Zodiac sign: ವೃಷಭ ರಾಶಿಗೆ ಬಂದೆ ಬಿಟ್ಟ ಗುರು- ಇನ್ನು ಈ ಮೂರು ರಾಶಿಗಳು ಆಡಿದ್ದೇ ಆಟ, ಆದಾಯ ದುಪ್ಪಟ್ಟು, ಹಣ ಲೆಕ್ಕಕ್ಕೆ ಇರಲ್ಲ.

Zodiac sign: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಗ್ರಹ ಇಷ್ಟು ದಿನ ಮೇಷ ರಾಶಿಯಲ್ಲಿತ್ತು. ಆದರೆ ಈಗ ಅಂದರೆ ಮಾರ್ಚ್ 1ರಿಂದ ವೃಷಭ ರಾಶಿಗೆ ಕಾಲಿಟ್ಟಿದ್ದು ಇದರಿಂದಾಗಿ ದ್ವಾದಶ ರಾಶಿಗಳ ಮೇಲೆ ಕೂಡ ಪರಿಣಾಮ ಬೀರಲಿದೆ. ಆದರೆ ವಿಶೇಷವಾಗಿ ಮೂರು ರಾಶಿಯವರ ಮೇಲೆ ಅದೃಷ್ಟದ ಪರಿಣಾಮ ಬೀರಲಿದೆ. ಗುರುವಿನ ಕೃಪಾಕಟಾಕ್ಷದಿಂದಾಗಿ ಈ ಮೂರು ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ ಹಾಗೂ ಅವರು ಪ್ರಾರಂಭ ಮಾಡುವಂತಹ ಪ್ರತಿಯೊಂದು ಕೆಲಸಗಳು ಕೂಡ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಹಾಗಿದ್ರೆ ಬನ್ನಿ ಆ 3 ಅದೃಷ್ಟವಂತ ರಾಶಿಯವರು ಯಾರೆಲ್ಲಾ ಎಂಬುದನ್ನು ತಿಳಿಯೋಣ.

 ಮೇಷ ರಾಶಿ (Aries)

13 ತಿಂಗಳುಗಳ ಕಾಲ ಮೇಷ ರಾಶಿಯಲ್ಲಿ ಇರುವಂತಹ ಗುರು ಈಗ ವೃಷಭ ರಾಶಿಯವರಿಗೆ ಕಾಲಿಟ್ಟಿದ್ದಾನೆ ಹೀಗಾಗಿ ಮೇಷ ರಾಶಿಯವರಿಗೆ ಕೂಡ ಈ ವಿಶೇಷವಾದ ಯೋಗ ಉತ್ತಮ ಅದೃಷ್ಟವನ್ನು ತಂದುಕೊಡಲಿದೆ. ಸಾಕಷ್ಟು ಸಮಯಗಳಿಂದ ಬಾಕಿ ಉಳಿದಿರುವಂತಹ ಪ್ರತಿಯೊಂದು ಕೆಲಸಗಳು ಕೂಡ ಈ ಸಂದರ್ಭದಲ್ಲಿ ಯಶಸ್ವಿಯಾಗಿ ಸಂಪೂರ್ಣಗೊಳ್ಳಲಿವೆ. ಈ ಅರ್ಧಕ್ಕೆ ನಿಂತಿರುವ ಕೆಲಸಗಳನ್ನು ಸಂಪೂರ್ಣವಾಗಿ ಮುಗಿಸುವ ಮೂಲಕ ನೀವು ಇನ್ನಷ್ಟು ಹೆಚ್ಚಿನ ಆದಾಯವನ್ನು ಪಡೆದುಕೊಳ್ಳಬಹುದಾಗಿದೆ. ಹಣವನ್ನು ಸಂಪಾದನೆ ಮಾಡುವುದಕ್ಕೆ ಸಾಕಷ್ಟು ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಆರ್ಥಿಕ ಸದೃಢತೆಯ ವಿಚಾರದಲ್ಲಿ ನೀವು ಈ ಸಂದರ್ಭದಲ್ಲಿ ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ. ಆಸ್ತಿ ಮನೆ ಹಾಗೂ ಹೊಸ ವಾಹನವನ್ನು ಖರೀದಿ ಮಾಡುವಂತಹ ಅವಕಾಶ ಕೂಡ ನಿಮ್ಮದಾಗಲಿದೆ. ಒಟ್ಟಾರೆಯಾಗಿ ಈ ಅವಧಿಯಲ್ಲಿ ಮೇಷ ರಾಶಿಯವರು ಏನೇ ಮಾಡಿದರು ಕೂಡ ಲಾಭ ಕಟ್ಟಿಟ್ಟ ಬುತ್ತಿಯಾಗಿದೆ.

 ವೃಷಭ ರಾಶಿ (Taurus)

ಗುರುವಿನ ಈ ಚಲನೆ ಅನ್ನುವುದು ವೃಷಭ ರಾಶಿಯಲ್ಲಿ ಆಗುತ್ತಿರುವ ಕಾರಣದಿಂದಾಗಿ ಖಂಡಿತವಾಗಿ ಯಾವುದೇ ಅನುಮಾನವಿಲ್ಲದೆ ವೃಷಭ ರಾಶಿಯವರಿಗೆ ಈ ಸಮಯ ಅದೃಷ್ಟದ ಸಮಯ ಎಂದು ಹೇಳಬಹುದಾಗಿದೆ. ಕಾಣುತ್ತಿರುವಂತಹ ಪ್ರತಿಯೊಂದು ಸಮಸ್ಯೆಗಳಿಂದ ಪರಿಹಾರವನ್ನು ಪಡೆದುಕೊಳ್ಳುವಂತಹ ಅವಕಾಶ ನಿಮಗಾಗಿ ತೆರೆಯಲಿದೆ. ಆರ್ಥಿಕವಾಗಿ ಕೂಡ ಹಣವನ್ನು ಗಳಿಸುವಂತಹ ಸಾಕಷ್ಟು ಅವಕಾಶಗಳು ವೃಷಭ ರಾಶಿಯವರಿಗೆ ಕಾಣಲಿದೆ. ಒಂದು ವೇಳೆ ಹೊಸ ಕೆಲಸಕ್ಕಾಗಿ ಕಾಯುತ್ತಿದ್ದರೆ ಅಥವಾ ಈಗಾಗಲೇ ಇರುವಂತಹ ಕೆಲಸದಿಂದ ಹೊರಬಂದು ಬೇರೆ ಹೊಸ ಕೆಲಸವನ್ನು ಆಯ್ಕೆ ಮಾಡುವಂತಹ ಅವಕಾಶಕ್ಕಾಗಿ ನೀವು ಕಾಯ್ತಾ ಇದ್ರೆ ಖಂಡಿತವಾಗಿ ಸದ್ಯದಲ್ಲಿ ನಿಮಗೆ ಒಳ್ಳೆಯ ಸುದ್ದಿ ಕೇಳಿ ಬರಲಿದೆ. ವ್ಯಾಪಾರಸ್ಥರು ಕೂಡ ಈ ಸಂದರ್ಭದಲ್ಲಿ ವ್ಯಾಪಾರದಲ್ಲಿ ದೊಡ್ಡ ಮಟ್ಟದ ಲಾಭ ಸಂಪಾದನೆಯನ್ನು ಮಾಡಲಿದ್ದಾರೆ. ಸಾಕಷ್ಟು ಸಮಯಗಳಿಂದ ಕಂಕಣ ಭಾಗ್ಯಕ್ಕಾಗಿ ಕಾಯುತ್ತಿರುವ ಅಂತಹ ಅವಿವಾಹಿತರಿಗೆ ಮದುವೆಯಾಗುವ ಭಾಗ್ಯ ಇದೆ. ಆರೋಗ್ಯದಲ್ಲಿ ಕೂಡ ಸುಧಾರಣೆ ಕಂಡು ಬರಲಿದೆ.

 ಕರ್ಕ ರಾಶಿ (Cancer)

ಕರ್ಕ ರಾಶಿಯವರು ಈ ಸಂದರ್ಭದಲ್ಲಿ ತಾವು ಮಾಡುವಂತಹ ಕೆಲಸಗಳಿಂದಾಗಿ ಸಮಾಜದಲ್ಲಿ ಜನರ ದೃಷ್ಟಿಯಲ್ಲಿ ಗೌರವ ಸಂಪಾದನೆಯನ್ನು ಮಾಡಲಿದ್ದಾರೆ. ಉದ್ಯೋಗದಲ್ಲಿ ಸಾಕಷ್ಟು ಅವಕಾಶಗಳು ನಿಮಗೆ ಪ್ರತಿ ಜೀವನದ ಉತ್ತುಂಗವನ್ನು ತಲುಪುವುದಕ್ಕೆ ಕಾದಿವೆ. ಕೆಲಸದ ಜೀವನದಲ್ಲಿ ನೀವು ಸಾಕಷ್ಟು ಯಶಸ್ಸನ್ನು ಪಡೆಯುವಂತಹ ಅವಕಾಶವನ್ನು ಕೂಡ ತಂದುಕೊಳ್ಳಲಿದ್ದೀರಿ. ಕುಟುಂಬದಲ್ಲಿ ಕೂಡ ಯಾವುದೇ ಸಮಸ್ಯೆ ಇಲ್ಲದೆ ನೆಮ್ಮದಿಯಾಗಿ ಜೀವನ ಕಳೆಯುವಂತಹ ಸಮಯ ಕೂಡಿ ಬರಲಿದೆ. ಆದಾಯದಲ್ಲಿ ಕೂಡ ಹೆಚ್ಚಿನ ಏರಿಕೆ ಕಂಡು ಬಂದಿರುವ ಕಾರಣದಿಂದಾಗಿ ನೀವು ಮನೆಯಲ್ಲಿ ಕೂಡ ಪರಿಸ್ಥಿತಿಯನ್ನು ಇನ್ನಷ್ಟು ಹದಗೊಳಿಸುವಂತಹ ಅವಕಾಶವನ್ನು ಹೊಂದಲಿದ್ದೀರಿ. ಮಾಡುವಂತ ಎಲ್ಲಾ ಕೆಲಸಕ್ಕೆ ಕೂಡ ನಿಮ್ಮ ಕುಟುಂಬ ಸದಸ್ಯರಿಂದ ಸಾಥ್ ಸಿಗಲಿದೆ. ಆದಷ್ಟು ದಾನ ಧರ್ಮಗಳನ್ನು ಮಾಡಿ ದೇವರ ಕೃಪಾಕಟಾಕ್ಷ ನಿಮ್ಮ ಮೇಲೆ ಇರಲಿದೆ.

12 zodiac signsAstrologyHoroscopezodiac sign