UPI Payment: UPI ಅಪ್ಲಿಕೇಶನ್ ಗಳಲ್ಲಿ ಇನ್ಮುಂದೆ ಅನ್ಲಿಮಿಟೆಡ್ ಟ್ರಾನ್ಸಾಕ್ಷನ್ ಇಲ್ಲ. ಮಿತಿ ಮೀರಿದ್ರೆ ಎಷ್ಟು ಶುಲ್ಕ ಪಾವತಿ ಮಾಡ್ಬೇಕು ಗೊತ್ತಾ?

UPI Payment: ಸನ್ಮಾನ್ಯ ಪ್ರಧಾನ ಮಂತ್ರಿಗಳಾಗಿರುವಂತಹ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಚಿಕ್ಕಪುಟ್ಟ ವ್ಯಾಪಾರಿಗಳಿಂದ ಹಿಡಿದು ದೊಡ್ಡ ದೊಡ್ಡ ಬಿಸಿನೆಸ್ ವರೆಗೂ ಕೂಡ ಪ್ರತಿಯೊಬ್ಬರು ಹಣಕಾಸಿನ ವಹಿವಾಟಿಗಾಗಿ ಯುಪಿಐ ಅಪ್ಲಿಕೇಶನ್ ಗಳನ್ನು ಅಂದರೆ ಆನ್ಲೈನ್ ಟ್ರಾನ್ಸಾಕ್ಷನ್ ಅನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಚಿಕ್ಕ ಪುಟ್ಟ ಬೀದಿ ಬದಿಯ ವ್ಯಾಪಾರಿಗಳು ಕೂಡ ಆನ್ಲೈನ್ ಟ್ರಾನ್ಸಾಕ್ಷನ್ ಅನ್ನು ತಮ್ಮ ದಿನನಿತ್ಯದ ವಹಿವಾಟಿಗಾಗಿ ಬಳಸುತ್ತಿದ್ದಾರೆ. ಭಾರತೀಯರ ಜೀವನದಲ್ಲಿ ಆನ್ಲೈನ್ ಟ್ರಾನ್ಸ್ಯಾಕ್ಷನ್ ಎನ್ನುವುದು ಒಂದು ಅಂಗವಾಗಿದೆ ಎಂದು ಕೂಡ ತಪ್ಪಾಗಲ್ಲ. ಯಾವುದೇ ರೀತಿಯ ವೈವಾಟಿಗಾಗಿ ಕೂಡ ಪ್ರತಿಯೊಬ್ಬರು ಬಳಸುವುದು ಫೋನ್ ಪೇ ಗೂಗಲ್ ಪೇ, ಪೇಟಿಎಂ. ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚು ಆನ್ಲೈನ್ ಟ್ರಾನ್ಸಾಕ್ಷನ್ ಮಾಡುವಂತಹ ದೇಶ ಅಂದ್ರೆ ಅದು ನಮ್ಮ ಭಾರತ ಅನ್ನೋದನ್ನ ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದೆ. ಆದರೆ ಈಗ ಈ ಯುಪಿಐ ಟ್ರಾನ್ಸಾಕ್ಷನ್ ಬಗ್ಗೆ ಕೆಲವೊಂದು ಮಾಹಿತಿಗಳು ಕೇಳಿ ಬಂದಿದ್ದು ಮುಂದಿನ ದಿನಗಳಲ್ಲಿ ಅನ್ಲಿಮಿಟೆಡ್ ಟ್ರಾನ್ಸಾಕ್ಷನ್ ಮಾಡ್ದೆ ಇರಬಹುದಾದಂತಹ ಸ್ಥಿತಿ ಒದಗಿ ಬರಬಹುದು.

ಈ ಆನ್ಲೈನ್ ಟ್ರಾನ್ಸಾಕ್ಷನ್ ಗಳನ್ನು ಕಂಟ್ರೋಲ್ ಮಾಡುವಂತಹ NPCI ಸಂಸ್ಥೆ ಮುಂದಿನ ದಿನಗಳಲ್ಲಿ ನಿಯಮಿತ ಟ್ರಾನ್ಸಾಕ್ಷನ್ ಗಳನ್ನು ಮಾಡುವಂತಹ ನಿಯಮಗಳ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುವಂತಹ ಸಾಧ್ಯತೆ ಹೆಚ್ಚಾಗಿದೆ ಎನ್ನುವ ಮಾಹಿತಿ ಕೇಳಿ ಬಂದಿದೆ.

ಮುಂದಿನ ದಿನಗಳಲ್ಲಿ ಯಾಕೆ ಲಿಮಿಟ್ ನಿಗದಿಯಾಗಬಹುದು

ಇಂದಿನ ದಿನಗಳಲ್ಲಿ ನೀವು ಯಾವುದೇ ಲಿಮಿಟ್ ಇಲ್ಲದೆ ಅನ್ಲಿಮಿಟೆಡ್ ಆಗಿ ಹಣವನ್ನು ಪ್ರತಿದಿನ ಟ್ರಾನ್ಸಾಕ್ಷನ್ ಮಾಡುತ್ತಿದ್ದೀರಿ ಹಾಗೂ ಭಾರತ ದೇಶದಲ್ಲಿ ಯುಪಿಐ ವೇಗವಾಗಿ ಬೆಳೆಯೋದಕ್ಕೆ ಕೂಡ ಇದೇ ಕಾರಣವಾಗಿದೆ. ಇನ್ ಮಾರುಕಟ್ಟೆಯ 80 ಪ್ರತಿಶತ ಶೇರ್ ಅನ್ನು ಗೂಗಲ್ ಪೇ ಹಾಗೂ ಫೋನ್ ಪೇ ಹೊಂದಿವೆ. NPCI ಕೂಡ ಇದೇ ಕಾರಣಕ್ಕಾಗಿ ಹೆದರಿಕೊಂಡಿದ್ದು ಇದು ಯುಪಿಐ ಇಕೋ ಸಿಸ್ಟಮ್ ಅನ್ನು ಹದಗಿಡಿಸುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕಾಗಿಯೇ ಈ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಇಷ್ಟೊಂದು ಮಾರುಕಟ್ಟೆಯನ್ನು ಎರಡು ಅಪ್ಲಿಕೇಶನ್ಗಳು ಆಕ್ರಮಿಸಿಕೊಂಡಿದ್ದು ಒಂದು ವೇಳೆ ಎರಡು ಅಪ್ಲಿಕೇಶನ್ಗಳು ಕೂಡ ಯಾವುದೇ ತಾಂತ್ರಿಕ ಕಾರಣದಿಂದಾಗಿ ಸರ್ವರ್ ತೊಂದರೆಯಾದರೆ ಆಗ ಆನ್ಲೈನ್ ಟ್ರಾನ್ಸಾಕ್ಷನ್ ಮಾಡುವಂತಹ ಗ್ರಾಹಕರಿಗೆ ಹಣವನ್ನು ಟ್ರಾನ್ಸ್ಯಾಕ್ಷನ್ ಮಾಡುವುದಕ್ಕೆ ಸಂಪೂರ್ಣವಾಗಿ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕಾಗಿ ಈ ವಾತಾವರಣವನ್ನು ಬದಲಾಯಿಸುವ ನಿಟ್ಟಿನಲ್ಲಿ ಸಂಸ್ಥೆ ನಿಯಮವನ್ನು ಜಾರಿಗೆ ತರುವ ನಿರ್ಧಾರಕ್ಕೆ ಹೊರಟಿದೆ. ಇದರಿಂದಾಗಿ ಇನ್ನೂ ಬೇರೆ ಬೇರೆ ಅಪ್ಲಿಕೇಶನ್ ಗಳಿಂದ ಇನ್ನಷ್ಟು ಹೆಚ್ಚಿನ ಸೇವೆಗಳು ಹಾಗೂ ಬೇರೆ ಬೇರೆ ರೀತಿಯ ಆಫರ್ ಗಳು ಮತ್ತು ನವೀನ ಅನ್ವೇಷಣೆಗಳು ಗ್ರಾಹಕರಿಗೆ ಸಿಗಬಹುದು ಎನ್ನುವ ನಿರೀಕ್ಷೆ ಸಂಸ್ಥೆಯದ್ದು.

ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಯುಪಿಐ ಮೂಲಕ ದಿನಕ್ಕೆ ಒಂದು ಲಕ್ಷ ರೂಪಾಯಿಗಳ ವರೆಗೆ ಮ್ಯಾಕ್ಸಿಮಮ್ ಟ್ರಾನ್ಸಾಕ್ಷನ್ ಮಾಡಬಹುದಾಗಿದೆ. ಕಡಿಮೆ ಟ್ರಾನ್ಸಾಕ್ಷನ್ ಮಾಡುವವರಿಗೆ ಈ ಲಿಮಿಟ್ ಇರೋದು ಅಷ್ಟೊಂದು ವ್ಯತ್ಯಾಸ ತರೋದಿಲ್ಲ. NPCI ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ವಿಚಾರದ ಬಗ್ಗೆ ಇನ್ನೂ ಚರ್ಚೆಯನ್ನು ನಡೆಸುತ್ತಿದ್ದು ಯಾವುದೇ ಕೊನೆಯ ನಿರ್ಧಾರ ಹೊರಬಂದಿಲ್ಲ. ಮುಂದಿನ ದಿನಗಳಲ್ಲಿ ಯುಪಿಐ ಭವಿಷ್ಯ ಭಾರತ ದೇಶದಲ್ಲಿ ಇನ್ನಷ್ಟು ವೇಗವಾಗಿ ಹಾಗೂ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಾಣುವ ಸಾಧ್ಯತೆ ಇದ್ದು ಇದು ಇನ್ನಷ್ಟು ಸಂಸ್ಥೆಗಳಿಗೆ ವಿಸ್ತರಿಸಲು ಹಾಗೂ ಮಾರುಕಟ್ಟೆಯಲ್ಲಿ ಇನ್ನಷ್ಟು ದೊಡ್ಡಮಟ್ಟದ ಪ್ಲೇಯರ್ಗಳು ಬರಲಿ ಎನ್ನುವ ಕಾರಣಕ್ಕಾಗಿ ಈ ನಿಯಮವನ್ನು ಜಾರಿಗೆ ತರಲಾಗುತ್ತಿದ್ದು ಇದರಿಂದಾಗಿ ಆನ್ಲೈನ್ ಟ್ರಾನ್ಸಾಕ್ಷನ್ ವಿಭಾಗದ ಬೆಳವಣಿಗೆ ಭಾರತ ದೇಶದ ಆರ್ಥಿಕ ಪರಿಸ್ಥಿತಿಯಲ್ಲಿ ಇನ್ನಷ್ಟು ಸಕಾರಾತ್ಮಕ ಪರಿಣಾಮವನ್ನು ಬೀರಲಿದೆ.

UPI Payment