತು ಎಂಬುದಾಗಿ ತಂಡದ ಕೋಚ್ ಹೇಳಿಕೊಂಡಿದ್ದಾರೆ.

2022 ರಲ್ಲಿ ಶ್ರೀಲಂಕಾ ತಂಡದ ಆಟಗಾರ ಆಗಿರುವಂತಹ ವನಿಂದು ಹಸರಂಗ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿರುವುದನ್ನ ನೀವು ನೆನಪು ಮಾಡಿಕೊಳ್ಳಬಹುದು. ಈ ಘಟನೆಯ ನಂತರ ಆರ್ಸಿಬಿ ತಂಡ ತಂಡನ್ನು ಖರೀದಿಸದೆ ಇರುವುದಕ್ಕೆ ಚಹಾಲ್ ಕೂಡ ಅಸಮಾಧಾನ ಹೊರ ಹಾಕಿರುವುದನ್ನು ನೀವು ಸಾಕಷ್ಟು ಕಡೆಗಳಲ್ಲಿ ಗಮನಿಸಬಹುದಾಗಿದೆ. ಖಂಡಿತವಾಗಿ ಯಾವುದೇ ಅನುಮಾನವಿಲ್ಲದೆ ಚಹಾಲ್ ಆರ್ಸಿಬಿ ಕ್ರಿಕೆಟ್ ತಂಡದ ಲೆಜೆಂಡರಿ ಆಟಗಾರರಲ್ಲಿ ಒಬ್ಬರಾಗಿ ಕಾಣಿಸಿಕೊಳ್ತಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಸದ್ಯದ ಮಟ್ಟಿಗೆ ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಚಹಾಲ್ ಪ್ರಮುಖ ಬೌಲರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಂಡದ ಪರವಾಗಿ ಕಳೆದ ಬಾರಿ ಐಪಿಎಲ್ ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರ್ಪಡಿಸಿರುವುದನ್ನು ಕೂಡ ನಾವು ನೆನಪು ಮಾಡಿಕೊಳ್ಳಬಹುದು. ಇವತ್ತಿಗೂ ಕೂಡ ಚಹಾಲ್ ಆರ್ಸಿಬಿ ತಂಡದ ಅಭಿಮಾನಿಗಳ ಪ್ರೀತಿಯನ್ನು ಸ್ಮರಿಸಿಕೊಳ್ಳುತ್ತಾರೆ.

Cricket news