Tanisha Kuppanda: ತನ್ನ ಆಸ್ತಿಯ ವಿವರ ಬಹಿರಂಗಪಡಿಸಿದ ಬಿಗ್ ಬಾಸ್ ಖ್ಯಾತಿಯ ತನಿಷ; ಮುಂದಿನ ಸಂಪಾದನೆ ಗುರಿ ಎನಂತೆ ಗೊತ್ತಾ? ಮದುವೆ ಆಗುವ ಹುಡುಗ ಅದೃಷ್ಟ ಮಾಡಿದ್ದ ಎಂದ ನೆಟ್ಟಿಗರು!

Tanisha Kuppanda: ಇತ್ತೀಚಿಗಷ್ಟೇ ಮುಗಿದಿರುವಂತಹ ಬಿಗ್ ಬಾಸ್ನ 10ನೇ ಅವತರಿಣಿಕೆಯ ನಂತರ ಅದರಲ್ಲಿ ಸ್ಪರ್ಧೆ ಮಾಡಿರುವಂತಹ ಸ್ಪರ್ಧಿಗಳು ಈಗ ಜನಜನಿತವಾಗಿದ್ದಾರೆ ಅನ್ನೋದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಅದರಲ್ಲೂ ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ನಾವು ಮಾತನಾಡುತ್ತಿರುವುದು ತನಿಷ ಕುಪ್ಪಂಡ ಅವರ ಬಗ್ಗೆ. ಬಿಗ್ ಬಾಸ್ (Bigg Boss) ಮನೆಗೆ ಕಾಲಿಡುವುದಕ್ಕಿಂತ ಮುಂಚೆ ಅವರು ಒಂದು ಸಿನಿಮಾದ ಕಾಂಟ್ರವರ್ಸಿಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ರು ಅನ್ನೋದನ್ನ ನೀವೆಲ್ಲರೂ ತಿಳಿದುಕೊಂಡಿದ್ದೀರಿ. ಬಿಗ್ ಬಾಸ್ ಮನೆಗೆ ಹೋಗಿ ಬಂದ ನಂತರವೂ ಕೂಡ ಈಗ ಅವರು ಸಾಕಷ್ಟು ಸುದ್ದಿಯಲ್ಲಿದ್ದಾರೆ.

ಆಸ್ತಿ ರಿಜಿಸ್ಟ್ರೇಷನ್ ನಲ್ಲಿ ಭಾರಿ ಬದಲಾವಣೆಯನ್ನು ಜಾರಿಗೆ ತಂದ ಸರ್ಕಾರ; ಪೇಪರ್ ಆಧಾರಿತ ಆಸ್ತಿ ನೋಂದಣಿಗೆ ಯಾವ ವಾಲ್ಯೂನೂ ಇಲ್ಲ!

ತನಿಷ ತಮ್ಮ ಮೇಕಪ್ಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ ಅನ್ನುವುದನ್ನ ಬಲ್ಲ ಮೂಲಗಳು ತಿಳಿಸಿವೆ. ಇನ್ನು ಕೇವಲ ಈ ವಿಚಾರದಲ್ಲಿ ಮಾತ್ರವಲ್ಲದೆ ಅವರು ಬೇರೆ ಬೇರೆ ಸ್ಥಳಗಳಿಗೆ ಟ್ರಿಪ್ ಗೆ ಹೋಗುವುದಕ್ಕೆ ಕೂಡ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ತನಿಷಾ ಕುಪ್ಪಂಡ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಅಭೂತಪೂರ್ವವಾದ ಹೋಟೆಲ್ ಅನ್ನು ಕೂಡ ಹೊಂದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಆದರೆ ಇತ್ತೀಚಿಗಷ್ಟೇ ಮಾಧ್ಯಮ ಮಿತ್ರರು ತನಿಷ ಅವರ ಬಳಿ ಹೋಗಿ ಎಷ್ಟು ಆಸ್ತಿ ಮಾಡಿಕೊಂಡಿದ್ದಿರಾ ಮೇಡಂ ಹೋಟೆಲ್ ಯಾರ ಹೆಸರಿನಲ್ಲಿದೆ ಎನ್ನುವಂತಹ ಪ್ರಶ್ನೆಯನ್ನು ಕೇಳಿದಾಗ ಅವರು ನೀಡಿರುವಂತಹ ಉತ್ತರ ನಿಜಕ್ಕೂ ಕೂಡ ಆಶ್ಚರ್ಯ ನೋಡುವಂತೆ ಮಾಡಿತ್ತು‌.

ಹೌದು ಗೆಳೆಯರೇ ಈ ಪ್ರಶ್ನೆಗೆ ತನಿಷ ಅವರು ಮಾತನಾಡುತ್ತಾ ಏನು ಆಸ್ತಿ ಮಾಡಿಕೊಂಡಿಲ್ಲ ಹೋಟೆಲ್ ಕೂಡ ನಮ್ಮ ಅಪ್ಪನ ಹೆಸರಿನಲ್ಲಿ ಇರೋದು ಅನ್ನೋದಾಗಿ ಹೇಳ್ಕೊಂಡಿದ್ದಾರೆ.

ಇನ್ಮುಂದೆ ಕಷ್ಟಪಟ್ಟು ಕೆಲಸ ಮಾಡಬೇಕು ಹಾಗೂ ಆಸ್ತಿಯನ್ನು ಸ್ವಂತ ದುಡಿಮೆಯಿಂದ ಸಂಪಾದನೆ ಮಾಡ್ತೀನಿ ಅನ್ನೋದಾಗಿ ಮಾಧ್ಯಮದವರಿಗೆ ತನಿಷಾ ಹೇಳಿಕೊಂಡಿದ್ದಾರೆ. ಇನ್ನು ಪರಿಶ್ರಮ ಹಾಗೂ ನೇರ ನುಡಿಯ ವಿಚಾರದಲ್ಲಿ ತನಿಷ ಅವರನ್ನು ಯಾರು ಕೂಡ ಮೀರಿಸಲು ಸಾಧ್ಯವಾಗುವುದಿಲ್ಲ ಅನ್ನೋದನ್ನ ಅವರ ಆಪ್ತರು ಹೇಳುತ್ತಾರೆ. ತಮ್ಮ ನೇರನುಡಿಯ ಮಾತುಗಳಿಂದಲೇ ಬಿಗ್ ಬಾಸ್ ನಲ್ಲಿ ಕೂಡ ಪ್ರೇಕ್ಷಕರಿಗೆ ಇಷ್ಟ ಆಗ್ತಾರೆ.

ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರವೂ ಕೂಡ ಸಾಕಷ್ಟು ಸುದ್ದಿಯಲ್ಲಿ ಹಾಗೂ ಜನಪ್ರಿಯತೆಯನ್ನು ಹೊಂದಿರುವಂತಹ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ತನಿಷ ಕೂಡ ಒಬ್ಬರು ಎಂದು ಹೇಳಬಹುದಾಗಿದೆ. ಮುಂದಿನ ದಿನಗಳಲ್ಲಿ ಕಷ್ಟಪಟ್ಟು ದುಡಿದು ಎಲ್ಲವನ್ನು ಸಂಪಾದನೆ ಮಾಡುತ್ತೇನೆ ಎನ್ನುವುದಾಗಿ ಹೇಳಿರುವಂತಹ ತನಿಷ ಯಾವ ರೀತಿಯಲ್ಲಿ ತಾವು ಹೇಳಿದ ಮಾತಿನ ರೀತಿಯಲ್ಲಿ ನಡೆದುಕೊಳ್ಳುತ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.

ಬಿಗ್ ಬಾಸ್ ನಲ್ಲಿ ಕೂಡ ಟಾಸ್ ಮಾಡುವಾಗ ಡೇರಿಂಗ್ ಆಗಿ ಪೂರೈಸುತ್ತಿದ್ದ ತನಿಷಾ ನಿಜ ಜೀವನದಲ್ಲಿ ಕೂಡ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಾರೆ ಎನ್ನುವುದು ಅವರ ಅಭಿಮಾನಿಗಳು ನಂಬಿಕೆ. ಮುಂದಿನ ದಿನಗಳಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಕೂಡ ನಾವು ಅವರನ್ನು ಕಾಣಬಹುದಾಗಿದೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಕಾರ್ತಿಕ್ ಅವರ ಸಹೋದರಿಯ ಮಗುವನ್ನ ಅವರು ನೋಡಿಕೊಂಡು ಬಂದಿದ್ದು ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿತ್ತು.

Bigg Bossbigg boss kannada season 10Tanisha Kuppanda