State Politics: ಮೈಸೂರಿನ ಲೋಕಸಭಾ ಟಿಕೆಟ್ ಸಿಕ್ತಾ ಇರೋದು ಪ್ರತಾಪ್ ಸಿಂಹಾಗೆ ಅಲ್ಲ ಇವರಿಗೆ ನೋಡಿ.

State Politics: ಈ ಬಾರಿಯ ಲೋಕಸಭಾ ಚುನಾವಣೆ ಮುಂಬರುವ ಐಪಿಎಲ್ ಸೀಸನ್ ಗಿಂತಲೂ ವಿಶೇಷವಾಗಿ ಕುತೂಹಲವನ್ನು ಹೆಚ್ಚಿಸಿದೆ ಎಂದು ಹೇಳಬಹುದಾಗಿದೆ. ಮೋದಿ ಅವರು ತಾವು ಹೋದ ಕಡೆಗಳಲ್ಲಿ ಎಲ್ಲಾ ಕಳೆದ ಬಾರಿಗಿಂತ ಹೆಚ್ಚಿನ ಸೀಟುಗಳನ್ನು ಗೆಲ್ಲುವಂತಹ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಕಡೆ ರಾಹುಲ್ ಗಾಂಧಿಯವರು ಕೂಡ ತಾವು ಈ ಬಾರಿ ಖಂಡಿತವಾಗಿ ಬಿಜೆಪಿಯನ್ನು ಸೋಲಿಸಿಯ ತೀರುತ್ತೇವೆ ಎಂಬುದಾಗಿ ಮಾತನಾಡುತ್ತಿದ್ದಾರೆ.

ಎರಡು ಪಕ್ಷಗಳು ಕೂಡ ಲೋಕಸಭಾ ಚುನಾವಣೆಗೆ ತಮ್ಮದೇ ಆದ ರೀತಿಯಲ್ಲಿ ತಯಾರಿಯನ್ನು ನಡೆಸಿಕೊಳ್ಳುತ್ತಿವೆ. ಇನ್ನು ಎರಡು ಪಕ್ಷದ ಕಾರ್ಯಕರ್ತರು ಕೂಡ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಗೆಲ್ಲುವುದಕ್ಕೆ ಬೇಕಾಗಿರುವಂತಹ ಪ್ರತಿಯೊಂದು ಸದಸ್ಯಗಳನ್ನು ಕೂಡ ಮಾಡಿಕೊಳ್ಳುವತ್ತ ನಿರತರಾಗಿದ್ದಾರೆ. ಇದೇ ಕಾರಣಕ್ಕಾಗಿ ಈ ಬಾರಿ ಚುನಾವಣೆಯ ಪ್ರಚಾರದ ಭರಾಟೆ ಕೂಡ ವೇಗವಾಗಿ ಸಾಗುತ್ತಿದೆ.

ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳು ಕೂಡ ಮೊದಲ ಹಂತದ ಲೋಕಸಭಾ ಚುನಾವಣೆಯ ಸ್ಪರ್ಧಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಈಗ ಎಲ್ಲರೂ ಕುತೂಹಲದಿಂದ ಕಾಯುತ್ತಿರುವುದು ಕರ್ನಾಟಕದ ಆ ಒಂದು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾರು ಎನ್ನುವುದರ ಬಗ್ಗೆ. ಹೌದು ನಾವು ಮಾತನಾಡುತ್ತಿರುವುದು ಕೊಡಗು ಹಾಗು ಮೈಸೂರು ಲೋಕಸಭಾ ಕ್ಷೇತ್ರದ ಬಗ್ಗೆ.

ಈ ಕ್ಷೇತ್ರದಲ್ಲಿ ಕಳೆದ ಎರಡು ಬಾರಿಯೂ ಕೂಡ ಪ್ರತಾಪ್ ಸಿಂಹ ರವರು ವಿಜೇತರಾಗಿ ಕಾಣಿಸಿಕೊಂಡು ಉತ್ತಮ ರೀತಿಯಲ್ಲಿ ಕೆಲಸವನ್ನು ಮಾಡಿದರು. ಆದರೆ ಈ ಬಾರಿ ಅವರಿಗೆ ಟಿಕೆಟ್ ಮಿಸ್ ಆಗಲಿದೆ ಎನ್ನುವಂತಹ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ವೇಗವಾಗಿ ಹರಿದಾಡುತ್ತಿದೆ. ಪ್ರತಾಪ್ ಸಿಂಹ ಅವರ ಬದಲಿಗೆ ಹೊಸ ಅಭ್ಯರ್ಥಿ ಆಯ್ಕೆಯಾಗಲಿದ್ದಾರೆ ಅನ್ನುವಂತಹ ಮಾತುಗಳು ಕೇಳುತ್ತಿವೆ.

ಮೊದಲ ಹೆಸರು ಕೇಳಿ ಬಂದಿದ್ದು ಪ್ರತಾಪ್ ಸಿಂಹ ಅವರ ಬದಲಿಗೆ ಮೈಸೂರು ಸಂಸ್ಥಾನದ ರಾಜ ಆಗಿರುವಂತಹ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರವರಿಗೆ ಟಿಕೆಟ್ ನೀಡಲಾಗುತ್ತದೆ ಎನ್ನುವಂತಹ ಮಾತುಗಳು ಕೇಳಿ ಬಂದಿದ್ದವು. ಆದರೆ ಈಗ ಮೂರನೇದಾಗಿ ಕೇಳಿ ಬರುತ್ತಿರುವಂತಹ ಹೆಸರು ಅಂದ್ರೆ ಅಯೋಧ್ಯೆಯ ಮಂದಿರದಲ್ಲಿ ರಾಮನ ಶಿಲ್ಪವನ್ನು ಕೆತ್ತಿದ ಅರುಣ್ ಯೋಗಿರಾಜ್ ಅವರಿಗೆ ಈ ಬಾರಿ ಟಿಕೆಟ್ ನೀಡಲಾಗುತ್ತಿದೆ ಎನ್ನುವಂತಹ ಸುದ್ದಿಗಳು ಕೂಡ ಕೇಳಿ ಬರುತ್ತಿವೆ. ಅರುಣ್ ಯೋಗಿರಾಜ್ ಅವರಿಗೆ ಟಿಕೆಟ್ ನೀಡುವಂತಹ ಸಾಧ್ಯತೆ ಹೆಚ್ಚಾಗಿದೆ ಅನ್ನುವಂತಹ ಮಾಹಿತಿಗಳನ್ನು ಕೆಲವೊಂದು ಸೋಶಿಯಲ್ ಮೀಡಿಯಾ ಮೂಲಗಳು ಪುಷ್ಠಿಕರಿಸುತ್ತಿವೆ.

ಆದಷ್ಟು ಶೀಘ್ರದಲ್ಲಿಯೇ ಬಿಜೆಪಿ ಪಕ್ಷ ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವಂತಹ ಯೋಜನೆಯನ್ನು ಹಾಕಿಕೊಂಡಿದ್ದು ಈ ಸಂದರ್ಭದಲ್ಲಿಯೇ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಕೂಡ ಪ್ರಕಟಣೆ ಮಾಡಲಿದೆ ಎಂಬುದಾಗಿ ತಿಳಿದುಬಂದಿದೆ. ಇನ್ನು ಅರುಣ್ ಯೋಗರಾಜ್ ಅವರು ರಾಮನ ಶಿಲ್ಪವನ್ನು ಕೆತ್ತುವ ಮೂಲಕ ವಿಶ್ವವಿಖ್ಯಾತರಾಗಿದ್ದರು ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಕೂಡ ಅರುಣ್ ಯೋಗರಾಜ್ ಅವರಿಗೆ ಪ್ರಶಂಸೆಯ ಮಾತುಗಳನ್ನಾಡಿದರು. ಇದೇ ಕಾರಣಕ್ಕಾಗಿ ಈಗ ಅವರ ಹೆಸರು ಸುದ್ದಿಯಲ್ಲಿರೋದು. ಮುಂದಿನ ದಿನಗಳಲ್ಲಿ ಈ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಯಾವ ಅಭ್ಯರ್ಥಿ ಹೊರ ಬರುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.