HSRP: HSRP ನಂಬರ್ ಪ್ಲೇಟ್ ಬಗ್ಗೆ ಸರ್ಕಾರದಿಂದ ಬಂತು ಹೊಸ ಸೂಚನೆ; ನೀವಿನ್ನೂ ಮಾಡಿಸ್ಕೊಂಡಿಲ್ವಾ?

HSRP: ಈಗಾಗಲೇ ಸರ್ಕಾರ ಕಡ್ಡಾಯ ಪಡಿಸಿರುವ ಹಾಗೆ ಪ್ರತಿಯೊಂದು ವಾಹನವನ್ನು ಖರೀದಿ ಮಾಡುವ ಸಂದರ್ಭದಲ್ಲಿ ಕೂಡ HSRP ನಂಬರ್ ಪ್ಲೇಟ್ ಹೊಂದಿರುವುದು ಅತ್ಯಂತ ಪ್ರಮುಖವಾಗಿದೆ. ಸರ್ಕಾರ ಇತ್ತೀಚಿಗಷ್ಟೇ HSRP ನಂಬರ್ ಪ್ಲೇಟ್ ಅನ್ನು ವಾಹನಕ್ಕೆ ಅಳವಡಿಸುವ ಬಗ್ಗೆ ಕೆಲವೊಂದು ನಿರ್ದಿಷ್ಟ ಕಾಲಮಿತಿಯನ್ನು ಕೂಡ ನೀಡಿರುವುದು ನಿಮಗೆಲ್ಲರಿಗೂ ಗೊತ್ತಿರಬಹುದು.

HSRP ನಂಬರ್ ಪ್ಲೇಟ್ ಅನ್ನು ಪ್ರತಿಯೊಂದು ವಾಹನಗಳಿಗೆ ಅಳವಡಿಸುವ ಜವಾಬ್ದಾರಿಯನ್ನು ಶೋರೂಮ್ ಗಳಿಗೆ ಸುಪ್ರೀಂ ಕೋರ್ಟ್ ವಹಿಸಿದೆ. ಹೀಗಾಗಿ ಪ್ರತಿಯೊಬ್ಬ ವ್ಯಕ್ತಿ ಕೂಡ ತಮ್ಮ ವಾಹನಗಳಿಗೆ ನಿರ್ದಿಷ್ಟ ದಿನಾಂಕದೊಳಗೆ HSRP ನಂಬರ್ ಪ್ಲೇಟ್ ಅನ್ನು ತಮ್ಮ ಶೋರೂಮ್ ಗಳಿಗೆ ಹೋಗಿ ಹಾಕಿಸಿಕೊಳ್ಳಬೇಕಾಗಿರುತ್ತದೆ. ಇದರ ಬಗ್ಗೆ ಸಾರಿಗೆ ಆಯುಕ್ತರ ಕಚೇರಿ ಸ್ಪಷ್ಟವಾದಂತಹ ಆದೇಶವನ್ನು ಇತ್ತೀಚಿಗಷ್ಟೇ ಹೊರಡಿಸಿದೆ. ಇತ್ತೀಚಿನ ದಿನಗಳಲ್ಲಿ ಜನರು HSRP ನಂಬರ್ ಪ್ಲೇಟ್ ಅನ್ನು ಸರಿಯಾದ ಸಮಯದಲ್ಲಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕಾಗಿ ಸಾಕಷ್ಟು ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಕೂಡ ನಾವು ಗಮನಿಸಬಹುದಾಗಿದೆ. ಇದೇ ಕಾರಣಕ್ಕಾಗಿ ಈಗ ಹೊಸ ಆದೇಶ ಜಾರಿಗೆ ಬಂದಿರುತ್ತದೆ.

HSRP ನಂಬರ್ ಪ್ಲೇಟ್ ಬಗ್ಗೆ ಜಾರಿಗೆ ಬಂದಿದೆ ಹೊಸ ಆದೇಶ.

ಸುಪ್ರೀಂ ಕೋರ್ಟ್ನಿಂದ ಜಾರಿಗೆ ಬಂದಿರುವಂತಹ ಆದೇಶದ ಪ್ರಕಾರ ಹೊಸದಾಗಿ ವಾಹನಗಳನ್ನು ಖರೀದಿಸಿರುವಂತಹ ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕವನ್ನು ನೀಡದೆ ಅವರು ವಾಹನವನ್ನು ಖರೀದಿಸಿರುವಂತಹ ಶೋರೂಮ್ ನಿಂದಲೇ HSRP ನಂಬರ್ ಪ್ಲೇಟ್ ಅನ್ನು ಪಡೆದುಕೊಳ್ಳಬಹುದಾಗಿದೆ. ಈ ಬಗ್ಗೆ ನ್ಯಾಯಾಲಯ ಸ್ಪಷ್ಟವಾದ ಮಾಹಿತಿಯನ್ನು ನೀಡಿರುವುದು ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಒಂದು ವೇಳೆ ಯಾವುದೇ ವಾಹನದಲ್ಲಿ ನಿಗದಿತ ದಿನಾಂಕದ ನಂತರವೂ ಕೂಡ HSRP ನಂಬರ್ ಪ್ಲೇಟ್ ಅನ್ನು ಹಾಕಿಸಿಕೊಳ್ಳದೆ ಹೋದಲ್ಲಿ ಅವರ ವಿರುದ್ಧ ಕಾನೂನಾತ್ಮಕ ಕ್ರಮವನ್ನು ಜರಗಿಸುವ ಸಾಧ್ಯತೆ ಇದೆ. ಈ ಬಗ್ಗೆ ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳು ಕೂಡ ಹೆಚ್ಚಿನ ನಿಗಾ ವಹಿಸಿ ಪ್ರತಿಯೊಂದು ವಾಹನಗಳನ್ನು ಕೂಡ ತಪಾಸಣೆ ಮಾಡುತ್ತಿದ್ದಾರೆ.

ಸಂಬಂಧಪಟ್ಟಂತಹ ಇಲಾಖೆಯವರು ಈಗಾಗಲೇ ಪ್ರತಿಯೊಂದು ಶೋರೂಮ್ಗಳಿಗೂ ಕೂಡ ಅವರಿಂದ ಖರೀದಿಸಲಾಗಿರುವಂತಹ ವಾಹನಗಳಿಗೆ HSRP ನಂಬರ್ ಪ್ಲೇಟ್ ಅನ್ನು ಕಡ್ಡಾಯವಾಗಿ ಅಳವಡಿಸುವಂತಹ ಆದೇಶವನ್ನು ನೀಡಲಾಗಿದೆ. ಒಂದು ವೇಳೆ ಈಗಾಗಲೇ ನೀಡಲಾಗಿರುವಂತಹ ಆದೇಶದ ಪ್ರಕಾರ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸದೆ ಹೋದಲ್ಲಿ ಕಠಿಣ ಕ್ರಮವನ್ನು ಮುಂದಿನ ದಿನದಲ್ಲಿ ಕೈ ತೆಗೆದುಕೊಳ್ಳುವಂತಹ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ. ಹೀಗಾಗಿ ಒಂದು ವೇಳೆ ಯಾರಾದರೂ ಇನ್ನೂ ಕೂಡ HSPR ನಂಬರ್ ಪ್ಲೇಟ್ ಅನ್ನು ನಿಮ್ಮ ವಾಹನಗಳಿಗೆ ಅಳವಡಿಸದೆ ಹೋದಲ್ಲಿ ಕಡ್ಡಾಯವಾಗಿ ನಿಮ್ಮ ಶೋರೂಮ್ ಗೆ ಹೋಗಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನೀವು ದೊಡ್ಡ ಮಟ್ಟದ ದಂಡವನ್ನು ಕಟ್ಟಬೇಕಾಗಿರುವಂತಹ ಅಗತ್ಯ ಕೂಡ ಕಂಡುಬರುತ್ತದೆ.

HSRP