Vastu Tips: ಮನೆಯಲ್ಲಿ ಈ ದಿಕ್ಕಿನಲ್ಲಿ ಕೀ ಗಳನ್ನು ಇಟ್ರೇ ಜೀವನವೇ ಕಷ್ಟವೋ ಕಷ್ಟ! ಇಂದೇ ಜಾಗ ಬದಲಾಯಿಸಿ!

Vastu Tips: ಸ್ನೇಹಿತರೆ ನಾವು ಮನೆಯಲ್ಲಿ ಸಾಕಷ್ಟು ಬೇರೆಬೇರೆ ರೀತಿಯ ವಸ್ತುಗಳನ್ನು ಹೊಂದಿರುತ್ತವೆ. ಕೆಲವು ಜನ ಸುರಕ್ಷಿತವಾಗಿ ಇರಿಸಲು ಅಥವಾ ಮುಚ್ಚಿಡಲು ಅವುಗಳಿಗೆ ಕಿ ಅನ್ನು ಬಳಸಲಾಗುತ್ತದೆ. ಕೀ ಅನ್ನು ಸುರಕ್ಷಿತವಾಗಿ ಅಥವಾ ಸರಿಯಾದ ರೀತಿಯಲ್ಲಿ ಬಳಸುವ ವಿಧಾನ ಪ್ರತಿಯೊಬ್ಬರಿಗೂ ಗೊತ್ತು ಆದರೆ ಅದನ್ನು ಸರಿಯಾದ ರೀತಿಯಲ್ಲಿ ವಾಸ್ತು ಪ್ರಕಾರ ಇಡುವ ರೀತಿ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ. ಪ್ರತಿಯೊಂದು ವಸ್ತುಗಳನ್ನು ವಾಸ್ತು ಪ್ರಕಾರ ಇಡುವುದು ಅತ್ಯಂತ ಪ್ರಮುಖವಾಗಿರುತ್ತದೆ. ಇದರ ಬಗ್ಗೆ ಯಾರೊಬ್ಬರೂ ಕೂಡ ಯೋಚನೆ ಮಾಡುವುದಕ್ಕೆ ಹೋಗೋದಿಲ್ಲ ಹೀಗಾಗಿ ಬನ್ನಿ ಇವತ್ತಿನ ಈ ಲೇಖನಿಯ ಮೂಲಕ ತಿಳಿದುಕೊಳ್ಳೋಣ.

ನಿಮ್ಮ ಅದೃಷ್ಟವನ್ನೇ ಬದಲಾಯಿಸಲಿರುವ ಭಯಂಕರ ಭಾನುವಾರ; ಈ 8 ರಾಶಿಯವರಿಗೆ 22ವರ್ಷ ರಾಜಯೋಗ!

ಸಾಮಾನ್ಯ ಜೀವನದ ನಿಯಮಗಳ ಪ್ರಕಾರ ಈ ರೀತಿಯ ಪ್ರಮುಖ ವಸ್ತುಗಳನ್ನು ಕೈಗೆ ಸಿಗುವ ರೀತಿಯಲ್ಲಿ ಇಡುತ್ತೇವೆ ಆದರೆ ವಾಸ್ತು ಶಾಸ್ತ್ರದ ಪ್ರಕಾರ ಹೇಳುವುದಾದರೆ ಕೆಲವೊಂದು ಪ್ರಮುಖ ದಿಕ್ಕಿನಲ್ಲಿ ಇಂತಹ ವಸ್ತುಗಳನ್ನು ಇಡಬೇಕಾಗಿರುತ್ತದೆ. ಇಲ್ಲವಾದಲ್ಲಿ ಮನೆಯಲ್ಲಿ ಧನಾತ್ಮಕ ಶಕ್ತಿ ಕಡಿಮೆಯಾಗಿ ನಕರಾತ್ಮಕ ಶಕ್ತಿ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮೊದಲನೇದಾಗಿ ಮಾತನಾಡುವುದಾದರೆ ಡ್ರಾಯಿಂಗ್ ರೂಮ್ನಲ್ಲಿ ನೀವು ನಿಮ್ಮ ಮನೆಯ ಕೀಗಳನ್ನು ಇರಿಸಲೇಬಾರದು. ಇದರಿಂದಾಗಿ ಹೊರಗಿನವರು ಬಂದಾಗ ಮನೆಯ ಕೀಗಳನ್ನು ನೋಡಿದರೆ ಅದಕ್ಕೆ ದೃಷ್ಟಿ ಬೀಳುತ್ತದೆ ಎಂಬುದಾಗಿ ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ ಯಾವುದೇ ವಿಚಾರದಲ್ಲೂ ಮನೆಯ ಕೀ ಗಳನ್ನು ಡ್ರಾಯಿಂಗ್ ರೂಮ್ ನಲ್ಲಿ ಇಡಬೇಡಿ.

ವಾಸ್ತು ಶಾಸ್ತ್ರದಲ್ಲಿ ಹೇಳಿರುವಂತಹ ಮಾಹಿತಿಗಳ ಪ್ರಕಾರ ಯಾವುದೇ ಕಾರಣಕ್ಕೂ ನಿಮ್ಮ ಮನೆಯ ಕೀಗಳನ್ನು ನಿಮ್ಮ ದೇವಸ್ಥಾನದಲ್ಲಿ ಇಡಬೇಡಿ. ಹೌದು, ದೇವರ ಕೋಣೆಯಲ್ಲಿ ಕೀಗಳನ್ನು ಇಡೋದು ತಪ್ಪು ಎಂಬುದಾಗಿ ವಾಸ್ತು ಶಾಸ್ತ್ರದ ಪ್ರಕಾರ ಉಲ್ಲೇಖಿಸಲಾಗುತ್ತದೆ ಹಾಗೂ ಇದರಿಂದಾಗಿ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಇನ್ನು ಮನೆಯ ಹೃದಯ ಭಾಗ ಅಥವಾ ಪ್ರತಿಯೊಬ್ಬರ ಆರೋಗ್ಯದ ಪ್ರಮುಖ ಸ್ಥಳ ಆಗಿರುವಂತಹ ಅಡುಗೆ ಮನೆಯಲ್ಲಿ ಕೂಡ ಮನೆಯ ಕೀಗಳನ್ನು ಇರಿಸಬಾರದು. ವಾಸ್ತು ಶಾಸ್ತ್ರದಲ್ಲಿ ಹೇಳಿರುವಂತಹ ಮಾಹಿತಿಗಳ ಪ್ರಕಾರ ಇಲ್ಲಿ ಕೂಡ ನೀವು ಮನೆಯ ಕೀಗಳನ್ನು ಇರಿಸುವುದರಿಂದ ಸಮಸ್ಯೆಯನ್ನು ತಂದುಕೊಳ್ಳಬಹುದಾಗಿದೆ.

ಇನ್ನು ಮನೆಯ ಕೀಗಳನ್ನು ಎಲ್ಲಿ ಇಟ್ಟರೆ ಉತ್ತಮ ಎಂಬುದಾಗಿ ನೋಡುವುದಾದರೆ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಮನೆಯ ಕೀಗಳನ್ನು ಇರಿಸುವುದು ಒಳ್ಳೆಯದು ಎಂಬುದಾಗಿ ಹೇಳಲಾಗುತ್ತದೆ. ಅದರಲ್ಲಿ ವಿಶೇಷವಾಗಿ ಮರದ ಸ್ಟ್ಯಾಂಡ್ ಗಳನ್ನು ಕೀ ಇಡುವುದಕ್ಕೆ ಉಪಯೋಗಿಸಿದರೆ ಇನ್ನು ಉತ್ತಮ. ನಿಮ್ಮ ಕೋಣೆಯ ಉತ್ತರ ಅಥವಾ ಪೂರ್ವ ದಿಕ್ಕನ್ನು ಈ ರೀತಿ ನಿಮ್ಮ ಮನೆಯ ಕೀಗಳನ್ನು ಇಡೋದಕ್ಕಾಗಿ ಬಳಸಬಹುದಾಗಿದೆ. ಯಾವುದೇ ಕಾರಣಕ್ಕೂ ನೀವು ಸಾಕಷ್ಟು ಸಮಯಗಳಿಂದ ಬಳಸದೆ ತುಕ್ಕು ಹಿಡಿದಿರುವಂತಹ ಕೀಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಹೋಗಬೇಡಿ ಯಾಕೆಂದರೆ ಮನೆಯಲ್ಲಿ ಸಾಕಷ್ಟು ಸಮಸ್ಯೆ ಉದ್ಭವ ಆಗಬಹುದು. ಇದರಿಂದಾಗಿ ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಕೂಡ ಹಳದಿರಬಹುದು ಹಾಗೂ ಸುಖ ಶಾಂತಿ ನೆಮ್ಮದಿಯ ವಿಚಾರದಲ್ಲಿ ಕೂಡ ನೀವು ನಕಾರಾತ್ಮಕತೆಯನ್ನು ಕಾಣಬಹುದಾಗಿದೆ.