Money Plant: ಮನಿ ಪ್ಲಾಂಟ್ ಅನ್ನು ಮನೆಯ ಈ ಜಾಗದಲ್ಲಿ ಬಿಟ್ಟು ಬೇರೆ ಎಲ್ಲೇ ಇಟ್ರು ನಿಮಗೆ  ಕಷ್ಟ ಗ್ಯಾರಂಟಿ; ಈ ರೀತಿ ಬೆಳೆಸಿದ್ರೆ ದುಡ್ದು ಬರೋದೂ ಗ್ಯಾರಂಟಿ!

Money Plant: ವಾಸ್ತು ಶಾಸ್ತ್ರದ ಪ್ರಕಾರ ಸಾಕಷ್ಟು ವಸ್ತುಗಳನ್ನು ಅದೃಷ್ಟದ ಪ್ರತೀಕ ಎಂಬುದಾಗಿ ಪರಿಗಣಿಸಲಾಗುತ್ತದೆ ಅವುಗಳಲ್ಲಿ ಮನಿ ಪ್ಲಾಂಟ್ ಕೂಡ ಒಂದಾಗಿದೆ. ಮನಿ ಪ್ಲಾಂಟ್ ಅನ್ನು ಮನೆಯಲ್ಲಿ ಕೆಲವೊಂದು ನಿರ್ದಿಷ್ಟ ದಿಕ್ಕಿನಲ್ಲಿ ಇಟ್ಟರೆ ಹಣದ ಹರಿವು ಹೆಚ್ಚಾಗುತ್ತದೆ ಎಂಬುದಾಗಿ ನಂಬಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಇಂದಿನ ಲೇಖನದಲ್ಲಿ ಯಾವ ನಿರ್ದಿಷ್ಟ ದಿಕ್ಕಿನಲ್ಲಿ ಮನಿ ಪ್ಲಾಂಟ್ ಅನ್ನು ಮನೆಯಲ್ಲಿ ಇಟ್ಟರೆ ಹಣದ ಆಕರ್ಷಣೆ ಹೆಚ್ಚಾಗುತ್ತದೆ ಎನ್ನುವುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.

ಪ್ರಮುಖವಾಗಿ ವಾಸ್ತುಶಾಸ್ತ್ರದ ಪ್ರಕಾರ ಉತ್ತರ ದಿಕ್ಕಿನಲ್ಲಿ ಮನಿ ಪ್ಲಾಂಟ್ ಅನ್ನು ಇಡುವುದು ಸೂಕ್ತ ಎಂಬುದಾಗಿ ತಿಳಿಸಲಾಗುತ್ತದೆ. ಈ ದಿಕ್ಕನ್ನು ಸಂಪತ್ತಿನ ಅಧಿದೇವತೆ ಆಗಿರುವಂತಹ ಕುಬೇರ ಆಳುತ್ತಿರುತ್ತಾನೆ. ಹೀಗಾಗಿ ಈ ದಿಕ್ಕಿನಲ್ಲಿ ಕೆಂಪು ಅಥವಾ ಹಳದಿ ಬಣ್ಣದ ಬಾಟಲಿನಲ್ಲಿ ಮನಿ ಪ್ಲಾಂಟ್ ಅನ್ನು ನೆಟ್ಟು ಈ ದಿಕ್ಕಿನಲ್ಲಿ ಇಡುವುದು ಒಳ್ಳೆಯದು ಎಂಬುದಾಗಿ ವಾಸ್ತು ಶಾಸ್ತ್ರದ ಪ್ರಕಾರ ಹೇಳಲಾಗುತ್ತದೆ. ಇದನ್ನು ಹೊರತುಪಡಿಸಿ ಬೇರೆ ಸ್ಥಳದ ಬಗ್ಗೆ ಮಾತನಾಡುವುದಾದರೆ ನಿಮ್ಮ ಇಡೀ ಮನೆಯ ಆಹಾರ ಕ್ರಮ ಎನ್ನುವುದು ಪ್ರಾರಂಭವಾಗುವುದೇ ನಿಮ್ಮ ಅಡುಗೆ ಮನೆಯ ಮೂಲಕ ಹೀಗಾಗಿ ಅಡುಗೆ ಮನೆಯಲ್ಲಿ ಕೂಡ ನೀವು ಮನಿ ಪ್ಲಾಂಟ್ ಅನ್ನು ನೆಡಬಹುದಾಗಿದೆ. ಅಡುಗೆ ಮನೆಯ ಕಿಟಕಿ ಬಳಿಯಿಂದ 4 ರಿಂದ 5 ಅಡಿ ಅಂತರದಲ್ಲಿ ನೀವು ಮನಿ ಪ್ಲಾಂಟ್ ಅನ್ನು ಇಡಬಹುದಾಗಿದೆ.

ಇನ್ನು ನೀವು ಮಲಗುವ ಕೋಣೆಯಲ್ಲಿ ನೈರುತ್ಯ ದಿಕ್ಕನ್ನು ಹೊರತುಪಡಿಸಿ ಉಳಿದ ಪೂರ್ವ ಆಗ್ನೇಯ ಹಾಗೂ ಉತ್ತರ ದಕ್ಷಿಣ ದಿಕ್ಕಿನಲ್ಲಿ ಮನಿ ಪ್ಲಾಂಟ್ ಅನ್ನು ಇಡಬಹುದಾಗಿದ್ದು ಇದು ಶುಭಕರ ಎಂಬುದಾಗಿ ವಾಸ್ತು ಶಾಸ್ತ್ರದ ಪ್ರಕಾರ ಪರಿಗಣಿಸಲಾಗುತ್ತದೆ. ಮಲಗುವ ಕೋಣೆಯಲ್ಲಿ ನೀವು ಮನಿ ಪ್ಲಾಂಟ್ ಅನ್ನು ಇಡುತ್ತಿದ್ದೀರಿ ಎಂದಾದರೆ ನೀವು ಮಲಗುವಂತಹ ಮಂಚ ಅಥವಾ ಸ್ಥಳಕ್ಕಿಂತ ಸ್ವಲ್ಪ ದೂರದಲ್ಲಿ ಅಂದರೆ ಎತ್ತರದಲ್ಲಿ ಇಡಬೇಕಾಗಿರುತ್ತದೆ. ಕನಿಷ್ಠ ಪಕ್ಷ ಐದರಿಂದ ಆರು ಅಡಿ ಎತ್ತರದಲ್ಲಿ ಮನಿ ಪ್ಲಾಂಟ್ ಅನ್ನು ಇಡೋದು ಒಳ್ಳೆಯದು. ಈ ಸಸಿಗಳು ಕೂಡ ಕಾರ್ಬನ್ ಡೈ ಆಕ್ಸೈಡ್ ಅನ್ನು ಹೊರಸಿಸುವ ಕಾರಣದಿಂದಾಗಿ ನೀವು ಈ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು.

ಮನೆಯಲ್ಲಿರುವಂತಹ ನಕರಾತ್ಮಕ ಶಕ್ತಿಗಳನ್ನು ಹೊರ ಹಾಕುವುದಕ್ಕಾಗಿ ಕೂಡ ಮನಿ ಪ್ಲಾಂಟ್ ಒಂದು ಉತ್ತಮ ಸಾಧನ ಎಂಬುದಾಗಿ ಪರಿಗಣಿಸಲಾಗುತ್ತದೆ. ಇನ್ನು ಅತ್ಯಂತ ಶುಚಿತ್ವವನ್ನು ಕಾಪಾಡುವ ಸ್ಥಳ ಆಗಿರುವಂತಹ ಬಾತ್ರೂಮ್ ನಲ್ಲಿ ಕೂಡ ನೀವು ಮನಿ ಪ್ಲಾಂಟ್ ಅನ್ನು ಇಡಬಹುದಾಗಿದೆ. ಇದು ನಿಮ್ಮ ಅಲಂಕಾರಿಕ ವಸ್ತುಗಳನ್ನು ಇಡುವಂತಹ ಲಿವಿಂಗ್ ರೂಮ್ನಲ್ಲಿ ಕೂಡ ಗಣೇಶನ ದಿಕ್ಕು ಎಂದು ಕರೆಯಲ್ಪಡುವ ಆಗ್ನೇಯ ದಿಕ್ಕಿನಲ್ಲಿ ಹೂದಾನಿಗಳ ಜೊತೆಗೆ ಮನಿ ಪ್ಲಾಂಟ್ ಅನ್ನು ಇಡುವುದು ಉತ್ತಮ ಎಂಬುದಾಗಿ ಪರಿಗಣಿಸಬಹುದು. ಇದರಿಂದಾಗಿ ನಿಮ್ಮ ಮನೆಯಲ್ಲಿ ಸಮೃದ್ಧಿ ಎನ್ನುವುದು ಇನ್ನಷ್ಟು ಹೆಚ್ಚಾಗಲಿದೆ.

ಒಟ್ಟಾರೆಯಾಗಿ ಮನಿ ಪ್ಲಾಂಟ್ ಇಡೋದಕ್ಕೆ ಉತ್ತಮ ದಿಕ್ಕು ಯಾವುದೇ ಎಂಬುದಾಗಿ ನೀವು ಕೇಳೋದಾದ್ರೆ ಯಾವುದೇ ಅನುಮಾನವಿಲ್ಲದೆ ಆಗ್ನೇಯ ದಿಕ್ಕು ಎಂದು ಹೇಳಬಹುದಾಗಿದೆ. ವಿಘ್ನ ವಿನಾಶಕ ಗಣೇಶನ ಇಷ್ಟವಾಗಿರುವಂತಹ ದಿಕ್ಕಾಗಿರುವಂತಹ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇರುವುದರಿಂದ ಹಣಕಾಸು ಹಾಗೂ ಇನ್ನಿತರ ಎಲ್ಲಾ ಸಮಸ್ಯೆಗಳನ್ನು ನೀವು ಬಗೆಹರಿಸಿಕೊಳ್ಳಬಹುದಾಗಿದೆ. ಆದರೆ ಯಾವುದೇ ಕಾರಣಕ್ಕೂ ಅಪ್ಪಿತಪ್ಪಿಯೂ ಕೂಡ ಈಶಾನ್ಯ ದಿಕ್ಕಿನಲ್ಲಿ ನೀವು ಮನಿ ಪ್ಲಾಂಟ್ ಅನ್ನು ಇಡೋದಕ್ಕೆ ಹೋಗ್ಬೇಡಿ. ಹಣಕಾಸಿನ ಸಮಸ್ಯೆ ಮಾತ್ರವಲ್ಲದೆ ದಾಂಪತ್ಯ ಜೀವನದಲ್ಲಿ ಬಿರುಕು ಮೂಡುವಂತಹ ಸಾಧ್ಯತೆ ಕೂಡ ಕೆಲವೊಮ್ಮೆ ಇರುತ್ತದೆ.

money plant