Marriage: ಇದೇ ಕಲಿಯುಗ, 80ರ ವೃದ್ಧನನ್ನುನೋಡಿ 34ರ ಹರೆಯದ ಯುವತಿ ಮಾಡಿದ್ದೇನು ಗೊತ್ತಾ?

Marriage: ಪ್ರೀತಿ ಅಂದ್ರೆ ಕುರುಡು ಅನ್ನೋದಾಗಿ ನಮ್ಮ ಹಿರಿಯರು ಹೇಳ್ತಾ ಇದ್ರು. ಇದು ಕೇವಲ ಸಿನಿಮಾದಲ್ಲಿ ಮಾತ್ರ ಅಲ್ಲದೇನೇ ನಿಜ ಜೀವನದಲ್ಲಿ ಕೂಡ ಕೆಲವರು ಈ ಮಾತು ಸತ್ಯ ಆಗೋ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕೂಡ ಇಂತಹ ಸುದ್ದಿಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಈಗ ಪ್ರೀತಿ ಕುರುಡು ಎನ್ನುವ ರೀತಿಯಲ್ಲಿ ಸಾಬೀತುಪಡಿಸಿರುವ ಒಂದು ಸುದ್ದಿ ಮಧ್ಯಪ್ರದೇಶದ ಒಂದು ಚಿಕ್ಕ ಗ್ರಾಮದಲ್ಲಿ ಕೇಳಿ ಬಂದಿದ್ದು ಬನ್ನಿ ಇವತ್ತಿನ ಲೇಖನದಲ್ಲಿ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

80 ವರ್ಷದ ಮುದುಕನ ಜೊತೆಗೆ 34 ವರ್ಷದ ಮಹಿಳೆ ಮದುವೆಯಾಗಿರುವಂತಹ ಘಟನೆ ಇತ್ತೀಚಿಗಷ್ಟೇ ಮಧ್ಯಪ್ರದೇಶದಲ್ಲಿ ನಡೆದಿರುವಂತದ್ದು ಬೆಳಕಿಗೆ ಬಂದಿದೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ 80 ವರ್ಷದ ವೃದ್ಧನ ವಿಡಿಯೋವನ್ನು ನೋಡಿ 34ರ ಮಹಿಳೆ ಆತನನ ಪ್ರೀತಿ ಮಾಡಿ ಮದುವೆಯಾಗಿದ್ದಾಳೆ. ಇವರಿಬ್ಬರ ಈ ಪ್ರೀತಿ ಕುರುಡೋ ಅಥವಾ ಇದನ್ನ ನಿಜವಾದ ಪ್ರೀತಿ ಅನ್ಬೇಕು ಗೊತ್ತಿಲ್ಲ ಆದರೆ ಇವರಿಬ್ರು ಪ್ರೀತಿಸಿ ಮದುವೆ ಆಗಿರೋದಂತೂ ನಿಜ.

ಕಳೆದ ಎರಡು ವರ್ಷಗಳಿಂದಲೂ ಕೂಡ 80 ವಯಸ್ಸಿನ ಮುದುಕ ಆಗಿರುವಂತಹ ಬಲುರಾಮ್ ಎರಡು ವರ್ಷಗಳ ಹಿಂದೆ ತಮ್ಮ ಪತ್ನಿಯನ್ನು ಕಳೆದುಕೊಂಡು ಜೀವನದಲ್ಲಿ ಮಾನಸಿಕವಾಗಿ ಸಾಕಷ್ಟು ಚಿಂತೆಯನ್ನು ಹೊಂದಿದ್ದರು. ಇನ್ನು ಇವರ ಒಬ್ಬ ಮಗ ಹಾಗೂ ಮೂರು ಮಕ್ಕಳು ಮದ್ವೆಯಾಗಿ ಬೇರೆ ನೆಲೆಸಿದ್ದಾರೆ. ಹೀಗಾಗಿ ಒಂಟಿಯಾಗಿ ಬಲುರಾಮ್ ಸಾಕಷ್ಟು ಬೇಸರವನ್ನು ಹೊಂದಿದ್ದರು ಹಾಗೂ ಇದೇ ಸಂದರ್ಭದಲ್ಲಿ ಅವರು ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಪೋಸ್ಟ್ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ಇನ್ನು ಇದನ್ನ ಪ್ರಾರಂಭ ಮಾಡಿಸಿದ್ದು ಅದೇ ಹಳ್ಳಿಯ ಹುಡುಗ ಆಗಿರುವಂತಹ ವಿಷ್ಣು. ತನ್ನ ಹೋಟೆಲಿಗೆ ಅವರನ್ನು ಕರೆಸಿಕೊಂಡು ತಮಾಷೆಯ ರೀಲ್ಸ್ ವಿಡಿಯೋ ಮಾಡಿ ಅದನ್ನು ಪೋಸ್ಟ್ ಮಾಡ್ತಾನೆ. ಸೋಶಿಯಲ್ ಮೀಡಿಯಾದಲ್ಲಿ ಅವರ ವಿಡಿಯೋಗಳು ಒಂದೊಂದಾಗಿ ವೈರಲ್ ಆಗುತ್ತಾ ಹೋದವು. ಇದೇ ಸಂದರ್ಭದಲ್ಲಿ ಅವರಿಗೆ ಮಹಾರಾಷ್ಟ್ರದ 34 ವರ್ಷದ ಶೀಲಾ ಇಂಗ್ಲೆ ಎನ್ನುವಂತಹ ಮಹಿಳೆಯ ಜೊತೆಗೆ ಸ್ನೇಹ ಸಂಬಂಧ ಪ್ರಾರಂಭವಾಗುತ್ತದೆ. ಇದು ಪ್ರೀತಿಗೆ ತಿರುಗೋದಕ್ಕೆ ಹೆಚ್ಚಿನ ಸಮಯ ಬೇಕಾಗಿರಲಿಲ್ಲ.

ಇದೇ ಏಪ್ರಿಲ್ 1ನೇ ತಾರೀಖಿನಂದು ಇಬ್ರು ಕೂಡ ಸುಸ್ನರ್ ನ್ಯಾಯಾಲಯಕ್ಕೆ ತಲುಪಿ ಅಲ್ಲಿ ಆವರಣದ ಎದುರು ಇರುವಂತಹ ದೇವಸ್ಥಾನದಲ್ಲಿ ಮದುವೆ ಆಗ್ತಾರೆ. ಹಿಂದೂ ಸಂಪ್ರದಾಯದ ಪ್ರಕಾರ ಪರಸ್ಪರ ಹಾರವನ್ನು ಬದಲಾಯಿಸಿಕೊಂಡು ಲವ್ ಮ್ಯಾರೇಜ್ ಆಗಿರುವಂತಹ ಸುದ್ದಿ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಇಲ್ಲಿಂದಲೇ ದಾಂಪತ್ಯ ಜೀವನವನ್ನು ಪ್ರಾರಂಭ ಮಾಡಿರುವಂತಹ ಅವರು ಒಟ್ಟಾಗಿ ಜೀವನ ನಡೆಸುವಂತಹ ಪ್ರಮಾಣವನ್ನು ಕೂಡ ಮಾಡಿರುವುದು ಕೇಳಿಬಂದಿದೆ. ಪ್ರೀತಿ ಅಂತ ಬಂದ್ರೆ ಯಾವುದೇ ವಯಸ್ಸಿನ ಅಡ್ಡಿ ಇರೋದಿಲ್ಲ ಅನ್ನೋದು ಕೇವಲ ಸಿನಿಮಾದಲ್ಲಿ ಮಾತ್ರ ಬರೋದು ಈ ಘಟನೆಯ ಮೂಲಕ ನಿಜ ಜೀವನದಲ್ಲಿ ಕೂಡ ಮತ್ತೊಮ್ಮೆ ಸಾಬೀತಾಗಿದೆ.

marriage