Relationship: ಹೆಂಡತಿಗೆ ಬೇರೆಯವರ ಜೊತೆ ಸಂಬಂಧ ಇದೆ ಅಂತ ಹೇಗ್ ತಿಳ್ಕೋಬಹುದು ಗೊತ್ತಾ? ಇಲ್ಲಿದೆ ಸಿಂಪಲ್ ಮತ್ತು ಪರಿಣಾಮಕಾರಿ ಟಿಪ್ಸ್!

Relationship: ಒಂದು ಕಾಲದಲ್ಲಿ ಮದುವೆ ಹಾಗೂ ದಂಪತಿಗಳ ನಡುವಿನ ಸಂಬಂಧಕ್ಕೆ ಒಂದು ಪವಿತ್ರವಾದ ಮೌಲ್ಯ ಇತ್ತು. ಆದರೆ ಇಂದಿನ ಈ ಆಧುನಿಕ ಜಗತ್ತಿನಲ್ಲಿ ದಾಂಪತ್ಯ ಜೀವನಕ್ಕೆ ಇರುವಂತಹ ಮೌಲ್ಯವನ್ನು ಇಂದಿನ ಯುವಜನತೆ ಸಂಪೂರ್ಣವಾಗಿ ಹಾಳು ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಅದೇ ಕಾರಣಕ್ಕಾಗಿ ಸಾಕಷ್ಟು ವಿಚಾರಗಳಿಗಾಗಿ ವಿವಾಹ ವಿಚ್ಛೇದನ ಎನ್ನುವುದು ಹೆಚ್ಚಾಗಿ ನಡೆಯುತ್ತಿದೆ. ಇನ್ನು ವಿಶೇಷವಾಗಿ ಇವತ್ತಿನ ಲೇಖನದಲ್ಲಿ ಒಂದು ವೇಳೆ ನಿಮ್ಮ ಹೆಂಡತಿ ಬೇರೆಯವರ ಜೊತೆಗೆ ಬೇಡದ ಸಂಬಂಧವನ್ನು ಹೊಂದಿದ್ದಾರೆ ಎನ್ನುವಂತಹ ಅನುಮಾನ ಇದ್ದರೆ ಅದನ್ನು ಯಾವ ರೀತಿಯಲ್ಲಿ ತಿಳಿದುಕೊಳ್ಳಬಹುದು ಎಂಬುದನ್ನು ತಿಳಿಯೋಣ ಬನ್ನಿ. ನಾವು ಈ ಲೇಖನಿಯಲ್ಲಿ ಯಾವುದೇ ಕಾರಣಕ್ಕೂ ಅನೈತಿಕ ಸಂಬಂಧದ ಬಗ್ಗೆ ಹೆಚ್ಚಿನ ಬೆಳಕನ್ನು ಚೆಲ್ಲುವುದಕ್ಕೆ ಹೋಗ್ತಾ ಇಲ್ಲ ಬದಲಾಗಿ ಆ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಕಂಡು ಹಿಡಿಯಬಹುದು ಎನ್ನುವಂತಹ ಚಿಕ್ಕ ಸುಳಿವನ್ನು ನೀಡುತ್ತಿದ್ದೇವೆ‌.

ಅವರ ದಿನನಿತ್ಯದ ನಡವಳಿಕೆಗಳಲ್ಲಿ ಬದಲಾವಣೆ ಕಂಡು ಬಂದರೆ, ಉದಾಹರಣೆಗೆ ನಿಮ್ಮ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡುವುದಕ್ಕೆ ಇಷ್ಟಪಡದೇ ಇರುವುದು ಅಥವಾ ಯಾವುದಾದರೂ ವಿಚಾರವನ್ನು ಅವರ ಬಳಿ ಮಾತನಾಡಲು ಹೋದಾಗ ಅವರು ಅದನ್ನ ಇಗ್ನೋರ್ ಮಾಡಿ ಹೋಗುವುದು. ಈ ರೀತಿಯ ಗುಣಲಕ್ಷಣಗಳನ್ನು ನೀವು ನಿಮ್ಮ ಪತ್ನಿಯ ಬಳಿ ಗಮನಿಸಿದರೆ ಆಗ ಅವರು ನಿಮಗೆ ಮೋಸ ಮಾಡುತ್ತಿರಬಹುದು ಎಂಬುದನ್ನು ನೀವು ಪರಿಗಣಿಸಬಹುದಾಗಿದೆ. ಮನೆಯಲ್ಲಿ ಊಟ ತಿಂಡಿಯನ್ನು ತಪ್ಪಿಸಿ ಹೆಚ್ಚಾಗಿ ಮನೆಯಿಂದ ಹೊರಗಡೆ ಇದ್ದರೆ ಆ ಸಂದರ್ಭದಲ್ಲಿ ಕೂಡ ಇದೇ ನಿರ್ಧಾರವನ್ನು ನೀವು ತೆಗೆದುಕೊಳ್ಳಬಹುದು. ಅವರು ಇಷ್ಟಪಡುವಂತಹ ವ್ಯಕ್ತಿಗಳಿಗೆ ಹೆಚ್ಚಿನ ಸಮಯವನ್ನು ನೀಡುವುದಕ್ಕಾಗಿ ನಿಮ್ಮಿಂದ ದೂರ ಇರುವುದು ಕೂಡ ಇದರಲ್ಲಿ ಒಂದಾಗಿದೆ.

ಬೇರೆಯವರ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಿರುವ ಕಾರಣದಿಂದಾಗಿ ಆ ಪಶ್ಚಾತಾಪವನ್ನು ದೂರ ಮಾಡಿಕೊಳ್ಳಲು ಹಿಂದಿಗಿಂತ ಹೆಚ್ಚಾಗಿ ನಿಮ್ಮನ್ನು ಪ್ರೀತಿ ಮಾಡಿದಂತೆ ನಾಟಕ ಮಾಡುವುದು ಕೂಡ ಇದರಲ್ಲಿ ಒಂದಾಗಿದೆ. ಯಾಕೆಂದ್ರೆ ಅವರು ನಿಮ್ಮ ಮೇಲೆ ಮಾಡುತ್ತಿರುವಂತಹ ದ್ರೋಹವನ್ನು ಸರಿದೂಗಿಸುವ ಕಾರಣಕ್ಕಾಗಿ ಈ ರೀತಿ ಮಾಡಬಹುದಾಗಿದೆ. ಮದುವೆ ಆಗುವುದಕ್ಕಿಂತ ಮುಂಚೆ ಇದ್ದಂತಹ ಸೌಂದರ್ಯ ಪ್ರಜ್ಞೆ ಮಹಿಳೆಯರಿಗೆ ಮದುವೆಯಾದ ನಂತರ ಕಡಿಮೆಯಾಗಿ ಬಿಡುತ್ತದೆ. ಒಂದು ವೇಳೆ ಸಡನ್ನಾಗಿ ಮತ್ತೆ ತಮ್ಮ ಸೌಂದರ್ಯ ವರ್ದಿಸುವುದಕ್ಕಾಗಿ ಸಮಯವನ್ನು ತೆಗೆದುಕೊಳ್ಳುತ್ತಿದ್ದಾರೆ ಅಂದ್ರೆ ನೀವು ಅವರ ಜೀವನದಲ್ಲಿ ಬೇರೆಯವರ ಎಂಟ್ರಿ ಆಗಿದೆ ಹಾಗೂ ಅವರ ಬಳಿ ಚೆನ್ನಾಗಿ ಕಾಣಿಸಿಕೊಳ್ಳುವುದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂಬುದಾಗಿ ಅರ್ಥವಾಗಿದೆ. ಈ ಸಂದರ್ಭದಲ್ಲಿ ನೀವು ಅವರನ್ನು ಮುಟ್ಟೋದಕ್ಕೆ ಹೋದರೆ ಆ ಸಂದರ್ಭದಲ್ಲಿ ಅವರು ಅಸಹ್ಯ ರೀತಿಯ ಭಾವನೆಯನ್ನು ತೋರಿಸಬಹುದಾಗಿದೆ. ಇದು ಕೂಡ ಅವರು ನಿಮ್ಮನ್ನು ಬಿಟ್ಟು ಬೇರೆಯವರ ಪ್ರೇಮಪಾಶಕ್ಕೆ ಸಿಕ್ಕಿಬಿದ್ದಿದ್ದಾರೆ ಎಂಬುದನ್ನು ಸಾಂಕೇತಿಕವಾಗಿ ತೋರಿಸುತ್ತದೆ.

ನೀವು ಮಾಡುವಂತಹ ಕೆಲವೊಂದು ಚಿಕ್ಕಪುಟ್ಟ ಪ್ರಕ್ರಿಯೆಗಳು ಕೂಡ ಅವರಿಗೆ ಕಿರಿಕಿರಿಯನ್ನು ತರಬಹುದಾಗಿದೆ. ಈ ಕಾರಣಕ್ಕಾಗಿ ಅವರು ನಿಮ್ಮನ್ನು ಟೀಕಿಸುವುದಕ್ಕೆ ಪ್ರಾರಂಭ ಮಾಡಬಹುದಾಗಿದೆ. ಇಂತಹ ಸಂದರ್ಭಗಳಲ್ಲಿ ಅವರು ತಮ್ಮ ಬಗ್ಗೆ ಮಾತನಾಡುವುದನ್ನು ಕಡಿಮೆ ಮಾಡಿಬಿಡುತ್ತಾರೆ. ಈ ರೀತಿಯ ಅತ್ಯಂತ ಚಿಕ್ಕಪುಟ್ಟ ಸೂಕ್ಷ್ಮ ಬದಲಾವಣೆಗಳು ಕೂಡ ಅವರು ಬೇರೆಯವರ ಜೊತೆಗೆ ಪ್ರೀತಿಯಲ್ಲಿ ಇದ್ದಾರೆ ಎಂಬುದನ್ನು ತೋರ್ಪಡಿಸಬಹುದಾಗಿದೆ.