Health Tips: ಈ ಲಕ್ಷಣಗಳು ನಿಮ್ಮಲ್ಲಿಯೂ ಇದ್ದರೆ ನಿಮ್ಮದು ಕೋತಿ ಮನಸ್ಸು; ಕೋತಿ ತರ ಆಡದೇ, ಈ ರೀತಿ ಮಾಡಿದ್ರೆ ಲೈಫ್ ಜಿಂಗಾಲಾಲಾ ಅನ್ನುತ್ತಾರೆ ತಜ್ಞರು!

Health Tips: ಸಾಕಷ್ಟು ಜನರಲ್ಲಿ ಕೋತಿ ಮನಸ್ಸು ಇದೆ ಎಂಬುದಾಗಿ ಆಡು ಮಾತಿನಲ್ಲಿ ಹೇಳುತ್ತಾರೆ. ಅದರ ಅರ್ಥ ನಿಮ್ಮ ಮನಸ್ಸು ಚಂಚಲವಾಗಿರುತ್ತದೆ ಅಥವಾ ನಿರ್ಧಾರವನ್ನು ತೆಗೆದುಕೊಂಡರೆ ಅದರ ಮೇಲೆ ಹೆಚ್ಚು ಸಮಯ ನೀವು ಒಪ್ಪಿಕೊಳ್ಳುವುದಿಲ್ಲ ಅನ್ನೋದು ಅಥವಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದು ಈ ಎಲ್ಲಾ ಗುಣಲಕ್ಷಣಗಳನ್ನು ನಾವು ಕೋತಿ ಮನಸ್ಸಿಗೆ ಉದಾಹರಣೆಯಾಗಿ ನೀಡಬಹುದಾಗಿದೆ. ಇನ್ನು ಈ ಕೆಲವೊಂದು ಗುಣಲಕ್ಷಣಗಳು ನಿಮ್ಮಲ್ಲಿ ಇದ್ದರೆ ನಿಮ್ಮದು ಕೋತಿ ಮನಸ್ಸು ಎಂಬುದಾಗಿ ಕರೆಯಲಾಗುತ್ತದೆ. ಹಾಗಿದ್ರೆ ಆ ಗುಣಲಕ್ಷಣಗಳೇನು ಹಾಗೂ ಅವುಗಳಿಗೆ ಇರುವಂತಹ ಪರಿಹಾರದ ಟಿಪ್ಸ್ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

1. ಸಾಕಷ್ಟು ಬಾರಿ ನೀವು ಒಂದೇ ಸಮಯದಲ್ಲಿ ಬೇರೆ ಬೇರೆ ಆಲೋಚನೆಗಳನ್ನು ಮಾಡುವ ಮೂಲಕ ಒಂದೇ ನಿರ್ಧಾರವನ್ನು ಆಚಲವಾಗಿ ತೆಗೆದುಕೊಳ್ಳುವುದು ಅಸಾಧ್ಯವಾಗಿ ಬಿಡುತ್ತದೆ. ಈ ಚದುರಿದ ಯೋಚನೆಗಳು ನಿಮ್ಮ ಏಕಾಗ್ರತೆಯನ್ನು ಕ್ಷೀಣಿಸುತ್ತವೆ. ಈ ಕಾರಣದಿಂದಾಗಿ ನೀವು ಪ್ರತಿದಿನ ಯೋಗ ಅಥವಾ ಧ್ಯಾನವನ್ನು ಮಾಡುವುದರ ಮೂಲಕ ಏಕಾಗ್ರತೆಯನ್ನು ಹೊಂದಬಹುದಾಗಿದೆ ಹಾಗೂ ಚದುರಿದ ಯೋಜನೆಯ ಗುಣಲಕ್ಷಣದಿಂದ ಹೊರ ಬರಬಹುದಾಗಿದೆ.

2. ನಿಮ್ಮ ಜೀವನದಲ್ಲಿ ಯಾವುದೇ ಒಂದು ಚಿಕ್ಕ ತಪ್ಪು ಮಾಡಿದರೂ ಕೂಡ ನೀವು ಅದರ ಮೇಲೆ ಭಯಪಡುವಂತಹ ಗುಣವನ್ನು ಹೊಂದಿರುತ್ತೀರಿ. ಒಂದು ಚಿಕ್ಕ ತಪ್ಪನ್ನು ಕೂಡ ಅಪರಾಧ ಮನೋಭಾವನೆಯಿಂದ ನೀವು ಅದನ್ನು ಆತಂಕದಿಂದ ನೋಡುತ್ತೀರಿ ಹೀಗಾಗಿ ಈ ಗುಣ ಕೂಡ ನಿಮ್ಮಲ್ಲಿ ಕೋತಿ ಮನಸು ಇದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇದಕ್ಕಾಗಿ ನೀವು ಪ್ರತಿದಿನ ಉಸಿರಿನ ವ್ಯಾಯಾಮಗಳನ್ನು ಅವಿರತವಾಗಿ ಮಾಡಬೇಕಾಗಿರುತ್ತದೆ. ಈ ಮೂಲಕ ನೀವು ಈ ಸಮಸ್ಯೆಯಿಂದ ಹೊರ ಬರಬಹುದಾಗಿದೆ.

3. ಇತ್ತೀಚಿನ ದಿನಗಳಲ್ಲಿ ಒಂದೇ ಸಮಯದಲ್ಲಿ ನೀವು ಸಾಕಷ್ಟು ವಿಚಾರಗಳನ್ನು ಗಮನಿಸುವುದರಿಂದ ಯಾವುದನ್ನು ಆಯ್ಕೆ ಮಾಡಬೇಕು ಎನ್ನುವಂತಹ ಗೊಂದಲದಲ್ಲಿ ಖಂಡಿತವಾಗಿ ಇದ್ದೇ ಇರುತ್ತೀರಿ. ಸೋಶಿಯಲ್ ಮೀಡಿಯಾದಲ್ಲಿ ಬೇರೆ ಬೇರೆ ವಿಚಾರಗಳನ್ನು ನೋಡುವುದರ ಮೂಲಕ ನೀವು ನಿಮ್ಮಲ್ಲಿ ಏಕಾಗ್ರತೆಯನ್ನು ಕಡಿಮೆ ಮಾಡಿಕೊಂಡಿರುತ್ತೀರಿ. ಗೊಂದಲ ಹಾಗೂ ಏಕಾಗ್ರತೆ ಕಡಿಮೆ ಆಗುವ ಕಾರಣದಿಂದಾಗಿ ನಿಮ್ಮ ಮನಸ್ಸಿನಲ್ಲಿ ಚಂಚಲತೆ ಕೂಡ ಹೆಚ್ಚಾಗಿರುತ್ತದೆ. ಇದಕ್ಕಾಗಿ ನೀವು ಮುಂದಿನ ದಿನಗಳಲ್ಲಿ ದಿನಕ್ಕೆ ಒಂದು ವೇಳಾಪಟ್ಟಿಯನ್ನು ತಯಾರು ಮಾಡಿ ಅದರ ರೀತಿಯಲ್ಲಿ ಕೆಲಸ ಮಾಡುವ ಹಾಗೂ ದೈನಂದಿನ ಕಾರ್ಯಕ್ರಮಗಳನ್ನು ಅರೇಂಜ್ ಮಾಡುವಂತಹ ಕೆಲಸವನ್ನು ಮಾಡಿದರೆ ಈ ಸಮಸ್ಯೆಯಿಂದ ಪಾರಾಗಬಹುದಾಗಿದೆ.

4. ಸಾಮಾನ್ಯವಾಗಿ ನಾವು ಯಾವುದೇ ಸಮಸ್ಯೆ ಬಂದರೆ ದೈಹಿಕ ಆಯಾಸವನ್ನು ಕಂಡಿರುತ್ತೇವೆ ಹಾಗೂ ಅದಕ್ಕೆ ಸರಿಯಾದ ವಿಶ್ರಾಂತಿಯನ್ನು ನೀಡುವ ಮೂಲಕ ಆ ಆಯಾಸವನ್ನು ಕಡಿಮೆ ಮಾಡಿಕೊಳ್ಳುತ್ತೇವೆ. ಆದರೆ ಪ್ರತಿದಿನ ನಾವು ಬೇಕಾಬಿಟ್ಟಿಯಾಗಿ ಯೋಚನೆ ಮಾಡಿ ಮಾನಸಿಕ ಆಯಾಸವನ್ನು ತಂದುಕೊಂಡಾಗ ಅದರಿಂದ ಹೊರಬರುವುದು ಹೇಗೆ ಎನ್ನುವುದಾಗಿ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ. ಹೀಗಾಗಿ ಯೋಚನೆ ಮಾಡುವುದನ್ನು ಕಡಿಮೆ ಮಾಡಿ ಮೆದುಳಿಗೆ ಕೂಡ ರೆಸ್ಟ್ ನೀಡಬೇಕಾಗಿರುತ್ತದೆ. ಇದಕ್ಕಾಗಿ ನೀವು ನಿಮ್ಮ ಬೇಕಾದ ಕೆಲಸಗಳನ್ನು ಮಾಡುವುದಕ್ಕೆ ಸಮಯವನ್ನು ಮೀಸಲು ಇರಿಸಿ ಹಾಗೂ ಪೌಷ್ಟಿಕಾಂಶ ಆಹಾರವನ್ನು ಸೇವಿಸಿ.

5. ಇನ್ನು ಸಾಕಷ್ಟು ಜನರಲಿ ಜಡತನ ಅಂದರೆ ಆಲಸ್ಯತನ ಹೆಚ್ಚಾಗಿರುತ್ತದೆ ಹಾಗೂ ಸರಿಯಾದ ಸಮಯಕ್ಕೆ ಸರಿಯಾದ ಕೆಲಸವನ್ನು ಮಾಡುವುದಕ್ಕೆ ಹೋಗೋದಿಲ್ಲ. ಅಂಥವರು ಸ್ಪೂರ್ತಿದಾಯಕ ಕಥೆ ಅಥವಾ ಪುಸ್ತಕಗಳನ್ನು ಓದಬೇಕು ಇದರಿಂದಾಗಿ ಅವರು ತಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವಂತಹ ಛಲವನ್ನು ಹೊಂದುತ್ತಾರೆ.

6. ಕೆಲವರು ಈ ಹಿಂದೆ ಕಳೆದ ಕ್ಷಣಗಳನ್ನು ಅಥವಾ ಮುಂದೆ ನಡೆಯಬಹುದಾದ ಕ್ಷಣಗಳನ್ನು ಸದಾ ಕಾಲ ತಮ್ಮ ತಲೆಯಲ್ಲಿ ಯೋಚಿಸುತ್ತಿರುತ್ತಾರೆ ಆದರೆ ಪ್ರಸ್ತುತ ಕ್ಷಣದ ಬಗ್ಗೆ ಅವರು ಕಡಿಮೆಯಾಗಿ ಕೇಂದ್ರೀಕರಿಸುತ್ತಾರೆ. ಹೀಗಾಗಿ ಯೋಗ ಅಥವಾ ಧ್ಯಾನದ ಮೂಲಕ ಈಗ ಇರುವಂತ ಕ್ಷಣವನ್ನು ಆನಂದಿಸುವ ಹಾಗೂ ಅದನ್ನು ಯಾವ ರೀತಿಯಲ್ಲಿ ಪ್ರೊಡಕ್ಟಿವ್ ಆಗಿ ಮಾಡಿಕೊಳ್ಳಬಹುದು ಅನ್ನೋದನ್ನು ಯೋಚಿಸುವಂತಹ ಶಕ್ತಿಯನ್ನು ಅವರಿಗೆ ನೀಡುತ್ತದೆ.

7. ಸಾಕಷ್ಟು ಜನರಲ್ಲಿ ನಿದ್ರೆ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಇದಕ್ಕಾಗಿ ಅವರು ರಾತ್ರಿ ಬೇಗ ಊಟ ಮಾಡಿ ಬೆಳಗ್ಗೆ ಬೇಗ ಎದ್ದೇಳುವಂತಹ ಅಭ್ಯಾಸ ಕ್ರಮಗಳನ್ನು ಮಾಡಿಕೊಳ್ಳಬೇಕು. ಅದರ ಜೊತೆಗೆ ರಾತ್ರಿ ಮಲಗುವಾಗ ಕಿವಿಗೆ ಇಂಪು ನೀಡುವಂತಹ ಹಾಡನ್ನು ಇಟ್ಟುಕೊಂಡು ಮಲಗಿದರೆ ಬೇಗನೆ ನಿದ್ದೆ ಬರುತ್ತದೆ.

Best News in KannadaHealth Tips