Cricket News: ನಾನೇ ಎಲ್ಲಾ ನಂದೇ ಎಲ್ಲಾ ಎಂದು ಮೆರೆಯುತ್ತಿದ್ದ ಆಟಗಾರರ ಕ್ರಿಕೆಟ್ ಜೀವನ ಮುಗಿತಾ? ಟಾಪ್ ನಾಲ್ಕು ಪ್ಲೇಯರ್ಸ್ ಯಾರು ಗೊತ್ತೇ ?

Cricket News: ಭಾರತೀಯ ಕ್ರಿಕೆಟ್ ಬೋರ್ಡ್ ಇವತ್ತು ಇಡೀ ವಿಶ್ವದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿ ಕಾಣಿಸಿಕೊಳ್ಳುತ್ತದೆ. ನಮ್ಮ ಭಾರತೀಯ ಕ್ರಿಕೆಟ್ ಬೋರ್ಡ್ ಕೂಡ ಬರುತ್ತಿರುವಂತಹ ಹಣದಿಂದ ಇನ್ನಷ್ಟು ಕ್ರಿಕೆಟ್ ಪ್ರತಿಭೆಗಳನ್ನು ಹುಡುಕುತ್ತಿದೆ ಹಾಗೂ ಇರುವಂತಹ ಕ್ರಿಕೆಟ್ ಪ್ರತಿಭೆಗಳಿಗೆ ಬೇಕಾಗಿರುವಂತಹ ಪ್ರತಿಯೊಂದು ಸಂಪನ್ಮೂಲಗಳನ್ನು ಒದಗಿಸುವಂತಹ ಕೆಲಸವನ್ನು ಮಾಡುತ್ತಿದೆ. ಇತ್ತೀಚಿಗಷ್ಟೇ ಬಿಸಿಸಿಐ ಅನೌನ್ಸ್ ಮಾಡಿರುವಂತಹ ಕೇಂದ್ರ ಗುತ್ತಿಗೆಯನ್ನು ಹೊಂದಿರುವಂತಹ ಆಟಗಾರರ ಪೈಕಿಯಲ್ಲಿ ನಾಲ್ಕು ಖ್ಯಾತನಾಮ ಆಟಗಾರರು ಈಗ ಕಾಂಟ್ರಾಕ್ಟ್ ನಿಂದ ಹೊರಗೆ ತಳ್ಳಲ್ಪಟ್ಟಿದ್ದಾರೆ ಅನ್ನೋದಾಗಿ ತಿಳಿದು ಬಂದಿದ್ದು ಇದು ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಆಶ್ಚರ್ಯವನ್ನು ತರಿಸಿದೆ ಎಂದು ಹೇಳಬಹುದಾಗಿದೆ.

ಇತ್ತೀಚಿಗಷ್ಟೇ ಬಿಸಿಸಿಐ ಅನೌನ್ಸ್ ಮಾಡಿರುವಂತಹ ಕೇಂದ್ರ ಗುತ್ತಿಗೆಯನ್ನು ಹೊಂದಿರುವ ಆಟಗಾರರ ಪೈಕಿಯಲ್ಲಿ A+ ಶ್ರೇಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ಜೊತೆಗೆ ವಿರಾಟ್ ಕೊಹ್ಲಿ ಹಾಗೂ ಬುಮ್ರಾ ಹಾಗೂ ಜಡೇಜ ಕಾಣಿಸಿಕೊಳ್ಳುತ್ತಾರೆ. ಇವರಿಗೆ ವಾರ್ಷಿಕವಾಗಿ ಏಳು ಕೋಟಿ ರೂಪಾಯಿಗಳ ಸಂಭಾವನೆಯನ್ನು ನೀಡಲಾಗುತ್ತದೆ. ಇನ್ನು ಈ ದರ್ಜೆಯಲ್ಲಿ ಅಂದರೆ 5 ಕೋಟಿ ರೂಪಾಯಿಗಳ ವಾರ್ಷಿಕ ಸಂಭಾವನೆಯ ಪಟ್ಟಿಯಲ್ಲಿ, ಕೆ ಎಲ್ ರಾಹುಲ್, ಸಿರಾಜ್, ಅಶ್ವಿನ್, ಗಿಲ್ ಕೂಡ ಕಾಣಿಸಿಕೊಳ್ಳುತ್ತಾರೆ. ಇದೇ ರೀತಿಯೇ ಬೇರೆ ಬೇರೆ ಗ್ರೇಡ್ ಗಳಲ್ಲಿ ಇತರ ಭಾರತೀಯ ಕ್ರಿಕೆಟಿಗರು ಕಾಣಿಸಿಕೊಳ್ಳುತ್ತಾರೆ.

Ishan kishan and Shreyas iyer

ಇನ್ನು ಜೈ ಶಾ ಅವರ ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ಅಂದರೆ ರಣಜಿಯಲ್ಲಿ ಆಡಬೇಕು ಎನ್ನುವಂತಹ ಸೂಚನೆಯನ್ನು ಮೀರಿ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಇಬ್ರು ಕೂಡ ಬಿಸಿಸಿಐನ ಕಾಂಟ್ರಾಕ್ಟ್ ನಿಂದ ಹೊರ ಬಿದ್ದಿದ್ದಾರೆ. ಇಬ್ಬರೂ ಕೂಡ ಸೆಂಟ್ರಲ್ ಕಾಂಟ್ರಾಕ್ಟ್ ಅನ್ನು ಸರಿಯಾದ ರೀತಿಯಲ್ಲಿ ಪಾಲಿಸಿಲ್ಲ ಎನ್ನುವ ಕಾರಣಕ್ಕಾಗಿ ಅವರನ್ನು ತೆಗೆದು ಹಾಕಲಾಗಿದೆ ಎಂಬುದಾಗಿ ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ. ಇನ್ನು ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಆಡುತ್ತಿದ್ದ ಶ್ರೇಯಸ್ ಅಯ್ಯರ್ ಅವರು ಬೆನ್ನುನೋವಿನ ಕಾರಣವನ್ನು ಹೇಳಿ ಡೊಮೆಸ್ಟಿಕ್ ಕ್ರಿಕೆಟ್ ಅನ್ನು ತಪ್ಪಿಸಿಕೊಂಡಿದ್ದಾರೆ. ಇಶಾನ್ ಕೂಡ ಭಾರತೀಯ ತಂಡದ ಪರವಾಗಿ ಹೆಚ್ಚಿನ ಕ್ರಿಕೆಟ್ ಈ ಬಾರಿ ಆಡಿಲ್ಲ ಹಾಗೂ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ರು ಕೂಡ ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ಕೂಡ ಆಡಿಲ್ಲ.

cheteshwar pujara

ಇವರಿಬ್ಬರಷ್ಟೇ ಮಾತ್ರವಲ್ಲದೆ ಟೆಸ್ಟ್ ಕ್ರಿಕೆಟ್ ಸ್ಪೆಷಲಿಸ್ಟ್ ಆಗಿರುವಂತಹ ಚೇತೇಶ್ವರ ಪೂಜಾರ ಹಾಗೂ ಅನುಭವಿ ಸ್ಪಿನ್ನರ್ ಚಹಲ್ ಇಬ್ರೂ ಕೂಡ ಸೆಂಟ್ರಲ್ ಕಾಂಟಾಕ್ಟ್ ನಿಂದ ಹೊರ ಬಿದ್ದಿದ್ದಾರೆ ಅನ್ನೋದಾಗಿ ತಿಳಿದು ಬಂದಿದೆ. ಸಾಕಷ್ಟು ಸಮಯಗಳಿಂದ ಇವರಿಬ್ಬರಿಗೂ ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡಲು ಅವಕಾಶ ಸಿಕ್ತಿಲ್ಲ ಹಾಗೂ ಈಗ ಸೆಂಟ್ರಲ್ ಕಾಂಟಾಕ್ಟ್ ಇಂದ ಕೂಡ ಹೊರ ಬಿದ್ದಿರುವುದು ಇವರಿಬ್ಬರ ಕರಿಯರ್ ಮುಗಿತಾ ಅನ್ನೋ ಪ್ರಶ್ನೆ ಮೂಡುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಈ ಆಟಗಾರರು ಯಾವ ರೀತಿಯಲ್ಲಿ ನಿರ್ಧಾರವನ್ನು ಕೈ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Cricket newsVirat Kohli