Political News: ಒಂದು ಕಡೆ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಗೀತ ಶಿವರಾಜಕುಮಾರ್. ಇನ್ನೊಂದು ಕಡೆ ಸ್ವಾಮೀಜಿಯಿಂದ ಹೊರಬಂತು ಆ-ಘಾ-ತಕಾರಿ ಶಪಥ!

Political News: ಇನ್ನೇನು ಕೆಲವೇ ಸಮಯಗಳಲ್ಲಿ ಲೋಕಸಭಾ ಚುನಾವಣೆ ಪ್ರಾರಂಭವಾಗಲಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಪರವಾಗಿ ಗೀತಾ ಶಿವರಾಜಕುಮಾರ್ ಅವರು ಸ್ಪರ್ಧಿಸಲಿದ್ದಾರೆ ಎನ್ನುವಂತಹ ಮಾಹಿತಿ ಬಹುತೇಕ ಪಕ್ಕ ಆಗಿದೆ. ಆದರೆ ಈ ಬಾರಿಯ ಚುನಾವಣೆ ಪ್ರಾರಂಭವಾಗುವುದಕ್ಕಿಂತ ಮುಂಚೇನೆ ಅವರಿಗೆ ಹಿನ್ನಡೆ ಆಗುವಂತಹ ಕೆಲವೊಂದು ಬೆಳವಣಿಗೆಗಳು ನಡೆದಿರುವುದು ನಿಜಕ್ಕೂ ಕೂಡ ಆಶ್ಚರ್ಯವನ್ನು ತರಿಸುತ್ತಿದೆ. ಹೌದು ಪ್ರಣವಾನಂದ ಸ್ವಾಮೀಜಿಗಳು ಗೀತಾ ಶಿವರಾಜಕುಮಾರ್ ಅವರ ವಿರುದ್ಧವಾಗಿ ಹೇಳಿರುವಂತಹ ಒಂದು ಹೇಳಿಕೆ ಈಗ ಗೀತಾ ಶಿವರಾಜಕುಮಾರ್ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ತರುವ ಪರಿಣಾಮವನ್ನು ಹೆಚ್ಚಿಸಿದೆ ಎಂದು ಹೇಳಬಹುದಾಗಿದೆ.

ಹೌದು ಗೀತಾ ಶಿವರಾಜಕುಮಾರ್ ಅವರು ಸ್ಪರ್ಧೆ ಮಾಡಿದ್ರೆ ಅವರಿಗೆ ಬೆಂಬಲ ನೀಡುವುದಿಲ್ಲ ಎನ್ನುವುದಾಗಿ ಪ್ರಣವಾನಂದ ಸ್ವಾಮೀಜಿಗಳು ನೇರವಾಗಿ ಹೇಳಿಕೆ ನೀಡಿದ್ದಾರೆ. ಇದರ ಹಿಂದಿನ ಕಾರಣವನ್ನು ಕೂಡ ಅವರು ನೇರವಾಗಿ ಬಿಚ್ಚಿಟ್ಟಿದ್ದಾರೆ. ಕನ್ನಡ ಚಿತ್ರರಂಗದ ವಾರ ನಟ ಡಾ. ರಾಜಕುಮಾರ್ ಅವರು ರಾಜಕೀಯ ಕ್ಷೇತ್ರಕ್ಕೆ ಬರುವಂತಹ ಸಾಕಷ್ಟು ಅವಕಾಶಗಳನ್ನು ಹೊಂದಿದರು ಕೂಡ ಅವರು ರಾಜಕೀಯಕ್ಕೆ ಬರೋದಕ್ಕೆ ಹೋಗ್ಲಿಲ್ಲ. ರಾಜಕುಮಾರ್ ಕುಟುಂಬದವರು ರಾಜಕೀಯಕ್ಕೆ ಬರೋದು ಸರಿ ಕಾಣಲ್ಲ ಅನ್ನೋದಾಗಿ ಸ್ವಾಮೀಜಿಗಳು ಹೇಳಿದ್ದಾರೆ.

ಇನ್ನು ಪ್ರಣವಾನಂದ ಸ್ವಾಮೀಜಿಗಳು ಇತ್ತೀಚಿಗೆ ಶಿವಣ್ಣ ಕೂಡ ಸಚಿನ್ ರವರಂತೆ ಹೇಳಿಕೆ ನೀಡುತ್ತಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಈ ಹಿಂದೆ ಸಚಿನ್ ತೆಂಡೂಲ್ಕರ್ ಅವರು ಸಿಕ್ಸರ್ ಗಳನ್ನು ಬಾರಿಸಿರುವ ಬಗ್ಗೆ ನಾನು ಸಿಕ್ಸರ್ ಗಳನ್ನು ಬಾರಿಸಿಲ್ಲ ನನ್ನ ಕೈ ಹೊಡೆದಿತ್ತು ಎಂಬುದಾಗಿ ಹೇಳಿದ್ರು ಅದೇ ರೀತಿ ಶಿವಣ್ಣ ಕೂಡ ರಾಜಕೀಯದಲ್ಲಿ ಅದೇ ರೀತಿಯ ನಡವಳಿಕೆಯನ್ನು ಮಾಡುತ್ತಿದ್ದಾರೆ ಎಂಬುದಾಗಿ ಅವರು ಹೇಳಿದ್ದಾರೆ. ಒಟ್ಟಾರೆಯಾಗಿ ಯಾವುದೇ ಕಾರಣಕ್ಕೂ ಗೀತ ಶಿವರಾಜ್ ಕುಮಾರ್ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ನನ್ನ ಬೆಂಬಲ ಇಲ್ಲ ಎನ್ನುವುದನ್ನು ಸ್ಪಷ್ಟವಾಗಿ ಪ್ರಣವಾನಂದ ಸ್ವಾಮೀಜಿಗಳು ಹೇಳಿಕೊಂಡಿದ್ದಾರೆ.

ಸದ್ಯಕ್ಕೆ ಶಿವಣ್ಣ ತಮ್ಮ ಕರಟಕ ದಮನಕ ಸಿನಿಮಾದ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಈ ಸಿನಿಮಾದಲ್ಲಿ ಶಿವಣ್ಣ ಅವರ ಜೊತೆಗೆ ಪ್ರಭುದೇವ ಅವರು ಕೂಡ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುವುದಕ್ಕೆ ಸಜ್ಜಾಗಿ ನಿಂತಿದೆ. ಇನ್ನು ದೊಡ್ಮನೆ ಕುಟುಂಬದಿಂದ ಯುವರಾಜ್ ಕುಮಾರ್ ಕೂಡ ಯುವ ಸಿನೆಮಾದ ಮೂಲಕ ಈ ತಿಂಗಳ ಅಂತ್ಯದಲ್ಲಿ ರಾಜ್ಯದಲ್ಲಿರುವಂತಹ ಪ್ರತಿಯೊಂದು ಚಿತ್ರಮಂದಿರಗಳಿಗೆ ಪರದೆಯ ಮೇಲೆ ಅಪ್ಪಳಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡಲು ಸಿದ್ಧವಾಗಿ ನಿಂತಿದ್ದಾರೆ. ಒಟ್ಟಾರೆಯಾಗಿ ಒಂದಲ್ಲ ಒಂದು ರೀತಿಯಲ್ಲಿ ದೊಡ್ಡಮನೆ ಸದ್ದು ಮಾಡುತ್ತಿದೆ ಎಂದು ಹೇಳಬಹುದಾಗಿದೆ.

ElectionGeeta ShivrajkumarPolitical news