IPL 2024: IPL ನಲ್ಲಿ ಆರ್ ಸಿ ಬಿ ಅಭಿಮಾನಿಗಳು ಊಹೆಯೂ ಮಾಡದ ಟ್ವಿಸ್ಟ್; ತಂಡದಿಂದ ವಿರಾಟ್ ಕೊಯ್ಲಿ ಔಟ್? !

IPL 2024: ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರೋ ವಿಚಾರ ಏನಂದ್ರೆ? ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಆಗಿರುವಂತಹ ವಿರಾಟ್ ಕೊಹ್ಲಿ (Virat Kohli)  ಹಾಗೂ ಅನುಷ್ಕಾ ಶರ್ಮ (Anushka Sharma) ದಂಪತಿಗಳು ಇತ್ತೀಚಿಗಷ್ಟೇ ಅಕಾಯ್ ಎನ್ನುವಂತಹ ಗಂಡು ಮಗುವಿಗೆ ತಂದೆ ತಾಯಿಯಾಗಿದ್ದಾರೆ. ಸದ್ಯದ ಮಟ್ಟಿಗೆ ಇಡೀ ಕುಟುಂಬ ಲಂಡನ್ ನಲ್ಲಿ ಬೀಡು ಬಿಟ್ಟಿದೆ. ಹೌದು ಗೆಳೆಯರೇ ಅನುಷ್ಕಾ ಶರ್ಮ ಗಂಡು ಮಗುವಿಗೆ ಜನ್ಮ ನೀಡಿರುವುದು ಇಂಗ್ಲೆಂಡ್ ನ ಲಂಡನ್ ನಲ್ಲಿ. ಇದೇ ಕಾರಣಕ್ಕಾಗಿ ಈ ಬಾರಿ ಭಾರತದಲ್ಲಿ ನಡೆಯುತ್ತಿದ್ದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಕೂಡ ವಿರಾಟ್ ಕೊಹ್ಲಿ ಅವರು ಹೊರಗೆ ಉಳಿದುಕೊಂಡಿದ್ದರು.

ಎಬಿಡಿ ವಿಲಿಯರ್ಸ್ ವಿರಾಟ್ ಕೊಹ್ಲಿ ಅವರಿಗೆ ಎರಡನೇ ಮಗು ಜನಿಸುತ್ತಿರುವುದರ ಬಗ್ಗೆ ಸಾಕಷ್ಟು ಸಮಯಗಳ ಹಿಂದೆನೇ ಸುದ್ದಿಯನ್ನು ಖುಲಾಸೆಗೊಳಿಸಿದರು ಅನ್ನೋದನ್ನ ಕೂಡ ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಇನ್ನು ಇಂಗ್ಲೆಂಡ್ ಸರಣಿ ಮುಗಿಯುತ್ತಿದ್ದಂತೆ ಮಾರ್ಚ್ 22ನೇ ತಾರೀಖಿನಿಂದ ಪ್ರಾರಂಭಿಸಿ ಈ ಬಾರಿಯ ಐಪಿಎಲ್ ಪ್ರಾರಂಭವಾಗಲಿದ್ದು ಆಶ್ಚರ್ಯ ಎನ್ನುವಂತೆ ಮೊದಲನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಡುವೆ ಇದೆ. ಇನ್ನು ಈ ಬಾರಿ ಪಂದ್ಯ ನಡೆಯುತ್ತಿರುವುದು ಚೆನ್ನೈನ ತವರು ಮೈದಾನ ಆಗಿರುವಂತಹ ಚಿಪಕ್ ಸ್ಟೇಡಿಯಂನಲ್ಲಿ. ಆದರೆ ಈ ಸಂದರ್ಭದಲ್ಲಿ ಕೇಳಿ ಬರುತ್ತಿರುವಂತಹ ಮತ್ತೊಂದು ಬ್ಯಾಡ್ ನ್ಯೂಸ್ ಅಂದ್ರೆ ಈ ಬಾರಿ ಐಪಿಎಲ್ ನಲ್ಲಿ ನಾವು ವಿರಾಟ್ ಕೊಹ್ಲಿ ಅವರನ್ನು ಕಾಣುವುದು ಅನುಮಾನವೇ ಸರಿ ಎಂಬುದಾಗಿ ತಿಳಿದು ಬಂದಿದೆ.

ಎರಡನೇ ಮಗುವಿನ ಜನನದ ಖುಷಿಯಲ್ಲಿ ಇರುವಂತಹ ವಿರಾಟ್ ಕೊಹ್ಲಿ ಅವರು ಈ ಬಾರಿಯ ಐಪಿಎಲ್ ಅನ್ನು ಸ್ಕಿಪ್ ಮಾಡುವಂತಹ ಸಾಧ್ಯತೆ ಹೆಚ್ಚಾಗಿದೆ. ಈ ವಿಚಾರದ ಬಗ್ಗೆ ಮಾಜಿ ಕ್ರಿಕೆಟಿಗೆ ಆಗಿರುವಂತಹ ಸುನಿಲ್ ಗವಾಸ್ಕರ್ ಮಾತನಾಡಿದ್ದು ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ವಿರಾಟ್ ಕೊಹ್ಲಿ ಆಯ್ಕೆಯಾಗಿದ್ದರು ಆದರೆ ಅವರು ಅದರಿಂದಲೂ ಕೂಡ ಹೊರಗೆ ನಿರ್ಗಮಿಸಿದ್ದರು. ಹೀಗಾಗಿ ಐಪಿಎಲ್ ನಲ್ಲಿ ಅವರು ಆಡಲು ಆಡಬಹುದು ಇಲ್ಲವಾದರೆ ಅವರ ಅನುಪಸ್ಥಿತಿಯನ್ನು ನಾವು ಈ ಸಂದರ್ಭದಲ್ಲಿ ಐಪಿಎಲ್ ನಲ್ಲಿ ನೋಡಬಹುದಾಗಿದೆ ಎಂಬುದಾಗಿ ಹೇಳಿದ್ದಾರೆ. ಸುನಿಲ್ ಗವಾಸ್ಕರ್ ರವರ ಈ ಹೇಳಿಕೆಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು ಪ್ರತಿಯೊಬ್ಬರೂ ಕೂಡ ಅದರಲ್ಲೂ ವಿಶೇಷವಾಗಿ ಆರ್‌ಸಿಬಿ ಹಾಗೂ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಸಾಕಷ್ಟು ಬೇಸರವಾಗಿದ್ದಾರೆ.

ವಿರಾಟ್ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಯಾರು ತಂಡದ ಜವಾಬ್ದಾರಿಯನ್ನು ಹೊತ್ತು ಬ್ಯಾಟಿಂಗ್ ವಿಭಾಗದಲ್ಲಿ ತಮ್ಮ ಉತ್ತಮ ಕೊಡುಗೆಯನ್ನು ನೀಡುತ್ತಾರೆ ಎಂಬುದನ್ನು ನೋಡಲು ಆರ್ಸಿಬಿ ಅಭಿಮಾನಿಗಳು ಕಾತುರರಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಕೆಲವು ಅಭಿಮಾನಿಗಳು ಈ ಬಾರಿ ಗಂಡು ಮಗು ಜನಿಸಿರುವ ಕಾರಣದಿಂದಾಗಿ ವಿರಾಟ್ ಕೊಹ್ಲಿ ಅವರು ಈ ಬಾರಿಯ ಐಪಿಎಲ್ ಆಡಿ ಕಪ್ ಗೆದ್ದು ತಮ್ಮ ಮಗನಿಗೆ ಉಡುಗೊರೆ ನೀಡಬೇಕು ಅನ್ನೋದಾಗಿ ಕೂಡ ಬಯಸಿದ್ದಾರೆ.