Vastu Tips: ಹಲ್ಲಿಯನ್ನು ನೋಡಿದರೆ ಶಾಸ್ತ್ರಗಳ ಪ್ರಕಾರ ಏನೆಲ್ಲಾ ಕೆಟ್ಟದ್ದಾ? ಒಳ್ಳೆಯದಾ? ನೆಕ್ಸ್ಟ್ ಟೈಮ್ ಹಲ್ಲಿ ನೋಡಕ್ಕೂ ಮೊದಲು ಈ ವಿಷಯ ತಿಳ್ಕೊಳ್ಳಿ!

Vastu Tips: ಸಾಮಾನ್ಯವಾಗಿ ಮನೆಯ ಗೋಡೆಗಳ ಮೇಲೆ ಹಲ್ಲಿಗಳು ಇರೋದು ಕಾಮನ್. ಅವುಗಳನ್ನು ನೋಡಿದರೆ ಕೆಲವರಿಗೆ ಇಷ್ಟ ಆಗದೇ ಇರಬಹುದು, ಕೆಲವರಿಗೆ ಅದರಿಂದ ಯಾವುದೇ ತೊಂದರೆ ಇರೋದಿಲ್ಲ. ಆದರೆ ಶಾಸ್ತ್ರಗಳ ಪ್ರಕಾರ ಹಲ್ಲಿಗಳ ಮೇಲೆ ಏನೆಲ್ಲಾ ಹೇಳಲಾಗಿದೆ ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ನೀವು ಅರ್ಥ ಮಾಡಿಕೊಂಡರೆ ಹಲ್ಲಿಯ ಬಗ್ಗೆ ಇರುವಂತಹ ನಿಮ್ಮ ಅಭಿಪ್ರಾಯ ಮುಂದಿನ ದಿನಗಳಲ್ಲಿ ಬದಲಾದರೂ ಕೂಡ ಆಗಬಹುದು. ಅಷ್ಟಕ್ಕೂ ಹಲ್ಲಿಯನ್ನು ನೋಡಿದರೆ ಏನೆಲ್ಲ ಆಗುತ್ತೆ ಅನ್ನೋ ಪರಿಣಾಮಗಳ ಬಗ್ಗೆ ತಿಳಿಯೋಣ ಬನ್ನಿ.

ಹಲ್ಲಿಯನ್ನು ನೋಡಿದರೆ ಏನಾಗುತ್ತೆ? ಶಾಸ್ತ್ರಗಳು ಏನು ಹೇಳುತ್ತವೆ?

  • ಶಾಸ್ತ್ರಗಳು ಹೇಳುವ ಮಾಹಿತಿಗಳ ಪ್ರಕಾರ ಹಲ್ಲಿಗಳು ಶಾಸ್ತ್ರಗಳ ಪ್ರಕಾರ ಅತ್ಯಂತ ಪವಿತ್ರ ಜೀವಿಗಳಾಗಿದ್ದು ಅವುಗಳಿಗೆ ತೊಂದರೆ ಕೊಡೋದು ಪಾಪ ಮಾಡಿದಂತೆ ಎಂಬುದಾಗಿ ಹೇಳಲಾಗುತ್ತದೆ.
  • ಬೇರೆ ಜೀವಿಗಳ ಹಾಗೆ ಹಲ್ಲಿಗಳು ಮನೆಯವರಿಗೆ ತೊಂದರೆ ನೀಡುವುದಿಲ್ಲ ಬದಲಾಗಿ ಗೋಡೆಯ ಮೇಲೆ ಇದ್ದು ಕೀಟಗಳನ್ನು ತಿಂದು ಸುಮ್ಮನಾಗಿರುತ್ತವೆ. ಇಂತಹ ನಿರುಪದ್ರವ ಜೀವಿಗಳಿಗೆ ತೊಂದರೆ ಕೊಡಬಾರದು ಶಾಸ್ತ್ರಗಳಲ್ಲಿ ಕೂಡ ಇದನ್ನು ಅತ್ಯಂತ ಮಂಗಳಕರ ಜೀವಿ ಎಂಬುದಾಗಿ ಪರಿಗಣಿಸಲಾಗುತ್ತದೆ.
  • ಸಾಮಾನ್ಯ ವಾಗಿ ಜನರು ಹಲ್ಲಿಯನ್ನು ನೋಡೋದನ್ನು ಅಷ್ಟೊಂದು ಇಷ್ಟಪಡೋದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೋಡುವುದಾದರೆ ಹಲ್ಲಿಯನ್ನ ಲಕ್ಷ್ಮೀದೇವಿಯ ಸಂಕೇತ ಎಂಬುದಾಗಿ ಪರಿಗಣಿಸಲಾಗುತ್ತಿದೆ ಹಾಗಾಗಿ ಇದು ಶುಭ ಪರಿಣಾಮವನ್ನು ಬೀರುವಂತಹ ಜೀವಿ ಎಂದು ಹೇಳಬಹುದಾಗಿದೆ.
  • ವಾಸ್ತುಶಾಸ್ತ್ರದ ಪ್ರಕಾರ ಕೂಡ ಮನೆಯಲ್ಲಿರುವಂತಹ ವಾಸ್ತುದೋಷಗಳನ್ನು ನಿವಾರಣೆ ಮಾಡುವುದಕ್ಕೆ ಹಲ್ಲಿಯ ಬೆಳ್ಳಿಯ ವಿಗ್ರಹಗಳನ್ನು ಮಾಡಿ ಇಟ್ಟುಕೊಳ್ಳುತ್ತಾರೆ. ಇದರಿಂದಾಗಿ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ದೂರವಾಗಿ ಮನೆಯಲ್ಲಿರುವಂತಹ ಸಂತೋಷ ಸಮೃದ್ಧಿ ಹೆಚ್ಚಾಗುತ್ತದೆ.
  • ಇನ್ನು ಶಾಸ್ತ್ರಗಳ ಪ್ರಕಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ನೀವು ಹಲ್ಲಿಯನ್ನು ನೋಡಿದರೆ ವರ್ಷವಿಡಿ ನಿಮಗೆ ಆಗುತ್ತದೆ ಎನ್ನುವಂತಹ ನಂಬಿಕೆ ಕೂಡ ಇದೆ.
  • ಹೊಸ ಮನೆ ಕಟ್ಟಿ ಗೃಹಪ್ರವೇಶದ ಸಂದರ್ಭದಲ್ಲಿ ಹಲ್ಲಿಯನ್ನು ನೋಡುವುದರಿಂದ ಶುಭ ಎಂಬುದಾಗಿ ಪರಿಗಣಿಸಲಾಗುತ್ತದೆ ಇದಕ್ಕಿಂತ ವಿಶೇಷವಾಗಿ ಮೂರು ಹಲ್ಲಿಗಳನ್ನು ಒಟ್ಟಾಗಿ ನೋಡುವುದರಿಂದ ಕೂಡ ಶುಭ ಲಾಭ ಉಂಟಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ.
  • ಇನ್ನು ಮನೆಯ ಪೂಜಾ ಕೋಣೆಯಲ್ಲಿ ಬೆಳ್ಳಿಯ ಹಲ್ಲಿಯ ಮೂರ್ತಿಯನ್ನು ಇಡುವುದರಿಂದ ಕೂಡ ಮನೆಯಲ್ಲಿ ಆದಾಯದ ಹರಿವು ಹೆಚ್ಚಾಗಲಿದೆ ಎಂಬುದಾಗಿ ವಾಸ್ತು ಶಾಸ್ತ್ರಗಳು ತಿಳಿಸುತ್ತವೆ.
  • ದೇವಸ್ಥಾನಗಳಲ್ಲಿ ಸೇರಿದಂತೆ ಬೇರೆ ಪವಿತ್ರ ಸ್ಥಳಗಳಲ್ಲಿ, ಹಲ್ಲಿಯನ್ನು ನೋಡುವುದರಿಂದ ಪೂರ್ವಜರ ಆಶೀರ್ವಾದ ಸಿಗುತ್ತದೆ ಹಾಗೂ ಲಕ್ಷ್ಮೀದೇವಿ, ಹರಿಸುತ್ತಿದ್ದಾಳೆ ಎಂಬುದಾಗಿ ಅರ್ಥ ಎಂಬುದನ್ನು ಕೂಡ ಶಾಸ್ತ್ರಗಳು ಹೇಳುತ್ತವೆ.
  • ಅಡುಗೆ ಮನೆಯಲ್ಲಿ ಹಲ್ಲಿ ಇರೋದು ಅಷ್ಟೊಂದು ಒಳ್ಳೆಯದಲ್ಲ ಎಂಬುದಾಗಿ ಹೇಳಲಾಗುತ್ತದೆ ಹೀಗಾಗಿ ಅಡುಗೆ ಮನೆಯಲ್ಲಿ ಹಲ್ಲಿ ಇರದಂತೆ ನೋಡಿಕೊಳ್ಳಿ.

ಇವಿಷ್ಟು ವಿಚಾರಗಳನ್ನು ಶಾಸ್ತ್ರಗಳ ಪ್ರಕಾರ ಹಲ್ಲಿಯ ಬಗ್ಗೆ ತಿಳಿಸಲಾಗಿದೆ. ಈ ಮೂಲಕ ಹಲ್ಲಿ ಎಷ್ಟು ಅದೃಷ್ಟ ತರುವಂತ ಜೀವಿ ಅನ್ನೋದನ್ನ ನೀವು ತಿಳಿದುಕೊಳ್ಳಬಹುದಾಗಿದೆ.

Vastu Tips