Vastu Tips: ನಿಮ್ಮ ಮನೆಯಲ್ಲಿ ಈ ವಾಸ್ತು ದೋಷ ಇದ್ರೆ ಎಂದಾದ್ರೆ ಮುಗೀತು; ಕಷ್ಟ ಕಾರ್ಪಣ್ಯಗಳು ನಿಮ್ಮನ್ನು ಬಿಟ್ಟು ಹೋಗುವುದೇ ಇಲ್ಲ, ಏನು ಮಾಡ್ಬೇಕು ಗೊತ್ತೇ?

Vastu Tips: ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಪ್ರತಿಯೊಬ್ಬರು ಕೂಡ ಮನೆಯನ್ನು ಕಟ್ಟುವ ಸಂದರ್ಭದಲ್ಲಿ ವಾಸ್ತು ಶಾಸ್ತ್ರದ ಪ್ರಕಾರವೇ ಮನೆಯನ್ನು ಕಟ್ಟಿರುತ್ತಾರೆ ಆದರೂ ಕೂಡ ಕೆಲವೊಮ್ಮೆ ಕೆಲವೊಂದು ದೋಷಗಳ ಕಾರಣದಿಂದಾಗಿ ಅಥವಾ ಕೆಲವೊಂದು ವಸ್ತುಗಳನ್ನು ಸರಿಯಾದ ಜಾಗದಲ್ಲಿ ಇಡದೆ ಇರುವ ಕಾರಣದಿಂದಾಗಿ ಕೂಡ ವಾಸ್ತು ದೋಷವನ್ನು ಅನುಭವಿಸುತ್ತಾರೆ. ಇದರಿಂದಾಗಿ ಅವರ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಕೂಡ ಎದುರಿಸಬೇಕಾದ ಸಾಧ್ಯತೆ ಇರುತ್ತದೆ. ಹಾಗಿದ್ರೆ ಬನ್ನಿ, ಯಾವೆಲ್ಲಾ ಕೆಲಸಗಳನ್ನು ಮಾಡಬಾರದು ಹಾಗೂ ವಾಸ್ತು ದೋಷದ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿಯೋಣ.

1. ಪೊರಕೆ ಇರುವುದು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಲಿನವನ್ನು ಗುಡಿಸುವಂತಹ ಒಂದು ವಸ್ತು ಆಗಿರುತ್ತದೆ ಹೀಗಾಗಿ ಇದನ್ನು ಕೆಲವೊಂದು ಕಡೆಗಳಲ್ಲಿ ಇಡಬಾರದು. ಅದರಲ್ಲೂ ವಿಶೇಷವಾಗಿ ಕಪಾಟು ಅಥವಾ ಡಬ್ಬ ಇರುವಂತಹ ಸ್ಥಳಗಳಲ್ಲಿ ಪೊರಕೆಯನ್ನು ಇಡಬಾರದು.

2. ಯಾವುದೇ ಕಾರಣಕ್ಕೂ ಔಷಧಿಯ ಡಬ್ಬಗಳನ್ನು ಅಡುಗೆ ಮನೆಯಲ್ಲಿ ಇಡಬಾರದು. ಸಾಕಷ್ಟು ಜನರು ಮಾತ್ರೆ ಸೇವಿಸುವಂತಹ ನೀರು ಅಡುಗೆ ಮನೆಯಲ್ಲಿರುವ ಕಾರಣಕ್ಕಾಗಿ ಪದೇಪದೇ ಅಲ್ಲಿಗೆ ಹೋಗಲು ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕಾಗಿ ಅಲ್ಲಿಯೇ ಮಾತ್ರೆಯನ್ನು ಇಟ್ಟಿರುತ್ತಾರೆ. ಇದು ತಪ್ಪು.

3. ಸ್ನಾನ ಮಾಡಿದ ನಂತರ ಯಾವುದೇ ಕಾರಣಕ್ಕೂ ಕೂಡ ನಿಮ್ಮ ಶೌಚಾಲಯದ ಬಾಗಿಲುಗಳನ್ನು ತೆರೆದಿಡಬೇಡಿ ಯಾಕೆಂದರೆ ವಾಸ್ತು ಶಾಸ್ತ್ರದ ಪ್ರಕಾರ ಇದು ನಿಮ್ಮ ಮನೆಯ ಒಳಗೆ ನಕಾರಾತ್ಮಕ ಶಕ್ತಿ ಬರಲು ಒಂದು ಕಾರಣವಾಗಿರುತ್ತದೆ ಎಂಬುದಾಗಿ ಪರಿಗಣಿಸಲಾಗುತ್ತದೆ.

4. ಮನೆಯಲ್ಲಿ ಚಿಕ್ಕ ಮಕ್ಕಳು ಇರುವ ಸಂದರ್ಭದಲ್ಲಿ ಗೋಡೆಯ ಮೇಲೆ ಪೆನ್ನು ಅಥವಾ ಪೆನ್ಸಿಲ್ ಗಳಿಂದ ಹಾಡುವ ಸಂದರ್ಭದಲ್ಲಿ ಗೆರೆಯನ್ನು ಹಾಕುವುದನ್ನು ನೀವು ಕಾಣಬಹುದು. ಈ ರೀತಿಯ ಕೆಲಸಗಳನ್ನು ಮಾಡಿದರೆ ಕೂಡಲೇ ಆ ಗೆರೆಗಳನ್ನು ಉಜ್ಜಿವಂತಹ ಪ್ರಯತ್ನವನ್ನು ಮಾಡಿ ಇಲ್ಲವಾದಲ್ಲಿ ನಿಮ್ಮ ಮನೆಯಲ್ಲಿ ನಿಮ್ಮ ಕುಟುಂಬ ಸದಸ್ಯರ ಸಾಲದ ಹೊರೆ ಹೆಚ್ಚಾಗುತ್ತದೆ.

5. ನಿಮ್ಮ ಮನೆಯ ದಕ್ಷಿಣಾ ದಿಕ್ಕಿನಲ್ಲಿ ಅಕ್ವೇರಿಯಂ, ದೇವರ ಫೋಟೋ ಹಾಗೂ ಇನ್ನಿತರ ಪ್ರಮುಖ ವಸ್ತುಗಳನ್ನು ಇಡಬಾರದು ಇದನ್ನು ಅನಿಷ್ಟ ಎಂಬುದಾಗಿ ವಾಸ್ತು ಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ.

6. ನಿಮ್ಮ ಮನೆಯ ಈಶಾನ್ಯ ದಿಕ್ಕನ್ನು ಸಾಕಷ್ಟು ಶುಚಿಯಾಗಿರಿಸುವಂತಹ ಪ್ರಯತ್ನವನ್ನು ಮಾಡಿ ಯಾಕೆಂದರೆ ಇಲ್ಲಿ ಕೊಳೆ ಇರುವುದು ಸಂಪತ್ತಿನ ಅಧಿದೇವತೆ ಆಗಿರುವಂತಹ ಲಕ್ಷ್ಮಿ, ಕೋಪಗೊಳ್ಳುವುದಕ್ಕೆ ಕಾರಣವಾಗಬಹುದು.

7. ನೀವು ಯಾವುದೇ ಕಾರಣಕ್ಕೂ ಮಲಗುವ ಕೋಣೆಯಲ್ಲಿ ದೇವರ ವಾಸ್ತವ್ಯವನ್ನು ಇರಿಸಬಾರದು ಇದರಿಂದಾಗಿ ದೇವರು ಕೋಪಗೊಳ್ಳುತ್ತಾರೆ ಎಂಬುದಾಗಿ ವಾಸ್ತು ಶಾಸ್ತ್ರದ ಮೂಲಗಳು ತಿಳಿಸುತ್ತವೆ. ಇದು ನಿಮ್ಮ ಮನೆಯ ಸಮೃದ್ಧಿ ತನಕ್ಕೆ ಕೊಡಲಿ ಏಟು ಆಗಬಹುದಾಗಿದೆ.

Vastu Tips