Business Idea: ಅಪ್ಪಿ ತಪ್ಪಿ ಹಳೆ ಬಟ್ಟೆ ಅಂತ ಬಿಸಾಡೋಕೆ ಹೋಗ್ಬೇಡಿ. ಕೈ ತುಂಬಾ ಹಣ ಮಾಡೋದಕ್ಕೆ ಇಲ್ಲಿದೆ ನೋಡಿ ಚಾನ್ಸ್!

Business Idea: ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಎಲ್ಲರೂ ಕೂಡ ಹೊಸ ಬಟ್ಟೆಗಳನ್ನು ಖರೀದಿಸುವಂತಹ ಸಂಪ್ರದಾಯವನ್ನು ಹೊಂದಿದ್ದಾರೆ. ಈ ಹೊಸ ಬಟ್ಟೆಗಳು ಕೂಡ ಕೆಲವೊಂದು ನಿರ್ದಿಷ್ಟ ಸಮಯ ಆದ ನಂತರ ಹಳೆ ಬಟ್ಟೆಗಳಾಗುತ್ತವೆ. ಇಂತಹ ಹಳೆ ಬಟ್ಟೆಗಳನ್ನು ನೀವು ಸಾಮಾನ್ಯವಾಗಿ ಮನೆ ಸ್ವಚ್ಛ ಮಾಡುವುದಕ್ಕೆ ಬಳಸ್ತೀರಾ ಅಥವಾ ಕಸದ ಬುಟ್ಟಿಗೆ ಬಿಸಾಡಿ ಬಿಡ್ತೀರಾ. ಆದರೆ ಮುಂದೆ ನೀವು ಈ ರೀತಿ ಮಾಡಬೇಕಾದ ಅಗತ್ಯವಿಲ್ಲ ಅದರಿಂದಲೂ ಕೂಡ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಅಪ್ಪಿ ತಪ್ಪಿ ಹಳೇ ಬಟ್ಟೆ ಬಿಸಾಕ್ಬೇಡಿ!

ದುಬಾರಿ ಬೆಲೆಯ ಹಣವನ್ನು ನೀಡಿ ಖರೀದಿಸಿರುವಂತಹ ಬಟ್ಟೆಯನ್ನು ಇನ್ನು ಮುಂದೆ ನೀವು ಹಳೆ ಬಟ್ಟೆ ಆದ್ಮೇಲೆ ಬಿಸಾಡಬೇಕಾದ ಅಗತ್ಯವಿಲ್ಲ ಅವುಗಳಿಂದಲೂ ಕೂಡ ಹಣವನ್ನು ಸಂಪಾದನೆ ಮಾಡುವಂತಹ ಒಂದು ಒಳ್ಳೆ ದಾರಿಯನ್ನ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳಲು ಹೊರಟಿದ್ದೇವೆ. ಇನ್ನು ಮುಂದಿನ ದಿನಗಳಲ್ಲಿ ನೀವು ಹಳೆಯ ಬಟ್ಟೆಗಳನ್ನು ಬಿಸಾಡಬೇಕಾದ ಅಗತ್ಯ ಇರುವುದಿಲ್ಲ ಅವುಗಳನ್ನು ಬೇರೆ ಬೇರೆ ರೀತಿಯ ವಸ್ತುಗಳ ರೂಪಾಂತರದಲ್ಲಿ ಕನ್ವರ್ಟ್ ಮಾಡುವ ಮೂಲಕ ಅವುಗಳನ್ನು ಮಾರಾಟ ಮಾಡಿ ಹಣವನ್ನು ಸಂಪಾದನೆ ಮಾಡಬಹುದಾಗಿದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ ಹಾಗೂ ಇದರ ಮೂಲಕ ಹಣವನ್ನು ಸಂಪಾದನೆ ಮಾಡುವಂತಹ ಆಸಕ್ತಿ ಹೊಂದಿರುವವರಿಗೆ ಇದರ ಮೂಲಕ ಹೆಚ್ಚಿನ ಮಾಹಿತಿಯನ್ನು ನೀಡಿದಂತಾಗುತ್ತದೆ.

ಹಳೆ ಬಟ್ಟೆ ಹೊಸ ಡಿಸೈನ್!

ಇಂತಹ ಹಳೆಯ ಬಟ್ಟೆಗಳ ಮೂಲಕ ನೀವು ಹಾಸಿಗೆಯ ಕವರ್ ತಲೆದಿಂಬಿಗೆ ಕವರ್ ಕಾಲು ಒರೆಸುವಂತಹ ಮ್ಯಾಟ್ ನೆಲವಳ ಒರೆಸುವಂತಹ ಬಟ್ಟೆ ತರಕಾರಿ ತೆಗೆದುಕೊಂಡು ಹೋಗುವಂತಹ ಕವರ್ ಹಾಗೂ ಹಳೆ ಸೀರೆಗಳನ್ನು ಹೊಲಿದು ಅದರಿಂದ ಬೇರೆ ಬೇರೆ ವಸ್ತುಗಳನ್ನು ತೆಗೆದುಕೊಂಡು ಹೋಗಲು ಚೀಲಗಳ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ. ಹಳೆಯ ಸೀರೆ ಹಾಗೂ ಬಟ್ಟೆಗಳನ್ನು ಬಳಸಿಕೊಂಡು ಹೊಲಿದು ನಂತರ ಅದರಿಂದಲೂ ಕೂಡ ಹೊಸ ಡಿಸೈನ್ ಬಟ್ಟೆಗಳನ್ನು ತಯಾರಿ ಮಾಡಬಹುದಾದಂತಹ ಕರಕುಶಲತೆಯನ್ನು ಕೂಡ ನೀವು ಕಲಿತು ಅದರಿಂದಲೂ ಹಣ ಮಾಡಬಹುದಾಗಿದೆ. ಇನ್ನು ಕೆಲವರು ಹಳೆಯ ಬಟ್ಟೆಯ ಮೇಲೆ ಬೇರೆ ಬೇರೆ ರೀತಿಯ ಡಿಸೈನ್ಗಳನ್ನು ಬೇರೆ ವಸ್ತುಗಳನ್ನು ಬಳಸಿಕೊಂಡು ತಯಾರಿಸಿ ಅದನ್ನು ಮನೆಯ ಗೋಡೆಯ ಮೇಲೆ ತೂಗು ಹಾಕುವುದಕ್ಕೆ ಕೂಡ ಬಳಸಿಕೊಳ್ಳುತ್ತಾರೆ.

ಮೊಬೈಲ್ ಅಪ್ಲಿಕೇಶನ್ ನಲ್ಲಿ ಮಾರಾಟ!

ಹಳೆ ಬಟ್ಟೆಗಳನ್ನು ಬಳಸಿಕೊಂಡು ನೀವು ಬೇರೆಬೇರೆ ರೀತಿಯ ರೂಪಾಂತರಗಳ ಮೂಲಕ ಅವುಗಳನ್ನು ಇಂದಿನ ಸಮಯಕ್ಕೆ ಬಳಸಿಕೊಳ್ಳುವ ರೀತಿಯಲ್ಲಿ ತಯಾರು ಮಾಡಿದರೆ ಅದನ್ನು ಖರೀದಿ ಮಾಡುವುದಕ್ಕೆ ಅಂತಾನೆ ದೊಡ್ಡ ಮಟ್ಟದ ಮಾರುಕಟ್ಟೆ ಕೂಡ ಇದೆ. ಇನ್ನು ನೀವು ಈ ರೀತಿಯ ಬಟ್ಟೆಗಳನ್ನು ಮಾರಾಟ ಹಾಗೂ ಖರೀದಿಸುವುದನ್ನು Freeup, GlowRoad ಗಳಂತಹ ಅಪ್ಲಿಕೇಶನ್ ನಲ್ಲಿ ಮಾಡಬಹುದಾಗಿದ್ದು, ರೀ ಸೇಲ್ ಮಾಡುವ ಮೂಲಕ ನಿಮ್ಮ ಬಟ್ಟೆಗೆ ಮೌಲ್ಯವನ್ನು ಪಡೆದುಕೊಳ್ಳಬಹುದಾಗಿದೆ. ಹಿಂದೂ ಶಾಸ್ತ್ರಗಳ ಪ್ರಕಾರ ಹಳೆಯ ಬಟ್ಟೆಗಳನ್ನು ದಾನ ಮಾಡುವುದು ಕೂಡ ಪುಣ್ಯವನ್ನು ಪಡೆದುಕೊಳ್ಳುವಂತಹ ಕೆಲಸ ಎಂಬುದಾಗಿ ಪರಿಗಣಿಸಲಾಗುತ್ತದೆ.

business idea