Cancer: ಕ್ಯಾನ್ಸರ್ ವಿರುದ್ಧ ಹೋರಾಡೋಕೆ 100 ರೂಪಾಯಿಗಳ ಮಾತ್ರೆಯನ್ನು ಬಿಡುಗಡೆ ಮಾಡಿದ ಟಾಟಾ ಸಂಸ್ಥೆ; ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ?

Cancer: ಇಡೀ ಪ್ರಪಂಚದಲ್ಲಿ ಅತ್ಯಂತ ಅಪಾಯಕಾರಿ ಆರೋಗ್ಯ ಸಮಸ್ಯೆ ಯಾವುದೇ ಎಂಬುದಾಗಿ ಯಾರನ್ನಾದರೂ ಕೇಳಿದರೆ ಅವರು ನೀಡುವಂತಹ ಮೊದಲನೇ ಉತ್ತರ ಕ್ಯಾ-ನ್ಸರ್. ಪ್ರಪಂಚದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕ್ಯಾ-ನ್ಸರ್ ಸಮಸ್ಯೆಯಿಂದ ಪ್ರಾಣವನ್ನು ಕಳೆದುಕೊಳ್ಳುತ್ತಿರುವವರ ಜನಸಂಖ್ಯೆ ಜಾಸ್ತಿಯಾಗಿದೆ ಎನ್ನುವುದು ಅಂಕಿಅಂಶಗಳ ಪ್ರಕಾರ ತಿಳಿದು ಬರುತ್ತದೆ. ಇನ್ನು ಕ್ಯಾ-ನ್ಸರ್ ಬಂದಾಗ ಅದನ್ನು ಗುಣಪಡಿಸಿಕೊಳ್ಳಲು ಪಡೆದುಕೊಳ್ಳುವ ಚಿಕಿತ್ಸೆ ಹಾಗೂ ಮಾತ್ರೆಗಳ ಖರ್ಚು ಬಡ ಊರಿನ ಖಂಡಿತವಾಗಿ ಆ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಅನ್ನೋದನ್ನ ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಆದರೆ ಇದಕ್ಕೆ ಒಂದು ಒಳ್ಳೆ ಸುದ್ದಿ ಎನ್ನುವಂತೆ ಈಗ ಟಾಟಾ ಸಂಸ್ಥೆಯಿಂದ ದೊಡ್ಡ ಅಪ್ಡೇಟ್ ಹೊರ ಬಂದಿದೆ.

ಟಾಟಾ ಇನ್ಸ್ಟಿಟ್ಯೂಟ್ ಈ ಬಗ್ಗೆ ಮಾತನಾಡುತ್ತಾ ತನ್ನ ಪ್ರಕಟಣೆಯಲ್ಲಿ ಕ್ಯಾನ್ಸರ್ ಗುಣಪಡಿಸಬಹುದಾದಂತಹ ಮಾತ್ರೆಯನ್ನು ನಾವು ಅಭಿವೃದ್ಧಿಪಡಿಸಿದ್ದೇವೆ ಎಂಬುದಾಗಿ ಹೇಳಿದ್ದಾರೆ. ಕಳೆದ ಹತ್ತು ವರ್ಷಗಳಿಂದಲೂ ಕೂಡ ಇದರ ಡೆವಲಪ್ಮೆಂಟ್ ನಲ್ಲಿ ಸಂಸ್ಥೆ ಸಾಕಷ್ಟು ಪರಿಶ್ರಮಪಟ್ಟಿದೆ ಎಂಬುದನ್ನು ಕೂಡ ಹೇಳಲಾಗಿದೆ. ಎರಡನೇ ಹಂತದ ರೋಗಿಗಳಿಗೆ ಈ ಟ್ಯಾಬ್ಲೆಟ್ ರಾಮಬಾಣ ಎಂಬುದಾಗಿ ಪ್ರತಿಪಾದಿಸಲಾಗಿದೆ. ಎಲ್ಲಕ್ಕಿಂತ ವಿಶೇಷ ಎನ್ನುವಂತೆ ಈ ಮಾತ್ರೆಗೆ ಕೇವಲ ನೂರು ರೂಪಾಯಿಗಳು ಮಾತ್ರ. ಇಷ್ಟೊಂದು ಕಡಿಮೆ ಬೆಲೆಯಲ್ಲಿ ಕೈಗೆಟಕುವ ರೀತಿಯಲ್ಲಿ ಟಾಟಾ ಸಂಸ್ಥೆ ಕ್ಯಾನ್ಸರ್ ರೋಗಿಗಳಿಗೆ ಈ ಮಾತ್ರೆಯನ್ನು ಅಭಿವೃದ್ಧಿಪಡಿಸಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬ ಭಾರತೀಯರು ಮೆಚ್ಚ ಬೇಕಾಗಿರುವಂತಹ ವಿಚಾರವಾಗಿದೆ.

ಈಗಾಗಲೇ ಟಾಟಾ ಸಂಸ್ಥೆಯಿಂದ ಅಭಿವೃದ್ಧಿಪಡಿಸಲಾಗಿರುವಂತಹ ಟ್ಯಾಬ್ಲೆಟ್ ಗಳನ್ನು ರೋಗಿಗಳಲ್ಲಿ ಎರಡನೇ ಕ್ಯಾ-ನ್ಸರ್ ಬರುವುದನ್ನು ತಡೆಗಟ್ಟುವ ನೆಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ತಿಮೋಥಿರಪಿ ಹಾಗು ಲೇಸರ್ ಟ್ರೀಟ್ಮೆಂಟ್ ಗಳಂತಹ ಚಿಕಿತ್ಸೆಗಳ ಅಡ್ಡ ಪರಿಣಾಮಗಳನ್ನು ತಡೆಯುವಂತಹ ಕ್ಷಮತೆಯನ್ನು ಈ ಟ್ಯಾಬ್ಲೆಟ್ ಬಂದಿದೆ ಎಂಬುದಾಗಿ ತಜ್ಞರು ಹೇಳಿದ್ದಾರೆ.

ಇನ್ನು ಈ ಮಾತ್ರೆಯನ್ನು ಡೆವಲಪ್ಮೆಂಟ್ ಮಾಡುವ ಸಂದರ್ಭದಲ್ಲಿ ಇದನ್ನ ಇಲಿಯ ಮೇಲೆ ಕೂಡ ಪ್ರಯೋಗಿಸಲಾಗಿದೆ. ಕ್ರೊಮೊಟಿನ್ ಎನ್ನುವಂತಹ ಕಣಗಳು ಮತ್ತೆ ಚಿಕ್ಕ ಚಿಕ್ಕ ತುಲ್ಲುಗಳಾಗಿ ಜೀವಕೋಶಕ್ಕೆ ತಲುಪಿ ಮತ್ತೆ ಕ್ಯಾನ್ಸರ್ ಬರುವುದಕ್ಕೆ ಕಾರಣವಾಗಬಹುದು ಎನ್ನುವ ಕಾರಣಕ್ಕಾಗಿ ಎರಡನೇ ಬಾರಿ ಕ್ಯಾನ್ಸರ್ ಬರಬಾರದು ಎನ್ನುವ ನಿಟ್ಟಿನಲ್ಲಿ ಈ ಟ್ಯಾಬ್ಲೆಟ್ ಅನ್ನು ಡೆವಲಪ್ ಮಾಡಿದ್ದು ಎರಡನೇ ಕ್ಯಾನ್ಸರ್ ಬರುವುದನ್ನ ಇದು ತಡೆಗಟ್ಟುತ್ತೆ.

ಭಾರತದ ಆಹಾರ ಗುಣಮಟ್ಟತೆ ಪ್ರಾಧಿಕಾರ ಈ ಮಾತ್ರೆಯನ್ನು ಮಾರುಕಟ್ಟೆಗೆ ತರುವುದಕ್ಕೆ ಅನುಮತಿಯನ್ನು ನೀಡಬೇಕಾಗಿರುತ್ತದೆ ಎನ್ನುವುದಾಗಿ ಪ್ರಮುಖ ತಜ್ಞರು ಹೇಳಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ ಈ ವರ್ಷದ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಈ ಮಾತ್ರೆ ಮಾರುಕಟ್ಟೆಗೆ ಬರುವಂತಹ ಸಾಧ್ಯತೆ ಇದೆ ಎಂಬುದಾಗಿ ತಿಳಿಸಿದ್ದಾರೆ. ಕೇವಲ 100 ರೂಪಾಯಿಗೆ ಸಿಗಲಿರುವಂತಹ ಈ ಕ್ಯಾನ್ಸರ್ ಮಾತ್ರೆ ಮುಂದಿನ ದಿನಗಳಲ್ಲಿ ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಕ್ರಾಂತಿಕಾರಿ ಬದಲಾವಣೆಗಳನ್ನು ತರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Cancer