Eclipse 2024: ಈ ವರ್ಷದ ಮೊದಲ ಸೂರ್ಯ ಮತ್ತು ಚಂದ್ರ ಗ್ರಹಣಗಳು ಈ ರಾಶೀಯವರ ಭವಿಷ್ಯವನ್ನೇ ಬದಲಾಯಿಸಲಿವೆ; ಆದರೆ ಉಳಿದ ರಾಶಿಗಳು ಮಾತ್ರ..

Eclipse 2024: ಸ್ನೇಹಿತರೆ ಈ ವರ್ಷದ ಮೊದಲ ಚಂದ್ರ ಗ್ರಹಣ ಹಾಗೂ ಸೂರ್ಯಗ್ರಹಣ ಆದಷ್ಟು ಶೀಘ್ರದಲ್ಲಿಯೇ ನಡೆಯಲಿವೆ. ಮೊದಲಿಗೆ ಇದೇ ಮಾರ್ಚ್ 25ರಂದು ಚಂದ್ರ ಗ್ರಹಣ ನಡೆಯಲಿದ್ದು ಅದಾದ ನಂತರ ಇದೇ ಏಪ್ರಿಲ್ 8ರಂದು ಸೂರ್ಯ ಗ್ರಹಣ ನಡೆಯಲಿದೆ. ಈ ಸಂದರ್ಭದಲ್ಲಿ ನಾಲ್ಕು ರಾಶಿಯವರ ಅದೃಷ್ಟ ಬದಲಾಗಲಿದ್ದು ಬನ್ನಿ ಆ ಅದೃಷ್ಟವಂತ ರಾಶಿಯವರು ಯಾರು ಹಾಗೂ ಅವರಿಗೆ ಸಿಗುವಂತಹ ಲಾಭಗಳೇನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

 ಮೇಷ ರಾಶಿ (Aries )

ವರ್ಷದ ಮೊದಲನೇ ಚಂದ್ರ ಗ್ರಹಣ ಹಾಗೂ ಸೂರ್ಯಗ್ರಹಣದ ಪರಿಣಾಮದಿಂದಾಗಿ ಮೇಷ ರಾಶಿಯವರ ಜೀವನದಲ್ಲಿ ಈ ಸಮಯದಲ್ಲಿ ದೊಡ್ಡಮಟ್ಟದ ಸಾಧನೆ ಮಾಡುವ ಸಾಧ್ಯತೆ ಇದೆ. ವ್ಯವಹಾರದ ಪ್ರತಿಯೊಂದು ಹಂತದಲ್ಲಿ ಕೂಡ ಲಾಭವನ್ನು ಸಂಪಾದನೆ ಮಾಡಲಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ನಿಮ್ಮ ದಾಂಪತ್ಯ ಜೀವನದಲ್ಲಿ ಸುಖ ಸಂತೋಷ ನೆಮ್ಮದಿ ತುಂಬಿ ತುಳು ಕಾಡಲಿದೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ನಷ್ಟ ಎನ್ನುವಂತಹ ಅನುಭವವನ್ನು ನೀವು ಕನಸಿನಲ್ಲಿ ಕೂಡ ಕಾಣಲು ಸಾಧ್ಯವಿಲ್ಲ.

 ಮಿಥುನ ರಾಶಿ (Gemini)

ಯಾವುದಾದರೂ ಸಮಯದಲ್ಲಿ ನಿಮಗೆ ಬರಬೇಕಾಗಿರುವಂತಹ ಹಣ ಅರ್ಧಕ್ಕೆ ನಿಂತಿದ್ರೆ ಈ ಗ್ರಹಣಗಳ ಸಂದರ್ಭದಲ್ಲಿ ನಿಮ್ಮ ಕೈಗೆ ಸೇರಬೇಕಾಗಿರುವ ಹಣ ಕ್ಷಣಮಾತ್ರದಲ್ಲಿ ಬಂದು ಸೇರಲಿದೆ. ಬೇರೆಯವರಿಗೆ ನೀವು ನೀಡಬೇಕಾಗಿರುವ ಸಾಲದ ಹಣವನ್ನು ತೀರಿಸುವ ಸಾಮರ್ಥ್ಯ ಕೂಡ ನಿಮ್ಮದಾಗಲಿದೆ. ಒಂದು ವೇಳೆ ನೀವು ನಿರುದ್ಯೋಗಿಗಳಾಗಿದ್ದು ಹೊಸ ಕೆಲಸವನ್ನು ಹುಡುಕ್ತಾ ಇದ್ರೆ, ಖಂಡಿತವಾಗಿ ನೀವು ಇಷ್ಟ ಪಡುವಂತಹ ಕೆಲಸ ನಿಮ್ಮ ಕಾಲ ಬುಡದಲ್ಲಿ ಬಂದು ಬೀಳಲಿದೆ. ಆರ್ಥಿಕ ವಿಚಾರದಲ್ಲಿ ಯಾವುದೇ ರೀತಿಯ ಸಮಸ್ಯೆಯನ್ನು ಕಾಣಬೇಕಾದ ಅಗತ್ಯವಿಲ್ಲ.

 ಸಿಂಹ ರಾಶಿ (Leo)

ಬಹು ಸಮಯಗಳಿಂದ ವಿದೇಶಕ್ಕೆ ಹೋಗಬೇಕು ಎನ್ನುವಂತಹ ಸಿಂಹ ರಾಶಿಯವರ ಕನಸು ಈ ವಿಶೇಷವಾದ ಸಂದರ್ಭದಲ್ಲಿ ಪೂರ್ಣಗೊಳ್ಳಲಿದೆ. ಕೆಲವರು ಕೆಲಸಕ್ಕಾಗಿ ವಿದೇಶಕ್ಕೆ ಹೋದರೆ ಇನ್ನು ಕೆಲವರು ಪ್ರವಾಸಕ್ಕಾಗಿ ವಿದೇಶಕ್ಕೆ ಹೋಗಬಹುದಾದ ಅವಕಾಶವಿದೆ. ನೀವು ಕಳೆದ ಸಾಕಷ್ಟು ಸಮಯಗಳಿಂದ ಪ್ರತಿಯೊಂದು ಕ್ಷೇತ್ರಗಳಲ್ಲಿ ಅನುಭವಿಸುತ್ತಿರುವಂತಹ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಲಿದ್ದೀರಿ. ಒಟ್ಟಾರೆಯಾಗಿ ಕಳೆದ ಸಾಕಷ್ಟು ಸಮಯಗಳಿಂದ ನೀವು ಅನುಭವಿಸುತ್ತಿರುವ ಅಂತಹ ಕಷ್ಟದ ಸಮಯಗಳಿಂದ ಹೊರಬಂದು ನಿಮ್ಮ ಜೀವನದ ಚಿನ್ನದ ದಿನಗಳನ್ನು ಅನುಭವಿಸಲಿದ್ದೀರಿ.

 ಧನು ರಾಶಿ (Sagittarius)

ಈ ಬಾರಿಯ ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ ಧನುರಾಶಿಯವರಿಗೆ ಜೀವನದಲ್ಲಿ ಹಿಂದೆಂದೂ ಕಾಣದಂತಹ ಯಶಸ್ಸನ್ನು ತಂದು ಕೊಡಲಿದೆ. ಒಂದು ವೇಳೆ ಹೊಸ ಕೆಲಸ ಅಥವಾ ಉದ್ಯಮವನ್ನು ಪ್ರಾರಂಭ ಮಾಡುವಂತಹ ಯೋಜನೆಯನ್ನು ಧನುರಾಶಿಯವರು ಹಾಕಿಕೊಂಡಿದ್ದರೆ ಖಂಡಿತವಾಗಿ ಅದನ್ನು ಪ್ರಾರಂಭ ಮಾಡುವುದಕ್ಕೆ ಪ್ರಶಸ್ತವಾದ ಸಮಯವಾಗಿದೆ. ಕೈ ಹಾಕುವಂತ ಪ್ರತಿಯೊಂದು ಕೆಲಸಗಳಲ್ಲಿ ಧನುರಾಶಿಯವರಿಗೆ ಗೆಲುವು ಕಟ್ಟಿಟ್ಟ ಬುತ್ತಿಯಾಗಿದೆ. ಮನೆಯಲ್ಲಿ ಧಾರ್ಮಿಕ ಕೆಲಸಗಳು ಈ ಸಂದರ್ಭದಲ್ಲಿ ನಡೆಯಲಿವೆ ಹಾಗೂ ಪುಣ್ಯಪ್ರಾಪ್ತಿಯ ಫಲವನ್ನು ಧನು ರಾಶಿಯವರು ಪಡೆಯಲಿದ್ದಾರೆ. ಕೆಲಸದಲ್ಲಿ ಪ್ರಮೋಷನ್ ಸಿಗುವ ಸಾಧ್ಯತೆ ಇದೆ ಹಾಗೂ ನಿಮ್ಮ ಕೆಲಸದ ಜೀವನದ ಉತ್ತುಂಗದ ಸ್ಥಿತಿಯನ್ನು ಈ ಸಂದರ್ಭದಲ್ಲಿ ತಲುಪಲಿದ್ದೀರಿ.

Eclipse 2024